ಕಾರು ಎಂಜಿನ್ ಐಡ್ಲಿಂಗ್ ಮಾರಕವೇ? ಇಲ್ಲಿದೆ 5 ಕಾರಣ

Written By:

ಕಾರು ಎಂಜಿನ್ ಅನ್ನು ಐಡ್ಲಿಂಗ್‌ನಲ್ಲಿ ಇಟ್ಟುಕೊಳ್ಳುವುದರಿಂದ ಇಂಧನವನ್ನು ಉಳಿತಾಯ ಮಾಡಬಹುದೇ? ಅಥವಾ ಇಂದರಿಂದಾಗಿ ಹೆಚ್ಚಿನ ಇಂಧನ ವ್ಯಯವಾಗುವುದೇ?

ಟ್ರಾಫಿಕ್ ಮುಂತಾದ ಪರಿಸ್ಥಿತಿ ಎದುರಾದಾಗ ಕಾರು ಎಂಜಿನ್ ಅನ್ನು ಐಡ್ಲಿಂಗ್‌ನಲ್ಲಿ ಇಟ್ಟುಕೊಳ್ಳುವುದು ಹೆಚ್ಚು ಸೂಕ್ತ ಎಂಬುದು ಅನೇಕರ ನಂಬಿಕೆಯಾಗಿದೆ. ಈ ಸಂದರ್ಭದಲ್ಲಿ ಗಾಡಿ ಮರು ಸ್ಟಾರ್ಟ್ ಮಾಡಿದರೆ ಹೆಚ್ಚಿನ ಇಂಧನ ವ್ಯಯವಾದಿತು ಎಂಬುದು ಅವರ ಇರಾದೆಯಾಗಿದೆ. ಇದೇ ಕಾರಣಕ್ಕಾಗಿ ಎಂಜಿನ್ ಐಡ್ಲಿಂಗ್‌ನಲ್ಲಿಟ್ಟುಕೊಳ್ಳಲು ಬಯಸುತ್ತಾರೆ. ನಿಜಕ್ಕೂ ಸಿಗ್ನಲ್ ಮುಂತಾದ ಟ್ರಾಫಿಕ್ ಪರಿಸ್ಥಿತಿಯಲ್ಲಿ ನಿಮ್ಮ ಗಾಡಿಯನ್ನು ಐಡ್ಲಿಂಗ್‌ನಲ್ಲಿಟ್ಟುಕೊಳ್ಳುವುದು ಸೂಕ್ತವೇ? ಇಲ್ಲಿದೆ ಓದಿ ನಮ್ಮ ವಿಶ್ಲೇಷಕರ ಉತ್ತರ...

To Follow DriveSpark On Facebook, Click The Like Button
ಐಡ್ಲಿಂಗ್ ಅಥವಾ ಐಡಲಿಂಗ್ ಎಂದರೇನು?

ಐಡ್ಲಿಂಗ್ ಅಥವಾ ಐಡಲಿಂಗ್ ಎಂದರೇನು?

ಮೊದಲು ಐಡ್ಲಿಂಗ್ ಅಥವಾ ಐಡಲಿಂಗ್ (ನಿಧಾನ ಓಡುವಿಕೆ) (Idling)ಎಂದರೇನು ಎಂಬುದರ ಬಗ್ಗೆ ತಿಳಿದುಕೊಳ್ಳುವುದು ಅತ್ಯಾವಶ್ಯಕ. ಸಿಗ್ನಲ್ ಮುಂತಾದ ರಸ್ತೆ ಪರಿಸ್ಥಿತಿಯಲ್ಲಿ ವಾಹನ ನಿಲುಗಡೆಗೊಳಿಸಬೇಕಾದ ಪರಿಸ್ಥಿತಿ ಎದುರಾದಾಗ ಮೋಟಾರು ವಾಹನದ ಎಂಜಿನ್‌ ಅನ್ನು ನಿಧಾನವಾಗಿ ಚಲಿಸಬಿಡುವುದೇ ಎಂಜಿನ್ ಐಡ್ಲಿಂಗ್ ಆಗಿದೆ. ಈ ಸಂದರ್ಭದಲ್ಲಿ ವಾಹನಗಳು ವೈಬ್ರೇಷನ್ ಆಗುವುದು ಸಾಮಾನ್ಯವಾಗಿದೆ.

ಕಾರಣ 1

ಕಾರಣ 1

ಅಷ್ಟಕ್ಕೂ ಎಂಜಿನ್ ಐಡ್ಲಿಂಗ್‌ನಲ್ಲಿ ಚಲಿಸಬಿಡುವುದು ಸೂಕ್ತವೇ? ಇಲ್ಲಿದೆ ಉತ್ತರ ನೋಡಿ. ಇದು ಬಹಳ ನಿರ್ಣಾಯಕವೆನಿಸುತ್ತದೆ. ಕಾರು ಎಂಜಿನ್ ಐಡ್ಲಿಂಗ್ ವೇಳೆ ಹೆಚ್ಚು ಇಂಧನ ಉಳಿತಾಯವಾಗಲಿದೆ ಎಂಬುದು ತಪ್ಪು ಕಲ್ಪನೆಯಾಗಿದೆ. ಯಾಕೆಂದರೆ ಹೆಚ್ಚು ಹೊತ್ತು ಎಂಜಿನ್ ಐಡ್ಲಿಂಗ್‌‌ನಲ್ಲಿ ಚಲಿಸ ಬಿಟ್ಟರೆ ಹೆಚ್ಚಿನ ಇಂಧನ ವ್ಯಯವಾಗಲಿದೆ.

10 ನಿಮಿಷಕ್ಕೂ ಹೆಚ್ಚು ಕಾಲ ಎಂಜಿನ್ ಐಡ್ಲಿಂಗ್ ಮಾಡಿಟ್ಟರೆ ಮೂರನೇ ಒಂದರಷ್ಟು (1/3) ಅಥವಾ ಎರಡನೇ ಒಂದರಷ್ಟು (1/2) ಪೆಟ್ರೋಲ್ ವ್ಯಯವಾಗಲಿದೆ ಎಂದು ವರದಿಗಳು ತಿಳಿಸಿವೆ. ಅಂದರೆ ಕಾರನ್ನು ಆಫ್ ಮಾಡಿಟ್ಟು ಆನ್ ಮಾಡುವುದಕ್ಕಿಂತಲೂ ಹೆಚ್ಚು ಇಂಧನ ಐಡ್ಲಿಂಗ್‌ನಿಂದಾಗಿ ಪೋಳಾಗಲಿದೆ.

ಕಾರಣ 2

ಕಾರಣ 2

ಬಹುತೇಕರು ಪದೇ ಪದೇ ಕಾರನ್ನು ಆಫ್-ಆನ್ ಮಾಡುವುದರಿಂದ ಎಂಜಿನ್‌ಗೆ ಪೆಟ್ಟು ಬೀಳಲಿದೆ ಎಂದು ಅಂದುಕೊಳ್ಳುತ್ತಾರೆ. ಇದರಿಂದಾಗಿ ಕಾರನ್ನು ಐಡ್ಲಿಂಗ್‌ನಲ್ಲಿಡಲು ಬಯಸುತ್ತಾರೆ.

ಆದರೆ ಇದು ಕೂಡಾ ತಪ್ಪಾದ ಕಲ್ಪನೆಯಾಗಿದ್ದು, ಬಹುತೇಕ ಆಧುನಿಕ ಕಾರುಗಳು ಫ್ಲೂಯಲ್ ಇಂಜೆಕ್ಟಡ್ ತಂತ್ರಗಾರಿಕೆಯಿಂದ ಆಗಮನವಾಗುತ್ತಿದೆ ಎಂಬುದನ್ನು ನೀವು ಮರೆಯಬಾರದು. ಇಲ್ಲಿ ಎಂಜಿನ್‌ಗಳು ಇಂತಹ ಪರಿಸ್ಥಿತಿಯನ್ನು ಎದುರಿಸಲು ಸನ್ನದ್ಧವಾಗಿರುತ್ತದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಅಷ್ಟೇ ಯಾಕೆ ಹಾಗೇನಾದರೂ ಎಂಜಿನ್‌ಗೆ ತೊಂದರೆ ಸಂಭವಿಸಿದರೂ ಐಡ್ಲಿಂಗ್‌ನಿಂದಾಗಿ ವ್ಯಯವಾಗುವ ಇಂಧನ ವೆಚ್ಚಗಿಂತಲೂ ಕಡಿಮೆ ಖರ್ಚಿನಲ್ಲಿ ಎಂಜಿನ್ ಸಮಸ್ಯೆ ಬಗೆಹರಿಸಿಕೊಳ್ಳಬಹುದಾಗಿದೆ.

ಕಾರು ಎಂಜಿನ್ ಐಡ್ಲಿಂಗ್ ಮಾರಕವೇ? ಇಲ್ಲಿದೆ 5 ಕಾರಣ

ಇಲ್ಲಿ ಗಮನ ವಹಿಸಬೇಕಾದ ಮಗದೊಂದು ವಿಷಯವೆಂದರೆ ಐಡ್ಲಿಂಗ್ ವೇಳೆ ಎಂಜಿನ್ ತಾಪಮಾನ ಕೆಳ ಮಟ್ಟದಲ್ಲಿರುತ್ತದೆ. ಇದು ನಿಮ್ಮ ಇಂಧನ ಕ್ಷಮತೆಯ ಮೇಲೂ ಪರಿಣಾಮ ಬೀರಲಿದೆ. ಅಂದರೆ ಐಡ್ಲಿಂಗ್‌ ಮಾಡುವುದರಿಂದ ಕಡಿಮೆ ಮೈಲೇಜ್ ಸಿಗಲಿದೆ.

ಇಲ್ಲಿ ಗಮನಿಸಬೇಕಾದ ಅಂಶವೆಂದರೆ ತಾಪಮಾನ ಕಡಿಮೆಯಿಂದಾಗಿ ಐಡ್ಲಿಂಗ್ ವೇಳೆ ಇಂಧನ ಸರಿಯಾಗಿ ಹೊತ್ತಿ ಉರಿಯುವುದಿಲ್ಲ. ಇದರಿಂದಾಗಿ ಇಂಧನ ದಕ್ಷತೆ ಕಡಿಮೆಯಾಗಲಿದೆ.

ಕಾರಣ 3

ಕಾರಣ 3

ಆರೋಗ್ಯಕರ ಪರಿಸರದ ನಿಟ್ಟಿನಲ್ಲಿ ಎಂಜಿನ್ ಆಫ್ ಮಾಡಿಟ್ಟುಕೊಳ್ಳುವುದು ಅನಿವಾರ್ಯ. ಏಕೆಂದರೆ ನಿಮ್ಮ ವಾಹನವನ್ನು ಐಡ್ಲಿಂಗ್‌ನಲ್ಲಿಟ್ಟರೆ ಎಕ್ಸಾಸ್ಟ್‌ನಲ್ಲಿ ಹೊರಸೂಸುವ ಹೊಗೆಯಿಂದಾಗಿ ವಾಯು ಮಾಲಿನ್ಯವಾಗುವ ಸಾಧ್ಯತೆಯಿದೆ. ಇದು ನೇರವಾಗಿ ಜಾಗತಿಕ ತಾಪಮಾನಕ್ಕೂ ಕಾರಣವಾಗಲಿದೆ.

ಕಾರು ಎಂಜಿನ್ ಐಡ್ಲಿಂಗ್ ಮಾರಕವೇ? ಇಲ್ಲಿದೆ 5 ಕಾರಣ

ಪರಿಸರದ ಬಗ್ಗೆ ಸುದ್ದಿ ಬರೆಯುವ ಇಕೊವಾಚ್ ಜಾಲತಾಣದ ವರದಿಯ ಪ್ರಕಾರ, ಚಾಲಕರೊರ್ವರು 10 ನಿಮಿಷಗಳಷ್ಟು ಸಮಯ ಐಡ್ಲಿಂಗ್ ಕಡಿಮೆ ಮಾಡುವುದರಿಂದ ಪರಿಸರ ಮಾಲಿನ್ಯಕ್ಕೆ ಕಾರಣವಾಗುವ ಒಂದು ಪೌಂಡ್‌ನಷ್ಟು ಕಾರ್ಬನ್ ಡೈಓಕ್ಸೈಡ್ ಪ್ರಮಾಣವನ್ನು ಕಡಿಮೆ ಮಾಡಬಹುದಾಗಿದೆ.

ಕೆನೆಡಾದ ಮಗದೊಂದು ಅಧ್ಯಯನದ ಪ್ರಕಾರ ಕೆನೆಡಾ ಸವಾರಿಗಳು ದಿನವೊಂದರಲ್ಲಿ ಮೂರು ನಿಮಿಷಗಳಷ್ಟು ಐಡ್ಲಿಂಗ್ ಕಡಿಮೆ ಮಾಡಿದ್ದಲ್ಲಿ ವಾರ್ಷಿಕವಾಗಿ 3,20,000 ವಾಹನಗಳನ್ನು ರಸ್ತೆಯಿಂದ ಹೊರಗಿರಿಸಿದ್ದಂತೆ ಎಂದಿದೆ.

ಕಾರಣ 4

ಕಾರಣ 4

ಇವೆಲ್ಲಕ್ಕೂ ಮಿಗಿಲಾಗಿ ವಾಹನಗಳು ಹೊರಹಾಕುವ ದಹನಕಾರಿ ಎಂಜಿನ್ ಹೊಗೆಗಳು ಮೆದುಳು ಜೀವಕೋಶಗಳಿಗೆ ಅತ್ಯಂತ ಅಪಾಯಕಾರಿಯಾಗಿದ್ದು, ಮಾರಕ ನರ ಕಾಯಿಲೆಗೂ (Autism) ಎಡೆ ಮಾಡಿಕೊಡುವ ಭೀತಿಯಿದೆ.

ಈ ಸಂಬಂಧ ನ್ಯೂಯಾರ್ಕ್‌ನಲ್ಲಿ ನಡೆಸಿದ ಅಧ್ಯಯನದ ಪ್ರಕಾರ ಅತಿ ಹೆಚ್ಚು ಹೊಗೆ ಸೇವಿಸುವುದರಿಂದ 5ರ ಹರೆಯದ ಮಕ್ಕಳಲ್ಲಿ ಬುದ್ದಿವಂತಿಕೆ ಸಮಸ್ಯೆ ಕಾಡುತ್ತದೆ. ಅಷ್ಟೇ ಯಾಕೆ ಇದರಿಂದಾಗಿ ಶ್ವಾಸಕೋಶ, ಅಸ್ತಮಾ, ಹೃದ್ರೋಗ ಅಲ್ಲದೆ ಕ್ಯಾನ್ಸರ್‌ಗಳಂತಹ ಕಾಯಿಲೆ ಕಾಡುವ ಅಪಾಯವಿದೆ.

ಕಾರು ಎಂಜಿನ್ ಐಡ್ಲಿಂಗ್ ಮಾರಕವೇ? ಇಲ್ಲಿದೆ 5 ಕಾರಣ

ಇನ್ನು ಶಾಲಾ ಪರಿಸರದಲ್ಲಿ ಎಂಜಿನ್ ಐಡ್ಲಿಂಗ್‌‌ನಲ್ಲಿಟ್ಟುಕೊಳ್ಳುವುದು ಸಹ ಅಪಾಯಕಾರಿಯಾಗಿದೆ. ಈ ಮೊದಲೇ ತಿಳಿಸಿರುವಂತೆಯೇ ಇದು ಮಕ್ಕಳಲ್ಲಿ ಅಡ್ಡ ಪರಿಣಾಮ ಬೀರುವ ಅಪಾಯವಿದೆ.

ಕಾರಣ 5

ಕಾರಣ 5

ಇಂಧನ ಉಳಿತಾಯವಾದರೆ ಸಹಜವಾಗಿಯೇ ನಿಮ್ಮ ಜೇಬಲ್ಲಿ ದುಡ್ಡು ಉಳಿದುಕೊಳ್ಳಲಿದೆ. ಇಲ್ಲಿ ಇನ್ನೊಂದು ಸರ್ವೇ ವರದಿ ಬಹಿರಂಗಪಡಿಸಿದ್ದಲ್ಲಿ ನಿಮ್ಮಲ್ಲಿ ಅಚ್ಚರಿಯನ್ನುಂಟು ಮಾಡುವುದು ಖಂಡಿತ.

ಅದೇನೆಂದರೆ ಐಡ್ಲಿಂಗ್‌ನಿಂದಾಗಿ ಅಮೆರಿಕನ್ನರು ದಿನಂಪ್ರತಿ 13 ಮಿಲಿಯನ್ ಅಮೆರಿಕ ಡಾಲರ್ ( ಸರಿ ಸುಮಾರು 80,30,75,000 ರು.ಗಳಿಗೆ ಸಮಾನ) ವ್ಯಯ ಮಾಡುತ್ತಿದ್ದಾರೆ. ಇಲ್ಲಿ ಎಂಜಿನ್ ಆಫ್ ಮಾಡಿಟ್ಟಿದ್ದರೆ ಈ ಎಲ್ಲ ವೆಚ್ಚವನ್ನು ಕಾರಿನ ಮೂಲಭೂತ ನಿರ್ವಹಣೆಗೆ ಬಳಕೆ ಮಾಡಬಹುದಿತ್ತು.

ಇದೀಗ ಐಡ್ಲಿಂಗ್ ಬಳಕೆಯಿಂದಾಗುವ ತೊಂದರೆಯ ಬಗ್ಗೆ ನಿಮ್ಮಲ್ಲಿ ಅರಿವು ಮೂಡಿರಬಹುದು. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಲು ಮರೆಯದಿರಿ.

English summary
Letting the engine idle, say, at a signal or while pulled over for a few minutes, does more harm than good! Let's take a look why.
Story first published: Wednesday, November 19, 2014, 17:02 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark