ಎಕ್ಸಾನ್‌ಮೊಬಿಲ್ ಸೂಪರ್ 3000 ಎಂಜಿನ್ ಭಾರತದಲ್ಲಿ ಬಿಡುಗಡೆ

ಎಕ್ಸಾನ್‌ಮೊಬಿಲ್ ಕಂಪನಿಯು ಭಾರತದಲ್ಲಿ ಮೊಬಿಲ್ ಸೂಪರ್ 3000 ಎಕ್ಸ್1 ಫಾರ್ಮುಲಾ ಎಫ್ಇ 5W-30(ಮೊಬಿಲ್ ಸೂಪರ್ 3000) ಎಂಜಿನ್ ತೈಲವನ್ನು ಬಿಡುಗಡೆ ಮಾಡಿದೆ.

By Girish

ಎಕ್ಸಾನ್‌ಮೊಬಿಲ್ ಕಂಪನಿಯು ಭಾರತದಲ್ಲಿ ಮೊಬಿಲ್ ಸೂಪರ್ 3000 ಎಕ್ಸ್1 ಫಾರ್ಮುಲಾ ಎಫ್ಇ 5W-30(ಮೊಬಿಲ್ ಸೂಪರ್ 3000) ಎಂಜಿನ್ ತೈಲವನ್ನು ಬಿಡುಗಡೆ ಮಾಡಿದೆ.

ಎಕ್ಸಾನ್‌ಮೊಬಿಲ್ ಸೂಪರ್ 3000 ಎಂಜಿನ್ ಭಾರತದಲ್ಲಿ ಬಿಡುಗಡೆ

ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಎರಡಕ್ಕೂ ಸೂಕ್ತವಾಗಿರುವ ಎಂಜಿನ್ ತೈಲವನ್ನು ಎಕ್ಸಾನ್‌ಮೊಬಿಲ್ ಕಂಪನಿಯು ಮಾರುಕಟ್ಟೆಗೆ ಪರಿಚಯಿಸಿದ್ದು, 3000 ಎಕ್ಸ್1 ಫಾರ್ಮುಲಾ ಎಫ್ಇ 5W-30(ಮೊಬಿಲ್ ಸೂಪರ್ 3000) ತೈಲದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಎಕ್ಸಾನ್‌ಮೊಬಿಲ್ ಸೂಪರ್ 3000 ಎಂಜಿನ್ ಭಾರತದಲ್ಲಿ ಬಿಡುಗಡೆ

ಮೊಬಿಲ್ ಸೂಪರ್ 3000 ತೈಲವು, ಅತ್ಯಂತ ಕಡಿಮೆ ಮತ್ತು ಹೆಚ್ಚಿನ ತಾಪಮಾನದಲ್ಲಿ ಕಾರ್ಯನಿರ್ವಹಿಸುವಂತೆ ರೂಪಿತವಾಗಿದ್ದು, ಎಂಜಿನ್‌ಗೆ ಉತ್ತಮ ರೀತಿಯಲ್ಲಿ ರಕ್ಷಣೆ ನೀಡುವ ರೀತಿ ವಿನ್ಯಾಸಗೊಳಿಸಲಾಗಿದೆ.

ಎಕ್ಸಾನ್‌ಮೊಬಿಲ್ ಸೂಪರ್ 3000 ಎಂಜಿನ್ ಭಾರತದಲ್ಲಿ ಬಿಡುಗಡೆ

ಭಾರತ ದೇಶವು ವೈವಿಧ್ಯಮಯ ಹವಾಮಾನ ಗುಣಗಳನ್ನು ಹೊಂದಿದ್ದು, ದೇಶದ ವಿವಿಧ ಭಾಗಗಳ ಹವಾಗುಣಕ್ಕೆ ಸೂಕ್ತವಾಗುವಂತೆ ಈ ಎಂಜಿನ್ ತಯಾರಿಸಲಾಗಿದೆ ಎಂದು ಕಂಪನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಎಕ್ಸಾನ್‌ಮೊಬಿಲ್ ಸೂಪರ್ 3000 ಎಂಜಿನ್ ಭಾರತದಲ್ಲಿ ಬಿಡುಗಡೆ

ಈ ಹೊಸ ಎಂಜಿನ್ ತೈಲವು 1 ಲೀಟರ್, 3 ಲೀಟರ್ ಮತ್ತು 3.5 ಲೀಟರ್ ವಿಧಗಳಲ್ಲಿ ಬಿಡುಗಡೆಗೊಳ್ಳುತ್ತಿದ್ದು, ಕ್ರಮವಾಗಿ ರೂ 540, ರೂ 1,620 ಮತ್ತು ರೂ 1,890 ಬೆಲೆಯಲ್ಲಿ ಲಭ್ಯವಿದೆ ಹಾಗು ವಿಶ್ವದರ್ಜೆಯ ವಾಹನ ಲೂಬ್ರಿಕಂಟ್ ತಂತ್ರಜ್ಞಾನವನ್ನು ಪಡೆದುಕೊಳ್ಳಲಿದೆ.

ಎಕ್ಸಾನ್‌ಮೊಬಿಲ್ ಸೂಪರ್ 3000 ಎಂಜಿನ್ ಭಾರತದಲ್ಲಿ ಬಿಡುಗಡೆ

"ಭಾರತಕ್ಕೆ ಈ ಎಂಜಿನ್ ಪರಿಚಯಿಸಲು ಹೆಮ್ಮೆಯಾಗುತ್ತದೆ, ಈ ಮೊಬಿಲ್ ಸೂಪರ್ 3000 ತೈಲವು ಎಂಜಿನ್‌ನ ಆಯಸ್ಸನ್ನು ಹೆಚ್ಚಿಸಲಿದೆ ಮತ್ತು ಹೆಚ್ಚು ರಕ್ಷಣೆ ಒದಗಿಸುವಂತ ಪ್ರೀಮಿಯಂ ಗುಣಮಟ್ಟ ಕಾಯ್ದುಕೊಳ್ಳಲಾಗಿದೆ" ಎಂದು ಎಕ್ಸಾನ್‌ಮೊಬಿಲ್ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದೀಪಾಂಕರ್ ಬ್ಯಾನರ್ಜಿ ತಿಳಿಸಿದ್ದಾರೆ.

ಎಕ್ಸಾನ್‌ಮೊಬಿಲ್ ಸೂಪರ್ 3000 ಎಂಜಿನ್ ಭಾರತದಲ್ಲಿ ಬಿಡುಗಡೆ

ಎಂಜಿನ್ ತೈಲವು ವಾಹನದ ಅತ್ಯಂತ ಮುಖ್ಯವಾದ ಅಂಶವಾಗಿದ್ದು, ಉತ್ತಮ ದರ್ಜೆಯ ಎಂಜಿನ್ ವಾಹನವಾದ ಚಲನೆಯನ್ನು ನಯಗೊಳಿಸುತ್ತದೆ ಮತ್ತು ಹೆಚ್ಚು ಶಾಖ ಉತ್ಪತ್ತಿಯಾಗುವುದನ್ನು ತಡೆಯುತ್ತದೆ. ಮೊಬಿಲ್ ಸೂಪರ್ 3000 ಕಠಿಣ ಹವಾಮಾನದಲ್ಲಿ ನಿರ್ವಹಿಸುವಂತೆ ವಿನ್ಯಾಸಗೊಳಿಸಲಾಗಿದೆ ಮತ್ತು ಇದು ಎಂಜಿನ್ ಸಂರಕ್ಷಣೆ ಮಾಡಲಿದೆ.

Most Read Articles

Kannada
Read more on ಎಂಜಿನ್ engine
English summary
ExxonMobil has launched the Mobil Super 3000 X1 Formula FE 5W-30 (Mobil Super 3000) engine oil in India. The lubricant is suitable for both petrol and diesel engines.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X