ಭಾರತಕ್ಕೆ ಬರಲಿದೆ ಹೊಸ ಸ್ಯಾಂಗ್ಯೊಂಗ್ ರೆಕ್ಸ್ಟಾನ್
ಎಸ್‌ಯುವಿ ದೈತ್ಯ ಮಹೀಂದ್ರ ಆಂಡ್ ಮಹೀಂದ್ರ ಅಧೀನತೆಯಲ್ಲಿರುವ ಸ್ಯಾಂಗ್ಯೊಂಗ್ ತವರೂರಾದ ದಕ್ಷಿಣ ಕೊರಿಯಾದಲ್ಲಿ ಹೊಸ ರೆಕ್ಸ್ಟಾನ್ ಮಾದರಿಯನ್ನು ಅನಾವರಣಗೊಳಿಸಿದೆ. ಪ್ರಸ್ತುತ ಮಾದರಿಯು ನಿಕಟ ಭವಿಷ್ಯದಲ್ಲೇ ಭಾರತದಲ್ಲೂ ಬಿಡುಗಡೆಯಾಗಲಿದೆ.
ಭಾರತದಲ್ಲೂ ಪ್ರೀಮಿಂಯ ಐಷಾರಾಮಿ ಕ್ರೀಡಾ ಬಳಕೆಯ ವಾಹನಗಳಿಗೆ ಉತ್ತಮ ಬೇಡಿಕೆಯಿದೆ. ಹೊಸ ರೆಕ್ಸ್ಟಾನ್ ಮಾದರಿಯು ಭಾರತದಲ್ಲಿ ಈಗಿರುವ ಮಾದರಿಯ ಸ್ಥಾನವನ್ನು ತುಂಬಲಿದೆ.

ಹೊಸ ಸ್ಯಾಂಗ್ಯೊಂಗ್ ರೆಕ್ಸ್ಟಾನ್ ಮಾದರಿಯು ಕಾರಿನ ಒಳಮೈ ಜೊತೆಗೆ ಹೊರಮೈಯಲ್ಲಿ ಬದಲಾವಣೆಗಳನ್ನು ಪಡೆಯಲಿದೆ. ಮುಂಭಾಗದಲ್ಲಿ ಪರಿಷ್ಕೃತ ಗ್ರಿಲ್ ಜೊತೆ ಸ್ಯಾಂಗ್ಯೊಂಗ್ ಲಾಂಛನ ಹೆಚ್ಚಿನ ಆಕರ್ಷಕತೆಯನ್ನು ಪಡೆಯಲಿದೆ.
ಇನ್ನು ಹೆಡ್‌ಲೈಟ್‌ಗೂ ಆಧುನಿಕ ಸ್ಪರ್ಶ ನೀಡಲಾಗಿದ್ದು, ಡೇಟೈಮ್ ರನ್ನಿಂಗ್ ಲೈಟ್ಸ್ ಮತ್ತು ಎಚ್‌ಐಡಿ ಪ್ರೊಜೆಕ್ಟರ್‌ಗಳು ಸ್ಟ್ಯಾಂಡರ್ಡ್ ಆಗಿ ಲಭಿಸಲಿದೆ. ಇನ್ನು ತಾಜಾತನದ ನೋಟಕ್ಕಾಗಿ ಹೊಸ ಅಲಾಯ್ ವೀಲ್ ಸಹ ಪಡೆಯಲಿದೆ.

ಕಾರಿನೊಳಗೆ ಲೆಥರ್ ಅನುಭವ ನಿಮ್ಮದಾಗಲಿದೆ. ಸೆಂಟ್ರಲ್ ಕನ್ಸಾಲ್, ಸ್ಟೀರಿಂಗ್ ವೀಲ್ ಹಾಗೂ ಕ್ಯಾಬಿನ್ ಲೈಟ್ಸ್ ಪರಿಷ್ಕೃತಗೊಳಿಸಲಾಗಿದ್ದು ಹೆಚ್ಚು ಪ್ರೀಮಿಯಂ ಲುಕ್ ನೀಡುತ್ತದೆ. ಹಾಗೆಯೇ ಸ್ಮಾರ್ಟ್ ಕೀ, ರೈನ್ ಸೆನ್ಸಿಂಗ್ ವೈಪರ್, ಕ್ರೂಸ್ ಕಂಟ್ರೋಲ್, ಆಡಿಯೋ, ನೇವಿಗೇಷನ್ ಸಿಸ್ಟಂ ಹಾಗೂ ಬ್ಲೂಟೂತ್ ಸೌಲಭ್ಯಗಳಿರಲಿದೆ.
ಅಂತಿಮವಾಗಿ ಸ್ಯಾಂಗ್ಯೊಂಗ್ ರೆಕ್ಸ್ಟಾನ್ ಕಾರಿನಡಿಯಲ್ಲಿ ಒಂದು ಡೀಸೆಲ್ ಎಂಜಿನ್ ಇರಲಿದ್ದು, ಎರಡು ವಿಧದ ಟ್ಯೂನಿಂಗ್ ಪಡೆಯಲಿದೆ. ಇದರ 2696 ಸಿಸಿ ಡೀಸೆಲ್ ಎಂಜಿನ್ 162 (340 ಎನ್‌ಎಂ ಟಾರ್ಕ್) ಹಾಗೂ 184 ಅಶ್ವಶಕ್ತಿ (402 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಇದು ಐದು ಸ್ಪೀಡ್ ಮ್ಯಾನುವಲ್ ಆಲ್ ವೀಲ್ ಡ್ರೈವ್ ಅಥವಾ ಆಟೋಮ್ಯಾಟಿಕ್ ಆಲ್ ವೀಲ್ ಡ್ರೈವ್ ವ್ಯವಸ್ಥೆಗಳನ್ನು ಪಡೆಯಲಿದೆ.


Click it and Unblock the Notifications








