ಸುಜುಕಿ ಆಲ್ಟೊ ಟರ್ಬೊ ಆರ್‌ಎಸ್ ಬಿಡುಗಡೆ
ಭಾರತದ ಜನಪ್ರಿಯ ವಾಹನ ತಯಾರಿಕ ಸಂಸ್ಥೆಯಾಗಿರುವ ಮಾರುತಿ ಸುಜುಕಿ ಅಂಗಸಂಸ್ಥೆಯಾಗಿರುವ ಸುಜುಕಿ ತವರೂರಾದ ಜಪಾನ್‌ನಲ್ಲಿ ನೂತನ ಅಲ್ಟೊ ಟರ್ಬೊ ಆರ್‌ಎಸ್ ಮಾದರಿಯನ್ನು ಬಿಡುಗಡೆಗೊಳಿಸಿದೆ.
ಇದನ್ನು ಸಂಪೂರ್ಣ ಹೊಸತನದ ಆಲ್ಟೊ ತಳಹದಿಯಲ್ಲಿ ನಿರ್ಮಿಸಲಾಗಿದೆ. ಅಲ್ಲದೆ ಅದ್ಭುತ ಚಾಲನಾ ನೀಡಲಿದೆ ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.

ಹಾಗಿದ್ದರೂ ಎಂಜಿನ್ ತಾಂತ್ರಿಕತೆ ಬಗ್ಗೆ ಹೆಚ್ಚಿನ ಮಾಹಿತಿ ನೀಡಿಲ್ಲ. ಇದು 660 ಸಿಸಿ ಟರ್ಬೊಚಾರ್ಜ್ಡ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಹಾಗೆಯೇ ಪ್ರತಿ ಲೀಟರ್‌ಗೆ 25.6 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ.
ವಿಶಿಷ್ಟತೆ
ಫೈವ್ ಶಿಫ್ಟ್ ಪೆಡಲ್ ಶಿಫ್ಟ್,
ವಿಶೇಷವಾಗಿ ಟ್ಯೂನ್ ಮಾಡಲಾದ ಸಸ್ಪೆನ್ಷನ್,
ಸ್ಪೆಷನ್ ಕೆವೈಬಿ ಶಾಕ್ ಅಬ್ಸಾರ್ಬರ್,
13 ಇಂಚಿನ ವೆಂಟಿಲೇಟಡ್ ಫ್ರಂಟ್ ಡಿಸ್ಕ್ ಬ್ರೇಕ್,
ಹೊಸದಾಗಿ ಅಭಿವೃದ್ಧಿಗೊಳಿಸಿದ 15 ಇಂಚಿನ ರೇಡಿಯಲ್ ಚಕ್ರಗಳು,
ವಿಶೇಷ ಫ್ರಂಟ್ ಸೀಟು,
ಹೆಡ್ ಲ್ಯಾಂಪ್ ಗಾರ್ನಿಶ್, ಫ್ರಂಟ್ ಬಂಪರ್ ಅಪ್ಪರ್ ಗಾರ್ನಿಶ್, ಬ್ಯಾಕ್ ಡೋರ್ ಗಾರ್ನಿಶ್, ರಿಯರ್ ಬಂಪರ್ ಗಾರ್ನಿಶ್,
ಹೆಡ್ ಲ್ಯಾಂಪ್, ಫಾಗ್ ಲ್ಯಾಂಪ್,
ಬಾಡಿ ಲಾಂಛನ ಟರ್ಬೊ ಆರ್‌ಎಸ್


Click it and Unblock the Notifications








