ಸುಜುಕಿ ಕಾಂಪಾಕ್ಟ್ ಕ್ರಾಸೋವರ್ 'ಇಗ್ನಿಸ್' ಭಾರತಕ್ಕೆ ಬರುತ್ತಾ?
ಮುಂಬರುವ ಟೊಕಿಯೋ ಮೋಟಾರು ಶೋದಲ್ಲಿ ಜಪಾನ್ ಮೂಲದವರೇ ಆಗಿರುವ ಸುಜುಕಿ ಸಂಸ್ಥೆಯು ತನ್ನ ಬಹುನಿರೀಕ್ಷಿತ ಕಾಂಪಾಕ್ಟ್ ಕ್ರಾಸೋವರ್ 'ಇಗ್ನಿಸ್' ಕಾರನ್ನು ಅನಾವರಣಗೊಳಿಸಲಿದೆ. ಪ್ರಸ್ತುತ ಕಾರು ನಿಕಟ ಭವಿಷ್ಯದಲ್ಲಿ ತನ್ನ ಅಂಗಸಂಸ್ಥೆ ಮಾರುತಿ ಮುಖಾಂತರ ಭಾರತವನ್ನು ತಲುಪಲಿದೆಯೇ ಎಂಬುದು ಕುತೂಹಲವೆನಿಸಿದೆ.
ಬಲೆನೊ ಪ್ರೀಮಿಯಂ ಹ್ಯಾಚ್ ಬ್ಯಾಕ್ ಕಾರು ಭಾರತಕ್ಕೆ - ಮುಂದಕ್ಕೆ ಓದಲು ಇಲ್ಲಿ ಕ್ಲಿಕ್ಕಿಸಿರಿ
ಸುಜುಕಿ ಇಗ್ನಿಸ್ ಒಂದು ಕಾಂಪಾಕ್ಟ್ ಕ್ರಾಸೋವರ್ ಪರಿಕಲ್ಪನೆಯಾಗಿದ್ದು, ಭಾರತೀಯರಿಗೆ ಹೇಳಿ ಮಾಡಿಸಿದಂತಾಗಲಿದೆ. ಏಕೆಂದರೆ ದೇಶದಲ್ಲಿ ನಾಲ್ಕು ಮೀಟರ್ ಉದ್ದ ಪರಿಧಿಯಲ್ಲಿರುವ ಕಾರುಗಳಿಗ ತೆರಿಗೆ ವಿನಾಯಿತಿ ದೊರಕುತ್ತದೆ. ಇದು ಮಾರುತಿಯಂತಹ ಜನಪ್ರಿಯ ಸಂಸ್ಥೆಗಳಿಗೆ ಸ್ಪರ್ಧಾತ್ಮಕ ಬೆಲೆಯಲ್ಲಿ ಬಿಡುಗಡೆ ಮಾಡಲು ನೆರವಾಗಲಿದೆ.

44ನೇ ಟೊಕಿಯೊ ಮೋಟಾರು ಶೋ ಅಕ್ಟೋಬರ್ 29ರಂದು ಆರಂಭವಾಗಲಿದೆ. ಇದೇ ಸಂದರ್ಭದಲ್ಲಿ ಇಗ್ನಿಸ್ ತಳಹದಿಯಲ್ಲಿ ನೂತನ ಇಗ್ನಿಸ್-ಟ್ರೈಲ್ ಕಾನ್ಸೆಪ್ಟ್ ಕಾರನ್ನು ಸಹ ಸುಜುಕಿ ಮೋಟಾರು ಕಾರ್ಪೋರೇಷನ್ ಪ್ರದರ್ಶನ ಮಾಡಲಿದೆ.

ನಗರ ಸೇರಿದಂತೆ ಆಫ್-ರೋಡ್ ಗಳಿಗೂ ಸೂಕ್ತವಾಗಿ ಹೊಂದಿಕೆಯಾಗುವ ರೀತಿಯಲ್ಲಿ ಇಗ್ನಿಸ್-ಟ್ರೈಲ್ ಅಭಿವೃದ್ಧಿಪಡಿಸಲಾಗುವುದು. ಅಂದರೆ 4x4 ರಚನೆಯೊಂದಿಗೆ ದೊಡ್ಡದಾದ ಚಕ್ರಗಳು ಕಂಡುಬರಲಿದೆ.

ಇನ್ನು ಕಾರಿನೊಳಗೆ ಡ್ಯುಯಲ್ ಟೋನ್ ಡ್ಯಾಶ್ ಬೋರ್ಡ್ ಥೀಮ್ ಇರಲಿದೆ. ಇನ್ನುಳಿದಂತೆ ಬಹು ಕ್ರಿಯಾತ್ಮಕ ಸ್ಟೀರಿಂಗ್ ವೀಲ್, ಟಚ್ ಸ್ಕ್ರೀನ್ ಡಿಸ್ ಪ್ಲೇ, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಹಾಗೂ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಪ್ರಮುಖ ಆಕರ್ಷಣೆಯಾಗಲಿದೆ.


Click it and Unblock the Notifications








