ದೇಶದತ್ತ ಟೊಯೊಟಾ ವೈಯೊಸ್; ಆದ್ರೂ ತಡವಾದೀತು!

By Nagaraja

ಪ್ರಸ್ತುತ ಮಧ್ಯಮ ಗಾತ್ರದ ಸೆಡಾನ್ ಕಾರುಗಳ ವಿಭಾಗದಲ್ಲಿ ಹೋಂಡಾ ಸಿಟಿ ಅತಿ ಹೆಚ್ಚು ಜನಪ್ರಿಯತೆಯನ್ನು ಕಾಪಾಡಿಕೊಂಡಿದೆ. ಆದರೆ ಈ ಜಪಾನ್ ಮೂಲದ ಸಂಸ್ಥೆಗೆ ಸದ್ಯದಲ್ಲೇ ಪ್ರತಿಸ್ಪರ್ಧಿಯೊಂದು ಸಿದ್ಧಗೊಳ್ಳಲಿದೆ. ಅದುವೇ,

ಟೊಯೊಟಾ ವೈಯೊಸ್ (Toyota Vios)
[ಲಂಬೋರ್ಗಿನಿ ಸೂಪರ್ ಕಾರು ಶೈಲಿಯ ಟೊಯೊಟಾ ಮಿನಿವ್ಯಾನ್: ಮುಂದಕ್ಕೆ ಓದಲು ಕ್ಲಿಕ್ಲಿಸಿ]

ಹೋಂಡಾ ಸಿಟಿ ಜೊತೆ ಜೊತೆಗೆ ಮಾರುತಿಯ ಜನಪ್ರಿಯ ಸಿಯಾಝ್ ಮತ್ತು ಹ್ಯುಂಡೈ ವೆರ್ನಾ ಮಾದರಿಗಳಿಗೂ ಟೊಯೊಟಾದ ಈ ನೂತನ ವೈಯೊಸ್ ಪ್ರತಿಸ್ಪರ್ಧಿಯಾಗಲಿದೆ. ಇದರೊಂದಿಗೆ ಮಿಡ್ ಸೈಜ್ ಸೆಡಾನ್ ವಿಭಾಗದಲ್ಲಿ ಮಾರಾಟ ಸ್ಪರ್ಧೆಯು ಮತ್ತಷ್ಟು ಕಠಿಣವಾಗಲಿದೆ.

ಭಾರತದತ್ತ ಮುಖ ಮಾಡಿದ ಟೊಯೊಟಾ ವೈಯೊಸ್

ಮಧ್ಯಮ ಗಾತ್ರ ಸೆಡಾನ್ ವಿಭಾಗದಲ್ಲಿ ಕಳೆದ ಎಪ್ರಿಲ್ ನಿಂದ ಸೆಪ್ಟೆಂಬರ್ ವರಗಿನ ಅವಧಿಯಲ್ಲಿ 89,669 ಯುನಿಟ್ ಗಳ ಮಾರಾಟ ಕಂಡಿದ್ದು, ಶೇಕಾಡಾ 16ರಷ್ಟು ವರ್ಧನೆಯಾಗಿದೆ. ಇದನ್ನು ಮನಗಂಡಿರುವ ಟೊಯೊಟಾ ತನ್ನ ಅತ್ಯುತ್ತಮ ಉತ್ಪನ್ನಗಳಲ್ಲಿ ಒಂದಾಗಿರುವ ವೈಯೊಸ್ ದೇಶದ ಮಾರುಕಟ್ಟೆಗಿಳಿಸಲು ನಿರ್ಧರಿಸಿದೆ.

ಭಾರತದತ್ತ ಮುಖ ಮಾಡಿದ ಟೊಯೊಟಾ ವೈಯೊಸ್

ಇದರೊಂದಿಗೆ ಸದ್ಯ ಮಾರುಕಟ್ಟೆಯಲ್ಲಿರುವ ಟೊಯೊಟಾ ಇಟಿಯೋಸ್ ಸೆಡಾನ್ ಕಾರು ತನ್ನ ಹೊಸ ಸೋದರನಿಗೆ ಹಾದಿ ಬಿಟ್ಟು ಕೊಡುವ ಸಾಧ್ಯತೆಯಿದೆ.

ಭಾರತದತ್ತ ಮುಖ ಮಾಡಿದ ಟೊಯೊಟಾ ವೈಯೊಸ್

ಪ್ರಸ್ತುತ ಥಾಯ್ಲೆಂಡ್‌ನಲ್ಲಿರುವ ಟೊಯೊಟಾ ಮೋಟಾರು ಏಷ್ಯಾ ಫೆಸಿಫಿಕ್ ಘಟಕದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಹಾಗಿದ್ದರೂ ದೇಶದಲ್ಲಿ ಸ್ಪರ್ದಾತ್ಮಕ ಬೆಲೆ ಕಾಪಾಡುವ ನಿಟ್ಟಿನಲ್ಲಿ ಉತ್ಪಾದನೆಯನ್ನು ಸ್ಥಳೀಯವಾಗಿಸಬೇಕಾಗಿದೆ.

ಭಾರತದತ್ತ ಮುಖ ಮಾಡಿದ ಟೊಯೊಟಾ ವೈಯೊಸ್

ಹಾಗಿದ್ದರೂ ನೂತನ ವೈಯೊಸ್ ದೇಶ ಪ್ರವೇಶಕ್ಕಾಗಿ ವಾಹನ ಪ್ರೇಮಿಗಳು ಇನ್ನಷ್ಟು ಸಮಯ ಕಾಯಬೇಕಾಗಿದೆ. ಇದು 2018ನೇ ಇಸವಿಯ ವೇಳೆಯಷ್ಟೇ ಭಾರತವನ್ನು ಪ್ರವೇಶಿಸಲಿದೆ.

ಭಾರತದತ್ತ ಮುಖ ಮಾಡಿದ ಟೊಯೊಟಾ ವೈಯೊಸ್

ನೂತನ ಟೊಯೊಟಾ ವೈಯೊಸ್ 1.6 ಲೀಟರ್ ಪೆಟ್ರೋಲ್ ಹಾಗೂ 1.6 ಲೀಟರ್ ಡೀಸೆಲ್ ಎಂಜಿನ್ ನಿಯಂತ್ರಿಸಲ್ಪಡುವ ಸಾಧ್ಯತೆಯಿದೆ. ಅಂತೆಯೇ ನಾಲ್ಕು ಸ್ಪೀಡ್ ಎಲೆಕ್ಟ್ರಾನಿಕ್ ಕಂಟ್ರೋಲ್ ಟ್ರಾನ್ಸ್‌ಮಿಷನ್ (ಇಸಿಟಿ) ನಿರೀಕ್ಷೆ ಮಾಡಬಹುದಾಗಿದೆ.

ಭಾರತದತ್ತ ಮುಖ ಮಾಡಿದ ಟೊಯೊಟಾ ವೈಯೊಸ್

ಸದ್ಯ ಮಲೇಷ್ಯಾ ಮಾರುಕಟ್ಟೆಯಲ್ಲಿ ಮಾರಾಟದಲ್ಲಿರುವ ಟೊಯೊಟಾ ವೈಯೊಸ್ 13 ಲಕ್ಷ ರು.ಗಳಷ್ಟು (ಭಾರತೀಯ ರುಪಾಯಿ ಮೌಲ್ಯದ ಪ್ರಕಾರ) ದುಬಾರಿಯೆನಿಸುತ್ತದೆ. ಇನ್ನು ಭಾರತದಲ್ಲಿ ನಿರ್ಮಾಣ ಸ್ಥಳೀಯವಾಗಿಸಿದರೆ 7ರಿಂದ 11 ಲಕ್ಷ ರು.ಗಳ ಸ್ಪರ್ಧಾತ್ಮಕ ಬೆಲೆ ಪರಿಧಿಯನ್ನು ಕಾಪಾಡಿಕೊಳ್ಳಬಹುದಾಗಿದೆ.

ಇವನ್ನೂ ಓದಿ

ಕೈಕೊಟ್ಟ ಲ್ಯಾಂಡ್ ಕ್ರೂಸರ್; ಸೂರತ್ ಮಾಲಿಕನಿಂದ ಕತ್ತೆ ಸೇವೆ! ಮುಂದಕ್ಕೆ ಓದಿ

More from DriveSpark

Article Published On: Monday, October 19, 2015, 17:09 [IST]
English summary
Toyota To Rival Honda City And Hyundai Verna With The All-New Vios
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+