ವಿಂಟೇಜ್ ಕಾರುಗಳು ರಸ್ತೆಗಿಳಿಯಲು ಸಾಧ್ಯವಿಲ್ಲ: ಹಸಿರು ನ್ಯಾಯಮಂಡಳಿ
ವಿಂಟೇಜ್ ವಾಹನ ಪ್ರೇಮಿಗಳಿಗೆ ಅತ್ಯಂತ ನಿರಾಸದಾಯಕ ಸಂಗತಿಯೊಂದರಲ್ಲಿ ವಿಂಟೇಜ್ ಕಾರುಗಳು ಸಾರ್ವಜನಿಕ ರಸ್ತೆಗಿಳಿಯಲು ಸಾಧ್ಯವಿಲ್ಲ ಎದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಆದೇಶ ಹೊರಡಿಸಿದೆ.
ಇತ್ತೀಚೆಗಷ್ಟೇ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 21 ಗನ್ ಸೆಲ್ಯೂಟ್ ವಿಂಟೇಜ್ ಕಾರು ರಾಲಿ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ವಿಂಟೇಜ್ ಕಾರುಗಳಿಗಾಗಿ ರಸ್ತೆಯಲ್ಲಿ ವಿಶೇಷ ರಾಲಿಯನ್ನು ಏರ್ಪಡಿಸಲಾಗಿತ್ತು.

ಇದರ ಬೆನ್ನಲ್ಲೇ ಗಂಭೀರವಾದ ಹೇಳಿಕೆ ಕೊಟ್ಟಿರುವ ಹಸಿರು ನ್ಯಾಯಮಂಡಳಿ, ವಿಂಟೇಜ್ ಕಾರುಗಳು 15 ವರ್ಷಗಿಂತಲೂ ಹಳೆಯ ವಾಹನಗಳಾಗಿರುವುದರಿಂದ ರಸ್ತೆಗಿಳಿಯಲು ಸಾಧ್ಯವಿಲ್ಲ ಎಂಬುದನ್ನು ತಿಳಿಸಿದೆ.

ಅಷ್ಟೇ ಅಲ್ಲದೆ ವಿಂಟೇಜ್ ಕಾರುಗಳಿಗೆ ಫಿಟ್ನೆಸ್ ಸರ್ಟಿಫಿಕೇಟ್ ನೀಡದಂತೆಯೂ ಆದೇಶಿಸಲಾಗಿದೆ. ಇದು ಪರಿಸರದ ದೃಷ್ಟಿಕೋನದಲ್ಲಿ ಉತ್ತಮವೆಂದು ಗೋಚರಿಸಿದರೂ ಭವಿಷ್ಯದಲ್ಲಿ ವಿಂಟೇಜ್ ಕಾರು ರಾಲಿ ಸಂಪೂರ್ಣವಾಗಿ ನಿಲುಗಡೆಯಾದಿತೇ ಎಂಬುದು ಭೀತಿಗೆ ಕಾರಣವಾಗಿದೆ.


Click it and Unblock the Notifications








