2016 ವರ್ಷಾಂತ್ಯದ ಆಫರ್; 10 ಲಕ್ಷದ ವರೆಗೂ ಆಫರ್!
2016 ವರ್ಷಾಂತ್ಯದ ಕಾಪು ಆಫರುಗಳನ್ನು ಯಾವುದೇ ಕಾರಣಕ್ಕೂ ಮಿಸ್ ಮಾಡದಿರಿ.
ಕ್ರಿಸ್ಮಸ್ ಹಾಗೂ ಹೊಸ ವರ್ಷದ ಸಂಭ್ರಮದ ವೇಳೆಯಲ್ಲಿರುವ ಈ ವರ್ಷಾಂತ್ಯದ ವೇಳೆಯಲ್ಲಿ ಗರಿಷ್ಠ ಆಫರ್ ಗಳನ್ನು ನೀಡಲಾಗುತ್ತಿದೆ. 2016 ಶ್ರೇಣಿಯ ಮಾಡೆಲ್ ಗಳ ಗರಿಷ್ಠ ಮಾರಾಟ ಗುರಿಯಾಗರಿಸಿಕೊಂಡಿರುವ ವಾಹನ ಸಂಸ್ಥೆಗಳು ಆಕರ್ಷಕ ಆಫರುಗಳನ್ನು ಮುಂದಿಟ್ಟಿದೆ. ಪ್ರಸ್ತುತ ಲೇಖನದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಆಫರ್ ಗಳು ಲಭ್ಯವಿರುವ 20 ಕಾರುಗಳನ್ನು ಪರಿಚಯಿಸಲಿದ್ದೇವೆ.

01. ಹ್ಯುಂಡೈ ಗ್ರಾಂಡ್ ಐ10
ಹ್ಯುಂಡೈ ಗ್ರಾಂಡ್ ಐ10 ಕಾರಿಗೆ 91,000 ರು.ಗಳ ಡಿಸ್ಕೌಂಟ್ ಹಾಗೂ ಡೀಲರುಗಳಿಂದ ಮತ್ತಷ್ಟು ವಿಶೇಷ ಆಫರುಗಳು ಲಭ್ಯವಿರುತ್ತದೆ. ಈ ಮೂಲಕ ಗ್ರಾಹಕರು ಒಂದು ಲಕ್ಷಕ್ಕೂ ಹೆಚ್ಚು ಆಫರ್ ಪಡೆಯಬಹುದಾಗಿದೆ.

02. ಹ್ಯುಂಡೈ ವೆರ್ನಾ
ಕಳೆಗುಂದಿರುವ ವೆರ್ನಾಗೆ ಉತ್ತೇಜನ ನೀಡುವ ಇರಾದೆಯಲ್ಲಿರುವ ಹ್ಯುಂಡೈ, ಈ ವರ್ಷಾಂತ್ಯದ ವೇಳೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಆಫರುಗಳನ್ನು ನೀಡುತ್ತಿದೆ. ಆಯ್ದ ಮಾದರಿಗಳಿಗೆ ಮಾತ್ರ ಇದು ಲಭ್ಯವಾಗಲಿದೆ.

03. ಸ್ಕೋಡಾ ರಾಪಿಡ್
ಗುಣಮಟ್ಟದ ಕಾರುಗಳನ್ನು ನಿರ್ಮಿಸುವುದರಲ್ಲಿ ಹೆಸರು ವಾಸಿಯಾಗಿರುವ ಸ್ಕೋಡಾ, ತನ್ನ ಜನಪ್ರಿಯ ರಾಪಿಡ್ ಕಾರಿಗೆ ಒಂದು ಲಕ್ಷಕ್ಕೂ ಹೆಚ್ಚು ರುಪಾಯಿಗಳನ್ನು ಮುಂದಿಟ್ಟಿದೆ.

04. ಮಹೀಂದ್ರ ಎಕ್ಸ್ ಯುವಿ 500
ದೇಶದ ನಂ.1 ಉಪಯುಕ್ತ ವಾಹನ ನಿರ್ಮಾಣ ಸಂಸ್ಥೆಯಾಗಿರುವ ಮಹೀಂದ್ರ ಆಂಡ್ ಮಹೀಂದ್ರ, ತನ್ನ ಹೆಮ್ಮೆಯ ಎಕ್ಸ್ ಯುವಿ 500 ಕ್ರೀಡಾ ಬಳಕೆಯ ಕಾರಿಗೂ ಒಂದು ಲಕ್ಷಕ್ಕೂ ಹೆಚ್ಚು ರುಪಾಯಿಗಳ ಆಫರುಗಳನ್ನು ನೀಡುತ್ತಿದೆ.

05. ಹೋಂಡಾ ಮೊಬಿಲಿಯೊ
ಕಳಪೆ ಮಾರಾಟದಲ್ಲಿರುವ ಹೋಂಡಾ ಮೊಬಿಲಿಯೊ ಖರೀದಿ ವೇಳೆಯಲ್ಲೂ ಒಂದು ಲಕ್ಷಕ್ಕೂ ಹೆಚ್ಚು ರುಪಾಯಿಗಳ ಡಿಸ್ಕೌಂಟ್ ಗಳನ್ನು ಪಡೆಯಬಹುದಾಗಿದೆ.

06. ಹೋಂಡಾ ಬಿಆರ್ ವಿ
ಅತ್ತ ಹೊಸತಾಗಿ ಬಿಡುಗಡೆಯಾಗಿರುವ ಬಿಆರ್ ವಿ ಕಾರಿಗೂ ಒಂದು ಲಕ್ಷ ರು.ಗಿಂತಲೂ ಹೆಚ್ಚಿನ ಆಕರ್ಷಕ ಆಫರನ್ನು ಹೋಂಡಾ ನೀಡುತ್ತಿದೆ.

07. ರೆನೊ ಡಸ್ಟರ್
ರೆನೊ ಡಸ್ಟರ್ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ (ಎಎಂಟಿ) ಮತ್ತು ಮ್ಯಾನುವಲ್ ವೆರಿಯಂಟ್ ಖರೀದಿ ವೇಳೆಯಲ್ಲಿ ಅನುಕ್ರಮವಾಗಿ 1.2 ಲಕ್ಷ ರು. ಮತ್ತು 80,000 ರು.ಗಳ ಆಫರ್ ನಿಮ್ಮದಾಗಿಸಬಹುದಾಗಿದೆ.

08. ನಿಸ್ಸಾನ್ ಟೆರನೊ
ಇನ್ನೊಂದೆಡೆ ಟೆರನೊ ಪ್ರೀಮಿಯಂ ಎಸ್ ಯುವಿ ಖರೀದಿ ವೇಳೆಯಲ್ಲಿ ಒಂದು ಲಕ್ಷ ರು.ಗಳಿಗೂ ಹೆಚ್ಚು ಆಫರನ್ನು ನಿಸ್ಸಾನ್ ಮುಂದಿಟ್ಟಿದೆ.

09. ರೆನೊ ಲೊಡ್ಜಿ
ರೆನೊ ಲೊಡ್ಜಿ ವರ್ಲ್ಡ್ ಎಡಿಷನ್ ಬಹು ಬಳಕೆಯ ವಾಹನ ಖರೀದಿ ವೇಳೆಯಲ್ಲೂ 1 ಲಕ್ಷ ರು.ಗಿಂತಲೂ ಹೆಚ್ಚು ಡಿಸ್ಕೌಂಟ್ ಪಡೆಯಬಹುದಾಗಿದೆ.

10. ಷೆವರ್ಲೆ ಕ್ರೂಝ್
ಅಮೆರಿಕ ಮೂಲದ ಜನರಲ್ ಮೋಟಾರ್ಸ್ ಸಂಸ್ಥೆಯು ತನ್ನ ಜನಪ್ರಿಯ ಕ್ರೂಝ್ ಕಾರಿನ ಖರೀದಿ ವೇಳೆಯಲ್ಲಿ ಒಂದು ಲಕ್ಷ ರು.ಗಳಿಗೂ ಹೆಚ್ಚಿನ ಆಫರನ್ನು ನೀಡುತ್ತಿದೆ.

11. ಟಾಟಾ ಸಫಾರಿ ಸ್ಟ್ರೋಮ್
ಟಾಟಾ ಸಫಾರಿ ಸ್ಟ್ರೋಮ್ ಕ್ರೀಡಾ ಬಳಕೆಯ ವಾಹನ ಖರೀದಿಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ರುಪಾಯಿಗಳ ಆಫರ್ ನಿಮ್ಮದಾಗಿಸಬಹುದಾಗಿದೆ.

12. ಸ್ಯಾಂಗ್ಯೊಂಗ್ ರೆಕ್ಸ್ಟಾನ್
ಮಹೀಂದ್ರ ಭಾಗವಾಗಿರುವ ಸ್ಯಾಂಗ್ಯೊಂಗ್ ರೆಕ್ಸ್ಟಾನ್ ಖರೀದಿ ವೇಳೆಯಲ್ಲಿ ಬರೋಬ್ಬರಿ 2.5 ಲಕ್ಷ ರು.ಗಳ ಆಫರ್ ಪಡೆಯಬಹುದಾಗಿದೆ.

13. ಹೋಂಡಾ ಸಿಆರ್-ವಿ
ಇನ್ನು ಹೋಂಡಾ ಸಿಆರ್-ವಿ ಪ್ರೀಮಿಯಂ ಕ್ರೀಡಾ ಬಳಕೆಯ ವಾಹನ ಖರೀದಿ ವೇಳೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಆಫರ್ ನೀಡಲಾಗುತ್ತಿದೆ.

14. ಹ್ಯುಂಡೈ ಸಾಂಟಾ ಫೆ
ದಕ್ಷಿಣ ಕೊರಿಯಾ ಮೂಲದ ಹ್ಯುಂಡೈ ತನ್ನ ಪ್ರೀಮಿಯಂ ಸಾಂಟಾ ಫೆ ಕ್ರೀಡಾ ಬಳಕೆಯ ವಾಹನಕ್ಕೂ ಎರಡು ಲಕ್ಷ ರು.ಗಳಿಗೂ ಹೆಚ್ಚಿನ ಆಫರನ್ನು ನೀಡುತ್ತಿದೆ.

15. ಆಡಿ ಎ3/ಕ್ಯೂ3
ಜರ್ಮನಿಯ ಐಷಾರಾಮಿ ವಾಹನ ಸಂಸ್ಥೆ ಆಡಿ, ತನ್ನ ಜನಪ್ರಿಯ ಕ್ಯೂ3 ಹಾಗೂ ಎ3 ಮಾದರಿಗಳಿಗೆ 4.25 ಲಕ್ಷ ರು.ಗಳ ವರೆಗೆ ಆಫರನ್ನು ಮುಂದಿಟ್ಟಿದೆ.

16. ಆಡಿ ಎ4
ನಿಮ್ಮಿಂದ ಊಹಿಸಲು ಸಾಧ್ಯವೇ? ಆಡಿ ಎ4 ಕಾರು ಖರೀದಿ ವೇಳೆಯಲ್ಲಿ 8.75 ಲಕ್ಷ ರು.ಗಳ ವರೆಗೆ ಬೆಲೆ ಕಡಿತಗೊಳಿಸಲಾಗಿದೆ.

17. ಬಿಎಂಡಬ್ಲ್ಯು 3 ಸಿರೀಸ್
ಏತನ್ಮಧ್ಯೆ ಬಿಎಂಡಬ್ಲ್ಯು ಸಹ ತನ್ನ 3 ಸಿರೀಸ್ ಪೆಟ್ರೋಲ್ ಹಾಗೂ ಡೀಸೆಲ್ ಕಾರುಗಳಿಗೆ ಅನುಕ್ರಮವಾಗಿ 10 ಲಕ್ಷ ರು. ಹಾಗೂ ಐದು ಲಕ್ಷ ರು.ಗಳಷ್ಟು ಬೆಲೆ ಕಡಿತವನ್ನು ಘೋಷಿಸಿದೆ.

18. ಬಿಎಂಡಬ್ಲ್ಯು ಎಕ್ಸ್3
ಇನ್ನು ಬಿಎಂಡಬ್ಲ್ಯು ಎಕ್ಸ್3 ಖರೀದಿ ವೇಳೆಯಲ್ಲಿ ಆರರಿಂದ ಏಳು ಲಕ್ಷ ರು.ಗಳ ವರೆಗೆ ಆಫರ್ ಪಡೆಯಬಹುದಾಗಿದೆ.

19. ಮರ್ಸಿಡಿಸ್ ಬೆಂಝ್ ಸಿ ಕ್ಲಾಸ್
ಮಗದೊಂದು ಜರ್ಮನಿಯ ಐಷಾರಾಮಿ ವಾಹನ ಸಂಸ್ಥೆಯಾಗಿರುವ ಮರ್ಸಿಡಿಸ್ ಬೆಂಝ್ ತನ್ನ ಜನಪ್ರಿಯ ಸಿ ಕ್ಲಾಸ್ ಪೆಟ್ರೋಲ್ ಹಾಗೂ ಡೀಸೆಲ್ ಆವೃತ್ತಿಗಳ ಖರೀದಿ ವೇಳೆಯಲ್ಲಿ ಅನುಕ್ರಮವಾಗಿ ಏಳು ಹಾಗೂ ಐದು ಲಕ್ಷ ರು.ಗಳ ಆಫರ್ ನೀಡುತ್ತಿದೆ.

20. ಮರ್ಸಿಡಿಸ್ ಇ ಕ್ಲಾಸ್
ಕೊನೆಯದಾಗಿ ಮರ್ಸಿಡಿಸ್ ಇ ಕ್ಲಾಸ್ ಕಾರಿನ ಖರೀದಿ ವೇಳೆಯಲ್ಲಿ ಗರಿಷ್ಠ 10 ಲಕ್ಷ ರು.ಗಳ ಆಫರನ್ನು ಪಡೆಯಬಹುದಾಗಿದೆ.

*ಆಫರುಗಳ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಡೀಲರುಗಳನ್ನು ಸಂಪರ್ಕಿಸತಕ್ಕದ್ದು.


Click it and Unblock the Notifications








