ದಟ್ಸನ್ ಐಕಾನಿಕ್ ಬ್ಲೂಬರ್ಡ್ ರಾಲಿ ಕಾರು ಮಿಂಚಿಂಗ್
ಇತ್ತೀಚೆಗಷ್ಟೇ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಸಾಗಿದ 2016 ಆಟೋ ಎಕ್ಸ್ ಪೋದಲ್ಲಿ ಅತಿ ನೂತನ ದಟ್ಸನ್ ಗೊ ಕ್ರಾಸ್ ಕಾನ್ಸೆಪ್ಟ್ ಕಾರನ್ನು ಅನಾವರಣಗೊಳಿಸಲಾಗಿತ್ತು. ಈ ಮೂಲಕ ವಾಹನ ಲೋಕದಲ್ಲಿ 80 ವರ್ಷಗಳ ಇತಿಹಾಸ ಹೊಂದಿರುವ ದಟ್ಸನ್ ಎರಡನೇ ಬಾರಿಗೆ ದೇಶದ ಅತಿ ದೊಡ್ಡ ವಾಹನ ಪ್ರದರ್ಶನ ಮೇಳದಲ್ಲಿ ರಂಗು ಮೆರೆದಿದೆ.
2016 ಆಟೋ ಎಕ್ಸ್ ಪೋ ವಿಶೇಷ ಪುಟಕ್ಕೆ ಭೇಟಿ ಕೊಡಲು ಮರೆಯದಿರಿ
ಈ ವೇಳೆಯಲ್ಲಿ ದಟ್ಸನ್ ಹಳೆಯ ಐಕಾನಿಕ್ ರಾಲಿ ಕಾರು ಅತಿ ಹೆಚ್ಚಿನ ಗಮನ ಸೆಳೆದಿತ್ತು. ಅದು ಯಾವುದು ಗೊತ್ತಾ? ಈ ಬಗೆಗಿನ ಸಮಗ್ರ ಮಾಹಿತಿಗಳಿಗಾಗಿ ಚಿತ್ರಪುಟದತ್ತ ಮುಂದುವರಿಯಿರಿ.

ವಾಹನ ಪ್ರೇಮಿಗಳನ್ನು ರಂಜಿಸಿರುವ ದಟ್ಸನ್ 1970ರ ದಶಕದ ಬ್ಲೂಬರ್ಡ್ 1600 ಎಸ್ ಎಸ್ ಎಸ್ (510) ರಾಲಿ ಕಾರನ್ನು ಪ್ರದರ್ಶನಕ್ಕಿರಿಸಿತ್ತು.

ದಟ್ಸನ್ ಬ್ಲೂಬರ್ಡ್ 1600 ಎಸ್ ಎಸ್ ಎಸ್ (510) ರಾಲಿ ಕಾರಿನಿಂದಲೇ ಸ್ಪೂರ್ತಿ ಪಡೆದುಕೊಂಡು ಗೊ ಕ್ರಾಸ್ ಕಾನ್ಸೆಪ್ಟ್ ಕಾರು ನಿರ್ಮಾಣವಾಗುತ್ತಿರುವುದು ಇಲ್ಲಿ ಗಮನಾರ್ಹ.

ಮೋಟಾರ್ ಸ್ಪೋರ್ಟ್ ಕ್ಷೇತ್ರದಲ್ಲಿ ಇತಿಹಾಸ ಪರಂಪರೆಯನ್ನು ಹೊಂದಿರುವ ದಟ್ಸನ್, ಈಗ ನಿಸ್ಸಾನ್ ಮುಂದಾಳತ್ವದಲ್ಲಿ ಮಾರುಕಟ್ಟೆಗೆ ರಿ ಎಂಟ್ರಿ ಕೊಟ್ಟಿದೆ.

ದಟ್ಸನ್ ಗೊ ಹ್ಯಾಚ್ ಬ್ಯಾಕ್ ಮತ್ತು ಗೊ ಪ್ಲಸ್ ಎಂಪಿವಿ ಕಾರುಗಳು ಈಗಾಗಲೇ ಮಾರುಕಟ್ಟೆ ಪ್ರವೇಶಿಸಿದ್ದು, ಗೊ ಕ್ರಾಸ್ ನಿಕಟ ಭವಿಷ್ಯದಲ್ಲೇ ತಲುಪಲಿದೆ.

ದಟ್ಸನ್ ಬ್ಲೂಬರ್ಡ್ 1600 ಎಸ್ ಎಸ್ ಎಸ್ (510) ಒಂದು ಸೂಪರ್ ಸ್ಪೋರ್ಟ್ ರಾಲಿ ಸೆಡಾನ್ ಕಾರಾಗಿದೆ. ಈಗ ಇದರ ಆಧುನಿಕ ಆವೃತ್ತಿಯು ವಾಹನ ಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಗಲಿದೆ.

ದಟ್ಸನ್ ಗೊ ಕ್ರಾಸ್ ಕಾನ್ಸೆಪ್ಟ್


Click it and Unblock the Notifications








