ದಟ್ಸನ್ ಗೊ, ಗೊ ಪ್ಲಸ್ ಸ್ಟೈಲ್ ಆಕರ್ಷಕ ಆವೃತ್ತಿಗಳು ಬಿಡುಗಡೆ

By Nagaraja

ಭಾರತ ಮಾರುಕಟ್ಟೆಯಲ್ಲಿ ತನ್ನ ಸಾನಿಧ್ಯವನ್ನು ಗಟ್ಟಿ ಮಾಡಲು ಹೊರಟಿರುವ ನಿಸ್ಸಾನ್ ಅಧೀನತೆಯಲ್ಲಿರುವ ಜಪಾನ್ ಮೂಲದ ಹೆಸರಾಂತ ಬ್ರಾಂಡ್ ದಟ್ಸನ್, ದೇಶದಲ್ಲಿ ಅತಿ ನೂತನ ದಟ್ಸನ್ ಗೊ ಮತ್ತು ಗೊ ಪ್ಲಸ್ ಸ್ಟೈಲ್ ಆಕರ್ಷಕ ಆವೃತ್ತಿಗಳನ್ನು ಬಿಡುಗಡೆ ಮಾಡಿದೆ.

ದಟ್ಸನ್ ಗೊ ಮತ್ತು ಗೊ ಪ್ಲಸ್ ಸ್ಟೈಲ್ ವಿಶೇಷ ಆವೃತ್ತಿಗಳು 'ಟಿ' ವೆರಿಯಂಟ್ ನಲ್ಲಿ ಲಭ್ಯವಾಗಲಿದ್ದು, ಪ್ರಸಕ್ತ ತಿಂಗಳಿನಿಂದಲೇ ಮಾರಾಟಕ್ಕೆ ಲಭ್ಯವಾಗಲಿದೆ. ಇದು ವಿಶೇಷ ಬಣ್ಣಗಳ ಜೊತೆಗೆ ಹೊರಮೈ ಮತ್ತು ಒಳಮೈಯಲ್ಲಿ ಹೊಸ ಹೊಸ ವೈಶಿಷ್ಟ್ಯಗಳನ್ನು ಪಡೆಯಲಿದೆ.

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ದಟ್ಸನ್ ಗೊ: 4.06 ಲಕ್ಷ ರು.

ದಟ್ಸನ್ ಗೊ ಪ್ಲಸ್ ಸ್ಟೈಲ್: 4.77 ಲಕ್ಷ ರು.

ದಟ್ಸನ್ ಗೊ, ಗೊ ಪ್ಲಸ್ ಸ್ಟೈಲ್ ಆಕರ್ಷಕ ಆವೃತ್ತಿಗಳು ಬಿಡುಗಡೆ

ದಟ್ಸನ್ ಗೊ ಮತ್ತು ಗೊ ಪ್ಲಸ್ ಸ್ಟೈಲ್ ಆವೃತ್ತಿಗಳು ಈಗಿರುವ ಬಿಳಿ ಹಾಗೂ ರುಬಿ ಬಣ್ಣಗಳ ಹೊರತಾಗಿ ಹೊಸತಾದ ನೀಲಿ ಬಣ್ಣದ ಆಯ್ಕೆಯನ್ನು ಪಡೆಯಲಿದೆ.

ದಟ್ಸನ್ ಗೊ, ಗೊ ಪ್ಲಸ್ ಸ್ಟೈಲ್ ಆಕರ್ಷಕ ಆವೃತ್ತಿಗಳು ಬಿಡುಗಡೆ

ಕಾರಿನ ಹೊರಗಡೆ ರೂಫ್ ರೈಲ್, ರಿಯರ್ ಸ್ಪಾಯ್ಲರ್, ಬಾಡಿ ಗ್ರಾಫಿಕ್ಸ್ ಮತ್ತು 'ಸ್ಟೈಲ್' ಸೀಮಿತ ಆವೃತ್ತಿಯ ಲಾಂಛನವನ್ನು ಪಡೆಯಲಿದೆ.

ದಟ್ಸನ್ ಗೊ, ಗೊ ಪ್ಲಸ್ ಸ್ಟೈಲ್ ಆಕರ್ಷಕ ಆವೃತ್ತಿಗಳು ಬಿಡುಗಡೆ

ಅಂತೆಯೇ ಕಾರಿನೊಳಗೆ ಡ್ಯುಯಲ್ ಟೋನ್ ಬ್ಲ್ಯಾಕ್ ಮತ್ತು ಬೀಜ್ ಇಂಟಿರಿಯರ್ ಹೊರತಾಗಿ ಪಿಯಾನೊ ಬ್ಲ್ಯಾಕ್ ಸೆಂಟರ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಹಾಗೂ ಸಿಲ್ವರ್ ಫಿನಿಶ್ ಗಳನ್ನು ಪಡೆಯಲಿದೆ.

ದಟ್ಸನ್ ಗೊ, ಗೊ ಪ್ಲಸ್ ಸ್ಟೈಲ್ ಆಕರ್ಷಕ ಆವೃತ್ತಿಗಳು ಬಿಡುಗಡೆ

ಆಗಸ್ಟ್ ನಿಂದ ಅಕ್ಟೋಬರ್ ತಿಂಗಳ ವರೆಗೆ ಮಾರಾಟದಲ್ಲಿರುವ ದಟ್ಸನ್ ಗೊ ಮತ್ತು ಗೊ ಪ್ಲಸ್ ಸ್ಟೈಲ್ ವಿಶೇಷ ಆವೃತ್ತಿಗಳು ದೇಶದಲ್ಲಿ ಸ್ಥಿತಗೊಂಡಿರುವ ಸಂಸ್ಥೆಯ 230ರಷ್ಟು ಶೋ ರೂಂ ಗಳಲ್ಲಿ ಮಾರಾಟಕ್ಕೆ ಲಭ್ಯವಾಗಲಿದೆ.

ದಟ್ಸನ್ ಗೊ, ಗೊ ಪ್ಲಸ್ ಸ್ಟೈಲ್ ಆಕರ್ಷಕ ಆವೃತ್ತಿಗಳು ಬಿಡುಗಡೆ

ಈ ಬಗ್ಗೆ ಪ್ರತಿಕ್ರಿಯಿಸಿರುವ ನಿಸ್ಸಾನ್ ಮೋಟಾರು ಇಂಡಿಯಾ ವ್ಯವಸ್ಥಾಪಕ ನಿರ್ದೇಶಕರಾಗಿರುವ ಅರುಣ್ ಮಲ್ಹೋತ್ರಾ, "ಆಕರ್ಷಕ ವಿನ್ಯಾಸದೊಂದಿಗೆ ಕಾಲಿರಿಸಿರುವ ದಟ್ಸನ್ ಗೊ ಮತ್ತು ಗೊ ಪ್ಲಸ್ ಮಾದರಿಗಳು ಯುವ ಜನಾಂಗಕ್ಕೆ ಹೆಚ್ಚು ಪ್ರಿಯವೆನಿಸಲಿದೆ" ಎಂದಿದ್ದಾರೆ.

ದಟ್ಸನ್ ಗೊ, ಗೊ ಪ್ಲಸ್ ಸ್ಟೈಲ್ ಆಕರ್ಷಕ ಆವೃತ್ತಿಗಳು ಬಿಡುಗಡೆ

ವೈಶಿಷ್ಟ್ಯಗಳ ಬಗ್ಗೆ ಮಾತನಾಡುವುದಾದ್ದಲ್ಲಿ, ಫಾಲೋ ಮಿ ಹೋಮ್ ಹೆಡ್ ಲ್ಯಾಂಪ್, ಸ್ಪೀಡ್ ಸೆನ್ಸಿಟಿವ್ ಎಲೆಕ್ಟ್ರಿಕ್ ಪವರ್ ಸ್ಟೀರಿಂಗ್, ಪರಿಣಾಮಕಾರಿ ಎಸಿ, ಫ್ರಂಟ್ ಪವರ್ ವಿಂಡೋ, ಮೊಬೈಲ್ ಫೋನ್ ಹೋಲ್ಡರ್, ಆಕ್ಸ್ ಇನ್ ಜೊತೆಗೆ ಯುಎಸ್ ಬಿ ಚಾರ್ಜರ್, ಸೆಂಟ್ರಲ್ ಲಾಕಿಂಗ್ ಮತ್ತು ಫುಲ್ ವೀಲ್ ಕವರ್ ಗಳಿರಲಿದೆ.

ದಟ್ಸನ್ ಗೊ, ಗೊ ಪ್ಲಸ್ ಸ್ಟೈಲ್ ಆಕರ್ಷಕ ಆವೃತ್ತಿಗಳು ಬಿಡುಗಡೆ

ಅಂದ ಹಾಗೆ ದಟ್ಸನ್ ಗೊ ಮತ್ತು ಗೊ ಪ್ಲಸ್ ಮಾದರಿಗಳು ಪ್ರತಿ ಲೀಟರ್ ಗೆ 20.6 ಕೀ.ಮೀ. ಮೈಲೇಜ್ ನೀಡುವಷ್ಟು ಸಾಮರ್ಥ್ಯವನ್ನು ಹೊಂದಿರಲಿದೆ.

ದಟ್ಸನ್ ಗೊ, ಗೊ ಪ್ಲಸ್ ಸ್ಟೈಲ್ ಆಕರ್ಷಕ ಆವೃತ್ತಿಗಳು ಬಿಡುಗಡೆ

ಈ ಎರಡು ಮಾದರಿಗಳು ಎರಡು ವರ್ಷಗಳ/ಅನಿಯಮಿತ ಕೀ.ಮೀ.ಗಳ ವಾರಂಟಿ ಜೊತೆಗೆ ಉಚಿತ ರಸ್ತೆ ನೆರವು ಸೇವೆಯು ಲಭ್ಯವಿರುತ್ತದೆ. ಇನ್ನು ಗ್ರಾಹಕರು ಬಯಸುವುದಾದ್ದಲ್ಲಿ ವಾರಂಟಿ ಹಾಗೂ ಉಚಿತ ರೋಡ್ ಸೈಡ್ ಅಸಿಸ್ಟನ್ಸ್ ಸೇವೆಯನ್ನು ಐದು ವರ್ಷಕ್ಕೆ ವಿಸ್ತರಿಸುವ ಅವಕಾಶವೂ ಇರುತ್ತದೆ.

More from DriveSpark

Article Published On: Thursday, August 4, 2016, 16:01 [IST]
English summary
Datsun Launches GO and GO+ ‘Style’ Editions In India
Read more on ದಟ್ಸನ್ datsun
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+