ದಟ್ಸನ್ ರೆಡಿ ಗೊ ಬೆಂಗಳೂರಿನಲ್ಲಿ ಭರ್ಜರಿ ಬಿಡುಗಡೆ
ಸ್ಥಳೀಯ ಬಿಡುಗಡೆಯ ಭಾಗವಾಗಿ ಅತಿ ನೂತನ ದಟ್ಸನ್ ರೆಡಿ ಗೊ ಅರ್ಬನ್ ಕ್ರಾಸ್ ಕಾರು ಬೆಂಗಳೂರು ನಗರಕ್ಕೆ ಭರ್ಜರಿ ಎಂಟ್ರಿ ಕೊಟ್ಟಿದೆ. ಇದರ ಬೆಂಗಳೂರು ಎಕ್ಸ್ ಶೋ ರೂಂ ಪ್ರಾರಂಭಿಕ ಬೆಲೆ 2.43 ಲಕ್ಷ ರು.ಗಳಾಗಿರಲಿದೆ.
ನಿಸ್ಸಾನ್ ಬಜೆಟ್ ಬ್ರಾಂಡ್ ಆಗಿರುವ ದಟ್ಸನ್ ಭಾರತದಲ್ಲಿ ಬಿಡುಗಡೆ ಮಾಡುತ್ತಿರುವ ಮೂರನೇ ಮಾಡೆಲ್ ಇದಾಗಿದೆ. ಇದಕ್ಕೂ ಮೊದಲು ಗೊ ಹ್ಯಾಚ್ ಬ್ಯಾಕ್ ಮತ್ತು ಗೊ ಪ್ಲಸ್ ಬಹು ಬಳಕೆಯ ವಾಹನವನ್ನು ದೇಶದಲ್ಲಿ ಬಿಡುಗಡೆಗೊಳಿಸಿತ್ತು.

ಎಕ್ಸ್ ಶೋ ರೂಂ ಬೆಲೆ (ಬೆಂಗಳೂರು)
- ದಟ್ಸನ್ ರೆಡಿ ಗೊ ಡಿ: 2,43,147 ರು.
- ದಟ್ಸನ್ ರೆಡಿ ಗೊ ಎ: 2,87,674 ರು.
- ದಟ್ಸನ್ ರೆಡಿ ಗೊ ಟಿ: 3,14,645 ರು.
- ದಟ್ಸನ್ ರೆಡಿ ಗೊ ಟಿ (ಐಚ್ಛಿಕ): 3,25,077 ರು.
- ದಟ್ಸನ್ ರೆಡಿ ಗೊ ಎಸ್: 3,40,344 ರು.
- ಎಂಜಿನ್: 799 ಸಿಸಿ, 3 ಸಿಲಿಂಡರ್ ಪೆಟ್ರೋಲ್
- ಅಶ್ವಶಕ್ತಿ: 53
- ತಿರುಗುಬಲ: 72 ಎನ್ ಎಂ
- ಗೇರ್ ಬಾಕ್ಸ್: ಫೈವ್ ಸ್ಪೀಡ್ ಮ್ಯಾನುವಲ್, ಫ್ರಂಟ್ ವೀಲ್ ಡ್ರೈವ್
- ಅರ್ಬನ್,
- ಸ್ಟೈಲ್,
- ಕೂಲ್,
- ಈಸಿ ಕಿಟ್ - ಎನ್ಹಾನ್ಸ್ ಸ್ಟೈಲ್,
- ಈಸಿ ಕಿಟ್- ಪ್ರೀಮಿಯಂ ಸ್ಟೈಲ್
- ಡೇಟೈಮ್ ರನ್ನಿಂಗ್ ಲ್ಯಾಂಪ್,
- ಗರಿಷ್ಠ ಗ್ರೌಂಡ್ ಕ್ಲಿಯರನ್ಸ್ - 185 ಎಂಎಂ
- ಮೈಲೇಜ್ 25.17 ಕೀ.ಮೀ.
- ಟಾಲ್ ಬಾಯ್ ಶೈಲಿ - 1541 ಎಂಎಂ
- ಢಿಕ್ಕಿ ಜಾಗ - 222 ಲೀಟರ್
- ಚಾಲಕ ಬದಿಯ ಏರ್ ಬ್ಯಾಗ್
- ಕಡಿಮೆ ನಿರ್ವಹಣಾ ವೆಚ್ಚ

ಎಂಜಿನ್ ತಾಂತ್ರಿಕತೆ

ಮೈಲೇಜ್, ಇಂಧನ ಟ್ಯಾಂಕ್
ಇಂಧನ ಕ್ಷಮತೆ: ಭಾರತೀಯ ವಾಹನ ಅಧ್ಯಯನ ಸಂಸ್ಥೆಯ ಮಾನ್ಯತೆಯ ಪ್ರಕಾರ ಪ್ರತಿ ಲೀಟರ್ ಗೆ 25.17 ಕೀ.ಮೀ.
ಇಂಧನ ಟ್ಯಾಂಕ್: 28 ಲೀಟರ್

ವೇಗ
ಗರಿಷ್ಠ ವೇಗ: ಗಂಟೆಗೆ 140 ಕೀ.ಮೀ.
ಗಂಟೆಗೆ 0-100 ಕೀ.ಮೀ.: 15.9 ಸೆಕೆಂಡು

ರೆನೊ ಕ್ವಿಡ್ ಸಿಎಂಎಫ್-ಎ ತಳಹದಿಯಲ್ಲೇ ನಿರ್ಮಾಣವಾಗಿರುವ ದಟ್ಸನ್ ರೆಡಿ ಗೊ, 'ಟಾಲ್ ಬಾಯ್' ವಿನ್ಯಾಸವನ್ನು ಮೈಗೂಡಿಸಿ ಬಂದಿದ್ದು, 185 ಎಂಎಂ ಗ್ರೌಂಡ್ ಕ್ಲಿಯರನ್ಸ್ ಕಾಪಾಡಿಕೊಂಡಿದೆ.

'ಯೂಕಾನ್' ವಿನ್ಯಾಸ ತತ್ವಶಾಸ್ತ್ರದ ರೆನೊ ರೆಡಿ ಗೊ ವೈಟ್, ಸಿಲ್ವರ್, ಗ್ರೇ, ರಗ್ಬಿ ಮತ್ತು ಲೈಮ್ ಗಳೆಂಬ ಐದು ಆಕರ್ಷಕ ಬಣ್ಣಗಳಲ್ಲಿ ಲಭ್ಯವಾಗಲಿದೆ.

ನೂತನ ರೆಡಿ ಗೊ ಕಾರಿನಲ್ಲಿ ಪ್ರೊ-ಸೇಫ್-7 (PRO-SAFE7) ಸಮಗ್ರ ಸುರಕ್ಷಾ ಪ್ಯಾಕೇಜ್ ಒದಗಿಸಲಾಗುತ್ತಿದೆ. ಈ ಮೂಲಕ ಕಡಿಮೆ ಬ್ರೇಕಿಂಗ್ ದೂರ, ಶಕ್ತಿಶಾಲಿ ದೇಹ ರಚನೆ, ಅತ್ಯುತ್ತಮ ಗೋಚರತೆ, ಉನ್ನತ ಮಟ್ಟ ಸಸ್ಪೆನ್ಷನ್ ಸಿಸ್ಟಂ, ಕಾರ್ನರಿಂಗ್ ನಿಖರತೆ, ಎನರ್ಜಿ ಅಬ್ಸಾರ್ಬರ್ ಸ್ಟೀರಿಂಗ್ ಮತ್ತು ಚಾಲಕ ಬದಿಯ ಏರ್ ಬ್ಯಾಗ್ ಇರಲಿದೆ.

ಇವೆಲ್ಲದರ ಹೊರತಾಗಿ ಎರಡು ವರ್ಷಗಳ/ ಅನಿಯಮಿತ ಕೀ.ಮೀ. ಸ್ಟ್ಯಾಂಡರ್ಡ್ ವಾರಂಟಿ ಸೌಲಭ್ಯವನ್ನು ನೀಡಲಾಗುತ್ತದೆ. ಇದರ ಜೊತೆಗೆ ಹೆಚ್ಚುವರಿಯಾಗಿ ಉಚಿತ ರೋಡ್ ಸೈಡ್ ಸಹಾಯದ ಜೊತೆಗೆ ಎರಡು ಅಥವಾ ಮೂರು ವರ್ಷಗಳ/ಅನಿಯಮಿತ ಕೀ.ಮೀ. ಐಚ್ಛಿಕ ವಾರಂಟಿ ಸೌಲಭ್ಯವನ್ನು ನೀಡಲಾಗುತ್ತಿದೆ.

5 ವೈಯಕ್ತಿಕರಣಗೊಳಿಸಿದ ಕಿಟ್ ಆಯ್ಕೆಗಳು



Click it and Unblock the Notifications








