ದಟ್ಸನ್ ರೆಡಿ ಗೊ ಭರ್ಜರಿ ಬಿಡುಗಡೆ; ಬೆಲೆ ಕೇವಲ 2.38 ಲಕ್ಷ ರು. ಮಾತ್ರ!

By Nagaraja

ನಿಸ್ಸಾನ್ ಬಜೆಟ್ ಬ್ರಾಂಡ್ ಆಗಿರುವ ದಟ್ಸನ್ ಭಾರತದ ಮೊದಲ ಅರ್ಬನ್ ಕ್ರಾಸ್ 'ರೆಡಿ ಗೊ' ಕಾರನ್ನು ಬಿಡುಗಡೆಗೊಳಿಸಿದೆ. ಇದು ದೇಶದಲ್ಲಿ ದಟ್ಸನ್ ಬಿಡುಗಡೆ ಮಾಡುತ್ತಿರುವ ಮೂರನೇ ಮಾದರಿಯಾಗಿದೆ. ಇದಕ್ಕೂ ಮೊದಲು ಗೊ ಮತ್ತು ಗೊ ಪ್ಲಸ್ ಕಾರುಗಳನ್ನು ಪರಿಚಯಿಸಿತ್ತು.

ಪ್ರಾರಂಭಿಕ ಬೆಲೆ: 2.38 ಲಕ್ಷ ರು. (ಎಕ್ಸ್ ಶೋ ರೂಂ ದೆಹಲಿ)

ದಟ್ಸನ್ ರೆಡಿ ಗೊ ಸಂಪೂರ್ಣ ಚಾಲನಾ ವಿಮರ್ಶೆ (ಎಕ್ಸ್ ಕ್ಲೂಸಿವ್ ಚಿತ್ರಗಳ ಸಹಿತ)

ದೆಹಲಿ ಪ್ರಾರಂಭಿಕ ಬೆಲೆ 2.38 ಲಕ್ಷ ರು.ಗಳಲ್ಲಿ ಬಿಡುಗಡೆಗೊಂಡಿರುವ ದಟ್ಸನ್ ರೆಡಿ ಗೊ ನಿಜಕ್ಕೂ ಅಚ್ಚರಿ ಮೂಡಿಸಿದೆ. ಅಂತೆಯೇ ಟಾಪ್ ಎಂಡ್ ವೆರಿಯಂಟ್ ಕೇವಲ 3.34 ಲಕ್ಷ ರು.ಗಳಷ್ಟು ಮಾತ್ರ ದುಬಾರಿಯೆನಿಸಲಿದೆ.

ದಟ್ಸನ್ ರೆಡಿ ಗೊ ಭರ್ಜರಿ ಬಿಡುಗಡೆ

ನೂತನ ದಟ್ಸನ್ ರೆಡಿ ಗೊ ತಲಾ ಐದು ವೆರಿಯಂಟ್ ಹಾಗೂ ಬಣ್ಣಗಳಲ್ಲಿ ಲಭ್ಯವಾಗಲಿದೆ. ಅಲ್ಲದೆ ಐದು ವಿಭಿನ್ನ ಕಸ್ಟಮೈಸ್ ಆಯ್ಕೆಗಳನ್ನು ಕೊಡಲಾಗಿದೆ.

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

  • ದಟ್ಸನ್ ರೆಡಿ ಗೊ ಡಿ: 2,38,900 ರು.
  • ದಟ್ಸನ್ ರೆಡಿ ಗೊ ಎ: 2,82,649 ರು.
  • ದಟ್ಸನ್ ರೆಡಿ ಗೊ ಟಿ: 3,09,149 ರು.
  • ದಟ್ಸನ್ ರೆಡಿ ಗೊ ಟಿ (ಐಚ್ಛಿಕ): 3,19,399 ರು.
  • ದಟ್ಸನ್ ರೆಡಿ ಗೊ ಎಸ್: 3,34,399 ರು.
  • ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಮುಂಬೈ)

    ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಮುಂಬೈ)

    • ದಟ್ಸನ್ ರೆಡಿ ಗೊ ಡಿ: 2,49,220 ರು.
    • ದಟ್ಸನ್ ರೆಡಿ ಗೊ ಎ: 2,94,859 ರು.
    • ದಟ್ಸನ್ ರೆಡಿ ಗೊ ಟಿ: 3,22,504 ರು.
    • ದಟ್ಸನ್ ರೆಡಿ ಗೊ ಟಿ (ಐಚ್ಛಿಕ): 3,33,197 ರು.
    • ದಟ್ಸನ್ ರೆಡಿ ಗೊ ಎಸ್: 3,48,845 ರು.
    • ದಟ್ಸನ್ ರೆಡಿ ಗೊ ಭರ್ಜರಿ ಬಿಡುಗಡೆ

      ರೆನೊ ಕ್ವಿಡ್ ಜೊತೆ ಸಿಎಂಎಫ್-ಎ ತಳಹದಿಯನ್ನು ಹಂಚಿಕೊಂಡಿರುವ ದಟ್ಸನ್ ರೆಡಿ ಗೊ ಅರ್ಬನ್ ಕ್ರಾಸೋವರ್ ಕಾರನ್ನು ಭಾರತದಲ್ಲೇ ಅಭಿವೃದ್ಧಿ ಹಾಗೂ ನಿರ್ಮಾಣಗೊಳಿಸಿದೆ.

      ದಟ್ಸನ್ ರೆಡಿ ಗೊ ಭರ್ಜರಿ ಬಿಡುಗಡೆ

      ಎಂಟ್ರಿ ಲೆವೆಲ್ ವಿಭಾಗದಲ್ಲಿ ಆಧುನಿಕತೆ, ತಾಜಾತನ, ಸ್ಟೈಲಿಶ್ ಎನಿಸಿಕೊಂಡಿರುವ ರೆಡಿ ಗೊ 'ಯೂಕಾನ್' (YUKAN) ವಿನ್ಯಾಸ ತತ್ವಶಾಸ್ತ್ರದಲ್ಲಿ ಸಂಸ್ಥೆಯ ಕನಸು, ಪ್ರವೇಶ ಮತ್ತು ನಂಬಿಕೆಯ ಉತ್ಪನ್ನವಾಗಿ ಹೊರಹೊಮ್ಮಿದೆ.

      ದಟ್ಸನ್ ರೆಡಿ ಗೊ ಭರ್ಜರಿ ಬಿಡುಗಡೆ

      'ಟಾಲ್ ಬಾಯ್' ಶೈಲಿಯ ದಟ್ಸನ್ ರೆಡಿ ಗೊ 185 ಎಂಎಂ ಗ್ರೌಂಡ್ ಕ್ಲಿಯರನ್ಸ್ ಹೊಂದಿದ್ದು, ಐದು ಆಕರ್ಷಕ ಬಣ್ಣಗಳಲ್ಲಿ ಲಭ್ಯವಾಗಲಿದೆ. ಅವುಗಳೆಂದರೆ ವೈಟ್, ಸಿಲ್ವರ್, ಗ್ರೇ, ರಗ್ಬಿ ಮತ್ತು ಲೈಮ್.

      ದಟ್ಸನ್ ರೆಡಿ ಗೊ ಭರ್ಜರಿ ಬಿಡುಗಡೆ

      ನೂತನ ರೆಡಿ ಗೊ ಕಾರಿನಲ್ಲಿ ಪ್ರೊ-ಸೇಫ್-7 (PRO-SAFE7) ಸಮಗ್ರ ಸುರಕ್ಷಾ ಪ್ಯಾಕೇಜ್ ಒದಗಿಸಲಾಗುತ್ತಿದೆ. ಈ ಮೂಲಕ ಕಡಿಮೆ ಬ್ರೇಕಿಂಗ್ ದೂರ, ಶಕ್ತಿಶಾಲಿ ದೇಹ ರಚನೆ, ಅತ್ಯುತ್ತಮ ಗೋಚರತೆ, ಉನ್ನತ ಮಟ್ಟ ಸಸ್ಪೆನ್ಷನ್ ಸಿಸ್ಟಂ, ಕಾರ್ನರಿಂಗ್ ನಿಖರತೆ, ಎನರ್ಜಿ ಅಬ್ಸಾರ್ಬರ್ ಸ್ಟೀರಿಂಗ್ ಮತ್ತು ಚಾಲಕ ಬದಿಯ ಏರ್ ಬ್ಯಾಗ್ ಇರಲಿದೆ.

      ದಟ್ಸನ್ ರೆಡಿ ಗೊ ಭರ್ಜರಿ ಬಿಡುಗಡೆ

      ನೂತನ ದಟ್ಸನ್ ರೆಡಿ ಗೊ ಕಾರಿನಲ್ಲಿರುವ 0.8 ಲೀಟರ್ ತ್ರಿ ಸಿಲಿಂಡರ್ ಐ-ಸ್ಯಾಟ್ (i-SAT) ಎಂಜಿನ್, ಫೈವ್ ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಪಡೆಯಲಿದೆ.

      ದಟ್ಸನ್ ರೆಡಿ ಗೊ ಭರ್ಜರಿ ಬಿಡುಗಡೆ

      ಅಂತೆಯೇ 15.9 ಕೀ.ಮೀ. ಗಳಲ್ಲೇ ಗಂಟೆಗೆ 0-100 ಕೀ.ಮೀ. ವೇಗವರ್ಧಿಸಲಿರುವ ದಟ್ಸನ್ ರೆಡಿ ಗೊ ಗಂಟೆಗೆ ಗರಿಷ್ಠ 140 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ.

      ದಟ್ಸನ್ ರೆಡಿ ಗೊ ಭರ್ಜರಿ ಬಿಡುಗಡೆ

      ನೂತನ ದಟ್ಸನ್ ರೆಡಿ ಗೊ ಪ್ರತಿ ಲೀಟರ್ ಗೆ 25.17 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ.

      ದಟ್ಸನ್ ರೆಡಿ ಗೊ ಭರ್ಜರಿ ಬಿಡುಗಡೆ

      ಇವೆಲ್ಲದರ ಹೊರತಾಗಿ ಎರಡು ವರ್ಷಗಳ/ ಅನಿಯಮಿತ ಕೀ.ಮೀ. ಸ್ಟ್ಯಾಂಡರ್ಡ್ ವಾರಂಟಿ ಸೌಲಭ್ಯವನ್ನು ನೀಡಲಾಗುತ್ತದೆ. ಇದರ ಜೊತೆಗೆ ಹೆಚ್ಚುವರಿಯಾಗಿ ಉಚಿತ ರೋಡ್ ಸೈಡ್ ಸಹಾಯದ ಜೊತೆಗೆ ಎರಡು ಅಥವಾ ಮೂರು ವರ್ಷಗಳ/ಅನಿಯಮಿತ ಕೀ.ಮೀ. ಐಚ್ಛಿಕ ವಾರಂಟಿ ಸೌಲಭ್ಯವನ್ನು ನೀಡಲಾಗುತ್ತಿದೆ.

      ವೈಯಕ್ತಿಕಗೊಳಿಸಿದ ಕಿಟ್ ಆಯ್ಕೆಗಳು

      ವೈಯಕ್ತಿಕಗೊಳಿಸಿದ ಕಿಟ್ ಆಯ್ಕೆಗಳು

      ಹಾಗೆಯೇ ವೈಯಕ್ತಿಗೊಳಿಸಿದ ಐದು ಕಿಟ್ ಆಯ್ಕೆಗಳು ಇದರಲ್ಲಿರುತ್ತದೆ. ಅವುಗಳೆಂದರೆ,

      ಅರ್ಬನ್, ಸ್ಟೈಲ್, ಕೂಲ್, ಈಸಿ ಕಿಟ್ - ಎನ್ಹಾನ್ಸ್ ಸ್ಟೈಲ್ ಮತ್ತು ಈಸಿ ಕಿಟ್- ಪ್ರೀಮಿಯಂ ಸ್ಟೈಲ್

      ದಟ್ಸನ್ ರೆಡಿ ಗೊ ಭರ್ಜರಿ ಬಿಡುಗಡೆ

      ದೇಶದ್ಯಾಂತ ಸ್ಥಿತಗೊಂಡಿರುವ 274 ನಿಸ್ಸಾನ್, ದಟ್ಸನ್ ಸೇಲ್ಸ್ ಆ್ಯಂಡ್ ಸರ್ವಿಸ್ ಕೇಂದ್ರಗಳ ಮುಖಾಂತರ ಮಾರಾಟ ನಡೆಲಿಯದೆ. ಇದರ ಹೊರತಾಗಿ ದಟ್ಸನ್ ಇಂಡಿಯಾ ಆಪ್ ಮುಖಾಂತರವೂ ಗ್ರಾಹಕರು ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ. ಇದುವರೆಗೆ 1.5 ಲಕ್ಷ ಗ್ರಾಹಕರು ದಟ್ಸನ್ ಇಂಡಿಯಾ ಆಪ್ ಡೌನ್ ಲೋಡ್ ಮಾಡಿದ್ದಾರೆ.

      ಮುಖ್ಯಾಂಶಗಳು

      ಮುಖ್ಯಾಂಶಗಳು

      • ಡೇಟೈಮ್ ರನ್ನಿಂಗ್ ಲ್ಯಾಂಪ್,
      • ಗರಿಷ್ಠ ಗ್ರೌಂಡ್ ಕ್ಲಿಯರನ್ಸ್ - 185 ಎಂಎಂ
      • ಮೈಲೇಜ್ 25.17 ಕೀ.ಮೀ.
      • ಟಾಲ್ ಬಾಯ್ ಶೈಲಿ - 1541 ಎಂಎಂ
      • ಢಿಕ್ಕಿ ಜಾಗ - 222 ಲೀಟರ್
      • ಚಾಲಕ ಬದಿಯ ಏರ್ ಬ್ಯಾಗ್
      • ಕಡಿಮೆ ನಿರ್ವಹಣಾ ವೆಚ್ಚ

More from DriveSpark

Article Published On: Tuesday, June 7, 2016, 13:36 [IST]
English summary
Datsun redi-GO Launched In India, Prices Start At Rs. 2.38 Lakh
Read more on ದಟ್ಸನ್ datsun
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+