ದಟ್ಸನ್ ರೆಡಿ ಗೊ ಸಣ್ಣ ಕಾರು ಆಗಮನಕ್ಕೆ ಕಾಲ ಸನ್ನಿಹಿತ
ನಿಸ್ಸಾನ್ ಬಜೆಟ್ ಕಾರು ಬ್ರಾಂಡ್ ಆಗಿರುವ ದಟ್ಸನ್ ಅತಿ ನೂತನ ರೆಡಿ ಗೊ ಸಣ್ಣ ಹ್ಯಾಚ್ ಬ್ಯಾಕ್ ಕಾರನ್ನು ನಿಕಟ ಭವಿಷ್ಯದಲ್ಲೇ ಭಾರತದಲ್ಲಿ ಬಿಡುಗಡೆಗೊಳಿಸಲಿದೆ. ಈ ಹಿಂದೆ 2014 ಆಟೋ ಎಕ್ಸ್ ಪೋದಲ್ಲಿ ಮೊದಲ ಬಾರಿಗೆ ಪ್ರದರ್ಶನ ಕಂಡಿರುವ ದಟ್ಸನ್ ರೆಡಿ ಗೊ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಸಣ್ಣ ಕಾರು ವಿಭಾಗದಲ್ಲಿ ಮೋಡಿ ಮಾಡುವ ನಿರೀಕ್ಷೆಯಲ್ಲಿದೆ.
ರೆನೊ ಕಳೆದ ವರ್ಷ ಬಿಡುಗಡೆ ಮಾಡಿರುವ ಕ್ವಿಡ್ ಜೊತೆ ಫ್ಲ್ಯಾಟ್ ಫಾರ್ಮ್ ಹಂಚಿಕೊಂಡಿರುವ ದಟ್ಸನ್ ರೆಡಿ ಗೊ, ಪ್ರಸ್ತುತ ಟೆಸ್ಟಿಂಗ್ ಹಂತದಲ್ಲಿದ್ದು, 2016 ಮಧ್ಯಂತರ ಅವಧಿಯಲ್ಲಿ ಮಾರುಕಟ್ಟೆ ತಲುಪಲಿದೆ.

ನಿರ್ಮಾಣ
ಚೆನ್ನೈಯಲ್ಲಿರುವ ರೆನೊ-ನಿಸ್ಸಾನ್ ಘಟಕದಲ್ಲಿ ರೆಡಿ ಗೊ ನಿರ್ಮಾಣ ಆರಂಭವಾಗಲಿದೆ.

ಎಂಜಿನ್ ತಾಂತ್ರಿಕತೆ
ನಿಸ್ಸಾನ್ ಮೈಕ್ರಾದಲ್ಲಿರುವುದಕ್ಕೆ ಸಮಾನವಾದ ಎಂಜಿನ್ ಮಾನದಂಡಗಳು ಇದರಲ್ಲೂ ಕಂಡುಬರಲಿದೆ.
1.2 ಲೀಟರ್ ತ್ರಿ ಸಿಲಿಂಡರ್ ಪೆಟ್ರೋಲ್
5 ಸ್ಪೀಡ್ ಗೇರ್ ಬಾಕ್ಸ್

ತಳಹದಿ
ರೆನೊ ನಿಸ್ಸಾನ್ ಜಂಟಿಯಾದ ಸಿಎಂಎಫ್-ಎ ತಳಹದಿಯಲ್ಲಿ ನೂತನ ರೆಡಿ ಗೊ ಸಣ್ಣ ಕಾರು ನಿರ್ಮಾಣವಾಗುತ್ತಿದೆ.

ಅಂದಾಜು ಬೆಲೆ
ದಟ್ಸನ್ ರೆಡಿ ಗೊ ಅಂದಾಜು 3.5 ಲಕ್ಷ ರು.ಗಳ ಬೆಲೆ ಪರಿಧಿಯಲ್ಲಿ ಬಿಡುಗಡೆಗೊಳ್ಳುವ ಸಾಧ್ಯತೆಯಿದೆ.

ಪ್ರತಿಸ್ಪರ್ಧಿಗಳು
ರೆನೊ ಕ್ವಿಡ್,
ಮಾರುತಿ ಸುಜುಕಿ ಆಲ್ಟೊ,
ಹ್ಯುಂಡೈ ಇಯಾನ್


Click it and Unblock the Notifications








