ಜಾಸ್ತಿ ಮೈಲೇಜ್, ಹೆಚ್ಚು ಸ್ಟೈಲಿಷ್; ಮತ್ತಷ್ಟು ವಿಶಿಷ್ಟತೆಗಳೊಂದಿಗೆ ಹೊಸ ಆಲ್ಟೊ 800

By Nagaraja

ಮಾರುಕಟ್ಟೆಯಲ್ಲಿ ಸ್ಪರ್ಧೆ ಏರ್ಪಟ್ಟಿರುವಂತೆಯೇ ದೇಶದ ಅತಿ ದೊಡ್ಡ ವಾಹನ ಸಂಸ್ಥೆಯಾಗಿರುವ ಮಾರುತಿ ಸುಜುಕಿ, ತನ್ನ ಜನಪ್ರಿಯ ಆಲ್ಟೊ 800 ಪರಿಷ್ಕೃತ ಆವೃತ್ತಿಯನ್ನು ಬಿಡುಗಡೆಗೊಳಿಸಿದೆ. ನೂತನ ಕಾರಿನಲ್ಲಿ ಕೇವಲ ಅಂದತೆಗೆ ಮಾತ್ರವಲ್ಲದೆ ಕೆಲವೊಂದು ಗಮನಾರ್ಹ ವೈಶಿಷ್ಟ್ಯಗಳಿಗೂ ಆದ್ಯತೆ ಕೊಡಲಾಗಿದೆ.

ಹಳೆಯ ಮಾದರಿಗೆ ಹೋಲಿಸಿದಾಗ 2.64 ಲಕ್ಷ ರು.ಗಳ ಬೆಂಗಳೂರು ಎಕ್ಸ್ ಶೋ ರೂಂಗಳ ಆರಂಭಿಕ ಬೆಲೆಗಳಲ್ಲಿ ಬಿಡುಗಡೆಯಾಗಿರುವ 2016 ಆಲ್ಟೊ 800 ಹೊರಮೈ, ಒಳಮೈಯಲ್ಲಿ ಏನೆಲ್ಲ ಹೊಸ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ ಎಂಬುದನ್ನು ತಿಳಿದುಕೊಳ್ಳಲು ಚಿತ್ರಪುಟದತ್ತ ಮುಂದುವರಿಯಿರಿ.

ಏರೋ ಎಡ್ಜ್ ಡಿಸೈನ್

ಏರೋ ಎಡ್ಜ್ ಡಿಸೈನ್

ನೂತನ ಏರೋಡೈನಾಮಿಕ್ ಮತ್ತು ಎಡ್ಜಿ ವಿನ್ಯಾಸವು ಪರಿಷ್ಕೃತ ಆಲ್ಟೊ 800 ಕಾರಿಗೆ ತಾಜಾ ಮತ್ತು ಕ್ರೀಡಾತ್ಮಕ ನೋಟ ತುಂಬಲಿದೆ. ಬಾಗಿದ ವಿನ್ಯಾಸ, ದಿಟ್ಟವಾದ ಬಂಪರ್ ಮತ್ತು ಟ್ರೆಂಡಿ ಹೆಡ್ ಲ್ಯಾಂಪ್ ಕಾಣಬಹುದಾಗಿದೆ. ಇವೆಲ್ಲದರ ಹೊರತಾಗಿ ಫ್ರಂಟ್ ಫಾಗ್ ಲ್ಯಾಂಪ್ ಮತ್ತಷ್ಟು ಆಕರ್ಷಣೆಯನ್ನು ಕಾಪಾಡಿಕೊಂಡಿದೆ.

ಸ್ಟೈಲಿಷ್ ಒಳಮೈ

ಸ್ಟೈಲಿಷ್ ಒಳಮೈ

ಹೊಸ ವಿನ್ಯಾಸದ ಸೀಟು, ಡೋರ್ ಟ್ರಿಮ್ ಫ್ಯಾಬ್ರಿಕ್ಸ್, ಅಂದವಾಗಿ ವಿನ್ಯಾಸಗೊಳಿಸಿದ ರಿಯರ್ ಹೆಡ್ ರೆಸ್ಟ್, ಹೆಚ್ಚು ಸ್ಥಳಾವಕಾಶಯುಕ್ತ ಇಂಟಿರಿಯರ್ ಮತ್ತು ಕ್ಲಾಸಿಕ್ ಗ್ರೇ ಬಣ್ಣಗಳು ನೂತನ ಆಲ್ಟೊ 800 ಕಾರನ್ನು ನಿಮ್ಮ ನೆಚ್ಚಿನ ಕಾರಾಗಿಸಲಿದೆ.

ಆರಾಮದಾಯಕ ಆಸನ ವ್ಯವಸ್ಥೆ

ಆರಾಮದಾಯಕ ಆಸನ ವ್ಯವಸ್ಥೆ

ಆರಾಮದಾಯಕ ಆಸನ ವ್ಯವಸ್ಥೆಗಾಗಿ ಹಿಂದುಗಡೆ ವರ್ಧಿತ ಹೆಡ್ ರೆಸ್ಟ್ ಗಳನ್ನು ಕೊಡಲಾಗಿದೆ. ಮುಂಭಾಗದಲ್ಲಿ ಹೆಚ್ಚುವರಿ ಹೆಡ್ ಮತ್ತು ಶೋಲ್ಡರ್ ಮತ್ತು ಹಿಂದುಗಡೆ ಲೆಗ್ ರೂಂಗಳನ್ನು ಕೊಡಲಾಗಿದೆ. ಕಾರಿನೊಳಗೆ ಗರಿಷ್ಠ ಸ್ಥಳಾವಕಾಶಕ್ಕಾಗಿ ತೆಳುವಾದ ಡೋರ್ ಲಗತ್ತಿಸಲಾಗಿದೆ.

ತಂತ್ರಜ್ಞಾನ

ತಂತ್ರಜ್ಞಾನ

  • ಟ್ರೆಂಡಿ ಹೆಡ್ ಲ್ಯಾಂಪ್ ಮತ್ತು ಸ್ಪೋರ್ಟಿ ಬಂಪರ್ ಗ್ರಿಲ್
  • ಬಲ ಮತ್ತು ಎಡ ಬದಿಗಳಲ್ಲಿ ಔಟ್ ಸೈಡ್ ರಿಯರ್ ವ್ಯೂ ಮಿರರ್
  • ಚಾಲಕ ಮತ್ತು ಸಹ ಪ್ರಯಾಣಿಕ ಸ್ಟೋರೆಜ್ ಪಾಕೆಟ್
  • ಯುಟಿಲಿಟಿ ರಾಕ್,
  • ತಂತ್ರಜ್ಞಾನ

    ತಂತ್ರಜ್ಞಾನ

    • ಮುಂಭಾಗ ಮತ್ತು ಹಿಂಭಾಗದಲ್ಲಿ ಬಾಟಲಿ ಹೋಲ್ಡರ್
    • ಹೆಚ್ಚು ಸ್ಥಳಾವಕಾಶ
    • ರಿಮೋಟ್ ಕೀಲೆಸ್ ಎಂಟ್ರಿ
    • ಇಂಟೇಗ್ರೇಟಡ್ ಸ್ಟೀರಿಯೋ
    • ಪವರ್ ವಿಂಡೋ
    • ಸುಲಭ ಚಾಲನೆ ಮತ್ತು ಹ್ಯಾಂಡ್ಲಿಂಗ್

      ಸುಲಭ ಚಾಲನೆ ಮತ್ತು ಹ್ಯಾಂಡ್ಲಿಂಗ್

      ಕೇಬಲ್ ವಿಧದ ಗೇರ್ ಶಿಫ್ಟ್ ಮೆಕ್ಯಾನಿಸಂ ಮುಖಾಂತರ ನಯವಾಗಿ ಗೇರ್ ಬದಲಾಯಿಸಬಹುದಾಗಿದೆ. ನಿಖರವಾಗಿ ಗೇರ್ ಶಿಫ್ಟಿಂಗ್ ಗಾಗಿ ಡಿಟೆಂಟ್ ಪಿನ್ ಟೆಕ್ನಾಲಜಿ (ಡಿಪಿಟಿ) ಮತ್ತು ಐದನೇ ಗೇರ್ ನಿಂದ ನಾಲ್ಕನೇ ಗೇರ್ ಯಾವುದೇ ಪ್ರಯತ್ನವಿಲ್ಲದೆ ಬದಲಾಯಿಸಲು ಡಯಾಗ್ನಲ್ ಶಿಫ್ಟ್ ಅಸಿಸ್ಟ್ (ಡಿಎಸ್‌ಎ) ಬಳಕೆ ಮಾಡಲಾಗಿದೆ. ಅದೇ ರೀತಿ ಫ್ಲ್ಯಾಟ್ ಟಾರ್ಕ್ ಕರ್ವ್ ಮುಖಾಂತರ ಪದೇ ಪದೇ ಗೇರ್ ಬದಲಾಯಿಸುವುದನ್ನು ತಡೆಯಬಹುದಾಗಿದ್ದು, ಗರಿಷ್ಠ ಇಂಧನ ಕ್ಷಮತೆ ಕಾಪಾಡಿಕೊಳ್ಳಲಿದೆ.

      ಸುಧಾರಿತ ಮೈಲೇಜ್

      ಸುಧಾರಿತ ಮೈಲೇಜ್

      • ಪೆಟ್ರೋಲ್: 24.7 km/l
      • ಸಿಎನ್‌ಜಿ: 33.44 km/kg
      • ಪರಿಷ್ಕತ ಆಲ್ಟೊ 800 ಪೆಟ್ರೋಲ್ ಮತ್ತು ಸಿಎನ್‌ಜಿ ಆವೃತ್ತಿಯ ಇಂಧನ ಕ್ಷಮತೆಯಲ್ಲಿ ಅನುಕ್ರಮವಾಗಿ ಶೇಕಡಾ 9 ಮತ್ತು 10ರಷ್ಟು ವರ್ಧನೆಯುಂಟಾಗಿದೆ.

        ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಬೆಂಗಳೂರು)

        ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಬೆಂಗಳೂರು)

        • ಸ್ಟ್ಯಾಂಡರ್ಡ್: 264904 ರು.
        • ಸ್ಟ್ಯಾಂಡರ್ಡ್ (ಐಚ್ಛಿಕ): 271011 ರು.
        • ಎಲ್ ಎಕ್ಸ್: 299474 ರು.
        • ಎಲ್ ಎಕ್ಸ್ (ಐಚ್ಛಿಕ): 305580 ರು.
        • ಎಲ್ ಎಕ್ಸ್ ಐ : 325916 ರು.
        • ಎಲ್ ಎಕ್ಸ್ ಐ (ಐಚ್ಛಿಕ): 332023 ರು.
        • ವಿಎಕ್ಸ್‌ಐ: 345254 ರು.
        • ವಿಎಕ್ಸ್‌ಐ (ಐಚ್ಛಿಕ): 351360 ರು.
        • ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಬೆಂಗಳೂರು)

          ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಬೆಂಗಳೂರು)

          ಎಲ್ ಎಕ್ಸ್ ಐ ಸಿಎನ್‌ಜಿ: 388009 ರು.

          ಎಲ್ ಎಕ್ಸ್ ಐ ಸಿಎನ್‌ಜಿ (ಐಚ್ಛಿಕ): 394116 ರು.

          ಭದ್ರತೆ

          ಭದ್ರತೆ

          ನೂತನ ಆಲ್ಟೊ 800 ಕಾರಿನಲ್ಲಿ ಚಾಲಕ ಬದಿಯ ಏರ್ ಬ್ಯಾಗ್ ಭದ್ರತೆಯನ್ನು ಐಚ್ಚಿಕವಾಗಿ ಒದಗಿಸಲಾಗುತ್ತಿದೆ. ಅಲ್ಲದೆ ಹಿಂದುಗಡೆ ಡೋರ್ ನಲ್ಲಿ ಚೈಲ್ಡ್ ಲಾಕ್ ವ್ಯವಸ್ಥೆಯನ್ನು ಕೊಡಲಾಗಿದೆ. ಇನ್ನುಳಿದಂತೆ ಸುರಕ್ಷಿತ ಚಾಲನೆಗಾಗಿ ನಿಖರವಾದ ಬ್ರೇಕ್ ಆಳವಡಿಸಲಾಗಿದೆ.

          ಎಂಜಿನ್

          ಎಂಜಿನ್

          • ಸಾಮರ್ಥ್ಯ: 796 ಸಿಸಿ
          • ವಿಧ: ಎಫ್8ಡಿ
          • ಸಿಲಿಂಡರ್: 3
          • ಅಶ್ವಶಕ್ತಿ: 48
          • ತಿರುಗುಬಲ: 96 ಎನ್ ಎಂ
          • ಇಂಧನ: ಪೆಟ್ರೋಲ್/ಸಿಎನ್‌ಜಿ
          • ಗೇರ್ ಬಾಕ್ಸ್: 5 ಸ್ಪೀಡ್ ಮ್ಯಾನುವಲ್
          • ಆಯಾಮ (ಎಂಎಂ)

            ಆಯಾಮ (ಎಂಎಂ)

            • ಉದ್ದ: 3430
            • ಅಗಲ: 1490
            • ಎತ್ತರ: 1475
            • ಚಕ್ರಾಂತರ: 2360
            • ಗ್ರೌಂಡ್ ಕ್ಲಿಯರನ್ಸ್: 160
            • ಭಾರ, ಸೀಟು, ಇಂಧನ ಟ್ಯಾಂಕ್

              ಭಾರ, ಸೀಟು, ಇಂಧನ ಟ್ಯಾಂಕ್

              • ಭಾರ: 1185 ಕೆ.ಜಿ
              • ಆಸನ ಸಾಮರ್ಥ್ಯ: 5
              • ಇಂಧನ ಟ್ಯಾಂಕ್: 35 ಲೀಟರ್ (ಪೆಟ್ರೋಲ್)
              • ಬಣ್ಣಗಳು

                ಬಣ್ಣಗಳು

                • ಸುಪೀರಿಯರ್ ವೈಟ್
                • ಸಿಲ್ಕಿ ಸಿಲ್ವರ್
                • ಗ್ರ್ಯಾನೈಟ್ ಗ್ರೇ
                • ಬ್ಲೇಜಿಂಗ್ ರೆಡ್
                • ಸೆರೂಲಿಯನ್ ಬ್ಲೂ (ಹೊಸತು)
                • ಮೊಜಿಟೊ ಗ್ರೀನ್ (ಹೊಸತು)

More from DriveSpark

Article Published On: Thursday, May 19, 2016, 17:08 [IST]
English summary
New Features Of The Facelifted Maruti Alto 800
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+