ಫಿಯೆಟ್ ಅರ್ಬನ್ ಕ್ರಾಸ್ ಬಿಡುಗಡೆ; ವಿಶೇಷತೆಗಳೇನು?
ಇಟಲಿಯ ಮೂಲದ ಪ್ರಮುಖ ವಾಹನ ತಯಾರಿಕ ಸಂಸ್ಥೆ ಫಿಯೆಟ್ ಇಂಡಿಯಾ, ದೇಶದಲ್ಲಿ ಅತಿ ನೂತನ ಅರ್ಬನ್ ಕ್ರಾಸ್ ಕಾರನ್ನು ಬಿಡುಗಡೆಗೊಳಿಸಿದೆ. ನೂತನ ಫಿಯೆಟ್ ಅರ್ಬನ್ ಕ್ರಾಸ್ ಮೊದಲ ಬಾರಿಗೆ 2016 ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನ ಕಂಡಿತ್ತು.
ಫಿಯೆಟ್ ಅರ್ಬನ್ ಕ್ರಾಸ್ ಬೆಲೆಯು ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 6.85 ಲಕ್ಷ ರು.ಗಳಿದಾ ಟಾಪ್ ಎಂಡ್ 9.85 ಲಕ್ಷ ರು.ಗಳ ವರೆಗೆ ನಿಗದಿಯಾಗಿದೆ. ಅಲ್ಲದೆ ಹಬ್ಬದ ಆವೃತ್ತಿಯ ಅನುಗುಣವಾಗಿ ಅಕ್ಟೋಬರ್ 01ರಿಂದಲೇ ವಿತರಣೆ ಪ್ರಕ್ರಿಯೆ ಆರಂಭವಾಗಲಿದೆ.

ಫಿಯೆಟ್ ಅರ್ಬನ್ ಕ್ರಾಸ್, ಹ್ಯಾಚ್ ಬ್ಯಾಕ್ ಮತ್ತು ಅವೆಂಚ್ಯುರಾ ಬಳಿಕ ಪುಂಟೊದಿಂದ ಆಗಮನವಾಗುತ್ತಿರುವ ಮೂರನೇ ವೆರಿಯಂಟ್ ಆಗಿದೆ.

ಆಕ್ರಮಣಕಾರಿ ವಿನ್ಯಾಸವನ್ನು ನೂತನ ಫಿಯೆಟ್ ಅರ್ಬನ್ ಕ್ರಾಸ್ ಕಾರಿನಲ್ಲಿ ಕಾಪಾಡಿಕೊಳ್ಳಲಾಗಿದೆ. 17 ಇಂಚುಗಳ ಕ್ರೀಡಾತ್ಮಕ ಅಲಾಯ್ ವೀಲ್ ಇದರಲ್ಲಿರಲಿದೆ.

ಆಯಾಮ (ಎಂಎಂ)
ಉದ್ದ: 4000
ಅಗಲ: 1700
ಎತ್ತರ: 1500
ಗ್ರೌಂಡ್ ಕ್ಲಿಯರನ್ಸ್: 205

ಕಾರಿನೊಳಗೆ ಐದು ಇಂಚುಗಳ ಟಚ್ ಸ್ಕ್ರೀನ್ ಇನ್ಪೋಟೈನ್ಮೆಂಟ್ ಸಿಸ್ಟಂ ಜೊತೆ ಬ್ಲೂಟೂತ್, ಯುಎಸ್ ಬಿ, ಆಕ್ಸ್ ಕನೆಕ್ಟಿವಿಟಿ ಜೊತೆಗೆ ನೇವಿಗೇಷನ್ ಹಾಗೂ ಡ್ಯುಯಲ್ ಟೋನ್ ಬಣ್ಣಗಳಿರಲಿದೆ.

ಹಬ್ಬದ ಆವೃತ್ತಿಯಲ್ಲಿ ಫಿಯೆಟ್ ಅರ್ಬನ್ ಕ್ರಾಸ್, ಪ್ರೀಮಿಯಂ ಬರ್ಗಂಡಿ ಡಿಸೈನರ್ ಒಳಮೈ ಜೊತೆಗೆ ಬಣ್ಣ ಸಂಯೋಜನೆಯ ಡೋರ್ ಇಸರ್ಟ್, ಪಿಯಾನೊ ಫಿನಿಶ್ ಡೋರ್ ಆರ್ಮ್ ರೆಸ್ಟ್, ಡಿಸೈನರ್ ಸೀಟು ಮತ್ತು ಬ್ಯಾಡ್ಜಿಂಗ್ ಲಭ್ಯವಾಗಲಿದೆ. ಈ ವಿಶೇಷ ಸೌಲಭ್ಯವು ಡೈನಾಮಿಕ್ ಡೀಸೆಲ್ ಮತ್ತು ಇಮೊಷನ್ ಪೆಟ್ರೋಲ್ ವೆರಿಯಂಟ್ ಗಳಲ್ಲಿ ಮಾತ್ರ ಲಭ್ಯವಾಗಲಿದೆ.

ನೂತನ ಫಿಯೆಟ್ ಅರ್ಬನ್ ಕ್ರಾಸ್, 1.3 ಲೀಟರ್ ಮಲ್ಟಿ ಜೆಟ್ ಡೀಸೆಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, ಆಕ್ಟಿವ್ ಮತ್ತು ಡೈನಾಮಿಕ್ ಆವೃತ್ತಿಗಳು 92 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಟಾಪ್ ಎಂಡ್ ಇಮೊಷನ್ ವೆರಿಯಂಟ್, 1.4 ಲೀಟರ್ ಟಿ-ಜೆಟ್ ಪೆಟ್ರೋಲ್ ಎಂಜಿನ್ ಪಡೆದುಕೊಳ್ಳಲಿದ್ದು, 138 ಅಶ್ವಶಕ್ತಿಯನ್ನು ನೀಡಲಿದೆ. ಇವೆರಡು 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಪಡೆಯಲಿದೆ.

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)
ಅರ್ಬನ್ ಕ್ರಾಸ್ ಡೀಸೆಲ್ ಆಕ್ಟಿವ್: 6.85 ಲಕ್ಷ ರು.
ಅರ್ಬನ್ ಕ್ರಾಸ್ ಡೀಸೆಲ್ ಡೈನಾಮಿಕ್: 7.45 ಲಕ್ಷ ರು.
ಅರ್ಬನ್ ಕ್ರಾಸ್ ಅಬಾರ್ತ್ ಪೆಟ್ರೋಲ್ ಇಮೊಷನ್: 9.85 ಲಕ್ಷ ರು.


Click it and Unblock the Notifications








