ತಾಜಾತನದೊಂದಿಗೆ ಹೊಸ ಫೋರ್ಡ್ ಎಂಡೀವರ್ ಭಾರತಕ್ಕೆ
ಅಮೆರಿಕ ಮೂಲದ ಫೋರ್ಡ್ ಸಂಸ್ಥೆಯು ಅತಿ ಶೀಘ್ರದಲ್ಲೇ ತಾಜಾತನದೊಂದಿಗೆ ನೂತನ ಎಂಡೀವರ್ ಕಾರನ್ನು ಪರಿಚಯಸಿಲಿದೆ. ಬಲ್ಲ ಮೂಲಗಳ ಪ್ರಕಾರ ಫೋರ್ಡ್ ಎಂಡೀವರ್ ಮುಂಬರುವ 2016 ಜನವರಿ 20ರಂದು ಭರ್ಜರಿ ಬಿಡುಗಡೆ ಕಾಣಲಿದೆ.
ಇದರಂತೆ ಅಧಿಕೃತ ಫೋರ್ಡ್ ಡೀಲರ್ ಶಿಪ್ ಗಳಲ್ಲಿ ಮುಂಗಡ ಬುಕ್ಕಿಂಗ್ ಪ್ರಕ್ರಿಯೆ ಆರಂಭಿಸಲಾಗಿದ್ದು, ಆಸಕ್ತ ಗ್ರಾಹಕರು ಒಂದು ಲಕ್ಷ ರುಪಾಯಿಗಳನ್ನು ಪಾವತಿಸಿ ತಮ್ಮ ಕನಸಿನ ಕಾರನ್ನು ಬುಕ್ ಮಾಡಿಕೊಳ್ಳಬಹುದಾಗಿದೆ.

ದುರದೃಷ್ಟವಶಾತ್ ಡೀಸೆಲ್ ಎಂಜಿನ್ ಕಾರುಗಳ ಮೇಲೆ ವಿಧಿಸಲಾಗಿರುವ ನಿಷೇಧದ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಫೋರ್ಡ್ ಹೊಸ ಕಾರು ಲಭ್ಯವಾಗುವುದಿಲ್ಲ.
2016 ಫೋರ್ಡ್ ಎಂಡೀವರ್ ಎರಡು ಎಂಜಿನ್ ಆಯ್ಕೆಗಳಲ್ಲಿ ಲಭ್ಯವಾಗಲಿದ್ದು, 3.2 ಲೀಟರ್ ಟಿಡಿಸಿಐ (197 ಅಶ್ವಶಕ್ತಿ) ಮತ್ತು 2.2 ಲೀಟರ್ ಟಿಡಿಸಿಐ (158 ಅಶ್ವಶಕ್ತಿ) ಎಂಜಿನ್ ನಿಂದ ನಿಯಂತ್ರಿಸ್ಪಡಲಿದೆ.
ಈ ಪೈಕಿ 2.2 ಲೀಟರ್ ಎಂಜಿನ್ನಲ್ಲಿ ಮ್ಯಾನುವಲ್ ಹಾಗೂ ಆಟೋಮ್ಯಾಟಿಕ್ ಮತ್ತು 4x4 ವೆರಿಯಂಟ್ ಇರಲಿದೆ. ಇನ್ನೊಂದೆಡೆ 3.2 ಲೀಟರ್ ವೆರಿಯಂಟ್ 4x4 ಆಟೋಮ್ಯಾಟಿಕ್ ಜೊತೆಗೆ ಆಗಮನವಾಗಲಿದೆ.
ಅಂದ ಹಾಗೆ 2016 ಫೋರ್ಡ್ ಎಂಡೀವರ್ 20ರಿಂದ 25 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ.


Click it and Unblock the Notifications















