ಅಚ್ಚರಿಗೊಳಿಸುವ ಬೆಲೆಗಳಲ್ಲಿ ಐಕಾನಿಕ್ ಫೋರ್ಡ್ ಮಸ್ಟಾಂಗ್ ಭಾರತಕ್ಕೆ ಭರ್ಜರಿ ಎಂಟ್ರಿ
ವಾಹನ ಪ್ರೇಮಿಗಳು ಅತೀವ ಕಾತರದಿಂದ ಕಾದು ಕುಳಿತಿರುವ ಐಕಾನಿಕ್ ಫೋರ್ಡ್ ಮಸ್ಟಾಂಗ್ ಜಿಟಿ ಸೂಪರ್ ಕಾರು ಭಾರತಕ್ಕೆ ಅಚ್ಚರಿಗೊಳಿಸುವ ಬೆಲೆಗಳಲ್ಲಿ ಎಂಟ್ರಿ ಕೊಟ್ಟಿದೆ. ಇದರ ದೆಹಲಿ ಎಕ್ಸ್ ಶೋ ರೂಂ ಬೆಲೆ 65 ಲಕ್ಷ ರು.ಗಳಾಗಿದೆ.
ನಿಮ್ಮ ಮಾಹಿತಿಗಾಗಿ, ಅಮೆರಿಕದ ಪ್ರತಿಷ್ಠಿತ ಫೋರ್ಡ್ ಇತಿಹಾಸ ಪುಟವನ್ನು ತೆರೆದು ನೋಡಿದಾಗ ಮೊದಲ ಮಸ್ಟಾಂಗ್ 52 ವರ್ಷಗಳ ಹಿಂದೆಯೇ ಪಾದಾರ್ಪಣೆಗೈದಿತ್ತು. ಈಗ ದೀರ್ಘವಾದ ಐದು ದಶಕಗಳ ಬಳಿಕ ಭವ್ಯ ಭಾರತದಲ್ಲೂ ತನ್ನ ಸಾನಿಧ್ಯವನ್ನು ತೋರ್ಪಡಿಸಿದೆ.

ಆರನೇ ತಲೆಮಾರಿನ ಮಸ್ಟಾಂಗ್ ಜಿಟಿ ಸೂಪರ್ ಕಾರನ್ನು ಫೋರ್ಡ್ ಸಂಸ್ಥೆಯು ಭಾರತಕ್ಕೆ ಪರಿಚಿಯಿಸುತ್ತಿದೆ. ಇದರಲ್ಲಿರುವ 5.0 ಲೀಟರ್ ವಿ8 ಎಂಜಿನ್ ಆಳವಡಿಸಲಾಗಿದೆ.

ವರ್ಷಾರಂಭದಲ್ಲಿ ನಡೆದ 2016 ಆಟೋ ಎಕ್ಸ್ ಪೋದಲ್ಲಿ ಮೊದಲ ಬಾರಿಗೆ ಮಸ್ಟಾಂಗ್ ಜಿಟಿ ಕಾರನ್ನು ಮೊದಲ ಬಾರಿಗೆ ದೇಶದಲ್ಲಿ ಅನಾವರಣಗೊಳಿಸಲಾಗಿತ್ತು. ಈಗ ಕೊಟ್ಟಿರುವ ಮಾತಿನಂತೆ ತನ್ನ ಬದ್ಧತೆಯನ್ನು ಪ್ರದರ್ಶಿಸಿದೆ.

ಕಂಪ್ಲೀಟ್ ಬಿಲ್ಟ್ ಯುನಿಟ್ (ಸಿಬಿಯು) ಮುಖಾಂತರ ಭಾರತವನ್ನು ತಲುಪಲಿರುವ ಫೋರ್ಡ್ ಮಸ್ಟಾಂಗ್ ಜಿಟಿ, ದೇಶದ ವಾಹನ ಪ್ರೇಮಿಗಳನ್ನು ಆಕರ್ಷಿಸಲಿದೆ ಎಂಬುದರಲ್ಲಿ ಯಾವುದೇ ಸಂಶಯವೂ ಇಲ್ಲ.

ಫೋರ್ಡ್ ಭಾರತ ಪ್ರವೇಶ ವಿಳಂಬವಾಗಲೂ ಕಾರಣವೊಂದಿದೆ. ಅದೇನು ಗೊತ್ತೇ? ಇದುವರೆಗೆ ಫೋರ್ಡ್ ಮಸ್ಟಾಂಗ್ ಕಾರುಗಳು ಎಡಬದಿಯ ಚಾಲನಾ ವ್ಯವಸ್ಥೆಯನ್ನು ಹೊಂದಿತ್ತು. ಆದರೆ ಆದರೆ ತಲೆಮಾರಿನ ಮಸ್ಟಾಂಗ್ ಕಾರಿನೊಂದಿಗೆ ಇದೇ ಮೊದಲ ಬಾರಿಗೆ ಬಲಬದಿಯ ಚಾಲನಾ ವ್ಯವಸ್ಥೆಯೊಂದಿಗೂ ಫೋರ್ಡ್ ಕಾಲಿಟ್ಟಿದೆ.

ಅನೇಕ ಜನಪ್ರಿಯ ಚಿತ್ರಗಳಲ್ಲೂ ತನ್ನ ಸಾನಿಧ್ಯವನ್ನು ತೋರ್ಪಡಿಸಿರುವ ಫೋರ್ಡ್ ಮಸ್ಟಾಂಗ್ ಕಾರಿನಲ್ಲಿರುವ 5.0 ಲೀಟರ್ ವಿ8 ಪೆಟ್ರೋಲ್ ಎಂಜಿನ್ 395.5 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಭಾರತಕ್ಕಾಗಿ ವಿಶೇಷವಾಗಿ ಟ್ಯೂನ್ ಮಾಡಿರುವ ಎಂಜಿನ್ ಅಮೆರಿಕ ಆವೃತ್ತಿಗಿಂತೂ 40 ಅಶ್ವಶಕ್ತಿ ಕಡಿಮೆ ಶಕ್ತಿಶಾಲಿ ಎನಿಸಿಕೊಳ್ಳಲಿದೆ.

ಅಮೆರಿಕ ಆವೃತ್ತಿಯನ್ನು ಹೋಲಿಸಿದಾಗ ಟಾರ್ಕ್ ನಲ್ಲೂ 9 ಎನ್ ಎಂ ಕಡಿಮೆ ಮಾಡಲಾಗಿದ್ದು, 515 ಎನ್ ಎಂ ತಿರುಗುಬಲ ನೀಡಲಿದೆ. ಅಲ್ಲದೆ ಆರು ಸ್ಪೀಡ್ ಸೆಲೆಕ್ಟ್ ಶಿಫ್ಟ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಮುಖಾಂತರ ಶಕ್ತಿ ವರ್ಗಾವಣೆಯಾಗಲಿದೆ. ಇದರ ಜೊತೆಗೆ ಸ್ಟೀರಿಂಗ್ ಮೌಟೆಂಡ್ ಪೆಡಲ್ ಶಿಫ್ಟರ್ ಸೇವೆಯೂ ಲಭ್ಯವಾಗಲಿದೆ.

ನಾಲ್ಕು ವಿಭಿನ್ನ ಚಾಲನಾ ವಿಧಗಳಲ್ಲಿ ಫೋರ್ಡ್ ಮಸ್ಟಾಂಗ್ ಜಿಟಿ ಲಭ್ಯವಾಗಲಿದೆ. ಅವುಗಳೆಂದರೆ, ನಾರ್ಮನ್, ಸ್ಪೋರ್ಟ್ ಪ್ಲಸ್, ಟ್ರ್ಯಾಕ್ ಮತ್ತು ಸ್ನೊ/ವೆಟ್ ಮೋಡ್.

ಅಮೆರಿಕದ ಐಕಾನಿಕ್ ಕಾರಿನಲ್ಲಿ ಮಸಲರ್ ಶೈಲಿಯನ್ನು ಉಳಿಸಿಕೊಳ್ಳಲಾಗಿದ್ದು, ಆಕ್ರಮಣಕಾರಿ ವಿನ್ಯಾಸವನ್ನು ಕಾಪಾಡಿಕೊಂಡಿದೆ. ಮುಂಭಾಗದಲ್ಲಿ ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಜೊತೆಗೆ ಎಲ್ ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್ ಕಾಣಸಿಗಲಿದೆ.

ಕೂಪೆ ಶೈಲಿಯ ಮೇಲ್ಚಾವಣಿ, 19 ಇಂಚುಗಳ ಮ್ಯಾಗ್ನೆಟಿಕ್ ಗ್ಲಾಸ್ ಪೈಂಟ್ ಮೆಷಿನ್ಡ್ ಅಲ್ಯೂಮಿನಿಯಂ ವೀಲ್, ಎಲ್ ಇಡಿ ಟೈಲ್ ಲ್ಯಾಂಪ್, ಜಿಟಿ ಲಾಂಛನ ಇತರ ಪ್ರಮುಖ ಆಕರ್ಷಣೆಯಾಗಲಿದೆ.

ಕಾರಿನೊಳಗೆ ಕಪ್ಪು ವರ್ಣದ ಒಳಮೈ, ಹೀಟಡ್/ಕೂಲ್ಡ್ ಸೀಟು, ಎಂಟು ಇಂಚುಗಳ ಇನ್ಪೋಟೈನ್ಮೆಂಟ್ ಸಿಸ್ಟಂ, ಫೋರ್ಡ್ ಸಿಂಕ್2 ಜೊತೆ ವಾಯ್ಸ್ ಕಂಟ್ರೋಲ್, ಡ್ಯುಯಲ್ ಝೋನ್ ಎಚ್ ವಿಎಸಿ ಸಿಸ್ಟಂ, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ರಿವರ್ಸಿಂಗ್ ಕ್ಯಾಮೆರಾ, ರಿಯರ್ ಡಿಫ್ಯೂಸರ್, ರೈನ್ ಸೆನ್ಸಿಂಗ್ ವೈಪರ್, ಡ್ಯುಯಲ್ ಫ್ರಂಟ್ ಏರ್ ಬ್ಯಾಗ್ ಜೊತೆಗೆ ಹೆಚ್ಚುವರಿ ಕರ್ಟೈನ್, ಸೈಡ್ ಇಂಪಾಕ್ಟ್, ಮೊಣಕಾರು ಏರ್ ಬ್ಯಾಗ್ ಮುಂತಾದ ವೈಶಿಷ್ಟ್ಯಗಳಿರಲಿದೆ.

ಆಯಾಮ (ಎಂಎಂ)
ಉದ್ದ: 4784
ಅಗಲ: 2080
ಎತ್ತರ: 1391
ಚಕ್ರಾಂತರ: 2720

ವೇಗ
ಗರಿಷ್ಠ ವೇಗ: ಗಂಟೆಗೆ 250 ಕೀ.ಮೀ.
ವೇಗವರ್ಧನೆ: 4.8 ಸೆಕೆಂಡುಗಳಲ್ಲಿ ಗಂಟೆಗೆ 0-100 ಕೀ.ಮೀ.

ಆರು ಆಕರ್ಷಕ ಬಣ್ಣಗಳು
ಪರಿಪೂರ್ಣ ಕಪ್ಪು,
ಇಂಗೊಟ್ ಸಿಲ್ವರ್,
ಓಕ್ಸಫರ್ಡ್ ವೈಟ್,
ಟ್ರಿಪಲ್ ಯಲ್ಲೊ ಟ್ರೈಕೋಟ್,
ಮ್ಯಾಗ್ನೆಟಿಕ್ ಮತ್ತು
ಸಿಗ್ನೇಚರ್ ರೇಸ್ ರೆಡ್


Click it and Unblock the Notifications