ಬಿಡುಗಡೆಗೂ ಮುನ್ನವೇ ಮಹೀಂದ್ರ ಕೆಯುವಿ100 ಒಳಮೈ ಚಿತ್ರಗಳು ಲೀಕ್

By Nagaraja

ಇನ್ನೇನು ಮಹೀಂದ್ರ ಕೆಯುವಿ100 ಬಿಡುಗಡೆಗೆ ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿರುವಂತೆಯೇ ಈ ಬಹುನಿರೀಕ್ಷಿತ ಕಾರಿನ ಆಕರ್ಷಕ ಒಳಮೈ ಚಿತ್ರಗಳು ಲೀಕ್ ಆಗಿವೆ.

Also Read: ಮಹೀಂದ್ರ ವೆರಿಟೊ ಎಲೆಕ್ಟ್ರಿಕ್ ಕಾರಿನ ವಿಶಿಷ್ಟತೆಗಳು

ನಿಮ್ಮ ಮಾಹಿತಿಗಾಗಿ, ಮಹೀಂದ್ರದ ನೂತನ ಮಿನಿ ಎಸ್‌ಯುವಿ ಎಂದೇ ಗುರುತಿಸಿಕೊಂಡಿರುವ ಕೆಯುವಿ100 ಮುಂಬರುವ 2015 ಜನವರಿ 15ರಂದು ಭರ್ಜರಿ ಬಿಡುಗಡೆ ಕಾಣಲಿದೆ.

ಬಿಡುಗಡೆಗೂ ಮುನ್ನವೇ ಮಹೀಂದ್ರ ಕೆಯುವಿ100 ಒಳಮೈ ಚಿತ್ರಗಳು ಲೀಕ್

ನಾಲ್ಕು ವೆರಿಯಂಟ್ ಗಳಲ್ಲಿ (ಕೆ2, ಕೆ4, ಕೆ6 ಮತ್ತು ಕೆ8) ಮಹೀಂದ್ರ ಕೆಯುವಿ ಲಭ್ಯವಾಗಲಿದೆ. ಈ ನಡುವೆ ಟಾಪ್ ಎಂಡ್ ಕೆ8 ಚಿತ್ರಗಳು ಕ್ಯಾಮೆರಾದ ರಹಸ್ಯ ಕಣ್ಣುಗಳಿಗೆ ಸೆರೆ ಸಿಕ್ಕಿವೆ.

ಚಿತ್ರ ಕೃಪೆ
ಬಿಡುಗಡೆಗೂ ಮುನ್ನವೇ ಮಹೀಂದ್ರ ಕೆಯುವಿ100 ಒಳಮೈ ಚಿತ್ರಗಳು ಲೀಕ್

ನಾವು ಈ ಮೊದಲೇ ತಿಳಿಸಿರುವಂತೆಯೇ ಟಾಪ್ ಎಂಡ್ ವೆರಿಯಂಟ್ ಗಳಲ್ಲೂ ಆರು ಸೀಟುಗಳ ಆಸನ ವ್ಯವಸ್ಥೆಯಿದೆ. ಅಂದರೆ ಮುಂದಿನ ಸಾಲಿನಲ್ಲೂ ಬೆಂಚ್ ಸೀಟು ವ್ಯವಸ್ಥೆಯನ್ನು ಪಡೆದುಕೊಂಡಿದೆ. ಇದರಿಂದಾಗಿ ಗೇರ್ ನಾಬ್ ಡ್ಯಾಶ್ ಬೋರ್ಡ್ ಮೇಲೆ ಜೋಡಣೆ ಮಾಡಲಾಗಿದೆ. ಅಂತೆಯೇ ಹ್ಯಾಂಡ್ ಬ್ರೇಕ್ ಸೆಂಟ್ರಲ್ ಕನ್ಸೋಲ್ ಕೆಳಗಡೆಯಾಗಿ ನೀಡಲಾಗಿದೆ.

ಚಿತ್ರ ಕೃಪೆ
ಬಿಡುಗಡೆಗೂ ಮುನ್ನವೇ ಮಹೀಂದ್ರ ಕೆಯುವಿ100 ಒಳಮೈ ಚಿತ್ರಗಳು ಲೀಕ್

ಇನ್ನು ಇನ್ಸ್ಟ್ರುಮೆಂಟ್ ಕ್ಲಸ್ಟರ್, ಆಯಾತಾಕಾರದ ಎಸಿ ವೆಂಟ್ಸ್ ಇವೆಲ್ಲವೂ ಕಂಡುಬರಲಿದೆ. ಆದರೆ ಇನ್ಪೋಟೈನ್ಮೆಂಟ್ ಸಿಸ್ಟಂನಲ್ಲಿ ಟಚ್ ಸ್ಕ್ರೀನ್ ಕೊರತೆ ಕಾಡಲಿದೆ. ಹಾಗಿದ್ದರೂ ಮಲ್ಟಿಮೀಡಿಯಾ ಮಾಹಿತಿ ಪರದೆ ಇದರಲ್ಲಿರಲಿದೆ. ಇದರ ಕೆಳಗಡೆ ವೃತ್ತಕಾರಾದ ಎಚ್‌ವಿಎಸಿ (ಹೀಟಿಂಗ್, ವೆಂಟಿಲೇಷನ್ ಮತ್ತು ಎಸಿ) ಸ್ವಿಚ್ ಗಳಿರಲಿದೆ.

ಚಿತ್ರ ಕೃಪೆ
ಬಿಡುಗಡೆಗೂ ಮುನ್ನವೇ ಮಹೀಂದ್ರ ಕೆಯುವಿ100 ಒಳಮೈ ಚಿತ್ರಗಳು ಲೀಕ್

ನಿಮಗೆಲ್ಲರಿಗೂ ತಿಳಿದಿರುವಂತೆಯೇ ಹೊಸ ಕೆಯುವಿ100 ಕಾರಿನಲ್ಲಿ ನೂತನ ಎಂಫಾಲ್ಕನ್ (mFalcon) ಎಂಜಿನ್ ಜೋಡಣೆ ಮಾಡಲಾಗುತ್ತದೆ. ಇದರ 1.2 ಲೀಟರ್ ಪೆಟ್ರೋಲ್ ಎಂಜಿನ್ 82 ಅಶ್ವಶಕ್ತಿಯನ್ನು ಹಾಗೂ 1.2 ಲೀಟರ್ ಡೀಸೆಲ್ ಎಂಜಿನ್ 77 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಅಂತೆಯೇ ಫೈವ್ ಸ್ಪೀಡ್ ಗೇರ್ ಬಾಕ್ಸ್ ಕಂಡುಬರಲಿದ್ದು, ನಿಕಟ ಭವಿಷ್ಯದಲ್ಲಿ ಎಎಂಟಿ ಗೇರ್ ಬಾಕ್ಸ್ ನಿರೀಕ್ಷೆ ಮಾಡಬಹುದಾಗಿದೆ.

ಬಿಡುಗಡೆಗೂ ಮುನ್ನವೇ ಮಹೀಂದ್ರ ಕೆಯುವಿ100 ಒಳಮೈ ಚಿತ್ರಗಳು ಲೀಕ್

ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಟ್ಟಿರುವ ಮಹೀಂದ್ರ, ಎಲ್ಲ ನಾಲ್ಕು ವೆರಿಯಂಟ್ ಗಳಲ್ಲೂ ಡ್ಯುಯಲ್ ಏರ್ ಬ್ಯಾಗ್ ಸವಲತ್ತನ್ನು ನೀಡಲಿದೆ. ಏತನ್ಮಧ್ಯೆ ಎಲ್ಲ ವೆರಿಯಂಟ್ ಗಳಲ್ಲೂ ಎಬಿಎಸ್ ಸ್ಟ್ಯಾಂಡರ್ಡ್ ಆಗಿರಲಿದೆ.

ಇವನ್ನೂ ಓದಿ

ಮಹೀಂದ್ರ ಕೆಯುವಿ100 - ನೀವು ತಿಳಿದುಕೊಳ್ಳಬೇಕಾದ ಅಂಶಗಳು

More from DriveSpark

Article Published On: Wednesday, January 6, 2016, 10:19 [IST]
English summary
Mahindra KUV100 Interior Spied - Images
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+