ದೇಶದಲ್ಲಿ ಐಷಾರಾಮಿ ಕಾರುಗಳಿಗೆ ಬರವಿಲ್ಲ; 2016 ಮಿಟ್ಸುಬಿಸಿ ಮೊಂಟೆರೊ ಬಿಡುಗಡೆ

ಭಾರತದಲ್ಲಿ ಮೊಂಟೆರೊ ಕ್ರೀಡಾ ಬಳಕೆಯ ವಾಹನವನ್ನು ಮಿಟ್ಸುಬಿಸಿ ಹೊಸ ಸ್ವರೂಪದೊಂದಿಗೆ ಮರು ಬಿಡುಗಡೆಗೊಳಿಸಿದೆ.

By Nagaraja

ಭಾರತದಲ್ಲಿ ಐಷಾರಾಮಿ ಕಾರುಗಳ ಬಿಡುಗಡೆಗೆ ಯಾವುದೇ ಬರವಿಲ್ಲ ಎಂಬುದು ಮಗದೊಮ್ಮೆ ಬಯಲಾಗಿದೆ. ಬೆಳೆದು ಬರುತ್ತಿರುವ ಭಾರತ ಮಾರುಕಟ್ಟೆಯತ್ತ ಗುರಿ ಮಾಡಿರುವ ಜಗತ್ತಿನೆಲ್ಲ ಮುಂಚೂಣಿಯ ವಾಹನ ಸಂಸ್ಥೆಗಳು ನಿರಂತರ ಅಂತರಾಳದಲ್ಲಿ ಹೊಸ ಹಾಗೂ ಪರಿಷ್ಕೃತ ಮಾದರಿಗಳನ್ನು ಬಿಡುಗಡೆ ಮಾಡುತ್ತಲೇ ಬಂದಿದೆ. ಇದಕ್ಕೊಂದು ಹೊಸ ಸೇರ್ಪಡೆಯೆಂಬಂತೆ ಜಪಾನ್ ಮೂಲದ ದೈತ್ಯ ವಾಹನ ಸಂಸ್ಥೆ ಮಿಟ್ಸುಬಿಸಿ ಭಾರತದಲ್ಲಿ ಅತ್ಯಂತ ದುಬಾರಿ 2016 ಮೊಂಟೆರೊ ಕಾರನ್ನು ಬಿಡುಗಡೆಗೊಳಿಸಿದೆ.

ದೇಶದಲ್ಲಿ ಐಷಾರಾಮಿ ಕಾರುಗಳಿಗೆ ಬರವಿಲ್ಲ; 2016 ಮಿಟ್ಸುಬಿಸಿ ಮೊಂಟೆರೊ ಬಿಡುಗಡೆ

ಭಾರತದಲ್ಲಿ ಮಿಟ್ಸುಬಿಸಿ ಹೆಚ್ಚು ಜನಪ್ರಿಯತೆ ಸಾಧಿಸಿಲ್ಲ. ಅಷ್ಟೇ ಯಾಕೆ 2014ರಲ್ಲಿ ಕಳಪೆ ಮಾರಾಟದ ಹಿನ್ನಲೆಯಲ್ಲಿ ಮೊಂಟೆರೊ ಕಾರನ್ನು ಹಿಂಪಡೆದುಕೊಂಡಿತ್ತು.

ದೇಶದಲ್ಲಿ ಐಷಾರಾಮಿ ಕಾರುಗಳಿಗೆ ಬರವಿಲ್ಲ; 2016 ಮಿಟ್ಸುಬಿಸಿ ಮೊಂಟೆರೊ ಬಿಡುಗಡೆ

ಆದರೆ ಇದೀಗ ಹೊಸ ಸ್ವರೂಪದೊಂದಿಗೆ ಮಿಟ್ಸುಬಿಸಿ ಪಜೆರೊ ಕ್ರೀಡಾ ಬಳಕೆಯ ವಾಹನವನ್ನು ಭಾರತದಲ್ಲಿ ಮರು ಬಿಡುಗಡೆಗೊಳಿಸಲು ನಿರ್ಧರಿಸಿದೆ.

ದೇಶದಲ್ಲಿ ಐಷಾರಾಮಿ ಕಾರುಗಳಿಗೆ ಬರವಿಲ್ಲ; 2016 ಮಿಟ್ಸುಬಿಸಿ ಮೊಂಟೆರೊ ಬಿಡುಗಡೆ

2016 ಮಿಟ್ಸುಬಿಸಿ ಮೊಂಟೆರೊ ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 67.88 ಲಕ್ಷ ರುಪಾಯಿಗಳಷ್ಟು ದುಬಾರಿಯೆನಿಸಲಿದೆ. ಇದರ ಮುಂಬೈ ಎಕ್ಸ್ ಶೋ ರೂಂ ಬೆಲೆ 71.06 ಲಕ್ಷ ರು.ಗಳಾಗಿದೆ.

ದೇಶದಲ್ಲಿ ಐಷಾರಾಮಿ ಕಾರುಗಳಿಗೆ ಬರವಿಲ್ಲ; 2016 ಮಿಟ್ಸುಬಿಸಿ ಮೊಂಟೆರೊ ಬಿಡುಗಡೆ

ಕ್ಲಾಸಿಕ್ ಒರಟಾದ ಸ್ವಭಾವ ರೇಖೆ, ಬಾಕ್ಸಿ ನೋಟ, ಸಮತಲ ರೇಖೆಯ ಫ್ರಂಟ್ ಗ್ರಿಲ್ ನಡುವೆ ಸಂಸ್ಥೆಯ ಲಾಂಛನ ಎದ್ದು ಕಾಣಿಸಲಿದೆ.

ದೇಶದಲ್ಲಿ ಐಷಾರಾಮಿ ಕಾರುಗಳಿಗೆ ಬರವಿಲ್ಲ; 2016 ಮಿಟ್ಸುಬಿಸಿ ಮೊಂಟೆರೊ ಬಿಡುಗಡೆ

ಮುಂಭಾಗದಲ್ಲಿ ಫ್ರಂಟ್ ಬಂಪರ್, ಏರ್ ಬ್ಯಾರ್ ಮುಂತಾದವುಗಳನ್ನು ಪರಿಷ್ಕೃತಗೊಳಿಸಲಾಗಿದ್ದು, ಡೇಟೈಮ್ ರನ್ನಿಂಗ್ ಲೈಟ್ ಹಾಗೂ ಹೊಸ ಫಾಗ್ ಲ್ಯಾಂಪ್ ಗಳ ಸೇವೆಯನ್ನು ಪಡೆದಿದೆ.

ದೇಶದಲ್ಲಿ ಐಷಾರಾಮಿ ಕಾರುಗಳಿಗೆ ಬರವಿಲ್ಲ; 2016 ಮಿಟ್ಸುಬಿಸಿ ಮೊಂಟೆರೊ ಬಿಡುಗಡೆ

ಬದಿಯಲ್ಲಿ ಹೆಚ್ಚಿನ ಬದಲಾವಣೆಗಳು ಕಂಡುಬಂದಿಲ್ಲ. ಆದರೆ ಹಿಂಭಾಗಕ್ಕೆ ಬಾಗಿಕೊಂಡಿರುವ ವೀಲ್ ಆರ್ಚ್ ಮತ್ತು ಅಲಾಯ್ ಚಕ್ರಗಳು ಹೆಚ್ಚಿನ ರಸ್ತೆ ಸಾನಿಧ್ಯವನ್ನು ತುಂಬಲಿದೆ.

ದೇಶದಲ್ಲಿ ಐಷಾರಾಮಿ ಕಾರುಗಳಿಗೆ ಬರವಿಲ್ಲ; 2016 ಮಿಟ್ಸುಬಿಸಿ ಮೊಂಟೆರೊ ಬಿಡುಗಡೆ

ಕಾರಿನಡಿಯಲ್ಲಿರುವ 3.2 ಲೀಟರ್ 16 ವಾಲ್ವ್ ಡಿಒಎಚ್ ಸಿ ಡೈರಕ್ಟ್ ಇಂಜೆಕ್ಷನ್ ಡೀಸೆಲ್ ಎಂಜಿನ್ 441 ಎನ್ ಎಂ ತಿರುಗುಬಲದಲ್ಲಿ 192 ಅಶ್ವಶಕ್ತಿಯನ್ನು ನೀಡಲಿದೆ.

ದೇಶದಲ್ಲಿ ಐಷಾರಾಮಿ ಕಾರುಗಳಿಗೆ ಬರವಿಲ್ಲ; 2016 ಮಿಟ್ಸುಬಿಸಿ ಮೊಂಟೆರೊ ಬಿಡುಗಡೆ

ಐದು ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಇದರಲ್ಲಿದ್ದು, ಆಫ್ ರೋಡ್ ಚಾಲನಾ ಸಾಮರ್ಥ್ಯವನ್ನು ಹೊಂದಿರಲಿದೆ.

ನಾಲ್ಕು ಚಾಲನಾ ವಿಧಗಳು

ನಾಲ್ಕು ಚಾಲನಾ ವಿಧಗಳು

ಟು ವೀಲ್ ಡ್ರೈವ್ ಹೈ (2-ಎಚ್)

ಫೋರ್ ವೀಲ್ ಡ್ರೈವ್ ಹೈ (4-ಎಚ್)

ಫೋರ್ ವೀಲ್ ಡ್ರೈವ್ ಹೈ ಜೊತೆಗೆ ಲಾಕ್ಡ್ ಸೆಂಟರ್ ಡಿಫೆರೆನ್ಸಿಯಲ್ (4-ಎಚ್ ಎಲ್ ಸಿ)

ಫೋರ್ ವೀಲ್ ಡ್ರೈವ್ ಲೊ ಜೊತೆಗೆ ಲಾಕ್ಡ್ ಸೆಂಟರ್ ಡಿಫೆರೆನ್ಸಿಯಲ್ (4-ಎಚ್ ಎಚ್ ಸಿ)

ದೇಶದಲ್ಲಿ ಐಷಾರಾಮಿ ಕಾರುಗಳಿಗೆ ಬರವಿಲ್ಲ; 2016 ಮಿಟ್ಸುಬಿಸಿ ಮೊಂಟೆರೊ ಬಿಡುಗಡೆ

ಏತನ್ಮಧ್ಯೆ ಸಸ್ಪೆನ್ಷನ್ ಜವಾಬ್ದಾರಿಯನ್ನು ಮುಂಭಾಗದಲ್ಲಿ ಡಬಲ್ ವಿಶ್ ಬೋನ್ ಸೆಟಪ್ ಮತ್ತು ಹಿಂದುಗಡೆ ಮಲ್ಟಿ ಲಿಂಕ್ ಸೆಟಪ್ ನೋಡಿಕೊಳ್ಳಲಿದೆ.

ದೇಶದಲ್ಲಿ ಐಷಾರಾಮಿ ಕಾರುಗಳಿಗೆ ಬರವಿಲ್ಲ; 2016 ಮಿಟ್ಸುಬಿಸಿ ಮೊಂಟೆರೊ ಬಿಡುಗಡೆ

ನೂತನ ಮೊಂಟೆರೊ ದುಬಾರಿ ಹೆಡ್ ಲ್ಯಾಂಪ್ ಸೇವೆಯನ್ನು ಪಡೆದಿದ್ದು, ಇದು ಕ್ಯಾಮೆರಾ ನಿಯಂತ್ರಿತ ಆಟೋಮ್ಯಾಟಿಕ್ ಹೈ ಬೀಮ್ ಮತ್ತು ಹೆಡ್ ಲೈಟ್ ವಾಶರ್ ಸೇವೆಗಳನ್ನು ಹೊಂದಿರಲಿದೆ.

ದೇಶದಲ್ಲಿ ಐಷಾರಾಮಿ ಕಾರುಗಳಿಗೆ ಬರವಿಲ್ಲ; 2016 ಮಿಟ್ಸುಬಿಸಿ ಮೊಂಟೆರೊ ಬಿಡುಗಡೆ

ಇನ್ನು ಐಷಾರಾಮಿ ಗಾಡಿಗೆ ತಕ್ಕಂತೆ ಪ್ಯಾನರಾಮಿಕ್ ಸನ್ ರೂಫ್ ಮತ್ತು ಹೆಚ್ಚು ಲಗ್ಗೇಜ್ ಗಳನ್ನಿಡಲು ಹಿಂದುಗಡೆಯ ಎರಡು ಸಾಲುಗಳನ್ನು ಮಡಚುವ ವ್ಯವಸ್ಥೆಯನ್ನು ಮಾಡಿಕೊಡಲಾಗಿದೆ.

ದೇಶದಲ್ಲಿ ಐಷಾರಾಮಿ ಕಾರುಗಳಿಗೆ ಬರವಿಲ್ಲ; 2016 ಮಿಟ್ಸುಬಿಸಿ ಮೊಂಟೆರೊ ಬಿಡುಗಡೆ

ಮನರಂಜನೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ರಾಕ್ ಫೋರ್ಡ್ ಆಕೌಸ್ಟಿಕ್ ಡಿಸೈನ್ ಸೌಂಡ್ ಸಿಸ್ಟಂ, ಇನ್ಪೋಟೈನ್ಮೆಂಟ್ ಸಿಸ್ಟಂ ವೈಶಿಷ್ಟ್ಯಗಳಿರಲಿದೆ.

ದೇಶದಲ್ಲಿ ಐಷಾರಾಮಿ ಕಾರುಗಳಿಗೆ ಬರವಿಲ್ಲ; 2016 ಮಿಟ್ಸುಬಿಸಿ ಮೊಂಟೆರೊ ಬಿಡುಗಡೆ

ಅತ್ತ ನೇವಿಗೇಷನ್ ಮಾಹಿತಿಯನ್ನು ಕೊಡುವುದಕ್ಕಾಗಿ ಮಾಹಿತಿ ಪರದೆ ವ್ಯವಸ್ಥೆಯನ್ನು ಕೊಡಲಾಗಿದೆ.

ದೇಶದಲ್ಲಿ ಐಷಾರಾಮಿ ಕಾರುಗಳಿಗೆ ಬರವಿಲ್ಲ; 2016 ಮಿಟ್ಸುಬಿಸಿ ಮೊಂಟೆರೊ ಬಿಡುಗಡೆ

ಸುರಕ್ಷತೆಗೂ ಹೆಚ್ಚಿನ ಆದ್ಯತೆಯನ್ನು ಕೊಡಲಾಗಿದ್ದು, ಆಳ್ ವೀಲ್ ಕಂಟ್ರೋಲ್, ಆಕ್ಟಿವ್ ಸ್ಟೆಬಿಲಿಟಿ ಆಂಡ್ ಟ್ರಾಕ್ಷನ್ ಕಂಟ್ರೋಲ್, ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ ಮತ್ತು ಎಲೆಕ್ಟ್ರಾನಿಕ್ ಡಿಸ್ಟ್ರಿಬ್ಯೂಷನ್ ವ್ಯವಸ್ಥೆಗಳಿರಲಿದೆ.

ದೇಶದಲ್ಲಿ ಐಷಾರಾಮಿ ಕಾರುಗಳಿಗೆ ಬರವಿಲ್ಲ; 2016 ಮಿಟ್ಸುಬಿಸಿ ಮೊಂಟೆರೊ ಬಿಡುಗಡೆ

ಕಸ್ಟಮೈಸ್ಡ್ ಆಯ್ಕೆಯೊಂದಿಗೆ ಏಳು ಆಕರ್ಷಕ ಬಣ್ಣಗಳು 2016 ಮಿಟ್ಸುಬಿಸಿ ಮೊಂಟೆರೊ ಲಭ್ಯವಾಗಲಿದೆ. ಇದು ದೇಶವನ್ನು ಕಂಪ್ಲೀಟ್ ಬಿಲ್ಟ್ ಯುನಿಟ್ ಮುಖಾಂತರ ತಲುಪಲಿದೆ.

ದೇಶದಲ್ಲಿ ಐಷಾರಾಮಿ ಕಾರುಗಳಿಗೆ ಬರವಿಲ್ಲ; 2016 ಮಿಟ್ಸುಬಿಸಿ ಮೊಂಟೆರೊ ಬಿಡುಗಡೆ

ಭವಿಷ್ಯದಲ್ಲಿ ಕಂಪ್ಲೀಟ್ ನೌಕ್ಡ್ ಡೌನ್ ಮುಖಾಂತರ ದೇಶದಲ್ಲೇ ಸ್ಥಳೀಯವಾಗಿ ಜೋಡಣೆಗೊಳಿಸುವ ಮೂಲಕ ಸ್ಪರ್ಧಾತ್ಮಕ ಬೆಲೆ ಕಾಪಾಡಿಕೊಳ್ಳುವ ಇರಾದೆಯನ್ನು ಸಂಸ್ಥೆಯು ಹೊಂದಿದೆ.

ಪ್ರತಿಸ್ಪರ್ಧಿಗಳು

ಪ್ರತಿಸ್ಪರ್ಧಿಗಳು

ಆಡಿ ಕ್ಯೂ7

ವೋಲ್ವೋ ಎಕ್ಸ್ ಸಿ90

ಟೊಯೊಟಾ ಲ್ಯಾಂಡ್ ಕ್ರೂಸರ್ ಪ್ರಾಡೊ

More from DriveSpark

Article Published On: Thursday, November 3, 2016, 9:43 [IST]
English summary
Mitsubishi Montero Launched In India, Prices Start At Rs. 67.88 Lakh
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+