ಕಾರು ಪ್ರೇಮಿಗಳಿಗೆ ಮಗದೊಂದು ಕೊಡುಗೆ 'ಸುಜುಕಿ ಜಿಮ್ನಿ' ಭಾರತಕ್ಕೆ

By Nagaraja

ಜಪಾನ್ ಮೂಲದ ಪ್ರಖ್ಯಾತ ವಾಹನ ತಯಾರಿಕ ಸಂಸ್ಥೆ ಸುಜುಕಿ, ಭಾರತೀಯರಿಗಾಗಿ ವಿಶಿಷ್ಟ ಕೊಡುಗೆಯೊಂದನ್ನು ನೀಡಲಿದ್ದು ಅತಿ ನೂತನ ಜಿಮ್ನಿ ಕಾರನ್ನು ಬಿಡುಗಡೆ ಮಾಡುವ ಇರಾದೆಯಲ್ಲಿದೆ. ಎಲ್ಲವೂ ಅಂದುಕೊಂಡಂತೆ ನಡೆದ್ದಲ್ಲಿ 2017ನೇ ಸಾಲಿನಿಂದ ಕಾರ್ಯಾರಂಭವಾಗಲಿರುವ ಸುಜುಕಿಯ ನೂತನ ಘಟಕದಲ್ಲಿ ಜಿಮ್ನಿ ನಿರ್ಮಾಣ ಪ್ರಕ್ರಿಯೆಯು ಪ್ರಾರಂಭವಾಗಲಿದೆ.

ಜಾಗತಿಕ ಮಟ್ಟದಲ್ಲಿ ಸುಜುಕಿ ಬ್ರಾಂಡ್ ಬಗ್ಗೆ ತಿಳಿದವರಿಗೆ ಜಿಮ್ನಿ ಎಂಬ ಕ್ರೀಡಾ ಬಳಕೆಯ ಕಾರಿನ ಬಗ್ಗೆ ಚೆನ್ನಾಗಿ ಗೊತ್ತಿರಬಹುದು. ನೂತನ ಬಲೆನೊ ಹಾಗೂ ಇಗ್ನಿಸ್ ತಳಹದಿಯಲ್ಲೇ ನಿರ್ಮಾಣವಾಗಲಿರುವ ಇಗ್ನಿಸ್ ಭಾರತದಿಂದಲೇ ರಫ್ತಾಗಲಿದೆ ಎಂಬುದು ಮಗದೊಂದು ಗಮನಾರ್ಹ ಸಂಗತಿ.

ಕಾರು ಪ್ರೇಮಿಗಳಿಗೆ ಮಗದೊಂದು ಕೊಡುಗೆ 'ಸುಜುಕಿ ಜಿಮ್ನಿ' ಭಾರತಕ್ಕೆ

ಜಿಮ್ನಿ ಇತಿಹಾಸದತ್ತ ಕಣ್ಣಾಯಿಸಿದಾಗ 1970ರ ಸಾಲಿನಲ್ಲಿ ಮೊದಲ ಹಗುರ ಜೀಪ್ ಮಾದರಿ ಎಲ್‌ಜೆ10 ಮಾರುಕಟ್ಟೆಗೆ ಪರಿಚಯವಾಗಿತ್ತು.

ಕಾರು ಪ್ರೇಮಿಗಳಿಗೆ ಮಗದೊಂದು ಕೊಡುಗೆ 'ಸುಜುಕಿ ಜಿಮ್ನಿ' ಭಾರತಕ್ಕೆ

ಜಿಮ್ನಿ ಎರಡನೇ ತಲೆಮಾರಿನ ಆವೃತ್ತಿಯಾಗಿರುವ ಜಿಪ್ಸಿ 1981ರಿಂದ 1998ರ ಅವಧಿಯಲ್ಲಿ ಮಾರಾಟವಾಗಿತ್ತು. ಸದ್ಯ ಮೂರನೇ ತಲೆಮಾರಿನ ಆವೃತ್ತಿಯು ಮಾರಾಟದಲ್ಲಿದೆ.

ಕಾರು ಪ್ರೇಮಿಗಳಿಗೆ ಮಗದೊಂದು ಕೊಡುಗೆ 'ಸುಜುಕಿ ಜಿಮ್ನಿ' ಭಾರತಕ್ಕೆ

ದೆಹಲಿ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನ ಕಂಡಿರುವ ಜಿಮ್ನಿ ಆಗಲೇ ಭಾರತೀಯ ರಂಗ ಪ್ರವೇಶ ಮಾಡಲಿದೆ ಎಂಬುದರ ಬಗ್ಗೆ ಮಾಹಿತಿಗಳಿದ್ದವು. ಆದರೆ ಕಾರಣಾಂತರಗಳಿಂದ ಸುಜುಕಿ ಯೋಜನೆಯನ್ನು ವಿಳಂಬ ಮಾಡಿತ್ತು.

ಕಾರು ಪ್ರೇಮಿಗಳಿಗೆ ಮಗದೊಂದು ಕೊಡುಗೆ 'ಸುಜುಕಿ ಜಿಮ್ನಿ' ಭಾರತಕ್ಕೆ

ಸದ್ಯ ಬಂದಿರುವ ಎಕ್ಸ್ ಕ್ಲೂಸಿವ್ ಮಾಹಿತಿಗಳ ಪ್ರಕಾರ ನಾಲ್ಕನೇ ತಲೆಮಾರಿನ ಜಿಮ್ನಿ, ಭಾರತದಲ್ಲಿರುವ ಸುಜುಕಿಯ ನೂತನ ಘಟಕದಲ್ಲಿ ನಿರ್ಮಾಣವಾಗಲಿದೆ.

ಕಾರು ಪ್ರೇಮಿಗಳಿಗೆ ಮಗದೊಂದು ಕೊಡುಗೆ 'ಸುಜುಕಿ ಜಿಮ್ನಿ' ಭಾರತಕ್ಕೆ

ಗುಜರಾತ್ ನಲ್ಲಿರುವ ನೂತನ ಸುಜುಕಿ ಘಟಕವು 2017ರ ವೇಳೆಯಾಗುವಾಗ ಕಾರ್ಯಾಚರಣೆ ಆರಂಭಿಸಲಿದೆ. ಇಲ್ಲಿಂದಲೇ ದಕ್ಷಿಣ ಪೂರ್ವ ಏಷ್ಯಾ, ಯುರೋಪ್, ಬ್ರಿಟನ್, ಫ್ರಾನ್ಸ್, ಜರ್ಮನಿ ಮುಂತಾದ ಮಾರುಕಟ್ಟೆಗಳನ್ನು ತಲುಪಲಿದೆ.

ಕಾರು ಪ್ರೇಮಿಗಳಿಗೆ ಮಗದೊಂದು ಕೊಡುಗೆ 'ಸುಜುಕಿ ಜಿಮ್ನಿ' ಭಾರತಕ್ಕೆ

ಮುಂಬರುವ ಇಗ್ನಿಸ್ ನಲ್ಲಿರುವುದಕ್ಕೆ ಸಮಾನವಾದ 4X4 ವ್ಯವಸ್ಥೆಯನ್ನು ಜಿಮ್ನಿ ಪಡೆಯಲಿದೆ. ಅಲ್ಲದೆ 1.0 ಲೀಟರ್ ಬೂಸ್ಟರ್ ಜೆಟ್ ಎಂಜಿನ್ ಗಿಟ್ಟಿಸಿಕೊಳ್ಳಲಿದೆ.

ಕಾರು ಪ್ರೇಮಿಗಳಿಗೆ ಮಗದೊಂದು ಕೊಡುಗೆ 'ಸುಜುಕಿ ಜಿಮ್ನಿ' ಭಾರತಕ್ಕೆ

ಇವೆಲ್ಲದರ ಹೊರತಾಗಿ ಹೆಚ್ಚು ಶಕ್ತಿಶಾಲಿ 1.4 ಲೀಟರ್ ಬೂಸ್ಟರ್ ಜೆಟ್ ಎಂಜಿನ್ ಜೊತೆಗೆ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಪರಿಗಣನೆಯಲ್ಲಿದೆ.

ಕಾರು ಪ್ರೇಮಿಗಳಿಗೆ ಮಗದೊಂದು ಕೊಡುಗೆ 'ಸುಜುಕಿ ಜಿಮ್ನಿ' ಭಾರತಕ್ಕೆ

ಸುಜುಕಿ ಜಿಮ್ನಿ ದೇಶದಲ್ಲಿ ಇದೇ ಹೆಸರನ್ನು ಉಳಿಸಿಕೊಳ್ಳಲಿದೆಯೇ ಎಂಬುದು ತಿಳಿದು ಬಂದಿಲ್ಲ. ಹಾಗೆಯೇ ಮಾರುತಿ ಡೀಲರ್ ಗಳನ್ನು ತಲುಪಿದ್ದಲ್ಲಿ ಅಚ್ಚರಿಪಡಬೇಕಿಲ್ಲ.

ಕಾರು ಪ್ರೇಮಿಗಳಿಗೆ ಮಗದೊಂದು ಕೊಡುಗೆ 'ಸುಜುಕಿ ಜಿಮ್ನಿ' ಭಾರತಕ್ಕೆ

ಸುಜುಕಿ ಜಿಮ್ನಿ ಟು ಡೋರ್ ಆವೃತ್ತಿಯು ಮಾರುಕಟ್ಟೆಯಲ್ಲಿದ್ದರೂ ಭಾರತಕ್ಕೆ ಫೋರ್ ಡೋರ್ ವರ್ಧಿತ ವೀಲ್ ಬೇಸ್ ಆವೃತ್ತಿಯು ತಲುಪುವ ನಿರೀಕ್ಷೆಯಿದ್ದು, ಸಬ್ ಕಾಂಪಾಕ್ಟ್ ಎಸ್ ಯುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ.

More from DriveSpark

Article Published On: Saturday, July 23, 2016, 12:45 [IST]
English summary
Suzuki plans next generation Jimny to india
Read more on ಸುಜುಕಿ suzuki
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+