ಕಳಪೆ ಮಾರಾಟ; ಟಾಟಾ ಬೋಲ್ಟ್ ಮಾರಾಟಕ್ಕೆ ಶಾಶ್ವತ ಬ್ರೇಕ್?

Written By:

ಕಳೆದ ಸಾಲಿನ ವರ್ಷಾರಂಭದಲ್ಲಿ ಬಿಡುಗಡೆಗೊಂಡಿರುವ ಟಾಟಾ ಬೋಲ್ಟ್ ಮಾರುಕಟ್ಟೆಯಲ್ಲಿ ಅಷ್ಟೇನೂ ಸದ್ದು ಮಾಡಿರಲಿಲ್ಲ. ಇನ್ನೊಂದೆಡೆ ಇದೇ ಹ್ಯಾಚ್ ಬ್ಯಾಕ್ ವಿಭಾಗದಲ್ಲಿ ಪರಿಚಯವಾಗಿರುವ ಟಾಟಾ ಟಿಯಾಗೊ ಗಮನಾರ್ಹ ಮಾರಾಟವನ್ನು ಸಾಧಿಸುತ್ತಿದೆ. ಇದನ್ನು ಮನಗಂಡಿರುವ ದೇಶದ ಅತಿ ದೊಡ್ಡ ವಾಹನ ಸಂಸ್ಥೆ ಟಾಟಾ ಮೋಟಾರ್ಸ್, ಬೋಲ್ಟ್ ಮಾರಾಟವನ್ನು ಹಿಂಪಡೆಯುವ ಇರಾದೆಯಲ್ಲಿದೆ.

ನಿರೀಕ್ಷಿತ ಮಾರಾಟ ಗುರಿಯನ್ನು ತಲುಪದಿರುವುದು ಟಾಟಾ ಬೋಲ್ಟ್ ಗೆ ಭಾರಿ ಹೊಡತವನ್ನೇ ನೀಡಿದೆ. ಇನ್ನೊಂದೆಡೆ ಅತ್ಯುತ್ತಮ ಮಾರಾಟ ದಾಖಲಿಸುತ್ತಿರುವ ಟಿಯಾಗೊಗೆ ಉತ್ತೇಜನ ನೀಡುವುದು ಸಂಸ್ಥೆಯ ಉದ್ದೇಶವಾಗಿದೆ.

ಕಳಪೆ ಮಾರಾಟ; ಟಾಟಾ ಬೋಲ್ಟ್ ಮಾರಾಟಕ್ಕೆ ಶಾಶ್ವತ ಬ್ರೇಕ್?

ಬಲ್ಲ ಮೂಲಗಳ ಪ್ರಕಾರ 2015 ಜನವರಿ ತಿಂಗಳಲ್ಲಿ ಬಿಡುಗಡೆಗೊಂಡಿರುವ ಟಾಟಾ ಬೋಲ್ಟ್ ಇದುವರೆಗೆ 17,000 ಯುನಿಟ್ ಗಳ ಮಾರಾಟವನ್ನಷ್ಟೇ ದಾಖಲಿಸಿದೆ. ಇವೆಲ್ಲವೂ ಟಾಟಾ ಸಂಸ್ಥೆಗೆ ತನ್ನ ಯೋಜನೆಯನ್ನು ಎರೆಡರಡು ಬಾರಿ ಯೋಚಿಸುವಂತೆ ಮಾಡಿದೆ.

ಕಳಪೆ ಮಾರಾಟ; ಟಾಟಾ ಬೋಲ್ಟ್ ಮಾರಾಟಕ್ಕೆ ಶಾಶ್ವತ ಬ್ರೇಕ್?

ಮಗದೊಂದು ಆಘಾತಕಾರಿ ಸುದ್ದಿಯೆಂದರೆ 2016 ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನ ಕಂಡಿರುವ ಬೋಲ್ಟ್ ಸ್ಪೋರ್ಟ್ ಶಕ್ತಿಶಾಲಿ ಆವೃತ್ತಿಯನ್ನು ಟಾಟಾ ಹಿಂಪಡೆಯಲಿದೆ. ಎಲ್ಲವೂ ಅಂದುಕೊಂಡಂತೆ ನಡೆದ್ದಲ್ಲಿ ಮುಂಬರುವ ಹಬ್ಬದ ಆವೃತ್ತಿಯಲ್ಲಿ ಟಾಟಾ ಬೋಲ್ಟ್ ಸ್ಪೋರ್ಟ್ ವೆರಿಯಂಟ್ ಬಿಡುಗಡೆಯಾಗಬೇಕಿತ್ತು.

ಕಳಪೆ ಮಾರಾಟ; ಟಾಟಾ ಬೋಲ್ಟ್ ಮಾರಾಟಕ್ಕೆ ಶಾಶ್ವತ ಬ್ರೇಕ್?

ಟಾಟಾ ಬೋಲ್ಟ್ ಬದಲು ಶಕ್ತಿಶಾಲಿ ಟಿಯಾಗೊ ಸ್ಪೋರ್ಟ್ ಕಾರನ್ನು ಬಿಡುಗಡೆ ಮಾಡುವ ಇರಾದೆಯನ್ನು ಟಾಟಾ ವ್ಯಕ್ತಪಡಿಸಿದೆ. ತಿಂಗಳೊಂದರಲ್ಲಿ ಸರಾಸರಿ 4,000 ಯುನಿಟ್ ಗಳ ಮಾರಾಟ ಗಿಟ್ಟಿಸಿಕೊಳ್ಳುತ್ತಿರುವ ಟಿಯಾಗೊ ಇದುವರೆಗೆ 40,000 ಕ್ಕೂ ಹೆಚ್ಚು ಮುಗಂಡ ಬುಕ್ಕಿಂಗ್ ದಾಖಲಿಸಿಕೊಂಡಿದೆ.

ಕಳಪೆ ಮಾರಾಟ; ಟಾಟಾ ಬೋಲ್ಟ್ ಮಾರಾಟಕ್ಕೆ ಶಾಶ್ವತ ಬ್ರೇಕ್?

ಮಾರುತಿ ಸ್ವಿಫ್ಟ್, ಹ್ಯುಂಡೈ ಐ20, ಫೋಕ್ಸ್ ವ್ಯಾಗನ್ ಪೊಲೊ ಮುಂತಾದ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಿದ್ದ ಟಾಟಾ ಬೋಲ್ಟ್, ಎಬಿಎಸ್, ಇಬಿಡಿ ಹಾಗೂ ಕಾರ್ನರ್ ಸ್ಟೆಬಿಲಿಟಿ ಕಂಟ್ರೋಲ್ ಗಳಂತಹ ಅತ್ಯಾಧುನಿಕ ಸುರಕ್ಷಾ ವೈಶಿಷ್ಟ್ಯಗಳನ್ನು ಹೊಂದಿರುವ ಹೊರತಾಗಿಯೂ ವಾಹನ ಪ್ರೇಮಿಗಳ ಮನಗೆಲ್ಲುವಲ್ಲಿ ವಿಫಲವಾಗಿತ್ತು.

ಕಳಪೆ ಮಾರಾಟ; ಟಾಟಾ ಬೋಲ್ಟ್ ಮಾರಾಟಕ್ಕೆ ಶಾಶ್ವತ ಬ್ರೇಕ್?

ಸದ್ಯ ಮಾರಾಟದಲ್ಲಿರುವ ಬೋಲ್ಟ್, 1.2 ಲೀಟರ್ ರೆವೊಟ್ರಾನ್ ಟರ್ಬೊ ಚಾರ್ಜ್ಡ್ ಪೆಟ್ರೋಲ್ ಎಂಜಿನ್ 140 ಎನ್ ಎಂ ತಿರುಗುಬಲದಲ್ಲಿ 84 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ ಡೀಸೆಲ್ .3 ಲೀಟರ್ ಕ್ವಾಡ್ರಾಜೆಟ್ ಎಂಜಿನ್ 190 ಎನ್ ಎಂ ತಿರುಗುಬಲದಲ್ಲಿ 73 ಅಶ್ವಶಕ್ತಿಯನ್ನು ನೀಡಲಿದೆ. ಇವೆರಡು ಎಂಜಿನ್ ಗಳಲ್ಲಿ ಮ್ಯಾನುವಲ್ ಗೇರ್ ಬಾಕ್ಸ್ ಜೋಡಣೆ ಮಾಡಲಾಗಿದೆ.

English summary
Tata Motors to stop Bolt hatchback production in India?
Story first published: Tuesday, August 16, 2016, 15:53 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark