ಬೆಂಗಳೂರಿನಲ್ಲಿ ಆಡಿ ಎ5 ಸ್ಪೋರ್ಟ್ ಬ್ಯಾಕ್ ಮಾರಾಟಕ್ಕೆ ಅಧಿಕೃತ ಚಾಲನೆ
ಆಡಿ ತನ್ನ 2ನೇ ತಲೆಮಾರಿನ ಎ5 ಸ್ಪೋರ್ಟ್ ಬ್ಯಾಕ್ ಕಾರು ಆವೃತ್ತಿಗಳನ್ನು ಕಳೆದ ವಾರವಷ್ಟೇ ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದ್ದು, ಇದೀಗ ವಿನೂತನ ಕಾರುಗಳ ಮಾರಾಟಕ್ಕೆ ನಮ್ಮ ಬೆಂಗಳೂರಿನಲ್ಲೂ ಅಧಿಕೃತ ಚಾಲನೆ ನೀಡಲಾಗಿದೆ.
ಐಷಾರಾಮಿ ಕಾರು ಉತ್ಪಾದನಾ ಸಂಸ್ಥೆಯಾದ ಆಡಿ ತನ್ನ 2ನೇ ತಲೆಮಾರಿನ ಎ5 ಸ್ಪೋರ್ಟ್ ಬ್ಯಾಕ್ ಕಾರು ಆವೃತ್ತಿಗಳನ್ನು ಕಳೆದ ವಾರವಷ್ಟೇ ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದ್ದು, ಇದೀಗ ವಿನೂತನ ಕಾರುಗಳ ಮಾರಾಟಕ್ಕೆ ನಮ್ಮ ಬೆಂಗಳೂರಿನಲ್ಲೂ ಅಧಿಕೃತ ಚಾಲನೆ ನೀಡಲಾಗಿದೆ.

ಬಹುನೀರಿಕ್ಷಿತ ಎ5 ಸ್ಪೋರ್ಟ್ ಬ್ಯಾಕ್ ಆವೃತ್ತಿಯ ಜೊತೆಗೆ ಎ5 ಕ್ರಾಬಿಯೊಲೆಟ್ ಮತ್ತು ಎಸ್5 ಸ್ಪೋರ್ಟ್ ಬ್ಯಾಕ್ ಮಾದರಿಗಳನ್ನು ಕೂಡಾ ಬಿಡುಗಡೆಗೊಳಿಸಲಾಗಿದ್ದು, ಆಡಿ ಉತ್ಪಾದಿತ ಐಷಾರಾಮಿ ಕಾರು ಮಾದರಿಗಳಲ್ಲೇ ಇವು ಅತಿ ಹೆಚ್ಚು ಸುಧಾರಿತ ಎಂಜಿನ್ ಮಾದರಿಗಳಾಗಿವೆ ಎನ್ನಬಹುದು.

ಕಾರು ಮಾದರಿಗಳು ಬೆಲೆಗಳು (ಬೆಂಗಳೂರು ಎಕ್ಸ್‌ಶೋರಂ ಪ್ರಕಾರ)
ಎ5 ಸ್ಪೋರ್ಟ್ ಬ್ಯಾಕ್ ರೂ. 54.02 ಲಕ್ಷ
ಎ5 ಕ್ರಾಬಿಯೊಲೆಟ್ ರೂ. 67.51 ಲಕ್ಷ
ಎಸ್5 ಸ್ಪೋರ್ಟ್ ಬ್ಯಾಕ್ ರೂ. 70. 60 ಲಕ್ಷ

ಇನ್ನು ಬಿಡುಗಡೆಯಾದ ಎ5 ಸ್ಪೋರ್ಟ್ ಬ್ಯಾಕ್, ಎ5 ಕ್ರಾಬಿಯೊಲೆಟ್ ಮತ್ತು ಎಸ್5 ಸ್ಪೋರ್ಟ್ ಬ್ಯಾಕ್ ಆವೃತ್ತಿಗಳೆಲ್ಲವೂ ಸೆಡಾನ್ ಆವೃತ್ತಿಗಳಾಗಿದ್ದು, ದೂರದ ಪ್ರಯಾಣಕ್ಕೆ ಅನುಕೂಲವಾಗುವಂತೆ ಕಾರಿನ ಒಳ ವಿನ್ಯಾಸಗಳನ್ನು ಕೈಗೊಳ್ಳಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ತಪ್ಪದೇ ಓದಿ:ನೋಟದಲ್ಲಿ ಅಷ್ಟೇ ಅಲ್ಲ ಕಾರ್ಯಕ್ಷಮತೆಯಲ್ಲೂ ಅತ್ಯುತ್ತಮವಾಗಿದೆ ಆಡಿ ಎ5 ಸ್ಪೋರ್ಟ್ ಬ್ಯಾಕ್
Recommended Video


ಡ್ಯಾಶ್ ಬೋರ್ಡ್, ಸೀಟುಗಳ ವಿನ್ಯಾಸ, ಸಭ್ಯತೆಯ ಹೆಡ್ ರೂಮ್, ಲೆಗ್ ರೂಮ್, ಸುಧಾರಿತ ಇನ್ಫೋಟೈನ್‌ಮೆಂಟ್ ಸೇರಿದಂತೆ ಹಲವು ಸೌಲಭ್ಯಗಳನ್ನು ಒದಗಿಸಲಾಗಿದ್ದು, 3ಡಿ ಹೆಡ್‌ಲ್ಯಾಂಪ್‌ಗಳು, ಸ್ಯಾಟಿನ್ ಫಿನಿಶ್ ವಿಂಗ್ ಕನ್ನಡಿಗಳು, ಪ್ಲಾಟಿನಂ ಸಿಂಗಲ್ ಫ್ರೇಮ್ ಗ್ರೀಲ್‌ನಂತಹ ವಿಶಿಷ್ಠ ವಿನ್ಯಾಸಗಳು ಎ5 ಸ್ಪೋರ್ಟ್ ಬ್ಯಾಕ್ ಆವೃತ್ತಿಗಳಿಗೆ ಹೊಸ ಲುಕ್ ನೀಡುವಂತಿದ್ದು, ಬಾಹ್ಯ ಶೈಲಿಯು ಕೂಡಾ ಆಕರ್ಷಣೆಗೆ ಕಾರಣವಾಗಿದೆ.

ಇದಲ್ಲದೇ ಹೊಸ ಕಾರುಗಳನ್ನು ಸಂಪೂರ್ಣ ಸುಧಾರಿತ ತಂತ್ರಜ್ಞಾನಗಳೊಂದಿಗೆ ಅಭಿವೃದ್ಧಿಗೊಳಿಸಲಾಗಿದ್ದು, ಕಾರಿನ ಮುಂಭಾಗದ ನೋಟದಲ್ಲಿ ಸ್ಪೋರ್ಟ್ ಲುಕ್ ನೀಡುವ ಮೂಲಕ ಪ್ರಮುಖ ಕಾರು ಮಾದರಿಗಳಿಗೆ ತೀವ್ರ ಸ್ಪರ್ಧೆ ಒಡ್ಡುವ ರೀತಿಯಲ್ಲಿ ವಿನ್ಯಾಸ ಕೈಗೊಳ್ಳಲಾಗಿದೆ.

ಎಂಜಿನ್
ಎ5 ಸ್ಪೋರ್ಟ್ ಬ್ಯಾಕ್ ಹಾಗೂ ಎ5 ಕ್ರಾಬಿಯೊಲೆಟ್ ಆವೃತ್ತಿಗಳು 2.0-ಲೀಟರ್ 4 ಸಿಲಿಂಡರಿನ ಟರ್ಬೋ ಡೀಸೆಲ್ ಎಂಜಿನ್ ಹೊಂದಿದ್ದು, 197-ಬಿಎಚ್‌ಪಿ ಮತ್ತು 400-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿಯನ್ನು ಹೊಂದಿವೆ.

ಅಂತೆಯೇ ಎಸ್5 ಸ್ಪೋರ್ಟ್ ಬ್ಯಾಕ್ ಆವೃತ್ತಿಯು 3.0-ಲೀಟರ್ ವಿ6 ಎಂಜಿನ್ ಹೊಂದಿದ್ದು, 349-ಬಿಎಚ್‌ಪಿ ಹಾಗೂ ಆರೋಗ್ಯಕರ 500-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿಯೊಂದಿಗೆ 7-ಸ್ಪೀಡ್ ಡ್ಯುಯಲ್ ಕ್ಲಚ್ ಟ್ರಾನ್ಸ್‌ಮಿಷನ್ ಹೊಂದಿದೆ.

ಜೊತೆಗೆ ಆಲ್ ವೀಲ್ಹ್ ಡ್ರೈವ್ ತಂತ್ರಜ್ಞಾನವನ್ನು ಕೂಡಾ ಎ5 ಸ್ಪೋರ್ಟ್ ಬ್ಯಾಕ್ ಆವೃತ್ತಿಗಳಲ್ಲಿ ಒದಗಿಸಲಾಗಿದ್ದು, ಕೇವಲ 4.7 ಸೇಕೆಂಡುಗಳಲ್ಲಿ 100 ಕಿಮಿ ವೇಗ ಪಡೆಯುವ ಮೂಲಕ ಗಂಟೆಗೆ 200 ಕಿಮಿ ದೂರವನ್ನು ಕ್ರಮಿಸಬಲ್ಲವು.


Click it and Unblock the Notifications








