ನೋಟದಲ್ಲಿ ಅಷ್ಟೇ ಅಲ್ಲ ಕಾರ್ಯಕ್ಷಮತೆಯಲ್ಲೂ ಅತ್ಯುತ್ತಮವಾಗಿದೆ ಆಡಿ ಎ5 ಸ್ಪೋರ್ಟ್ ಬ್ಯಾಕ್

ಆಡಿ ತನ್ನ 2ನೇ ತಲೆಮಾರಿನ ಎ5 ಕಾರು ಸ್ಪೋರ್ಟ್ ಬ್ಯಾಕ್ ಆವೃತ್ತಿಗಳನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸುತ್ತಿದ್ದು, ಈ ಹಿನ್ನೆಲೆ ಡ್ರೈವ್ ಸ್ಪಾರ್ಕ್ ತಂಡ ನಡೆಸಿದ ಮೊದಲ ಟೆಸ್ಟ್ ಡ್ರೈವ್ ಅನುಭವಗಳ ಸಾರಾಂಶ ಇಲ್ಲಿದೆ ಓದಿ.

By Praveen

ಜರ್ಮನ್ ಐಷಾರಾಮಿ ಕಾರು ಉತ್ಪಾದನಾ ಸಂಸ್ಥೆಯಾದ ಆಡಿ ತನ್ನ 2ನೇ ತಲೆಮಾರಿನ ಎ5 ಕಾರು ಸ್ಪೋರ್ಟ್ ಬ್ಯಾಕ್ ಆವೃತ್ತಿಗಳನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸುತ್ತಿದ್ದು, ಈ ಹಿನ್ನೆಲೆ ಡ್ರೈವ್ ಸ್ಪಾರ್ಕ್ ತಂಡ ನಡೆಸಿದ ಮೊದಲ ಟೆಸ್ಟ್ ಡ್ರೈವ್ ಅನುಭವಗಳ ಸಾರಾಂಶ ಇಲ್ಲಿದೆ ಓದಿ.

ಕಾರ್ಯಕ್ಷಮತೆಯಲ್ಲಿ ಅತ್ಯುತ್ತಮ ಮಾದರಿಯಾದ ಆಡಿ ಎ5 ಸ್ಪೋರ್ಟ್ ಬ್ಯಾಕ್

ವಿಶಿಷ್ಠ ಐಷಾರಾಮಿ ಕಾರುಗಳ ಉತ್ಪಾದನೆ ಮೂಲಕ ಆಟೋ ಉದ್ಯಮದಲ್ಲಿ ತನ್ನದೆ ಆದ ಜನಪ್ರಿಯತೆ ಹೊಂದಿರುವ ಆಡಿ ಸಂಸ್ಥೆಯು ಹಿಂದೆಂದಿಗಿಂತಲೂ ಇದೀಗ ಅತ್ಯುತ್ತಮ ಎ5 ಸ್ಪೋರ್ಟ್ ಬ್ಯಾಕ್ ಆವೃತ್ತಿಗಳನ್ನು ಪರಿಚಯಿಸಲು ಸಜ್ಜುಗೊಳ್ಳುತ್ತಿದ್ದು, ಉತ್ತಮ ಕಾರ್ಯಕ್ಷಮತೆಯೇ ಹೊಸ ಕಾರುಗಳ ವಿಶೇಷತೆ ಎನ್ನಬಹುದು.

ಕಾರ್ಯಕ್ಷಮತೆಯಲ್ಲಿ ಅತ್ಯುತ್ತಮ ಮಾದರಿಯಾದ ಆಡಿ ಎ5 ಸ್ಪೋರ್ಟ್ ಬ್ಯಾಕ್

ಈ ಸಂಬಂಧ ಡ್ರೈವ್ ಸ್ಪಾರ್ಕ್ ತಂಡವು ರಾಜಸ್ತಾನದ ಇತಿಹಾಸ ಪ್ರಸಿದ್ಧ ಸ್ಥಳಗಳಲ್ಲಿ ನಡೆಸಿದ ಟೆಸ್ಟ್ ಡ್ರೈವ್‌ನಲ್ಲಿ ಎ5 ಸ್ಪೋರ್ಟ್ ಬ್ಯಾಕ್ ಆವೃತ್ತಿಗಳ ಬಗ್ಗೆ ಕೂಲಂಕುಶವಾಗಿ ಮಾಹಿತಿಯನ್ನು ಸಂಗ್ರಹಿಸಲಾಗಿದ್ದು, ಸ್ಪೋರ್ಟ್ ಕಾರು ವೈಶಿಷ್ಟ್ಯತೆಗಳು ಹೊಸ ಕಾರಿಗೆ ಮತ್ತಷ್ಟು ಮೆರಗು ನೀಡಿವೆ.

Recommended Video

Audi A5 Sportback, A5 Cabriolet And S5 Sportback Previewed In India - DriveSpark
ಕಾರ್ಯಕ್ಷಮತೆಯಲ್ಲಿ ಅತ್ಯುತ್ತಮ ಮಾದರಿಯಾದ ಆಡಿ ಎ5 ಸ್ಪೋರ್ಟ್ ಬ್ಯಾಕ್

ಇದಲ್ಲದೇ ಹೊಸ ಕಾರುಗಳನ್ನು ಸಂಪೂರ್ಣ ಸುಧಾರಿತ ತಂತ್ರಜ್ಞಾನಗಳೊಂದಿಗೆ ಅಭಿವೃದ್ಧಿಗೊಳಿಸಲಾಗಿದ್ದು, ಕಾರಿನ ಮುಂಭಾಗದ ನೋಟದಲ್ಲಿ ಸ್ಪೋರ್ಟ್ ಲುಕ್ ನೀಡುವ ಮೂಲಕ ಪ್ರಮುಖ ಕಾರು ಮಾದರಿಗಳಿಗೆ ತೀವ್ರ ಸ್ಪರ್ಧೆ ಒಡ್ಡುವ ರೀತಿಯಲ್ಲಿ ವಿನ್ಯಾಸ ಕೈಗೊಳ್ಳಲಾಗಿದೆ.

ಕಾರ್ಯಕ್ಷಮತೆಯಲ್ಲಿ ಅತ್ಯುತ್ತಮ ಮಾದರಿಯಾದ ಆಡಿ ಎ5 ಸ್ಪೋರ್ಟ್ ಬ್ಯಾಕ್

3ಡಿ ಹೆಡ್‌ಲ್ಯಾಂಪ್‌ಗಳು, ಸ್ಯಾಟಿನ್ ಫಿನಿಶ್ ವಿಂಗ್ ಕನ್ನಡಿಗಳು, ಪ್ಲಾಟಿನಂ ಸಿಂಗಲ್ ಫ್ರೇಮ್ ಗ್ರೀಲ್‌ನಂತಹ ವಿಶಿಷ್ಠ ವಿನ್ಯಾಸಗಳು ಎ5 ಸ್ಪೋರ್ಟ್ ಬ್ಯಾಕ್ ಆವೃತ್ತಿಗಳಿಗೆ ಹೊಸ ಲುಕ್ ನೀಡುವಂತಿದ್ದು, ಬಾಹ್ಯ ಶೈಲಿಯು ಕೂಡಾ ಆಕರ್ಷಣೆಗೆ ಕಾರಣವಾಗಿದೆ.

ಕಾರ್ಯಕ್ಷಮತೆಯಲ್ಲಿ ಅತ್ಯುತ್ತಮ ಮಾದರಿಯಾದ ಆಡಿ ಎ5 ಸ್ಪೋರ್ಟ್ ಬ್ಯಾಕ್

ಹೀಗಾಗಿ ದೂರದ ಪ್ರಯಾಣಗಳಿಗೆ ಅನುಕೂಲವಾಗುವಂತೆ ಕಾರಿನ ಒಳ ವಿನ್ಯಾಸಗಳನ್ನು ಕೈಗೊಳ್ಳಲಾಗಿದ್ದು, ಡ್ಯಾಶ್ ಬೋರ್ಡ್, ಸೀಟುಗಳ ವಿನ್ಯಾಸ, ಸಭ್ಯತೆಯ ಹೆಡ್ ರೂಮ್, ಲೆಗ್ ರೂಮ್, ಸುಧಾರಿತ ಇನ್ಫೋಟೈನ್‌ಮೆಂಟ್ ಸೇರಿದಂತೆ ಹಲವು ಸೌಲಭ್ಯಗಳನ್ನು ಒದಗಿಸಲಾಗಿದೆ.

ಕಾರ್ಯಕ್ಷಮತೆಯಲ್ಲಿ ಅತ್ಯುತ್ತಮ ಮಾದರಿಯಾದ ಆಡಿ ಎ5 ಸ್ಪೋರ್ಟ್ ಬ್ಯಾಕ್

ಕಾರಿನ ಮಾದರಿಗಳು

ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಎ 5 ಸ್ಪೋರ್ಟ್ ಬ್ಯಾಕ್ ಮತ್ತು ಎ 5 ಕ್ಯಾಬ್ರಿಯೊಲೆಟ್ ಆವೃತ್ತಿಗಳನ್ನು ಅಭಿವೃದ್ಧಿಗೊಳಿಸಲಾಗಿದ್ದು, ತಾಂತ್ರಿಕ ವಿಭಾಗದಲ್ಲಿ ಅಲ್ಪ ಬದಲಾವಣೆ ಹೊಂದಿವೆ.

ಕಾರ್ಯಕ್ಷಮತೆಯಲ್ಲಿ ಅತ್ಯುತ್ತಮ ಮಾದರಿಯಾದ ಆಡಿ ಎ5 ಸ್ಪೋರ್ಟ್ ಬ್ಯಾಕ್

ಎಂಜಿನ್

ಎ5 ಸ್ಪೋರ್ಟ್ ಬ್ಯಾಕ್ ಆವೃತ್ತಿಯು 3.0-ಲೀಟರ್ ಟರ್ಬೋಚಾರ್ಜ್ಡ್ ಎಂಜಿನ್ ಹೊಂದಿದ್ದು, 349-ಬಿಎಚ್‌ಪಿ ಹಾಗೂ ಆರೋಗ್ಯಕರ 500-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿಯೊಂದಿಗೆ 7-ಸ್ಪೀಡ್ ಡ್ಯುಯಲ್ ಕ್ಲಚ್ ಟ್ರಾನ್ಸ್‌ಮಿಷನ್ ಹೊಂದಿದೆ.

ಕಾರ್ಯಕ್ಷಮತೆಯಲ್ಲಿ ಅತ್ಯುತ್ತಮ ಮಾದರಿಯಾದ ಆಡಿ ಎ5 ಸ್ಪೋರ್ಟ್ ಬ್ಯಾಕ್

ಜೊತೆಗೆ ಆಲ್ ವೀಲ್ಹ್ ಡ್ರೈವ್ ತಂತ್ರಜ್ಞಾನವನ್ನು ಕೂಡಾ ಎ5 ಸ್ಪೋರ್ಟ್ ಬ್ಯಾಕ್ ಆವೃತ್ತಿಗಳಲ್ಲಿ ಒದಗಿಸಲಾಗಿದ್ದು, ಕೇವಲ 4.7 ಸೇಕೆಂಡುಗಳಲ್ಲಿ 100 ಕಿಮಿ ವೇಗ ಪಡೆಯುವ ಮೂಲಕ ಗಂಟೆಗೆ 200 ಕಿಮಿ ಸಾಗಬಲ್ಲವು ಎಂದು ಅಂದಾಜಿಸಲಾಗಿದೆ.

ಕಾರ್ಯಕ್ಷಮತೆಯಲ್ಲಿ ಅತ್ಯುತ್ತಮ ಮಾದರಿಯಾದ ಆಡಿ ಎ5 ಸ್ಪೋರ್ಟ್ ಬ್ಯಾಕ್

ಈ ಹಿನ್ನೆಲೆ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಕಂಫರ್ಟ್, ಆಟೋ ಮತ್ತು ಡೈನಾಮಿಕ್ ಮೂಡ್‌ಗಳಲ್ಲಿ ಕಾರು ಚಾಲನೆ ಮಾಡಬಹುದಾಗಿದೆ. ಜೊತೆಗೆ ಹೊಸ ಕಾರುಗಳಲ್ಲಿ 6 ಏರ್‌ಬ್ಯಾಗ್ ಸೌಲಭ್ಯವನ್ನು ಒದಗಿಸಿರುವುದು ಅಪಘಾತ ಸಂದರ್ಭಗಳಲ್ಲಿ ತೀವ್ರ ಹಾನಿಯನ್ನು ತಡೆಗಟ್ಟಬಲ್ಲವು.

ಕಾರ್ಯಕ್ಷಮತೆಯಲ್ಲಿ ಅತ್ಯುತ್ತಮ ಮಾದರಿಯಾದ ಆಡಿ ಎ5 ಸ್ಪೋರ್ಟ್ ಬ್ಯಾಕ್

ಬೆಲೆ

ಹೊಸ ವಿನ್ಯಾಸದ ಎ5 ಸ್ಪೋರ್ಟ್ ಬ್ಯಾಕ್ ಬೆಲೆಗಳ ನಿಖರ ಮಾಹಿತಿ ಇಲ್ಲವಾದರೂ ಕೆಲವು ಮೂಲಗಳ ಪ್ರಕಾರ 80 ರಿಂದ 85 ಲಕ್ಷ ಇರಬಹುದೆಂದು ಅಂದಾಜಿಸಲಾಗಿದ್ದು, ಬಿಡುಗಡೆ ನಂತರವಷ್ಟೇ ನಿಖರ ಬೆಲೆಗಳು ಲಭ್ಯವಾಗಲಿವೆ.

ಕಾರ್ಯಕ್ಷಮತೆಯಲ್ಲಿ ಅತ್ಯುತ್ತಮ ಮಾದರಿಯಾದ ಆಡಿ ಎ5 ಸ್ಪೋರ್ಟ್ ಬ್ಯಾಕ್

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಅಂತಿಮವಾಗಿ ಆಡಿ ಎ5 ಆವೃತ್ತಿಗಳ ಬಗೆಗೆ ಹೇಳುವುದಾದರೆ ಬಿಎಂಡಬ್ಲ್ಯು , ಮರ್ಸಿಡಿಸ್ ಬೆಂಝ್ ಮಾದರಿಗಳಿಗೆ ಪರ್ಯಾಯ ಆವೃತ್ತಿ ಹೊರಹೊಮ್ಮುವ ತವಕದಲ್ಲಿದ್ದು, ಇದೇ ತಿಂಗಳು ಅಂತ್ಯಕ್ಕೆ ಬಿಡುಗಡೆಗೊಳ್ಳುವ ಸಾಧ್ಯತೆಗಳಿವೆ.

Most Read Articles

Kannada
English summary
Read in Kannada about New Audi S5 Sportback 2017 Review.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X