ಇನ್ಮೇಲೆ ಆಡಿ ಕಾರಿನ ಮಾದರಿಗಳ ಹೆಸರು ಬದಲಾವಣೆ ಆಗುತ್ತೆ

ಜರ್ಮನಿಯ ವಾಹನ ತಯಾರಕ ಸಂಸ್ಥೆಯಾದ ಆಡಿ ತನ್ನ ಉತ್ಪನ್ನಗಳ ಹೆಸರಿನ ವ್ಯವಸ್ಥೆಯನ್ನು ಬದಲಾವಣೆ ಮಾಡಲು ಮುಂದಾಗಿದ್ದು, ಮುಂಬರುವ ದಿನಗಳಲ್ಲಿ ಹೊಸ ಎರಡು ಸಂಖ್ಯೆ ಹೆಸರಿನಲ್ಲಿ ಆಡಿ ವಾಹನಗಳು ಬಿಡುಗಡೆಯಾಗಲಿವೆ.

By Girish

ಹೌದು, ಈ ಹೊಸ ರೀತಿಯ ಕ್ರಮಕ್ಕೆ ಕಂಪನಿ ಈಗಾಗಲೇ ಅಧಿಕೃತ ಚಾಲನೆ ನೀಡಿದೆ ಎನ್ನಲಾಗಿದ್ದು, ಹೊಸ ವ್ಯವಸ್ಥೆಯ ಪ್ರಕಾರ, ಇಷ್ಟು ದಿನ ಎಂಜಿನ್ ಸಾಮರ್ಥ್ಯದ ಆದರದ ಮೇಲೆ ಕಾರಿನ ಸಂಖ್ಯೆ ನಿರ್ದರಿಸಲಾಗುತ್ತಿತ್ತು. ಇನ್ನು ಮುಂದೆ, ವಾಹನವು ಎಷ್ಟು ಶಕ್ತಿ ಬಿಡುಗಡೆ ಮಾಡಲಿದೆ ಎನ್ನುವ ಆದರದ ಮೇಲೆ ಕಾರಿನ ಮಾದರಿಯ ಸಂಖ್ಯೆ ನಿರ್ಧರಿಸಲಾಗುತ್ತದೆ.

ಇನ್ಮೇಲೆ ಆಡಿ ಕಾರಿನ ಮಾದರಿಗಳ ಹೆಸರು ಬದಲಾವಣೆ ಆಗುತ್ತೆ

ಹೈಬ್ರಿಡ್ ಸಿಸ್ಟಮ್‌ಗಳು ಅಥವಾ ಆಲ್ ಎಲೆಕ್ಟ್ರಿಕ್ ಪವರ್‌ಟ್ರೇನ್‌ಗಳಿಂದ ಪಡೆಯಲಾದ ವಿದ್ಯುತ್ ಉತ್ಪಾದನೆಯಲ್ಲಿ ಬಂಪ್ ಅನ್ನು ಹೈಲೈಟ್ ಮಾಡುವ ಉದ್ದೇಶದಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

ಇನ್ಮೇಲೆ ಆಡಿ ಕಾರಿನ ಮಾದರಿಗಳ ಹೆಸರು ಬದಲಾವಣೆ ಆಗುತ್ತೆ

ಮುಂಬರುವ ಎಲ್ಲಾ ಮಾದರಿಗಳೂ ಸಹ ಹೊಸ ನಾಮಾಂಕಿತದೊಂದಿಗೆ ಅನಾವರಣಗೊಳ್ಳಲಿದ್ದು, ಮುಂದಿನ ವರ್ಷ ಬಿಡುಗಡೆಯಾಗಲಿರುವ ಬಹು ನಿರೀಕ್ಷಿತ ಇ-ಟ್ರಾನ್ ಎಸ್‌ಯುವಿ ಕಾರು ಇದಕ್ಕೆ ಉತ್ತಮ ಉದಾಹರಣೆ ಎನ್ನಬಹುದು.

ಇನ್ಮೇಲೆ ಆಡಿ ಕಾರಿನ ಮಾದರಿಗಳ ಹೆಸರು ಬದಲಾವಣೆ ಆಗುತ್ತೆ

ಎಲ್ಲಾ ಮಾದರಿಗಳೂ ಸಹ 30 ರಿಂದ 70 ಸಂಖ್ಯೆಯ ಮಾದರಿ ಹೊಂದಿರಲಿದೆ. ಸಂಖ್ಯೆ 30, 107 ಬಿಎಚ್‌ಪಿ ಇಂದ 127 ಬಿಎಚ್‌ಪಿ ಪ್ರತಿನಿಧಿಸಲಿದೆ ಹಾಗು 529 ಬಿಎಚ್‌ಪಿಗಿಂತ ಮೇಲ್ಪಟ್ಟ ಮಾದರಿಗಳು ಸಂಖ್ಯೆ 70 ಅಡಿಯಲ್ಲಿ ಬರಲಿವೆ.

ಇನ್ಮೇಲೆ ಆಡಿ ಕಾರಿನ ಮಾದರಿಗಳ ಹೆಸರು ಬದಲಾವಣೆ ಆಗುತ್ತೆ

ಶಕ್ತಿ ಉತ್ಪಾದನೆಯ ಆದರದ ಮೇಲೆ ಪ್ರಸ್ತುತ, ಎಂಟು ಹೊಸ ಬ್ಯಾಡ್ಜ್‌ಗಳನ್ನು ಆಡಿ ಸಂಸ್ಥೆ ವಿಭಾಗ ಮಾಡಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

Model Number Power Output Range
30 107bhp to 127bhp
35 145bhp to 159bhp
40 165bhp to 198bhp
45 223bhp to 244bhp
50 278bhp to 304bhp
60 423bhp to 449bhp
70 Above 529bhp
ಇನ್ಮೇಲೆ ಆಡಿ ಕಾರಿನ ಮಾದರಿಗಳ ಹೆಸರು ಬದಲಾವಣೆ ಆಗುತ್ತೆ

ಪೆಟ್ರೋಲ್, ಡೀಸೆಲ್, ನೈಸರ್ಗಿಕ ಅನಿಲ, ಪ್ಲಗ್ ಇನ್ ಹೈಬ್ರಿಡ್ ಮತ್ತು ವಿದ್ಯುತ್ ಮಾದರಿಗಳು ಸೇರಿದಂತೆ ಎಲ್ಲಾ ಆಡಿ ಮಾದರಿಗಳಿಗೆ ಈ ಹೊಸ ಹೆಸರಿನ ವ್ಯವಸ್ಥೆಯು ಅನ್ವಯಿಸುತ್ತದೆ ಹಾಗು ಎಸ್, ಆರ್‌ಎಸ್ ಮತ್ತು ಆರ್8 ತಮ್ಮ ಶ್ರೇಷ್ಠ ಹೆಸರುಗಳನ್ನು ಉಳಿಸಿಕೊಳ್ಳಲಿವೆ.

Most Read Articles

Kannada
Read more on ಆಡಿ audi
English summary
German automaker Audi has introduced a new naming system across its product portfolio. In the new system, the model number will be directly linked to the power output instead of the engine capacity.
Story first published: Friday, August 25, 2017, 11:03 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X