ಯುಟಿಲಿಟಿ ವಾಹನಗಳ ಮಾರಾಟದಲ್ಲಿ ಮುಗ್ಗರಿಸಿದ ಮಹೀಂದ್ರಾ ಆ್ಯಂಡ್ ಮಹೀಂದ್ರಾ..!

ದೇಶಿಯವಾಗಿ ವಾಹನಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಮಹೀಂದ್ರಾ & ಮಹೀಂದ್ರಾ ಯುಟಿಲಿಟಿ ವಾಹನಗಳ ಮಾರಾಟದಲ್ಲಿ ಭಾರತದ ಅತಿದೊಡ್ಡ ಸಂಘಟಿತ ಸಂಸ್ಥೆಯಾಗಿದೆ. ಆದರೆ ಪ್ರಸಕ್ತ ತ್ರೈಮಾಸಿಕ ಕೊನೆಯಲ್ಲಿ ಕಂಪನಿಯು ಮಾರಾಟದಲ್ಲಿ ಕುಸಿತ ಕಂಡಿದೆ.

By Praveen

ದೇಶಿಯವಾಗಿ ವಾಹನಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಮಹೀಂದ್ರಾ & ಮಹೀಂದ್ರಾ ಯುಟಿಲಿಟಿ ವಾಹನಗಳ ಮಾರಾಟದಲ್ಲಿ ಭಾರತದ ಅತಿ ದೊಡ್ಡ ಸಂಘಟಿತ ಸಂಸ್ಥೆಯಾಗಿದೆ. ಆದರೆ ಪ್ರಸಕ್ತ ತ್ರೈಮಾಸಿಕದ ಕೊನೆಯಲ್ಲಿ ಕಂಪನಿಯು ಮಾರಾಟದಲ್ಲಿ ಕುಸಿತ ಕಂಡಿದೆ.

ಯುಟಿಲಿಟಿ ವಾಹನಗಳ ಮಾರಾಟದಲ್ಲಿ ಹಿನ್ನಡೆ ಅನುಭವಿಸಿದ ಮಹೀಂದ್ರಾ

2017ರ ಮೊದಲ ತ್ರೈಮಾಸಿಕ ಅವಧಿಯಲ್ಲಿ ಮಹೀಂದ್ರಾ ಮತ್ತು ಮಾರುತಿ ಸುಜುಕಿ ಸಂಸ್ಥೆಯು ಯುಟಿಲಿಟಿ ವಾಹನ ಮಾರಾಟದಲ್ಲಿ ಅಗ್ರ ಸ್ಥಾನವನ್ನು ಉಳಿಸಿಕೊಂಡಿದ್ದು, ಕಳೆದ ಅವಧಿಯಲ್ಲಿನ ಮಾರಾಟ ಪ್ರಮಾಣವನ್ನು ಹಿಂದಿಕ್ಕುವಲ್ಲಿ ಮಹೀಂದ್ರಾ ಸಂಸ್ಥೆಯು ಹಿಂದೆ ಬಿದ್ದಿದೆ.

ಯುಟಿಲಿಟಿ ವಾಹನಗಳ ಮಾರಾಟದಲ್ಲಿ ಹಿನ್ನಡೆ ಅನುಭವಿಸಿದ ಮಹೀಂದ್ರಾ

ಈ ಹಿನ್ನೆಲೆ ಮಾರುತಿ ಎಸ್‌ಯುವಿ ಮಾದರಿಯಾದ ವಿತ್ರಾ ಬ್ರೇಜ್ ಕಾರು ಮಾದರಿಯೂ ಭಾರೀ ಬೇಡಿಕೆ ಹೊಂದಿದ್ದು, ಮಹೀಂದ್ರಾ ಸಂಸ್ಥೆಯ ಎಕ್ಸ್‌ಯುವಿ 500 ಸೇರಿದಂತೆ ಪ್ರಮುಖ ಕಾರು ಮಾದರಿಗಳಲ್ಲಿ ಮಾರುತಿ ಸುಜುಕಿ ಮುನ್ನಡೆ ಸಾಧಿಸಿದೆ.

ಯುಟಿಲಿಟಿ ವಾಹನಗಳ ಮಾರಾಟದಲ್ಲಿ ಹಿನ್ನಡೆ ಅನುಭವಿಸಿದ ಮಹೀಂದ್ರಾ

ಇಂಡಿಯನ್ ಅಟೋಮೊಬೈಲ್ ಹೋಲ್ಡರ್ಸ್ ಅಸೋಸಿಯೇಷನ್ ಬಿಡುಗಡೆ ಮಾಡಿರುವ ವರದಿ ಪ್ರಕಾರ ಮಾರುತಿ ಸುಜುಕಿ ಉತ್ಪಾದಿತ ವಿತ್ರಾ ಬ್ರೇಜ್, ಎರ್ಟಿಗಾ ಮತ್ತು ಎಸ್ ಕ್ರಾಸ್ ಮಾದರಿಗಳು ಭಾರತದಲ್ಲಿ 57,125 ಯೂನಿಟ್‌ಗಳು ಮಾರಾಟಗೊಂಡಿವೆ.

ಯುಟಿಲಿಟಿ ವಾಹನಗಳ ಮಾರಾಟದಲ್ಲಿ ಹಿನ್ನಡೆ ಅನುಭವಿಸಿದ ಮಹೀಂದ್ರಾ

ಇದರೊಂದಿಗೆ 2017ರ ಮಾರ್ಚ್ ಅಂತ್ಯಕ್ಕೆ ಮಾರುತಿ ಸುಜುಕಿ ಇಂಡಿಯಾ ಶೇ.30.05 ಪ್ರತಿ ಶತ ಮಾರುಕಟ್ಟೆ ಪಾಲನ್ನು ಹೊಂದಿದ್ದು, ಅದೇ ರೀತಿಯಾಗಿ 2017ರ ಮಾರ್ಚ್ ಅಂತ್ಯದ ವೇಳೆಗೆ ಮಹೀಂದ್ರಾ ಸಂಸ್ಥೆಯು ಶೇ.27.92 ರಷ್ಟು ಮಾತ್ರ ವಾಹನಗಳ ಮಾರಾಟ ಪ್ರಮಾಣವನ್ನು ದಾಖಲಿಸಿದೆ.

ಯುಟಿಲಿಟಿ ವಾಹನಗಳ ಮಾರಾಟದಲ್ಲಿ ಹಿನ್ನಡೆ ಅನುಭವಿಸಿದ ಮಹೀಂದ್ರಾ

ಆದರೆ ಕಳೆದ ವರ್ಷ ಶೇ.31ರಷ್ಟು ಯುಟಿಲಿಟಿ ಕಾರುಗಳ ಮಾರಾಟ ಪ್ರಮಾಣವನ್ನು ಹೊಂದಿದ್ದ ಮಹೀಂದ್ರಾ, ಅಪನಗದೀಕರಣ ಮತ್ತು ಜಿಎಸ್‌ಟಿ ಪ್ರಭಾವದಿಂದ ಈ ಬಾರಿ ಮಾರಾಟ ಪ್ರಮಾಣದಲ್ಲಿ ಕುಸಿತ ಕಂಡಿದೆ.

ಯುಟಿಲಿಟಿ ವಾಹನಗಳ ಮಾರಾಟದಲ್ಲಿ ಹಿನ್ನಡೆ ಅನುಭವಿಸಿದ ಮಹೀಂದ್ರಾ

ಇನ್ನು ಯುಟಿಲಿಟಿ ವಾಹನಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಮಾರುತಿ ಸುಜುಕಿ ವಿತ್ರಾ ಬ್ರೇಜ್ ಆವೃತ್ತಿಯೂ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಬಿಡುಗಡೆಯ ದಿನದಿಂದ ಈ ತನಕ 1.45 ಲಕ್ಷ ಕಾರುಗಳು ಮಾರಾಟಗೊಳ್ಳುವ ಮೂಲಕ ಹೊಸ ದಾಖಲೆ ನಿರ್ಮಾಣ ಮಾಡಿದೆ.

ಯುಟಿಲಿಟಿ ವಾಹನಗಳ ಮಾರಾಟದಲ್ಲಿ ಹಿನ್ನಡೆ ಅನುಭವಿಸಿದ ಮಹೀಂದ್ರಾ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಒಟ್ಟಿನಲ್ಲಿ ಯುಟಿಲಿಟಿ ವಾಹನಗಳ ಮಾರಾಟದಲ್ಲಿ ಮಹೀಂದ್ರಾ ಮತ್ತು ಮಾರುತಿ ಸುಜುಕಿ ನಡುವೆ ತೀವ್ರ ಸ್ಪರ್ಧೆಯಿದ್ದು, ಅಪನಗದೀಕರಣ ಹಾಗೂ ಜಿಎಸ್‌ಟಿ ಜಾರಿ ನಂತರ ಮತ್ತಷ್ಟು ಪ್ರಮಾಣದಲ್ಲಿ ಯುಟಿಲಿಟಿ ವಾಹನಗಳ ಉತ್ಪಾದನೆ ಮತ್ತು ಮಾರಾಟ ಪ್ರಮಾಣ ಚೇತರಿಸಿಕೊಳ್ಳುವ ಮೂಲಕ ಗ್ರಾಹಕರ ಸೆಳೆಯುವ ನಿಟ್ಟಿನಲ್ಲಿ ಯೋಜನೆ ರೂಪಿಸುತ್ತಿವೆ.

Most Read Articles

Kannada
English summary
Read in Kannada about Mahindra has Fallen in Sales at The end of The Current Quarter.
Story first published: Friday, July 14, 2017, 12:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X