ನಿಷೇಧಿತ ಬುಲ್ ಬಾರ್ ಹಾಗೂ ಕ್ರ್ಯಾಶ್ ಗಾರ್ಡ್ ಹಾಕಿದ್ರೆ ದಂಡ ಎಷ್ಟು ಗೊತ್ತಾ?
ಕ್ರ್ಯಾಶ್ ಗಾರ್ಡ್‌ಗಳನ್ನು ಕೇಂದ್ರ ಸರ್ಕಾರವು ಬ್ಯಾನ್ ಮಾಡಿದ್ದು, ಹೊಸ ಆದೇಶದಂತೆ ಎಲ್ಲಾ ರಾಜ್ಯಗಳ ಸಾರಿಗೆ ಸಂಸ್ಥೆಗಳು ಬುಲ್ ಬಾರ್ ಹಾಗೂ ಕ್ರ್ಯಾಶ್ ಗಾರ್ಡ್‌ಗಳನ್ನು ಹಾಕಿರುವ ವಾಹನಗಳ ವಿರುದ್ಧ ಕ್ರಮ ಜರಗಿಸಲು ಆರಂಭಿಸಲಾಗುತ್ತಿದೆ.
ಎಸ್‌ಯುವಿ ಕಾರುಗಳ ಖದರ್ ಹೆಚ್ಚಿಸುವ ಬುಲ್ ಬಾರ್ ಹಾಗೂ ಕ್ರ್ಯಾಶ್ ಗಾರ್ಡ್‌ಗಳನ್ನು ಕೇಂದ್ರ ಸರ್ಕಾರವು ಬ್ಯಾನ್ ಮಾಡಿದ್ದು, ಹೊಸ ಆದೇಶದಂತೆ ಎಲ್ಲಾ ರಾಜ್ಯಗಳ ಸಾರಿಗೆ ಸಂಸ್ಥೆಗಳು ಬುಲ್ ಬಾರ್ ಹಾಗೂ ಕ್ರ್ಯಾಶ್ ಗಾರ್ಡ್‌ಗಳನ್ನು ಹಾಕಿರುವ ವಾಹನಗಳ ವಿರುದ್ಧ ಕ್ರಮ ಜರಗಿಸಲು ಆರಂಭಿಸಲಾಗುತ್ತಿದೆ.

ಮೋಟಾರು ವಾಹನಗಳಿಗೆ ಬುಲ್ ಬಾರ್ ಹಾಗೂ ಕ್ರ್ಯಾಶ್ ಗಾರ್ಡ್ ಅಳವಡಿಸುವುದನ್ನು ನಿಷೇಧಿಸಿ ಕೇಂದ್ರ ಸಾರಿಗೆ ಸಚಿವಾಲಯವು ಕಳೆದ ಡಿ.7ರಂದು ಸುತ್ತೋಲೆ ಹೊರಡಿಸಿತ್ತು. ಹೀಗಾಗಿ ಕೇಂದ್ರದ ಆದೇಶದಂತೆ ನಿಷೇಧಿತ ಬುಲ್ ಬಾರ್ ಹಾಗೂ ಕ್ರ್ಯಾಶ್ ಗಾರ್ಡ್ ಹಾಕುವ ಕಾರು ಮಾಲೀಕರಿಗೆ ಭರ್ಜರಿ ದಂಡ ವಸೂಲಿ ಮಾಡಲು ಆರ್‌ಟಿಒ ಅಧಿಕಾರಿಗಳು ಸಜ್ಜುಗೊಳ್ಳುತ್ತಿದ್ದಾರೆ.

ಎಸ್‌ಯುವಿ ಕಾರುಗಳು ಅಂದವಾಗಿ ಕಾಣಬೇಕು ಮತ್ತು ಅವಘಡಗಳು ಸಂಭವಿಸಿದಾಗ ವಾಹನದ ಮುಂಭಾಗಕ್ಕೆ ಧಕ್ಕೆಯಾಗಬಾರದು ಎಂಬ ಕಾರಣಕ್ಕೆ ಕಾರು ಮಾಲೀಕರು ಬುಲ್ ಬಾರ್ ಹಾಗೂ ಕ್ರ್ಯಾಶ್ ಗಾರ್ಡ್ ಅಳವಡಿಸುತ್ತಿರುವುದನ್ನು ನಾವು ಗಮನಿಸಬಹುದು.
Recommended Video


ಆದ್ರೆ ಬುಲ್ ಬಾರ್ ಹಾಗೂ ಕ್ರ್ಯಾಶ್ ಗಾರ್ಡ್ ಬ್ಯಾನ್ ಮಾಡಿದ್ದರ ಹಿಂದೆ ಹಲವು ವೈಜ್ಞಾನಿಕ ಕಾರಣಗಳಿದ್ದು, ದೇಶದಲ್ಲಿ ಸಂಭವಿಸಿದ್ದ ಹಲವು ಅಪಘಾತಗಳಲ್ಲಿ ಬುಲ್ ಬಾರ್ ಹಾಗೂ ಕ್ರ್ಯಾಶ್ ಗಾರ್ಡ್ ತಾಗಿ ಹಲವರು ಮೃತಪಟ್ಟಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ.

ಇದಲ್ಲದೇ ಬುಲ್ ಬಾರ್ ಹಾಗೂ ಕ್ರ್ಯಾಶ್ ಗಾರ್ಡ್‌ಗಳಿಂದಲೇ ಹಲವರು ಗಾಯಗೊಂಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸಾರಿಗೆ ಸಚಿವಾಲಯವು ಈ ಸುತ್ತೋಲೆ ಹೊರಡಿಸಿದ್ದು, ಅದರಲ್ಲಿರುವ ಅಂಶಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಎಲ್ಲ ರಾಜ್ಯಗಳ ಸಾರಿಗೆ ಅಧಿಕಾರಿಗಳಿಗೆ ಸೂಚನೆ ನೀಡಿದೆ.

ಜೊತೆಗೆ ಹೊಸ ನಿಯಮವನ್ನು ಯಾರೂ ಉಲ್ಲಂಘಿಸುತ್ತಾರೋ ಅವರ ವಿರುದ್ಧ ಸೆಕ್ಷನ್ 190 ಹಾಗೂ 191 ಅಡಿ ಕ್ರಮ ಜರುಗಿಸಿ ದಂಡ ವಿಧಿಸಬೇಕು ಎಂದಿರುವ ಕೇಂದ್ರ ಸಾರಿಗೆ ಸಚಿವಾಲಯದ ನಿರ್ದೇಶಕರಾದ ಪ್ರಿಯಾಂಕಾ ಭಾರತಿ ಸುತ್ತೋಲೆ ಹೊರಡಿಸಿದ್ದಾರೆ.
ತಪ್ಪದೇ ಓದಿ-ಮೊದಲನೇ ಗೇರ್ ಹಾಕಿ ಕಾರನ್ನು ಪಾರ್ಕ್ ಮಾಡುವವರು ಈ ಲೇಖನವನ್ನು ತಪ್ಪದೆ ಓದಿ !!

ನಿಯಮ ಉಲ್ಲಂಘನೆಗೆ ದಂಡದ ಪ್ರಮಾಣ ಎಷ್ಟು?
ಕೇಂದ್ರ ಸಾರಿಗೆ ಇಲಾಖೆ ಸೂಚಿಸಿರುವ ಪ್ರಕಾರ ಮೊದಲ ಬಾರಿಗೆ ನಿಯಮ ಉಲ್ಲಂಘಿಸುವ ಕಾರು ಮಾಲೀಕರಿಗೆ 1 ಸಾವಿರ ದಂಡ ವಿಧಿಸುವುದಲ್ಲದೇ ಹೊಸ ನಿಯಮ ಪಾಲನೆಗೆ ಖಡಕ್ ಸೂಚನೆ ನೀಡಬೇಕು ಎಂದು ಹಿರಿಯ ಅಧಿಕಾರಿಗಳಿಗೆ ಸುತ್ತೊಲೆ ನೀಡಿದೆ.

ಅದಾಗ್ಯೂ ಬುಲ್ ಬಾರ್ ಹಾಗೂ ಕ್ರ್ಯಾಶ್ ಗಾರ್ಡ್ ತೆಗೆಯದೇ ಸಿಕ್ಕಿಬಿಳ್ಳುವ ಕಾರು ಮಾಲೀಕರಿಗೆ 2ನೇ ಬಾರಿ ಎಚ್ಚರಿಕೆಯಾಗಿ 2 ಸಾವಿರ ದಂಡ ಮತ್ತು ಮೂರನೇ ಬಾರಿ ಸಿಕ್ಕಿಬಿದ್ದಲ್ಲಿ 5 ಸಾವಿರ ದಂಡ ವಿಧಿಸುವ ಜೊತೆಗೆ ಕಠಿಣ ಕ್ರಮ ಜರಗಿಸಲಿದೆ.
ತಪ್ಪದೇ ಓದಿ- ಭಾರತದ ಟಾಪ್ 5 ಕೆಟ್ಟ ಬೈಕುಗಳ ಪಟ್ಟಿ ಇಲ್ಲಿದೆ !!
Trending DriveSpark YouTube Videos
Subscribe To DriveSpark Kannada YouTube Channel - Click Here


Click it and Unblock the Notifications








