ಮುಂದಿನ ತಿಂಗಳು ಬಿಡುಗಡೆಯಾಲಿದೆ ದಟ್ಸನ್ ರೆಡಿ ಗೊ ಹ್ಯಾಚ್‌ಬ್ಯಾಕ್..!!
ಪ್ರತಿಪ್ಠಿತ ಕಾರು ಉತ್ಪಾದನಾ ಸಂಸ್ಥೆ ನಿನ್ಸಾಸ್ ಒಡೆತನದ ದಟ್ಸನ್ ತನ್ನ ಹೊಸ ಮಾದರಿ ಹ್ಯಾಚ್‌ಬ್ಯಾಕ್ ರೆಡಿ ಗೊ ಬಿಡುಗಡೆಗೊಳಿಸಲು ಸಜ್ಜುಗೊಂಡಿದ್ದು, ವರದಿಗಳ ಪ್ರಕಾರ ಮುಂದಿನ ತಿಂಗಳು ಭಾರತೀಯ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರಲಿದೆ.
ಪ್ರತಿಪ್ಠಿತ ಕಾರು ಉತ್ಪಾದನಾ ಸಂಸ್ಥೆ ನಿನ್ಸಾಸ್ ಒಡೆತನದ ದಟ್ಸನ್ ತನ್ನ ಹೊಸ ಮಾದರಿ ಹ್ಯಾಚ್‌ಬ್ಯಾಕ್ ರೆಡಿ ಗೊ ಬಿಡುಗಡೆಗೊಳಿಸಲು ಸಜ್ಜುಗೊಂಡಿದ್ದು, ವರದಿಗಳ ಪ್ರಕಾರ ಮುಂದಿನ ತಿಂಗಳು ಭಾರತೀಯ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರಲಿದೆ.

ಭಾರತೀಯ ಮಾರುಕಟ್ಟೆಯಲ್ಲಿ ಬೇಡಿಕೆಗೆ ಅನುಗುಣವಾಗಿ 1.0-ಲೀಟರ್ ಪೆಟ್ರೋಲ್ ಎಂಜಿನ್ ಕಾರು ಮಾದರಿಯನ್ನು ಬಿಡುಗಡೆಗೊಳಿಸಲಿರುವ ಡಟ್ಸನ್ ಸಂಸ್ಥೆಯು, ವಿಶೇಷ ವೈಶಿಷ್ಟ್ಯತೆಗಳನ್ನು ಹೊಂದಿರುವ ರೆಡಿ ಗೊ ಹ್ಯಾಚ್‌ಬ್ಯಾಕ್ ಪರಿಚಯಿಸಲಿದೆ.

ಬಿಡುಗಡೆಯಾಗಲಿರುವ ಡಟ್ಸನ್ ರೆಡಿ ಗೊ ಕಾರು 800 ಸಿಸಿ ಎಂಜಿನ್ ಸಾಮರ್ಥ್ಯ ಹೊಂದಿದ್ದು, 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ವ್ಯವಸ್ಥೆ ಪಡೆದುಕೊಂಡಿದೆ.

53ಬಿಎಚ್‌ಪಿ 72ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿ ಹೊಂದಿರುವ ಡಟ್ಸನ್ ರೆಡಿ ಗೊ, ಮ್ಯಾನುವಲ್ ಗೇರ್‌ಬಾಕ್ಸ್ ಆವೃತ್ತಿ ಬಿಡುಗಡೆಯಾದ ಕೆಲ ದಿನಗಳ ಬಳಿಕ ಎಎಂಟಿ(ಆಟೋಮ್ಯಾಟಿಕ್ ಗೇರ್‌ಬಾಕ್ಸ್) ಆವೃತ್ತಿಯು ಕೂಡಾ ಬಿಡುಗಡೆಯಾಗಲಿದೆ.

ಸುಧಾರಿತ ತಂತ್ರಜ್ಞಾನ ಅಳವಡಿಕೆ ಹಿನ್ನೆಲೆ ರೆಡಿ ಗೊ ಬೆಲೆಗಳು ದುಬಾರಿಯಾಗಲಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿನ ದಟ್ಸನ್ ಮಾದರಿಗಳಿಂತ 30ರಿಂದ 40 ಸಾವಿರದಷ್ಟು ಹೆಚ್ಚು ಬೆಲೆ ನಿಗದಿಯಾಗುವ ಸಾಧ್ಯತೆಗಳಿವೆ.

ಒಟ್ಟಿನಲ್ಲಿ ಮುಂದಿನ ತಿಂಗಳು ಬಿಡುಗಡೆಯಾದ ನಂತರವೇ ಬೆಲೆಗಳ ಬಗ್ಗೆ ನಿಖರ ಮಾಹಿತಿ ದೊರೆಯಲಿದ್ದು, ಡಟ್ಸನ್ ರೆಡಿ ಗೊ ಹ್ಯಾಚ್‌ಬ್ಯಾಕ್ ಭರ್ಜರಿ ಮಾರಾಟಗೊಳ್ಳುವ ನೀರಿಕ್ಷೆಯಲ್ಲಿದೆ.

ಇನ್ನು ಈ ಹಿಂದೆಯೂ ಭಾರತೀಯ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ಡಟ್ಸನ್, ರೆಡಿ ಗೊ ಆವೃತ್ತಿ ಮೂಲಕ ಮತ್ತೊಂದು ಮೈಲಿಗಲ್ಲು ಸಾಧಿಸುವುದರಲ್ಲಿ ಯಾವುದೇ ಸಂದೇಹವಿಲ್ಲ.


Click it and Unblock the Notifications








