ಮುಂಬೈ ಪ್ರವಾಹದಲ್ಲಿ ಕೆಟ್ಟು ನಿಂತು ಕಾರುಗಳಿಗೆ ಫೋರ್ಡ್‌ನಿಂದ ಆಫರ್

ಕಳೆದ ವಾರ ವಾಣಿಜ್ಯ ನಗರಿ ಮುಂಬೈನಲ್ಲಿ ಸುರಿದ ಮಹಾಮಳೆಯಿಂದ ಪ್ರವಾಹ ಸೃಷ್ಠಿಯಾಗಿ ಸಾವಿರಾರು ಕಾರುಗಳು ಮೂಲೆ ಸೇರಿದ್ದವು.

By Praveen

ಕಳೆದ ವಾರ ವಾಣಿಜ್ಯ ನಗರಿ ಮುಂಬೈನಲ್ಲಿ ಸುರಿದ ಮಹಾಮಳೆಯಿಂದ ಪ್ರವಾಹ ಸೃಷ್ಠಿಯಾಗಿ ಸಾವಿರಾರು ಕಾರುಗಳು ಮೂಲೆ ಸೇರಿದ್ದವು. ಹೀಗಾಗಿ ತನ್ನ ಗ್ರಾಹಕರ ಸಹಾಯಕ್ಕೆ ಧಾವಿಸಿರುವ ಫೋರ್ಡ್ ಇಂಡಿಯಾ ಸಂಸ್ಥೆಯು ಪ್ರವಾಹ ಬಾಧಿತ ಕಾರುಗಳಿಗೆ ರಿಯಾಯ್ತಿ ದರದಲ್ಲಿ ಸೇವೆ ನೀಡಲು ಮುಂದಾಗಿದೆ.

ಮುಂಬೈ ಪ್ರವಾಹದಲ್ಲಿ ಕೆಟ್ಟು ನಿಂತು ಕಾರುಗಳಿಗೆ ಫೋರ್ಡ್‌ನಿಂದ ಆಫರ್

ಸತತ ಒಂದು ವಾರಗಳ ಕಾಲ ಮುಂಬೈನಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಪ್ರವಾಹ ಸೃಷ್ಠಿಯಾಗಿ ಸಾವಿರಾರು ಕಾರು ಮಾದರಿಗಳು ಕೆಟ್ಟು ನಿಂತಿವೆ. ಹೀಗಾಗಿ ತನ್ನ ಉತ್ಪಾದಿತ ಕಾರು ಮಾದರಿಗಳಿಗೆ ಪ್ರವಾಹ ಬಾಧಿತ ಕಾರುಗಳಿಗೆ ರಿಯಾಯ್ತಿ ದರದಲ್ಲಿ ಸೇವೆ ನೀಡಲು ಮುಂದಾಗಿರುವ ಫೋರ್ಡ್ ಇಂಡಿಯಾ ಸಂಸ್ಥೆಯು ಇದಕ್ಕಾಗಿ ಹೊಸ ಯೋಜನೆ ರೂಪಿಸಿದೆ.

ಮುಂಬೈ ಪ್ರವಾಹದಲ್ಲಿ ಕೆಟ್ಟು ನಿಂತು ಕಾರುಗಳಿಗೆ ಫೋರ್ಡ್‌ನಿಂದ ಆಫರ್

ಪ್ರವಾಹದಲ್ಲಿ ಸಿಲುಕಿದ್ದ ಬಹುತೇಕ ಕಾರುಗಳ ಎಂಜಿನ್ ನಿಷ್ಕ್ರೀಯಗೊಂಡಿದ್ದು, ಫ್ಯೂಲ್ ಟ್ಯಾಂಕ್‌ಗಳಲ್ಲೂ ಕೂಡಾ ನೀರು ಹೊಕ್ಕಿದೆ. ಪರಿಣಾಮ ಕಾರುಗಳು ಸಂಪೂರ್ಣ ಕೆಟ್ಟು ನಿಂತಿದ್ದು, ಬಿಡಿಭಾಗಗಳ ಖರೀದಿಗೆ ಗ್ರಾಹಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಮುಂಬೈ ಪ್ರವಾಹದಲ್ಲಿ ಕೆಟ್ಟು ನಿಂತು ಕಾರುಗಳಿಗೆ ಫೋರ್ಡ್‌ನಿಂದ ಆಫರ್

ಕಾರಿನ ಒಳಭಾಗದಲ್ಲಿ ಮಳೆ ನೀರು ಹೊಕ್ಕಿದ ಪರಿಣಾಮ ಲೆದರ್ ಸೀಟುಗಳು ಹಾಳಾಗಿದ್ದು, ಕೆಲವು ಬಿಡಿಭಾಗಗಳ ಕಾರ್ಯ ಕೂಡಾ ಸ್ಥಗಿತಗೊಂಡಿದೆ. ಈ ಹಿನ್ನೆಲೆ ಗ್ರಾಹಕರ ಸಹಾಯಕ್ಕೆ ದಾವಿಸಿರುವ ಫೋರ್ಡ್ ಇಂಡಿಯಾ ಸಂಸ್ಥೆಯು ನಿಷ್ಕ್ರೀಯ ಎಂಜಿನ್‌ಗಳನ್ನು ಸರಿಪಡಿಸುವುದಾಗಿ ಭರವಸೆ ನೀಡಿದೆ.

Recommended Video

2017 Datsun redi-GO 1.0 Litre Review: Specs
ಮುಂಬೈ ಪ್ರವಾಹದಲ್ಲಿ ಕೆಟ್ಟು ನಿಂತು ಕಾರುಗಳಿಗೆ ಫೋರ್ಡ್‌ನಿಂದ ಆಫರ್

ಇದಕ್ಕಾಗಿಯೇ 1800-209-7400 ಅಥವಾ 1800-103-7400 ಸಹಯಾವಾಣಿ ತೆರೆದಿರುವ ಫೋರ್ಡ್ ಇಂಡಿಯಾ ಸಂಸ್ಥೆಯು ಬಿಡಿಭಾಗಗಳ ಮೇಲೆ ಶೇ.50 ರಿಯಾಯ್ತಿ ಮತ್ತು ಸೇವಾ ಶುಲ್ಕುದ ಮೇಲೆ ಶೇ.50ರಷ್ಟು ರಿಯಾಯ್ತಿ ದರದಲ್ಲಿ ಸೇವೆ ಒದಗಿಸುವ ಭರವಸೆ ನೀಡಿದೆ.

ಮುಂಬೈ ಪ್ರವಾಹದಲ್ಲಿ ಕೆಟ್ಟು ನಿಂತು ಕಾರುಗಳಿಗೆ ಫೋರ್ಡ್‌ನಿಂದ ಆಫರ್

ಈ ಕುರಿತು ಮಾತನಾಡಿರುವ ಫೋರ್ಡ್ ಇಂಡಿಯಾ ಹಿರಿಯ ಅಧಿಕಾರಿ ಎನ್. ಪ್ರಭು 'ಮುಂಬೈ ಮಹಾಮಳೆಯಿಂದಾಗಿ ಜನತೆ ಸಂಕಷ್ಟಕ್ಕೆ ಸಿಲುಕಿದ್ದು, ಪರಿಸ್ಥಿತಿ ತಿಳಿಗೊಳಿಸುವ ನಿಟ್ಟಿನಲ್ಲಿ ಫೋರ್ಡ್ ಇಂಡಿಯಾ ಗ್ರಾಹಕರಿಗೆ ವೃತ್ತಿಪರ ತಂಡದೊಂದಿಗೆ ರಿಯಾಯ್ತಿ ದರದಲ್ಲಿ ಸೇವೆ ಒದಗಿಸುವ ಯೋಜನೆ ಇದಾಗಿದೆ' ಎಂದಿದ್ದಾರೆ.

ಮುಂಬೈ ಪ್ರವಾಹದಲ್ಲಿ ಕೆಟ್ಟು ನಿಂತು ಕಾರುಗಳಿಗೆ ಫೋರ್ಡ್‌ನಿಂದ ಆಫರ್

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಪ್ರವಾಹದಲ್ಲಿ ಸಿಲುಕಿದ ಪರಿಣಾಮ ಮುಂಬೈನಲ್ಲಿ ಸಾವಿರಾರು ಕಾರುಗಳು ಕೆಟ್ಟು ನಿಂತಿದ್ದು, ಕಾರುಗಳ ರಿಫೇರಿಗಾಗಿ ಮಾಲೀಕರು ಪರದಾಡುವಂತಾಗಿದೆ. ಇಂತಹ ಸಂದರ್ಭದಲ್ಲಿ ಕಾರು ಮಾಲೀಕರ ಸಹಾಯಕ್ಕೆ ಧಾವಿಸಿರುವ ಫೋರ್ಡ್ ಇಂಡಿಯಾ ಸಂಸ್ಥೆಯು ರಿಯಾಯ್ತಿ ದರದಲ್ಲಿ ಸೇವೆ ನೀಡಲು ಮುಂದಾಗಿರುವುದು ನಿಜಕ್ಕೂ ಮೆಚ್ಚುವಂತದ್ದು.

Article Published On: Thursday, September 7, 2017, 11:25 [IST]
English summary
Read in Kannada about Ford India Extends Service Support For Mumbai & East India Flood Affected Cars.
Read more on ಫೋರ್ಡ್ ford
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+