ಜಿಎಸ್‌ಟಿ ಎಫೆಕ್ಟ್: ಐಷಾರಾಮಿ ಕಾರಿನ ಬೆಲೆ ಇಳಿಕೆ- ಟ್ರ್ಯಾಕ್ಟರ್‌ಗಳ ಬೆಲೆ ಏರಿಕೆ..!!
ಜುಲೈ 1ರಿಂದ ಜಾರಿಗೆ ಬರುತ್ತಿರುವ ಏಕರೂಪದ ತೆರಿಗೆ ನೀತಿ ಆಟೋ ಉದ್ಯಮದ ಮೇಲೂ ಭಾರೀ ಪರಿಣಾಮ ಬೀರುತ್ತಿದ್ದು, ಕೃಷಿ ಉಪಕರಣಗಳ ಬೆಲೆಗಳು ಕೂಡಾ ದುಬಾರಿಯಾಗಲಿವೆ.
ಜುಲೈ 1ರಿಂದ ಜಾರಿಗೆ ಬರುತ್ತಿರುವ ಏಕರೂಪದ ತೆರಿಗೆ ನೀತಿ ಆಟೋ ಉದ್ಯಮದ ಮೇಲೂ ಭಾರೀ ಪರಿಣಾಮ ಬೀರುತ್ತಿದ್ದು, ಕೃಷಿ ಉಪಕರಣಗಳ ಬೆಲೆಗಳು ಕೂಡಾ ದುಬಾರಿಯಾಗಲಿವೆ.

ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ಜಿಎಸ್‌ಟಿ ಮಸೂದೆ ಪರ-ವಿರೋಧಕ್ಕೆ ಕಾರಣವಾಗಿದ್ದು, ಆಟೋ ಉದ್ಯಮದ ಮೇಲೆ ಹತ್ತು ಹಲವು ಪರಿಣಾಮಗಳನ್ನು ಬಿರುತ್ತಿದೆ.

ಯಾಕೇಂದ್ರೆ ಐಷಾರಾಮಿ ಕಾರುಗಳ ಮೇಲಿನ ಸೆಸ್ ತೆಗೆದು ಹಾಕಿರುವ ಕೇಂದ್ರ ಸರ್ಕಾರವು, ಕೃಷಿ ಸಕರಣೆಗಳ ಮೇಲಿನ ತೆರಿಗೆ ಹೆಚ್ಚಿಸಿ ಟೀಕೆಗೆ ಗುರಿಯಾಗಿದೆ.

ಈ ಹಿಂದೆ ಇದ್ದ ಶೇ. 18ರಷ್ಟು ತೆರಿಗೆಯನ್ನು 28ಕ್ಕೆ ಹೆಚ್ಚಿಸಲಾಗಿದ್ದು, ಐಷಾರಾಮಿ ಕಾರುಗಳ ಮೇಲಿನ ಸೆಸ್ ತೆಗೆದು ಹಾಕಿ ಟ್ರ್ಯಾಕ್ಟರ್‌ಗಳ ಮೇಲಿನ ತೆರಿಗೆ ಹೆಚ್ಚಿಸಿರುವುದು ಆಟೋ ಉತ್ಪಾದಕರಲ್ಲೇ ಅಸಮಾಧಾನಕ್ಕೆ ಕಾರಣವಾಗಿದೆ.

ಸದ್ಯ ಹೊಸ ತೆರಿಗೆ ವ್ಯವಸ್ಥೆಗಳು ಜಾರಿಗೆ ಬಂದಲ್ಲಿ ಟ್ರ್ಯಾಕ್ಟರ್‌ಗಳ ಬೆಲೆ 25ರಿಂದ 30 ಸಾವಿರದಷ್ಟು ಹೆಚ್ಚಳವಾಗಲಿದ್ದು, ತೆರಿಗೆ ವಿನಾಯ್ತಿ ಪಡೆದಿರುವ ಐಷಾರಾಮಿ ಕಾರು ಉತ್ಪಾದಕರು ಈಗಾಗಲೇ ಭರ್ಜರಿ ಡಿಸ್ಕೌಂಟ್ ಘೋಷಣೆ ಮಾಡುತ್ತಿದ್ದಾರೆ.

ಈ ನಡುವೆ ಕೃಷಿ ಪರಿಕರಗಳ ಮೇಲಿನ ತೆರಿಗೆ ಹೆಚ್ಚಳ ಕುರಿತಂತೆ ಕೇಂದ್ರಕ್ಕೆ ಮನವಿ ಮಾಡಿರುವ ಟಿಎಂಎ (ಟ್ರ್ಯಾಕ್ಟರ್ ಉತ್ಪಾದಕರ ಒಕ್ಕೂಟ) ಕೃಷಿ ಉಪಕರಣಗಳ ಮೇಲಿನ ತೆರಿಗೆ ತಗ್ಗಿಸುವಂತೆ ಬೇಡಿಕೆ ಸಲ್ಲಿಸಿವೆ.

ಐಷಾರಾಮಿ ಕಾರು ಉತ್ಪಾದನೆ ಮೇಲಿನ ಸೆಸ್ ತೆಗೆದು ಹಾಕಿರುವಂತೆ ಟ್ರ್ಯಾಕ್ಟರ್ ಮೇಲಿನ ಸೆಸ್ ತೆಗೆದು ಹಾಕಿ ಶೇ.28ರಷ್ಟು ನಿಗದಿಯಾಗಿರುವ ತೆರಿಗೆಯನ್ನು ಶೇ.18ಕ್ಕೆ ಇಳಿಕೆ ಮಾಡಬೇಕೆಂದು ಟಿಎಂಎ ಕೇಂದ್ರಕ್ಕೆ ಪ್ರಸ್ತಾಪ ಸಲ್ಲಿಸಿವೆ.

ಈ ಬಗ್ಗೆ ಮಾತನಾಡಿರುವ ಟಫೆ ಟ್ರ್ಯಾಕ್ಟರ್ ಚೇರ್‌ಮನ್ ಸಿಇಒ ಮಲ್ಲಿಕ್ ಶ್ರೀನಿವಾಸನ್, ಕೇಂದ್ರದ ಇಬ್ಬನಿ ನೀತಿಯನ್ನು ಖಂಡಿಸಿದ್ದಾರೆ. ಕೃಷಿ ಉಪಕರಣಗಳ ಮೇಲೆ ತೆರಿಗೆ ವಿನಾಯ್ತಿ ನೀಡಬೇಕಿದ್ದ ಕೇಂದ್ರವು, ಐಷಾರಾಮಿ ಕಾರು ಉತ್ಪಾದಕರಿಗೆ ಮಣೆಹಾಕಿರುವುದು ಸರಿಯಲ್ಲ ಎಂದಿದ್ದಾರೆ.

ಡ್ರೈವ್ ಸ್ಪಾರ್ಕ್ ಅಭಿಪ್ರಾಯ
ದೇಶದಲ್ಲಿ ಜಿಎಸ್‌ಟಿ ಜಾರಿಗೆ ಬರುತ್ತಿರುವ ಒಂದು ಒಳ್ಳೆಯ ನಿರ್ಧಾರವೇ ಆಗಿದ್ದರು, ತೆರಿಗೆ ವಿಧಿಸುವಲ್ಲಿ ಕೇಂದ್ರವು ಕೆಲವು ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ಹೀಗಾಗಿ ಜಿಎಸ್‌ಟಿ ಜಾರಿಗೂ ಮುನ್ನ ತೆರಿಗೆ ಪದ್ದತಿಯನ್ನು ಮತ್ತೊಮ್ಮೆ ಪರಾಮರ್ಶೆ ಮಾಡುವ ಅವಶ್ಯಕತೆಯಿದೆ.


Click it and Unblock the Notifications








