ಅಪ್ಪನಿಗೆ ಐಷಾರಾಮಿ ಗಿಫ್ಟ್ ಕೊಟ್ಟ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ

Written By:

ಟೀಂ ಇಂಡಿಯಾದ ಭರವಸೆಯ ಆಟಗಾರ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರು ತಮ್ಮ ತಂದೆಗೆ ಅಚ್ಚರಿಯ ಉಡುಗೊರೆಯೊಂದನ್ನು ನೀಡುವ ಮೂಲಕ ಭಾರೀ ಚರ್ಚೆಗೆ ಕಾರಣವಾಗಿದ್ದು, ಸ್ಪೆಷಲ್ ಗಿಫ್ಟ್ ಕುರಿತಾದ ಮಾಹಿತಿ ಇಲ್ಲಿದೆ.

To Follow DriveSpark On Facebook, Click The Like Button
ಅಪ್ಪನಿಗೆ ಐಷಾರಾಮಿ ಗಿಫ್ಟ್ ಕೊಟ್ಟ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ

ಪ್ರತಿಯೊಬ್ಬರಿಗೂ ತಮ್ಮ ತಂದೆ ತಾಯಿಗಳಿಗೆ ಎನ್ನಾದ್ರೂ ಗಿಫ್ಟ್ ಕೊಡಬೇಕೆಂಬ ಮಹದಾಸೆ ಇದ್ದೇ ಇರುತ್ತೆ. ಅಂತೆಯೇ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಕೂಡಾ ತಮ್ಮ ತಂದೆಗೆ ಪ್ರೀತಿಯ ಉಡುಗೊರೆ ಒಂದನ್ನು ನೀಡಿರುವುದು ಭಾರೀ ಸುದ್ಧಿಯಾಗಿದೆ.

ಅಪ್ಪನಿಗೆ ಐಷಾರಾಮಿ ಗಿಫ್ಟ್ ಕೊಟ್ಟ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ

ನಮ್ಮ ಏಳಿಗೆಗಾಗಿ ತ್ಯಾಗ ಮಾಡಿರುವ ತಂದೆ ತಾಯಿಗಳಿಗೆ ಏನು ನೀಡಿದರೂ ಸಾಲದು ಎಂದು ಟ್ವೀಟ್‌ನಲ್ಲಿ ಹೇಳಿಕೊಂಡಿರುವ ಪಾಂಡ್ಯ, ಇತ್ತೀಚೆಗೆ ಬಿಡುಗಡೆಯಾಗಿರುವ 2017 ಜೀಪ್ ಕಂಪಾಸ್ ಎಸ್‌ಯುವಿ ಕಾರನ್ನು ಗಿಫ್ಟ್ ಕೊಟ್ಟಿದ್ದಾರೆ.

ಅಪ್ಪನಿಗೆ ಐಷಾರಾಮಿ ಗಿಫ್ಟ್ ಕೊಟ್ಟ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ

ಗಿಫ್ಟ್ ಪಡೆದ ತಂದೆಯ ಮುಖದಲ್ಲಿ ಅರಳಿದ ನಗು ಹಾಗೂ ಖುಷಿಯನ್ನು ನೋಡಿ ತಾವೂ ಸಂತಸಪಟ್ಟಿರೋದಾಗಿ ಹೇಳಿಕೊಂಡಿರುವ ಪಾಂಡ್ಯ, ತಮ್ಮ ಕುಟುಂಬ ಜೊತೆಗಿನ ಸಂತಸ ಕ್ಷಣಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಅಪ್ಪನಿಗೆ ಐಷಾರಾಮಿ ಗಿಫ್ಟ್ ಕೊಟ್ಟ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ

ಹಾರ್ದಿಕ್ ಪಾಂಡ್ಯ ನೀಡಿರುವ ವಿಶೇಷ ಉಡುಗೊರೆ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಪಾಂಡ್ಯ ಅವರ ತಂದೆ ಕೂಡಾ ಮಗನ ಪ್ರೀತಿಗೆ ನಾನು ಆಭಾರಿ ಎನ್ನುವ ಮೂಲಕ ಪಾಂಡ್ಯ ಕ್ರಿಕೆಟ್ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದಾರೆ.

ಅಪ್ಪನಿಗೆ ಐಷಾರಾಮಿ ಗಿಫ್ಟ್ ಕೊಟ್ಟ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ

ಇನ್ನು ಪಾಂಡ್ಯ ನೀಡಿರುವ ಭರ್ಜರಿ ಗಿಫ್ಟ್ ಬಗ್ಗೆ ಹೇಳುವುದಾದರೇ 'ಮೇಡ್ ಇನ್ ಇಂಡಿಯಾ ಖ್ಯಾತಿ ಹೊಂದಿರುವ 2017 ಜೀಪ್ ಕಂಪಾಸ್ ಹಲವು ವಿಶೇಷತೆಗಳಿಂದ ಕೂಡಿದೆ ಎಂದರೇ ತಪ್ಪಾಗಲಾರದು. ಯಾಕೇಂದ್ರೆ ಹೊಸ ಮಾದರಿಯ ಜೀಪ್ ಕಂಪಾಸ್ ಮೊದಲ ಬಾರಿಗೆ ಪೂರ್ಣ ಪ್ರಮಾಣದಲ್ಲಿ ದೇಶಿಯವಾಗಿ ಉತ್ಪಾದನೆಗೊಂಡಿದೆ.

ಅಪ್ಪನಿಗೆ ಐಷಾರಾಮಿ ಗಿಫ್ಟ್ ಕೊಟ್ಟ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಇನ್ನು ಮುಂಬರುವ ಆಗಸ್ಟ್ 20ರಿಂದ ಆರಂಭವಾಗಲಿರುವ ಐದು ಪಂದ್ಯಗಳ ಏಕದಿನ ಅಂತಾರಾಷ್ಟ್ರೀಯ ಪಂದ್ಯ ಹಾಗೂ ಏಕೈಕ ಟಿ20 ಪಂದ್ಯಗಳಲ್ಲಿ ಹಾರ್ದಿಕ್ ಅವರು ಮಹತ್ವದ ಪಾತ್ರವಹಿಸುವ ನಿರೀಕ್ಷೆಯಿದ್ದು, ಇದಕ್ಕೂ ಮುನ್ನ ತಮ್ಮ ತಂದೆಗೆ ವಿಶೇಷ ಗಿಫ್ಟ್ ನೀಡಿರುವುದು ಮತ್ತೊಂದು ವಿಶೇಷ.

Tata Tiago XTA AMT Launched In India | In Kannada - DriveSpark ಕನ್ನಡ
ಅಪ್ಪನಿಗೆ ಐಷಾರಾಮಿ ಗಿಫ್ಟ್ ಕೊಟ್ಟ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ

ಭಾರತದಲ್ಲಿ ಜುಲೈ 31ರಂದು ಬಿಡುಗಡೆಯಾಗಿ ಭರ್ಜರಿ ಮಾರಾಟಗೊಳ್ಳುತ್ತಿರುವ ಜೀಪ್ ಕಂಪಾಸ್ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಅತ್ಯುತ್ತಮ ಬೆಲೆಗಳಿಗೆ ಬಿಡುಗಡೆಯಾದ 'ಮೇಡ್ ಇನ್ ಇಂಡಿಯಾ' ಜೀಪ್ ಕಂಪಾಸ್

Read more on ಜೀಪ್ jeep
English summary
Read in Kannada about India cricketer Hardik Pandya gave a pleasant surprise to his father by gifting him a brand new car.
Please Wait while comments are loading...

Latest Photos