ಲೆಕ್ಸಸ್ ಎನ್ಎಕ್ಸ್ 300ಎಚ್ ಎಸ್‌ಯುವಿ ಕಾರು ಭಾರತದಲ್ಲಿ ಬಿಡುಗಡೆ: ಬೆಲೆ ರೂ.53.18 ಲಕ್ಷ
ಲೆಕ್ಸಸ್ ಇಂಡಿಯಾ ದೇಶದಲ್ಲಿ ಎನ್‌ಎಕ್ಸ್ 300ಎಚ್ ಎಸ್‌ಯುವಿ ಕಾರನ್ನು ಪ್ರಾರಂಭಿಸಿದೆ. ಈ ಲೆಕ್ಸಸ್ ಎನ್ಎಕ್ಸ್ 300ಎಚ್ ಕಾರು ರೂ.53.18 ಲಕ್ಷ ಎಕ್ಸ್ ಶೋರೂಂ(ಇಂಡಿಯಾ) ಬೆಲೆಯೊಂದಿಗೆ ಆರಂಭವಾಗುತ್ತದೆ.
ಲೆಕ್ಸಸ್ ಇಂಡಿಯಾ ದೇಶದಲ್ಲಿ ಎನ್‌ಎಕ್ಸ್ 300ಎಚ್ ಎಸ್‌ಯುವಿ ಕಾರನ್ನು ಪ್ರಾರಂಭಿಸಿದೆ. ಈ ಲೆಕ್ಸಸ್ ಎನ್ಎಕ್ಸ್ 300ಎಚ್ ಕಾರು ರೂ.53.18 ಲಕ್ಷ ಎಕ್ಸ್ ಶೋರೂಂ(ಇಂಡಿಯಾ) ಬೆಲೆಯೊಂದಿಗೆ ಆರಂಭವಾಗುತ್ತದೆ.

ನೂತನ ವಿನ್ಯಾಸದ ಲೆಕ್ಸಸ್ ಎನ್ಎಕ್ಸ್ 300ಎಚ್ ವಾಹನವು ಕೆಳೆದ ನವೆಂಬರ್ 17ರಂದು ಭಾರತದಲ್ಲಿ ಅನಾವರಣಗೊಂಡಿತು. ಮೂಲತಃ ಐಷಾರಾಮಿ ಎಸ್‌ಯುವಿ ಕಾರಿನ ಬೇಸಿಕ್ ಆವೃತಿಯು ರೂ.53,18 ಲಕ್ಷ ಮತ್ತು ಉನ್ನತ ಮಾದರಿಯ ಎಫ್ ಸ್ಪೋರ್ಟ್ ಟ್ರಿಮ್ ಮಾದರಿಯು ರೂ.55.58 ಲಕ್ಷ ಎಕ್ಸ್ ಶೋರೂಂ(ಭಾರತ) ಬೆಲೆ ಪಡೆದುಕೊಂಡಿವೆ.

ಹೊಸ ಲೆಕ್ಸಸ್ ಎನ್ಎಕ್ಸ್ 300ಎಚ್ ವಾಹನವು 2.5 ಲೀಟರ್ ನಾಲ್ಕು ಸಿಲಿಂಡರ್ ನೈಸರ್ಗಿಕವಾಗಿ ಆವಿಷ್ಕರಿಸಿದ ಎಂಜಿನ್‌ನೊಂದಿಗೆ ವಿದ್ಯುತ್ ಮೋಟರ್ ಆಯ್ಕೆಯನ್ನು ಪಡೆದುಕೊಂಡಿದೆ.
Recommended Video


ಹೈಬ್ರಿಡ್ ಪವರ್ಟ್ರೈನ್ ಕಾರಿನ ಎರಡು ಮಾರ್ಗದಿಂದ ಒಟ್ಟು 194 ಬಿಎಚ್‌ಪಿ ಅಶ್ವಶಕ್ತಿ ಮತ್ತು 210 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ ಹಾಗು ನಾಲ್ಕು ಚಕ್ರಗಳಿಗೂ ವಿದ್ಯುತ್ ಪೂರೈಸುವ ಇ-ಸಿವಿಟಿ ಗೇರ್ ಬಾಕ್ಸ್ ಎಂಜಿನ್ ಅಳವಡಿಸಲಾಗಿದೆ.

ಇ-ಸಿವಿಟಿ ಗೇರ್ ಬಾಕ್ಸ್ ಆಯ್ಕೆ ಪಡೆದುಕೊಂಡಿರುವ ಈ ಮಾದರಿಯು ಕೇವಲ 9.2 ಸೆಕೆಂಡುಗಳಲ್ಲಿ 100 ಕಿಲೋಮೀಟರ್ ವೇಗವನ್ನು ಪಡೆದುಕೊಳ್ಳುವಷ್ಟು ಬಲಿಷ್ಠವಾಗಿದೆ. ಈ ಕಾರಿನ ಮುಂಭಾಗದ ತಂತುಕೋಶವು ಸಿಗ್ನೇಚರ್ ಸ್ಪಿಂಡಲ್ ಗ್ರಿಲ್, ಪ್ರೊಜೆಕ್ಟರ್ ಹೆಡ್ ಲ್ಯಾಂಪ್‌ಗಳು, ಹಗಲಿನ ಹೊತ್ತು ಬೆಳಗುವ ಎಲ್ಇಡಿ ದೀಪಗಳ ಆಯ್ಕೆಯನ್ನು ಪಡೆದುಕೊಂಡಿದೆ.

ಹೊಸದಾಗಿ ಬಿಡುಗಡೆಯಾದ ಲೆಕ್ಸಸ್ ಎನ್ಎಕ್ಸ್ 300ಎಚ್ ಎಸ್‌ಯುವಿ ಕಾರಿನ ಒಳಭಾಗವು 360 ಡಿಗ್ರಿ ಪನೋರಮಿಕ್ ಸರೌಂಡ್ ವೀಕ್ಷಣೆ ಮಾನಿಟರ್ ಹೊಂದಿದೆ.

ಈ ಮಾನಿಟರ್‌ನಲ್ಲಿ 10.3-ಇಂಚಿನ ವಿಭಜನೆಗೊಂಡ ಸ್ಕ್ರೀನ್ ಮಲ್ಟಿಮೀಡಿಯಾ ಪರದೆ, ಪ್ರಥಮ ದರ್ಜೆಯ ಪವರ್ ಫೋಲ್ಡಿಂಗ್ ಮತ್ತು ಪವರ್ ರೆಕ್ಲೈನಿಂಗ್ ಹಿಂಭಾಗದ ಸೀಟ್‌ಗಳು ಮತ್ತು ಕ್ಲಾರಿಫಿ ತಂತ್ರಜ್ಞಾನ ಹೊಂದಿದೆ.
Trendiing stories in DriveSpark Kannada :
ಮುಕೇಶ್ ಅಂಬಾನಿ ಡ್ರೈವರ್ ಸಂಬಳ ಕೇಳಿದ್ರೆ ಬೆಚ್ಚಿ ಬೀಳ್ತೀರಾ !!
ಯಾಕ್ರಿ ಲಂಚ ಕೊಡ್ತಿರಾ? ಇನ್ಮುಂದೆ ಸುಲಭದಲ್ಲೇ ಸಿಗಲಿದೆ ಡ್ರೈವಿಂಗ್ ಲೈಸೆನ್ಸ್..!!
ಮಾಡಿದ ತಪ್ಪಿಗೆ ರೂ.1.61 ಲಕ್ಷ ದಂಡ ಪಾವತಿ ಮಾಡಿದ ಮಾರುತಿ ಸುಜುಕಿ
ಭಾರತದ ಟಾಪ್ 5 ಕೆಟ್ಟ ಬೈಕುಗಳ ಪಟ್ಟಿ ಇಲ್ಲಿದೆ !!

ಲೆಕ್ಸಸ್ ಎನ್ಎಕ್ಸ್ 300ಎಚ್ ಎಸ್‌ಯುವಿ ಕಾರಿನ ಸುರಕ್ಷತಾ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಎಂಟು ಏರ್ ಬ್ಯಾಗ್‌ಗಳು, ಎಬಿಎಸ್, ವಾಹನ ಸ್ಥಿರತೆ ನಿಯಂತ್ರಣ (ವಿಎಸ್‌ಸಿ), ಎಳೆತ ನಿಯಂತ್ರಣ ವ್ಯವಸ್ಥೆ, ಹಿಂಬದಿಯ ಕ್ಯಾಮರಾ, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಮತ್ತು ಕಾರ್ನರ್ ದೀಪಗಳು ಸೇರಿವೆ.

ಮುಂಬೈ, ನವದೆಹಲಿ, ಗುರಗಾಂವ್ ಮತ್ತು ಬೆಂಗಳೂರಿನಲ್ಲಿರುವ ಲೆಕ್ಸಸ್ ಅತಿಥಿ ಅನುಭವ ಕೇಂದ್ರಗಳಲ್ಲಿ ಈ ಕಾರು ಲಭ್ಯವಿದೆ ಮತ್ತು ಚಂಡೀಗಢ, ಹೈದರಾಬಾದ್, ಚೆನ್ನೈ ಮತ್ತು ಕೊಚ್ಚಿಯಲ್ಲಿನ ಲೆಕ್ಸಸ್ ಅಧಿಕೃತ ಸೇವಾ ಕೇಂದ್ರಗಳಲ್ಲಿ ಕಾರನ್ನು ಖರೀದಿಸಬಹುದು ಹಾಗು ದೇಶದಾದ್ಯಂತ ಏಕರೂಪದ ಬೆಲೆಗೆ ಮಾರಾಟಗೊಳ್ಳಲಿದೆ.


Click it and Unblock the Notifications








