ಜಿಎಸ್‌ಟಿ ಎಫೆಕ್ಟ್- ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್..!!

Written By:

ಜುಲೈ 1 ರಿಂದ ದೇಶಾದ್ಯಂತ ಏಕರೂಪದ ತೆರಿಗೆ ಪದ್ಧತಿ ಜಿಎಸ್‌ಟಿ ಜಾರಿ ಬರುತ್ತಿದ್ದು, ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್ ನೀಡಲಾಗುತ್ತಿದೆ.

ಪ್ರಮುಖ ಕಾರು ಉತ್ಪಾದನಾ ಸಂಸ್ಥೆಗಳಾದ ಟೊಯೊಟಾ, ಮಾರುತಿ ಸುಜುಕಿ, ಹ್ಯುಂಡೈ ಮತ್ತು ಮಹೀಂದ್ರಾ ಸಂಸ್ಥೆಗಳು ತಮ್ಮ ಪ್ರಮುಖ ಕಾರು ಆವೃತ್ತಿಗಳ ಖರೀದಿ ಮೇಲೆ ವಿಶೇಷ ರಿಯಾಯ್ತಿ ಘೋಷಣೆ ಮಾಡಿದ್ದು, ಬೆಲೆಗಳ ವಿವರ ಇಲ್ಲಿದೆ.

ಜಿಎಸ್‌ಟಿ ಎಫೆಕ್ಟ್- ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್..!!

ಡಿಸ್ಕೌಂಟ್ ನೀಡಲು ಕಾರಣವೇನು?

ಜಿಎಸ್‌ಟಿ ಜಾರಿಗೆ ಬರುವುದರಿಂದ ಕಾರು ಉತ್ಪಾದಕರಿಗೆ ಇದುವರೆಗೆ ವಿಧಿಸಲಾಗುತ್ತಿದ್ದ ಹೆಚ್ಚುವರಿ ಸೆನ್ಸ್‌ಗಳು ಕಡಿತವಾಗಲಿದ್ದು, ಏಕರೂಪದ ತೆರಿಗೆಗಳು ಮಾತ್ರ ಅನ್ವಯವಾಗಲಿವೆ.

ಜಿಎಸ್‌ಟಿ ಎಫೆಕ್ಟ್- ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್..!!

ಇದಲ್ಲದೇ ಇಷ್ಟು ದಿನಗಳ ಕಾಲ ರಾಜ್ಯ ಸರ್ಕಾರಗಳು ಬಜೆಟ್ ವೇಳೆ ವಿಧಿಸಲಾಗುತ್ತಿದ್ದ ರಾಜಸ್ವ ತೆರಿಗೆ ಕೂಡಾ ಕಡಿತವಾಗುತ್ತಿದ್ದು, ಅದೇ ಲಾಭವನ್ನು ಗ್ರಾಹಕರಿಗೆ ನೀಡಲು ಕಾರು ಉತ್ಪಾದಕರು ನಿರ್ಧರಿಸಿದ್ದಾರೆ.

ಜಿಎಸ್‌ಟಿ ಎಫೆಕ್ಟ್- ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್..!!

ಯಾವ ಕಾರಿನ ಮೇಲೆ ಎಷ್ಟು ಡಿಸ್ಕೌಂಟ್?

ಮಹೀಂದ್ರಾ ಆ್ಯಂಡ್ ಮಹೀಂದ್ರಾ

ಕಾರು ಖರೀದಿ ಮೇಲೆ ಅತಿ ಹೆಚ್ಚು ಡಿಸ್ಕೌಂಟ್ ಘೋಷಣೆ ಮಾಡಿರುವ ಮಹೀಂದ್ರಾ ಸಂಸ್ಥೆಯು, ಎಕ್ಸ್‌ಯುವಿ 500 ಮತ್ತು ಡಬ್ಲ್ಯು4 ಖರೀದಿ ಮೇಲೆ ರೂ. 49 ಸಾವಿರ ಡಿಸ್ಕೌಂಟ್ ಘೋಷಣೆ ಮಾಡಿದೆ.

ಜಿಎಸ್‌ಟಿ ಎಫೆಕ್ಟ್- ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್..!!

ಇದರ ಜೊತೆ ಡಬ್ಲ್ಯು6, ಡಬ್ಲ್ಯು8 ಖರೀದಿ ಮೇಲೆ ರೂ.73 ಸಾವಿರ ಮತ್ತು ಡಬ್ಲ್ಯು10 ಕಾರು ಖರೀದಿ ಮೇಲೆ ರೂ.84 ಸಾವಿರ ಡಿಸ್ಕೌಂಟ್ ಪಡೆಯಬಹುದಾಗಿದೆ.

ಜಿಎಸ್‌ಟಿ ಎಫೆಕ್ಟ್- ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್..!!

ಮಹೀಂದ್ರಾ ಕೆಯುವಿ ಕಾರು ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್ ನೀಡಲಾಗುತ್ತಿದ್ದು, ಕೆ2, ಕೆ4 ಡೀಸೆಲ್ ಕಾರುಗಳ ಖರೀದಿ ಮೇಲೆ ರೂ.34 ಸಾವಿರ ಹಾಗೂ ಕೆ2, ಕೆ4 ಪೆಟ್ರೋಲ್ ಕಾರು ಖರೀದಿಗೆ ರೂ. 34,600 ಡಿಸ್ಕೌಂಟ್ ದೊರೆಯಲಿದೆ.

ಜಿಎಸ್‌ಟಿ ಎಫೆಕ್ಟ್- ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್..!!

ಟೊಯೊಟಾ

ಜಪಾನ್ ಮೂಲದ ಕಾರು ಉತ್ಪಾದನಾ ಸಂಸ್ಥೆ ಟೊಯೊಟಾ ತನ್ನ ಪ್ರಮುಖ ಕಾರು ಮಾದರಿ ಫಾರ್ಚೂನರ್ ಮೇಲೆ 1.20 ಲಕ್ಷ ರೂಪಾಯಿ ರಿಯಾಯ್ತಿ ಘೋಷಣೆ ಮಾಡಿದೆ.

ಜಿಎಸ್‌ಟಿ ಎಫೆಕ್ಟ್- ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್..!!

ಮಾರುತಿ ಸುಜುಕಿ

ದೇಶಿಯವಾಗಿ ಅತಿಹೆಚ್ಚು ಕಾರು ಉತ್ಪಾದನೆ ಮಾಡುವ ಮಾರುತಿ ಸುಜುಕಿ ಕೂಡಾ ಕಾರು ಖರೀದಿ ಮೇಲೆ ವಿಶೇಷ ರಿಯಾಯ್ತಿ ಘೋಷಿಸಿದೆ.

ಜಿಎಸ್‌ಟಿ ಎಫೆಕ್ಟ್- ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್..!!

ಇಗ್ನಿಸ್ ಖರೀದಿ ಮೇಲೆ ರೂ.3,400 ಡಿಸ್ಕೌಂಟ್ ಘೋಷಣೆ ಮಾಡಿರುವ ಮಾರುತಿ, ಇತರೆ ಕಾರುಗಳ ಮೇಲೆ ಡಿಸ್ಕೌಂಟ್ ದರಗಳನ್ನು ಜಿಎಸ್‌ಟಿ ಜಾರಿ ನಂತರ ಘೋಷಣೆ ಮಾಡಲಿದೆ.

ಜಿಎಸ್‌ಟಿ ಎಫೆಕ್ಟ್- ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್..!!

ಹ್ಯುಂಡೈ

ದಕ್ಷಿಣ ಕೊರಿಯಾದ ಪ್ರತಿಷ್ಠಿತ ಕಾರು ಉತ್ಪಾದನಾ ಸಂಸ್ಥೆಯಾಗಿರುವ ಹ್ಯುಂಡೈ ಕೂಡಾ ತನ್ನ ಪ್ರಮುವ ಎಸ್‌ಯುವಿ ಹಾಗೂ ಎಂಯುಎಸ್ ಮಾದರಿಗಳ ಮೇಲೆ ಸುಮಾರು ರೂ.60 ಸಾವಿರ ಡಿಸ್ಕೌಂಟ್ ಪ್ರಕಟಿಸಲು ನಿರ್ಧರಿಸಿವೆ.

ಜಿಎಸ್‌ಟಿ ಎಫೆಕ್ಟ್- ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್..!!

ಕೇವಲ ಸಾಂಪ್ರದಾಯಿಕ ಕಾರು ಉತ್ಪಾದಕರು ಮಾತ್ರವಲ್ಲದೇ ಐಷಾರಾಮಿ ಕಾರು ಉತ್ಪಾದಕರು ಕೂಡಾ ಜಿಎಸ್‌ಟಿ ಜಾರಿಯಾಗುತ್ತಿರುವ ಹಿನ್ನೆಲೆ ದರಗಳಲ್ಲಿ ಭಾರೀ ಕಡಿತಗೊಳಿಸಿದ್ದಾರೆ.

ಜಿಎಸ್‌ಟಿ ಎಫೆಕ್ಟ್- ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್..!!

ಜರ್ಮನಿ ಮೂಲದ ಐಷಾರಾಮಿ ಉತ್ಪಾದನಾ ಸಂಸ್ಥೆ ಮರ್ಸಿಡಿಸ್ ಬೆಂಝ್ ತನ್ನ ಪ್ರಮುಖ ಕಾರು ಮಾದರಿಗಳ ಮೇಲೆ ಶೇಕಡಾ 2 ರಿಂದ 9ರಷ್ಟು ರಿಯಾಯ್ತಿ ಘೋಷಣೆ ಮಾಡಿದೆ.

ಜಿಎಸ್‌ಟಿ ಎಫೆಕ್ಟ್- ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್..!!

ಇನ್ನು ಜಿಎಸ್‌ಟಿ ಜಾರಿಯಾದಲ್ಲಿ ಸಣ್ಣ ಕಾರುಗಳ ಬೆಲೆ ಹೆಚ್ಚಳವಾಗುವ ಸಾಧ್ಯತೆಗಳಿದ್ದು, ಸಣ್ಣ ಕಾರುಗಳ ಮೇಲಿನ ಉತ್ಪಾದನೆ ಮೇಲೆ ಕೇಂದ್ರ ಸರ್ಕಾರ ಶೇ.3ರಷ್ಟು ಸೆಸ್ಸ್ ಹೆಚ್ಚಲು ನಿರ್ಧರಿಸಿದೆ. ಹೀಗಾಗಿ ಇದು 1200 ಸಿಸಿಗಿಂತ ಹೆಚ್ಚಿನ ಸಾಮಥ್ಯ ಹೊಂದಿರುವ ಕಾರುಗಳಿಗೆ ಮಾತ್ರ ವರವಾಲಿದೆ.

English summary
Read in Kannada about mahindra, maruti suzuki, toyota and hyundai offer huge discounts.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark