ಭಾರತದಲ್ಲಿ ತನ್ನ ಮೊದಲ ಎಲೆಕ್ಟ್ರಿಕ್ ಕಾರು ಪ್ರಾರಂಭಿಸಲು ಮಾರುತಿ ಸುಜುಕಿ ನಿರ್ಧಾರ

ಭಾರತದ ಅತಿದೊಡ್ಡ ಕಾರು ಉತ್ಪಾದಕ ಕಂಪೆನಿಯಾದ ಮಾರುತಿ ಸುಜುಕಿ, ದೇಶದಲ್ಲಿ ಎಲೆಕ್ಟ್ರಿಕ್ ವಾಹನ ವಿಭಾಗವನ್ನು ಪ್ರವೇಶಿಸಲು ಸಿದ್ಧವಾಗಿದೆ. ಈ ಕುರಿತಾಗಿ ಮಾರುತಿ ಸಂಸ್ಥೆಯು ಒಂದಿಷ್ಟು ಮಾಹಿತಿಯನ್ನು ಬಿಟ್ಟುಕೊಟ್ಟಿದೆ.

By Girish

ಭಾರತದ ಅತಿದೊಡ್ಡ ಕಾರು ಉತ್ಪಾದಕ ಕಂಪೆನಿಯಾದ ಮಾರುತಿ ಸುಜುಕಿ, ದೇಶದಲ್ಲಿ ಎಲೆಕ್ಟ್ರಿಕ್ ವಾಹನ ವಿಭಾಗವನ್ನು ಪ್ರವೇಶಿಸಲು ಸಿದ್ಧವಾಗಿದೆ. ಈ ಕುರಿತಾಗಿ ಮಾರುತಿ ಸಂಸ್ಥೆಯು ಒಂದಿಷ್ಟು ಮಾಹಿತಿಯನ್ನು ಬಿಟ್ಟುಕೊಟ್ಟಿದೆ.

ಭಾರತದಲ್ಲಿ ತನ್ನ ಮೊದಲ ಎಲೆಕ್ಟ್ರಿಕ್ ಕಾರು ಪ್ರಾರಂಭಿಸಲು ಮಾರುತಿ ಸುಜುಕಿ ನಿರ್ದಾರ

ಹೌದು, 2020ರ ಹೊತ್ತಿಗೆ ಮಾರುತಿ ಸುಜುಕಿ ಕಂಪೆನಿಯು ಭಾರತದಲ್ಲಿ ತನ್ನ ಮೊದಲ ಎಲೆಕ್ಟ್ರಿಕ್ ಕಾರನ್ನು ಪ್ರಾರಂಭಿಸಲಿದೆ. ಮಾರುತಿ ಸುಜುಕಿ ಚೇರ್ಮನ್ ಆಗಿರುವಂತಹ ಆರ್‌.ಸಿ ಭಾರ್ಗವ ಅವರು, ಕಂಪೆನಿಯು ಭಾರತದಲ್ಲಿ ವಿದ್ಯುತ್ ಕಾರುಗಳನ್ನು ಪರಿಚಯಿಸಲಿದೆ ಎಂದು ದೃಢಪಡಿಸಿದ್ದಾರೆ.

ಭಾರತದಲ್ಲಿ ತನ್ನ ಮೊದಲ ಎಲೆಕ್ಟ್ರಿಕ್ ಕಾರು ಪ್ರಾರಂಭಿಸಲು ಮಾರುತಿ ಸುಜುಕಿ ನಿರ್ದಾರ

ಮಾರುತಿ ಸುಜುಕಿ ಸಂಸ್ಥೆಯ ಬಳಿಯಲ್ಲಿ ಯಾವುದೇ ರೀತಿಯ ಎಲೆಕ್ಟ್ರಿಕ್ ತಂತ್ರಜ್ಞಾನ ಇಲ್ಲದ ಕಾರಣ, ಸುಜುಕಿ ಮತ್ತು ಟೊಯೊಟಾ ಸಂಸ್ಥೆಗಳ ಪಾಲುದಾರಿಕೆಯಡಿಯಲ್ಲಿ ಈ ಎಲೆಕ್ಟ್ರಿಕ್ ಕಾರು ಅಭಿವೃದ್ಧಿಗೊಳ್ಳಲಿದೆ.

ಭಾರತದಲ್ಲಿ ತನ್ನ ಮೊದಲ ಎಲೆಕ್ಟ್ರಿಕ್ ಕಾರು ಪ್ರಾರಂಭಿಸಲು ಮಾರುತಿ ಸುಜುಕಿ ನಿರ್ದಾರ

'ಭಾರತದಲ್ಲಿ 2030ರ ವೇಳೆಗೆ ಎಲ್ಲ ವಾಹನ ತಯಾರಕ ಸಂಸ್ಥೆಗಳು ಎಲೆಕ್ಟ್ರಿಕ್ ಕಾರುಗಳನ್ನು ಪ್ರಾರಂಭಿಸಬೇಕು' ಎಂದು ಸರ್ಕಾರ ನಿರ್ದೇಶನ ನೀಡಿರುವ ಸಮಯದಲ್ಲಿ ಮಾರುತಿ ಕಂಪನಿಯ ಈ ನಿರ್ಧಾರ ಹೆಚ್ಚು ಸದ್ದು ಮಾಡಿದೆ.

Recommended Video

Driverless Auto Rickshaw On Indian Highway
ಭಾರತದಲ್ಲಿ ತನ್ನ ಮೊದಲ ಎಲೆಕ್ಟ್ರಿಕ್ ಕಾರು ಪ್ರಾರಂಭಿಸಲು ಮಾರುತಿ ಸುಜುಕಿ ನಿರ್ದಾರ

ಈ ನಿರ್ದಾರವು ಕೇವಲ ಭಾರತದ ವ್ಯಾಪ್ತಿಯಲ್ಲಿ ಮಾತ್ರ ಇರಲಿದೆ. ಭಾರತದಲ್ಲಿ ತಯಾರಾಗುವ ಮಾರುತಿ ಸುಜುಕಿ ಸಂಸ್ಥೆಯ ವಿದ್ಯುತ್ ವಾಹನಗಳನ್ನು ಕೇವಲ ಭಾರತದಲ್ಲಿ ಮಾತ್ರ ಮಾರಾಟ ಮಾಡಲು ಕಂಪನಿ ನಿರ್ಧರಿಸಿದ್ದೇವೆ ಎಂಬ ಮಾಹಿತಿಯನ್ನು ಭಾರ್ಗವ ಅವರು ನೀಡಿದ್ದಾರೆ.

ಭಾರತದಲ್ಲಿ ತನ್ನ ಮೊದಲ ಎಲೆಕ್ಟ್ರಿಕ್ ಕಾರು ಪ್ರಾರಂಭಿಸಲು ಮಾರುತಿ ಸುಜುಕಿ ನಿರ್ದಾರ

ಮಾರುತಿ ಕಂಪನಿಯ ಮೊದಲ ಎಲೆಕ್ಟ್ರಿಕ್ ಕಾರಿನ ವಿವರಗಳನ್ನು ಕೇಳಿದಾಗ, "ಅದರ ಬಗ್ಗೆ ಯಾವುದೇ ವಿಚಾರವನ್ನು ತಿಳಿಸಲು ಇದು ಸುಸಂದರ್ಭವಲ್ಲ ಎಂದು ಭಾರ್ಗವ ಅವರು ಕೇಳಿದ ಪ್ರೆಶ್ನೆ ಉತ್ತರಿಸಿದ್ದಾರೆ.

ಭಾರತದಲ್ಲಿ ತನ್ನ ಮೊದಲ ಎಲೆಕ್ಟ್ರಿಕ್ ಕಾರು ಪ್ರಾರಂಭಿಸಲು ಮಾರುತಿ ಸುಜುಕಿ ನಿರ್ದಾರ

ಆದರೆ ಮಾರುತಿ ಸುಜುಕಿ ಸಂಸ್ಥೆಯಿಂದ ಬಿಡುಗಡೆಯಾಗುವ ಎಲೆಕ್ಟ್ರಿಕ್ ಕಾರು ಕೈಗೆಟುಕುವ ದರದಲ್ಲಿ ಲಭ್ಯವಿರಲಿದೆ ಮತ್ತು ಈ ವಿದ್ಯುತ್ ವಾಹನಗಳನ್ನು ಸಾಮಾನ್ಯ ಜನರೂ ಕೂಡ ಖರೀದಿಗೆ ಮುಕ್ತವಾಗಿರಲಿದೆ ಎಂದು ತಿಳಿಸಿದರು.

ಭಾರತದಲ್ಲಿ ತನ್ನ ಮೊದಲ ಎಲೆಕ್ಟ್ರಿಕ್ ಕಾರು ಪ್ರಾರಂಭಿಸಲು ಮಾರುತಿ ಸುಜುಕಿ ನಿರ್ದಾರ

ವಿದ್ಯುತ್ ಕಾರಿನ ವಿಚಾರದಲ್ಲಿ ಭಾರತೀಯ ಖರೀದಿದಾರರು ಏನನ್ನು ನಿರೀಕ್ಷಿಸುತ್ತಿದ್ದಾರೆ? ಎಂದು ತಿಳಿಯಲು ಮಾರುತಿ ಸುಜುಕಿ ಸಂಸ್ಥೆಯು ಕೂಡ ಒಂದು ಸಮೀಕ್ಷೆಯನ್ನು ನಡೆಸಲಿದೆ. ಹೊಸ ಎಲೆಕ್ಟ್ರಿಕ್ ಕಾರು 2020ರ ಫೆಬ್ರವರಿ ವೇಳೆಗೆ ಸಿದ್ಧವಾಗಬೇಕಿದೆ.

ಭಾರತದಲ್ಲಿ ತನ್ನ ಮೊದಲ ಎಲೆಕ್ಟ್ರಿಕ್ ಕಾರು ಪ್ರಾರಂಭಿಸಲು ಮಾರುತಿ ಸುಜುಕಿ ನಿರ್ದಾರ

ಪ್ರಸ್ತುತ ಮಹೀಂದ್ರಾ, ಇ2ಓ ಮತ್ತು ಇವೆರಿಟೊ ಕಾರುಗಳನ್ನು ಮಾರಾಟ ಮಾಡುತ್ತಿರುವ ಏಕೈಕ ವಾಹನ ತಯಾರಕ ಕಂಪನಿಯಾಗಿದೆ. 2020ರ ಹೊತ್ತಿಗೆ ದೇಶದಲ್ಲಿ ಮೂರು ಹೊಸ ಇವಿಗಳನ್ನು ಪರಿಚಯಿಸಲೂ ಸಹ ಮಹೀಂದ್ರಾ ಯೋಜಿಸುತ್ತಿದೆ.

ಭಾರತದಲ್ಲಿ ತನ್ನ ಮೊದಲ ಎಲೆಕ್ಟ್ರಿಕ್ ಕಾರು ಪ್ರಾರಂಭಿಸಲು ಮಾರುತಿ ಸುಜುಕಿ ನಿರ್ದಾರ

ಟಾಟಾ ಮೋಟರ್ಸ್ ಕಂಪನಿಯು ಸಹ ಎಲೆಕ್ಟ್ರಿಕ್ ವಾಹನದ ವಿಭಾಗವನ್ನು ಪ್ರವೇಶಿಸುವ ಸುಳಿವು ನೀಡಿದ್ದು, ಭಾರತದ ಎಲ್ಲಾ ಕಾರು ತಯಾರಕ ಕಂಪನಿಗಳೂ ಕೂಡ ಎಲೆಕ್ಟ್ರಿಕ್ ವಾಹನಗಳ ತಯಾರಿಕೆಯ ಕಡೆ ಒಲವು ತೋರಿಸುತ್ತಿರುವುದು ಸ್ವಾಗತಾರ್ಹ ಸಂಗತಿಯಾಗಿದೆ.

Most Read Articles

Kannada
English summary
Maruti Suzuki To Launch Its First Electric Car In India. Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X