ಹೆದ್ದಾರಿಗಳಲ್ಲಿ ಟೋಲ್ ಕಟ್ಟಲು ಹೊಸ ವ್ಯವಸ್ಥೆ- 'ಫಾಸ್ಟ್ ಟ್ಯಾಗ್'ನಿಂದ ಏನ್ ಲಾಭ?

ಇನ್ಮುಂದೆ ನೀವು ಹೆದ್ದಾರಿಗಳಲ್ಲಿ ಟೋಲ್‌ ಕಟ್ಟಲು ಇನ್ಮುಂದೆ ನೀವು ಗಂಟೆಗಟ್ಟಲೇ ಸಾಲುಗಟ್ಟಿ ನಿಲ್ಲಬೇಕಿಲ್ಲ. ಯಾಕೇಂದ್ರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಟೋಲ್ ಪಾವತಿಗೆ 'ಫಾಸ್ಟ್ ಟ್ಯಾಗ್' ವ್ಯವಸ್ಥೆಯನ್ನು ಜಾರಿಗೆ ತರುತ್ತಿದೆ.

By Praveen

ಇನ್ಮುಂದೆ ನೀವು ಹೆದ್ದಾರಿಗಳಲ್ಲಿ ಟೋಲ್‌ ಕಟ್ಟಲು ಇನ್ಮುಂದೆ ನೀವು ಗಂಟೆಗಟ್ಟಲೇ ಸಾಲುಗಟ್ಟಿ ನಿಲ್ಲಬೇಕಿಲ್ಲ. ಯಾಕೇಂದ್ರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಟೋಲ್ ಪಾವತಿಗೆ 'ಫಾಸ್ಟ್ ಟ್ಯಾಗ್' ವ್ಯವಸ್ಥೆಯನ್ನು ಜಾರಿಗೆ ತರುತ್ತಿದೆ.

ಹೆದ್ದಾರಿಗಳಲ್ಲಿ ಟೋಲ್ ಕಟ್ಟಲು ಇನ್ಮುಂದೆ

ಹೀಗಾಗಿಯೇ ಆನ್‌ಲೈನ್ ಮೂಲಕವೇ ಎಲೆಕ್ಟ್ರಾನಿಕ್ ಟ್ಯಾಗ್‌ಗಳನ್ನು ಮಾರಾಟ ಮಾಡಲಾಗುತ್ತಿದ್ದು, ಇವುಗಳಿಗೆ ಮೊಬೈಲ್ ಮಾದರಿಯಲ್ಲಿ ಕರೆನ್ಸಿ ಹಾಕಿಸಿಕೊಂಡು ಟೋಲ್ ಪಾವತಿ ಮಾಡಬಹುದಾಗಿದೆ. ಇದರಿಂದಾಗಿ ನೀವು ಟೋಲ್‌ ಕೇಂದ್ರಗಳಲ್ಲಿ ಹಣ ಪಾವತಿ ಮಾಡಲು ಸರತಿ ಸಾಲಿನಲ್ಲಿ ನಿಲ್ಲುವುದು ತಪ್ಪಲಿದೆ.

ಹೆದ್ದಾರಿಗಳಲ್ಲಿ ಟೋಲ್ ಕಟ್ಟಲು ಇನ್ಮುಂದೆ

ಸೆಪ್ಟೆಂಬರ್‌ ಮೊದಲ ವಾರದಿಂದಲೇ ಹೆದ್ದಾರಿಗಳಲ್ಲಿ ಫಾಸ್ಟ್ ಟ್ಯಾಗ್ ಟೋಲ್ ಗಳು ಕಾರ್ಯನಿರ್ವಹಣೆ ಶುರುವಾಗಲಿದ್ದು, ಫಾಸ್ಟ್ ಟ್ಯಾಗ್ ಹೊಂದಿರುವ ಗ್ರಾಹಕರಿಗೆ ಪ್ರತ್ಯೇಕ ಟೋಲ್ ಪೇ ಲೈನ್ ಮೀಸಲಿರಿಸಲಾಗುತ್ತಿದೆ.

Recommended Video

Triumph Thruxton R Review: Specifications
ಹೆದ್ದಾರಿಗಳಲ್ಲಿ ಟೋಲ್ ಕಟ್ಟಲು ಇನ್ಮುಂದೆ

ಇದಕ್ಕಾಗಿ ಆ್ಯಪ್ ಸ್ಟೋರ್‌ನಿಂದ ಆಂಡ್ರಾಯಿಡ್ ಮತ್ತು ಐಎಸ್ಒ ಮಾದರಿಗಳಿಗೆ ಸರಿಹೊಂದುವ "ಮೈ ಫಾಸ್ಟ್ ಟ್ಯಾಗ್" ಆ್ಯಪ್ ಅನ್ನು ಡೌನ್‌ಲೋಡ್ ಮಾಡಬೇಕಿದ್ದು, ಈ ಮೂಲಕವೇ ನೀವು ಟೋಲ್ ಬಿಲ್‌ ಅನ್ನು ಪಾವತಿ ಮಾಡಬಹುದಾಗಿದೆ.

ಹೆದ್ದಾರಿಗಳಲ್ಲಿ ಟೋಲ್ ಕಟ್ಟಲು ಇನ್ಮುಂದೆ

ಇದಲ್ಲದೇ ಆನ್‌ಲೈನ್ ಅಥವಾ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವೆಬ್ ಸೈಟ್ ಮೂಲಕವು ಫಾಸ್ಟ್ ಟ್ಯಾಗ್‌ಗಳನ್ನು ಬುಕ್ ಮಾಡಬಹುದಾಗಿದ್ದು, ಕೋರಿಯರ್ ಮೂಲಕ ಇವುಗಳನ್ನು ವಿಳಾಸಕ್ಕೆ ಕಳುಹಿಸಿ ಕೊಡಲಾಗುತ್ತದೆ.

ಹೆದ್ದಾರಿಗಳಲ್ಲಿ ಟೋಲ್ ಕಟ್ಟಲು ಇನ್ಮುಂದೆ

ಜೊತೆಗೆ ಟೋಲ್ ಸಮೀಪವೂ ಟ್ಯಾಗ್ ಮಾರಾಟ ಕೇಂದ್ರಗಳನ್ನು ತೆರೆಯಲು ಉದ್ದೇಶಿಸಲಾಗಿದ್ದು, ಟೋಲ್ ಗೇಟ್‌ಗಳು ಇರುವ ಕಡೆ ಒಂದು ಲೈನ್ ಅನ್ನು ಸಂಪೂರ್ಣವಾಗಿ ಟ್ಯಾಗ್ ಹೊಂದಿರುವ ವಾಹನ ಸವಾರರಿಗೆ ಮುಕ್ತವಾಗಿಡಲಾಗುತ್ತದೆ.

ಹೆದ್ದಾರಿಗಳಲ್ಲಿ ಟೋಲ್ ಕಟ್ಟಲು ಇನ್ಮುಂದೆ

ಫಾಸ್ಟ್ ಟ್ಯಾಗ್ ಇರುವ ವಾಹನವು ಟೋಲ್ ಗೇಟ್ ಸಮೀಪಿಸುತ್ತಿದ್ದಂತೆ ಟ್ಯಾಗ್ ಗೆ ಜೋಡಣೆ ಆಗಿರುವ ಅಕೌಂಟ್ ಮೂಲಕ ಹಣ ಕಡಿತವಾಗುವುದಲ್ಲದೇ ನಿಮ್ಮ ಖಾತೆಯಿಂದ ಕಡಿತವಾದ ಮೊತ್ತದ ಸಂಪೂರ್ಣ ವಿವರಣೆ ಕೂಡಾ ನಿಮಗೆ ಸಂದೇಶ ಕೂಡಾ ಬರುತ್ತದೆ.

ಹೆದ್ದಾರಿಗಳಲ್ಲಿ ಟೋಲ್ ಕಟ್ಟಲು ಇನ್ಮುಂದೆ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಟೋಲ್‌ಗಳಲ್ಲಿ ದಿನನಿತ್ಯ ಆಗುತ್ತಿರುವ ಅನಗತ್ಯ ಟ್ರಾಫಿಕ್ ಸಮಸ್ಯೆಯನ್ನು ತಡೆಯಲು ಫಾಸ್ಟ್ ಟ್ಯಾಗ್ ವ್ಯವಸ್ಥೆಯನ್ನು ಜಾರಿ ಮಾಡಲಾಗುತ್ತಿದ್ದು, ಫಾಸ್ಟ್ ಟ್ಯಾಗ್‌ನಿಂದ ಚಾಲಕರು ಗಂಟೆಗಟ್ಟಲೇ ಕಾಯುವುದು ತಪ್ಪಲಿದೆ.

Article Published On: Saturday, August 19, 2017, 11:48 [IST]
English summary
Read in Kannada about NHAI Launches MyFASTag App For Electronic Toll Collection.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+