'ನಿಸ್ಸಾನ್ ಕನೆಕ್ಟ್' ಸ್ಮಾರ್ಟ್‌ಫೋನ್‌ ಅಪ್ಲಿಕೇಶನ್ ಬಿಡುಗಡೆ ಮಾಡಿದ ನಿಸ್ಸಾನ್

Written By:

ಪ್ರಖ್ಯಾತ ನಿಸ್ಸಾನ್ ಇಂಡಿಯಾ ಸಂಸ್ಥೆಯು 'ನಿಸ್ಸಾನ್ ಕನೆಕ್ಟ್' ಎಂಬ ಹೆಸರಿನ ಸಮಗ್ರ ಮಾಹಿತಿ ನೀಡುವ ಸ್ಮಾರ್ಟ್‌ಫೋನ್‌ ಅಪ್ಲಿಕೇಶನ್ ಒಂದನ್ನು ಬಿಡುಗಡೆಗೊಳಿಸಿದೆ.

'ನಿಸ್ಸಾನ್ ಕನೆಕ್ಟ್' ಸ್ಮಾರ್ಟ್‌ಫೋನ್‌ ಅಪ್ಲಿಕೇಶನ್ ಬಿಡುಗಡೆ ಮಾಡಿದ ನಿಸ್ಸಾನ್

ನಿಸ್ಸಾನ್ ಬಿಡುಗಡೆಗೊಳಿಸಲಿರುವ ಈ 'ನಿಸ್ಸಾನ್ ಕನೆಕ್ಟ್' ಅಪ್ಲಿಕೇಶನ್, ನಿಸ್ಸಾನ್ ಇಂಟಲಿಜೆಂಟ್ ಮೊಬಿಲಿಟಿಯಿಂದ ಸ್ಫೂರ್ತಿ ಪಡೆದಿದೆ. ಈ ಅಪ್ಲಿಕೇಶನ್, ಗ್ರಾಹಕರ ಸ್ಮಾರ್ಟ್ ಫೋನ್‌ಗಳ ಸಂಪರ್ಕ ಸಾಧಿಸಲಿದೆ ಮತ್ತು ವರ್ಧಿತ ಚಾಲನೆಯ ಅನುಭವ ನೀಡಲು ಸಹಕಾರಿಯಾಗಲಿದೆ.

'ನಿಸ್ಸಾನ್ ಕನೆಕ್ಟ್' ಸ್ಮಾರ್ಟ್‌ಫೋನ್‌ ಅಪ್ಲಿಕೇಶನ್ ಬಿಡುಗಡೆ ಮಾಡಿದ ನಿಸ್ಸಾನ್

ಇದು ಭಾರತೀಯ ಮಾರುಕಟ್ಟೆಗೆಂದೇ ಅಭಿವೃದ್ಧಿ ಮಾಡಿರುವಂತಹ ಅಪ್ಲಿಕೇಶನ್ ಆಗಿದ್ದು, ಈ ಅಪ್ಲಿಕೇಶನ್ ಮೂಲಕ ಕಾರು ಚಾಲಕ ತನ್ನ ಕುಟುಂಬದ ಸಂಪರ್ಕ ಮಾಡುವಂತಹ ಸೌಲಭ್ಯ ನೀಡಲಾಗಿದೆ.

'ನಿಸ್ಸಾನ್ ಕನೆಕ್ಟ್' ಸ್ಮಾರ್ಟ್‌ಫೋನ್‌ ಅಪ್ಲಿಕೇಶನ್ ಬಿಡುಗಡೆ ಮಾಡಿದ ನಿಸ್ಸಾನ್

ಮೈಕ್ರಾ, ಸನ್ನಿ ಮತ್ತು ಟೆರ್ರನೊ ಕಾರುಗಳಲ್ಲಿ ನಿಸ್ಸಾನ್ ಕನೆಕ್ಟ್ ಸೌಲಭ್ಯ ನೀಡಲಾಗಿದೆ. ಈ ಆಯ್ಕೆಯು ಸುಮಾರು 50 ಪ್ಲಸ್ ಲಕ್ಷಣಗಳನ್ನು ಒದಗಿಸುತ್ತದೆ ಮತ್ತು ಈ ನಿಸ್ಸಾನ್ ಕನೆಕ್ಟ್ ಅಪ್ಲಿಕೇಶನ್ 3 ವರ್ಷದ ಚಂದಾದಾರಿಕೆ ಹೊಂದಿದೆ.

'ನಿಸ್ಸಾನ್ ಕನೆಕ್ಟ್' ಸ್ಮಾರ್ಟ್‌ಫೋನ್‌ ಅಪ್ಲಿಕೇಶನ್ ಬಿಡುಗಡೆ ಮಾಡಿದ ನಿಸ್ಸಾನ್

ಭಾರತದ ರೆನಾಲ್ಟ್ ನಿಸ್ಸಾನ್ ತಂತ್ರಜ್ಞಾನ ಉದ್ಯಮ ಕೇಂದ್ರ(RNTBCI)ವು 'ನಿಸ್ಸಾನ್ ಕನೆಕ್ಟ್' ಅಪ್ಲಿಕೇಶನ್ ಅಭಿವೃದ್ಧಿಪಡಿಸಿದೆ ಮತ್ತು ಈ ಅಪ್ಲಿಕೇಶನ್ ಕಾರ್ಯನಿರ್ವಹಿಸಲು ಪ್ರತ್ಯೇಕ ಸರ್ವೆರ್ ಒಂದನ್ನು ನಿಸ್ಸಾನ್ ಸ್ಥಾಪನೆ ಮಾಡಿದೆ.

'ನಿಸ್ಸಾನ್ ಕನೆಕ್ಟ್' ಸ್ಮಾರ್ಟ್‌ಫೋನ್‌ ಅಪ್ಲಿಕೇಶನ್ ಬಿಡುಗಡೆ ಮಾಡಿದ ನಿಸ್ಸಾನ್

"ನಿಸ್ಸಾನ್ ಕನೆಕ್ಟ್ ನವೀನ ಚೈತನ್ಯದೊಂದಿಗೆ ಬಿಡುಗಡೆಯಾಗಿದ್ದು, ಹೆಚ್ಚು ಸಾಕಾರಗೊಂಡು ಗ್ರಾಹಕರಿಗೆ ವೈವಿಧ್ಯಮಯ ಚಾಲನೆಯ ಅನುಭವ ವರ್ಧಿಸಲು ಸಹಾಯ ಮಾಡಲಿದೆ" ಎಂದು ನಿಸ್ಸಾನ್ ಮೋಟಾರ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಅರುಣ್ ಮಲ್ಹೋತ್ರಾ ತಿಳಿಸಿದರು.

'ನಿಸ್ಸಾನ್ ಕನೆಕ್ಟ್' ಸ್ಮಾರ್ಟ್‌ಫೋನ್‌ ಅಪ್ಲಿಕೇಶನ್ ಬಿಡುಗಡೆ ಮಾಡಿದ ನಿಸ್ಸಾನ್

ಈ ಅಪ್ಲಿಕೇಶನ್ ಕಾರ್ಖಾನೆಯಲ್ಲೇ ಅಳವಡಿಕೆಗೊಂಡು ಗ್ರಾಹಕರ ಸೇವೆಗೆ ತೆರೆದುಕೊಳ್ಳುವ ಕಾರು ತಂತ್ರಜ್ಞಾನವಾಗಿದ್ದು, ಪ್ರತಿಯೊಂದು ಕಾರಿನಲ್ಲಿಯೂ ಇನ್‌ಬಿಲ್ಟ್ ಸಿಮ್ ನೀಡಲಾಗುತ್ತದೆ.

'ನಿಸ್ಸಾನ್ ಕನೆಕ್ಟ್' ಸ್ಮಾರ್ಟ್‌ಫೋನ್‌ ಅಪ್ಲಿಕೇಶನ್ ಬಿಡುಗಡೆ ಮಾಡಿದ ನಿಸ್ಸಾನ್

ಆಂಡ್ರಾಯ್ಡ್, ಐಒಎಸ್ ಮತ್ತು ವಿಂಡೋಸ್ ಸ್ಮಾರ್ಟ್ ಫೋನ್‌ಗಳಿಂದ ನಿಸ್ಸಾನ್ ಕನೆಕ್ಟ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಬಹುದಾಗಿದ್ದು, ನಂತರ ಹತ್ತಿರದ ನಿಸ್ಸಾನ್ ಡೀಲರ್ ಬಳಿ ತೆರಳಿ ಅಪ್ಲಿಕೇಶನ್ ಸಕ್ರಿಯಗೊಳಿಸಬಹುದಾಗಿದೆ.

'ನಿಸ್ಸಾನ್ ಕನೆಕ್ಟ್' ಸ್ಮಾರ್ಟ್‌ಫೋನ್‌ ಅಪ್ಲಿಕೇಶನ್ ಬಿಡುಗಡೆ ಮಾಡಿದ ನಿಸ್ಸಾನ್

ಈ ನಿಸ್ಸಾನ್ ಕನೆಕ್ಟ್ ಅಪ್ಲಿಕೇಶನ್ ಕೆಲವೇ ಕೆಲವು ಮಾದರಿಗಳಲ್ಲಿ ಲಭ್ಯವಿದ್ದು, ಮುಂಬರುವ ದಿನಗಳಲ್ಲಿ ಎಲ್ಲಾ ವಾಹನಗಳಲ್ಲಿ ಅಳವಡಿಕೆ ಮಾಡಲು ಸಂಸ್ಥೆ ಯೋಜನೆ ಹಾಕಿಕೊಂಡಿದೆ. ಗ್ರಾಹಕರಿಗೆ ಈ ಮೂಲಕ ಇಂಧನ ದಕ್ಷತೆ ತಂತ್ರಜ್ಞಾನ ಸೇರಿದಂತೆ ಅಗತ್ಯ ಎಲ್ಲಾ ಡೇಟಾವನ್ನು ಟ್ರ್ಯಾಕ್ ಮಾಡಬಹುದು.

English summary
Nissan India has launched NissanConnect, an integrated information and communication platform that connects with the customer's smartphone to provide enhanced driving experience.
Please Wait while comments are loading...

Latest Photos