ಎಕ್ಸ್‌ಕ್ಲೂಸಿವ್‌- ಸ್ಕೋಡಾ ಒಕ್ಟಿವಿಯಾ ಆರ್‌ಎಸ್ ಖರೀದಿಗೆ ಬುಕ್ಕಿಂಗ್ ಶುರು..!!

Written By:

ಡ್ರೈವ್ ಸ್ಪಾರ್ಕ್‌ಗೆ ಸಿಕ್ಕಿರುವ ವಿಶ್ವಾಸಾರ್ಹ ಮೂಲಗಳ ಪ್ರಕಾರ ಆಗಸ್ಟ್ 30ಕ್ಕೆ ಸ್ಕೋಡಾ ಒಕ್ಟಿವಿಯಾ ಆರ್‌ಎಸ್ ಭಾರತದಲ್ಲಿ ಬಿಡುಗಡೆಯಾಗುತ್ತಿದ್ದು, ಹೊಸ ಕಾರು ಖರೀದಿಗಾಗಿ ಇಂದಿನಿಂದಲೇ ಬುಕ್ಕಿಂಗ್ ಆರಂಭಿಸಲಾಗಿದೆ.

ಎಕ್ಸ್‌ಕ್ಲೂಸಿವ್‌- ಸ್ಕೋಡಾ ಒಕ್ಟಿವಿಯಾ ಆರ್‌ಎಸ್ ಬುಕ್ಕಿಂಗ್ ಶುರು

ಭಾರತದಲ್ಲಿ ಪ್ರಿಮಿಯಂ ಸೆಡಾನ್ ಆವೃತ್ತಿಗಳಿಗೆ ವಿಶೇಷ ಬೇಡಿಕೆಯಿದ್ದು, ಈ ನಿಟ್ಟಿನಲ್ಲಿ ಭಾರತೀಯ ಗ್ರಾಹಕರ ಬೇಡಿಕೆಗೆ ತಕ್ಕಂತೆ ಸಿದ್ಧಗೊಂಡಿರುವ ಸ್ಕೋಡಾ ಒಕ್ಟಿವಿಯಾ ಆರ್‌ಎಸ್ ಇದೇ ತಿಂಗಳು 30ಕ್ಕೆ ಗ್ರಾಹಕರ ಕೈ ಸೇರುವುದು ಖಚಿತವಾಗಿದೆ.

ಎಕ್ಸ್‌ಕ್ಲೂಸಿವ್‌- ಸ್ಕೋಡಾ ಒಕ್ಟಿವಿಯಾ ಆರ್‌ಎಸ್ ಬುಕ್ಕಿಂಗ್ ಶುರು

ಹೀಗಾಗಿ ಇಂದಿನಿಂದಲೇ ಬುಕ್ಕಿಂಗ್ ಆರಂಭಿಸುತ್ತಿರುವ ಸ್ಕೋಡಾ ಸಂಸ್ಥೆಯು ರೂ.50 ಸಾವಿರ ಮುಂಗಡದೊಂದಿಗೆ ತಮ್ಮ ನೆಚ್ಚಿನ ಕಾರ್‌ನ್ನು ಖರೀದಿಸಲು ಅವಕಾಶ ನೀಡಿದ್ದು, ಅಕ್ಟೋಬರ್ ಮೊದಲ ವಾರ ಗ್ರಾಹಕರಿಗೆ ವಿತರಣೆಯಾಗಲಿವೆ.

ಎಕ್ಸ್‌ಕ್ಲೂಸಿವ್‌- ಸ್ಕೋಡಾ ಒಕ್ಟಿವಿಯಾ ಆರ್‌ಎಸ್ ಬುಕ್ಕಿಂಗ್ ಶುರು

ಇನ್ನು ಸ್ಪೋರ್ಟಿ ಲುಕ್‌ನೊಂದಿಗೆ ಸ್ಕೋಡಾ ಒಕ್ಟಿವಿಯಾ ಆರ್‌ಎಸ್ ಸಿದ್ಧಗೊಂಡಿದ್ದು, ಗರಿಷ್ಠ ಇಂಧನ ಸಾಮರ್ಥ್ಯ, ದೊಡ್ಡದಾದ ಚಕ್ರಗಳು, ಡ್ಯುಯಲ್ ಎಕ್ಸಾಸ್ಟ್ ಮತ್ತು ಪವರ್ ಎಂಜಿನ್ ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿರುವುದು ಮತ್ತೊಂದು ವಿಶೇಷ.

ಎಕ್ಸ್‌ಕ್ಲೂಸಿವ್‌- ಸ್ಕೋಡಾ ಒಕ್ಟಿವಿಯಾ ಆರ್‌ಎಸ್ ಬುಕ್ಕಿಂಗ್ ಶುರು

ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಎರಡು ಮಾದರಿಯಲ್ಲೂ ಸ್ಕೋಡಾ ಒಕ್ಟಿವಿಯಾ ಆರ್‌ಎಸ್ ಖರೀದಿ ಲಭ್ಯವಾಗಲಿದ್ದು, ಡಿಸೇಲ್ ಆವೃತ್ತಿಯು 2.0-ಲೀಟರ್ ಹಾಗೂ ಪೆಟ್ರೋಲ್ ಆವೃತ್ತಿಯು 2.0-ಲೀಟರ್ ಎಂಜಿನ್ ಹೊಂದಲಿವೆ.

Recommended Video - Watch Now!
2018 Hyundai Verna Indian Model Unveiled | In Kannada - DriveSpark ಕನ್ನಡ
ಎಕ್ಸ್‌ಕ್ಲೂಸಿವ್‌- ಸ್ಕೋಡಾ ಒಕ್ಟಿವಿಯಾ ಆರ್‌ಎಸ್ ಬುಕ್ಕಿಂಗ್ ಶುರು

ಹೀಗಾಗಿ ಪೆಟ್ರೋಲ್ ಕಾರು 6-ಸ್ಪೀಡ್ ಮ್ಯಾನುವಲ್ ಹಾಗೂ 6-ಸ್ಪೀಡ್ ಡಿಎಸ್‌ಜಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 227-ಬಿಎಚ್‌ಪಿ ಮತ್ತು 350-ಎಂಎನ್ ಟಾರ್ಕ್ ಉತ್ಪಾದನಾ ಶಕ್ತಿಯನ್ನು ಪಡೆದುಕೊಂಡಿವೆ.

ಎಕ್ಸ್‌ಕ್ಲೂಸಿವ್‌- ಸ್ಕೋಡಾ ಒಕ್ಟಿವಿಯಾ ಆರ್‌ಎಸ್ ಬುಕ್ಕಿಂಗ್ ಶುರು

ಅಂತೆಯೇ ಡಿಸೇಲ್ ಕಾರು ಕೂಡಾ 6-ಸ್ಪೀಡ್ ಮ್ಯಾನುವಲ್ ಹಾಗೂ 6-ಸ್ಪೀಡ್ ಡಿಎಸ್‌ಜಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 181-ಬಿಎಚ್‌ಪಿ ಮತ್ತು 400-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿಯನ್ನು ಒದಗಿಸಲಾಗಿದೆ.

ಎಕ್ಸ್‌ಕ್ಲೂಸಿವ್‌- ಸ್ಕೋಡಾ ಒಕ್ಟಿವಿಯಾ ಆರ್‌ಎಸ್ ಬುಕ್ಕಿಂಗ್ ಶುರು

ಇದರ ಜೊತೆಗೆ ಆಲ್ ವೀಲ್ಹ್ ಡ್ರೈವ್ ತಂತ್ರಜ್ಞಾನವನ್ನು ಸ್ಕೋಡಾ ಒಕ್ಟಿವಿಯಾ ಆರ್‌ಎಸ್ ಕಾರುಗಳಲ್ಲಿ ನೀಡಲಾಗಿದ್ದು, ಪ್ರತಿ ಗಂಟೆಗೆ 250 ಕಿಮಿ ವೇಗದಲ್ಲಿ ಚಲಿಸಬಲ್ಲ ಅಧಿಕ ಶಕ್ತಿಯನ್ನು ಪಡೆದಿರುವುದು ಮಧ್ಯಮ ವರ್ಗದ ಐಷಾರಾಮಿ ಕಾರು ಖರೀದಿಯ ಗ್ರಾಹಕರಿಗೆ ಖುಷಿಯ ವಿಚಾರ ಎಂದರೆ ತಪ್ಪಾಗಲಾರದು.

Read more on ಸ್ಕೋಡಾ skoda
English summary
Read in Kannada Skoda Octavia RS Launch Date Revealed And Bookings Open.
Story first published: Friday, August 18, 2017, 18:04 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark