Subscribe to DriveSpark

ಬಿಡುಗಡೆಗೂ ಮುನ್ನವೇ ಟಾಟಾ ಟಿಗೋರ್ ಎಲೆಕ್ಟ್ರಿಕ್ ಕಾರಿನ ತಾಂತ್ರಿಕ ಮಾಹಿತಿಗಳು ಸೋರಿಕೆ

Written By:

ದೇಶಿಯ ಮಾರುಕಟ್ಟೆಯಲ್ಲಿ ವಿವಿಧ ನಮೂನೆಯ ಕಾರು ಉತ್ಪನ್ನಗಳನ್ನು ಪರಿಚಯಿಸುವ ಮೂಲಕ ಭಾರತೀಯ ಗ್ರಾಹಕರ ಮನಗೆದ್ದಿರುವ ಟಾಟಾ ಮೋಟಾರ್ಸ್ ಸಂಸ್ಥೆಯು ಸದ್ಯದಲ್ಲೇ ಟಿಗೋರ್ ಎಲೆಕ್ಟ್ರಿಕ್ ಸೆಡಾನ್ ಕಾರು ಆವೃತ್ತಿಯನ್ನು ಪರಿಚಯಿಸುತ್ತಿದ್ದು, ಇದಕ್ಕೂ ಮುನ್ನ ಹೊಸ ಕಾರಿನ ತಾಂತ್ರಿಕ ಅಂಶಗಳು ಸಾಮಾಜಿಕ ಜಾಲ ತಾಣಗಳಲ್ಲಿ ಸೋರಿಕೆಯಾಗಿರುವ ಭಾರೀ ಚರ್ಚೆಗೆ ಕಾರಣವಾಗಿದೆ.

To Follow DriveSpark On Facebook, Click The Like Button
ಟಾಟಾ ಟಿಗೋರ್ ಎಲೆಕ್ಟ್ರಿಕ್ ಕಾರಿನ ತಾಂತ್ರಿಕ ಮಾಹಿತಿಗಳು ಸೋರಿಕೆ

ಮಹೀಂದ್ರಾ ಎಲೆಕ್ಟ್ರಿಕ್ ವೆರಿಟೋ ಆವೃತ್ತಿಗೆ ಪ್ರತಿಸ್ಪರ್ಧಿಯಾಗಿ ಟಾಟಾ ಟಿಗೋರ್ ಎಲೆಕ್ಟ್ರಿಕ್ ಕಾರ್‌ನ್ನು ಮಾರುಕಟ್ಟೆಗೆ ಪರಿಚಯಿಸಲಾಗುತ್ತಿದ್ದು, ಇದಕ್ಕೂ ಮುನ್ನ ಹೊಸ ಕಾರಿನ ಟೆಕ್ನಿಕಲ್ ಮಾದರಿಗಳನ್ನು ಪರೀಕ್ಷೆ ಮಾಡಿರುವ ಆಟೋಮೆಟಿವ್ ರಿಸರ್ಚ್ ಅಸೋಶಿಯೆಷನ್ ಆಫ್ ಇಂಡಿಯಾದ ಪತ್ರಗಳು ಸೋರಿಕೆಯಾಗಿವೆ.

ಟಾಟಾ ಟಿಗೋರ್ ಎಲೆಕ್ಟ್ರಿಕ್ ಕಾರಿನ ತಾಂತ್ರಿಕ ಮಾಹಿತಿಗಳು ಸೋರಿಕೆ

ಸೋರಿಕೆಯಾದ ಪತ್ರಗಳು ಡ್ರೈವ್ ಸ್ಪಾರ್ಕ್ ತಂಡಕ್ಕೂ ಲಭ್ಯವಾಗಿದ್ದು, ಪತ್ರದಲ್ಲಿರುವ ಮಾಹಿತಿಗಳ ಪ್ರಕಾರ ಟಿಗೋರ್ ಎಲೆಕ್ಟ್ರಿಕ್ ಕಾರು ಮಾದರಿಯು 40 ಬಿಎಚ್‌ಪಿ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ ಎಂಬುವುದಾಗಿ ನಮೂದಿಸಲಾಗಿದೆ.

Recommended Video
[Kannada] Tata Tiago XTA AMT Launched In India - DriveSpark
ಟಾಟಾ ಟಿಗೋರ್ ಎಲೆಕ್ಟ್ರಿಕ್ ಕಾರಿನ ತಾಂತ್ರಿಕ ಮಾಹಿತಿಗಳು ಸೋರಿಕೆ

ಜೊತೆಗೆ 2+3 ಪ್ರಯಾಣಿಕ ಸೀಟುಗಳು ಹೊಂದಿರುವ ಟಿಗೋರ್ ಎಲೆಕ್ಟ್ರಿಕ್, 1,216 ಕೆಜಿ ಭಾರ ಪಡೆದುಕೊಳ್ಳುವ ಮೂಲಕ ಮಹೀಂದ್ರಾ ವೆರಿಟೋ ಕಾರಿಗಿಂತ 200 ಕೆಜಿಯಷ್ಚು ಹಗುರವಾಗಿದೆ ಎನ್ನಲಾಗಿದೆ.

ಟಾಟಾ ಟಿಗೋರ್ ಎಲೆಕ್ಟ್ರಿಕ್ ಕಾರಿನ ತಾಂತ್ರಿಕ ಮಾಹಿತಿಗಳು ಸೋರಿಕೆ

ಬ್ಯಾಟರಿ ಸಾಮರ್ಥ್ಯ

ಟಿಗೋರ್ ಎಲೆಕ್ಟ್ರಿಕ್ ಕಾರು ಮಾದರಿಯಲ್ಲಿ ಸುಧಾರಿತ ತಂತ್ರಜ್ಞಾನ ಪ್ರೇರಿತ ಬ್ಯಾಟರಿ ಬಳಕೆ ಮಾಡಲಾಗಿದ್ದು, ಒಂದು ಬಾರಿ ಪೂರ್ಣ ಪ್ರಮಾಣದಲ್ಲಿ ಬ್ಯಾಟರಿ ಚಾರ್ಜಿಂಗ್ ಮಾಡಿದಲ್ಲಿ ಗರಿಷ್ಠವಾಗಿ 150 ಕಿ.ಮಿ ಮೈಲೇಜ್ ಒದಗಿಸಲಿದೆ.

ತಪ್ಪದೇ ಓದಿ- ತನ್ನ ವಾಹನಗಳ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ ಮಾಡಿದ ಮಾರುತಿ ಸುಜುಕಿ

ಟಾಟಾ ಟಿಗೋರ್ ಎಲೆಕ್ಟ್ರಿಕ್ ಕಾರಿನ ತಾಂತ್ರಿಕ ಮಾಹಿತಿಗಳು ಸೋರಿಕೆ

ಹೀಗಾಗಿ ಇದು ಭಾರತೀಯ ಗ್ರಾಹಕರನ್ನು ಸೆಳೆಯುವ ವಿಶ್ವಾಸವನ್ನು ಹೊಂದಿರುವ ಟಾಟಾ ಸಂಸ್ಥೆಯು, ಟಿಗೋರ್ ಜೊತೆಗೆ ಮತ್ತೊಂದು ಜನಪ್ರಿಯ ಕಾರು ಮಾದರಿಯಾದ ನ್ಯಾನೋ ಆವೃತ್ತಿಯನ್ನು ಕೂಡಾ ಎಲೆಕ್ಟ್ರಿಕ್ ಎಂಜಿನ್ ಜೊತೆಗೆ ಬಿಡುಗಡೆಗೊಳಿಸುವ ಇರಾದೆಯಲ್ಲಿದೆ.

ಟಾಟಾ ಟಿಗೋರ್ ಎಲೆಕ್ಟ್ರಿಕ್ ಕಾರಿನ ತಾಂತ್ರಿಕ ಮಾಹಿತಿಗಳು ಸೋರಿಕೆ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಸರ್ಕಾರಿ ಅಧಿಕಾರಿಗಳಿಗೆ ಎಲೆಕ್ಟ್ರಿಕ್ ಕಾರುಗಳನ್ನು ಒದಗಿಸುವ ಯೋಜನೆಗೆ ಕೇಂದ್ರ ಸರ್ಕಾರವು ಮುಂದಾಗಿದ್ದು, ಈ ಹಿನ್ನೆಲೆ ಮಹೀಂದ್ರಾ ಮತ್ತು ಟಾಟಾ ಸಂಸ್ಥೆಗಳಿಗೆ ಕಾರು ಒದಗಿಸುವ ಟೆಂಡರ್ ಒದಗಿಸಲಾಗಿದೆ. ಇದರಿಂದಾಗಿ ಬೇಡಿಕೆಗೆ ಅನುಗುಣವಾಗಿ ಶೀಘ್ರದಲ್ಲೇ ಹೊಸ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸುವ ತವಕದಲ್ಲಿದೆ.

Trending On DriveSpark Kannada:

ತಮ್ಮ ಹುಟ್ಟುಹಬ್ಬದಂದು ಕಾರ್ ಡ್ರೈವರ್ ಗೆ ದುಬಾರಿ ಗಿಫ್ಟ್ ಕೊಟ್ಟ ಅನುಷ್ಕಾ ಶೆಟ್ಟಿ..!!

ಎಚ್ಚರ !! ಸಂಘಟನೆಯ ಹೆಸರು ಹೇಳಿಕೊಂಡು ಕಾರಿಗೆ ಹಸಿರು ಬೋರ್ಡ್ ಹಾಕಿದ್ರೆ ಬೀಳುತ್ತೆ ದಂಡ

English summary
Read in Kannada about Tata Tigor Electric Technical Details Leaked.
Please Wait while comments are loading...

Latest Photos