ತನ್ನ ವಾಹನಗಳ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ ಮಾಡಿದ ಮಾರುತಿ ಸುಜುಕಿ

Written By:

ಇತ್ತೀಚೆಗಷ್ಟೇ ಭಾರತದಲ್ಲಿ ಹಬ್ಬದ ಋತು ಮುಗಿದಿದೆ. ಕಾರು ತಯಾರಕರು ಈಗ ವರ್ಷ ಕೊನೆಗೊಳ್ಳುವ ಮೊದಲು ತಮ್ಮ ವಾಹನಗಳನ್ನು ಮಾರಾಟಗೊಳಿಸುವ ಕಡೆ ಹೆಚ್ಚು ಗಮನಹರಿಸಿದ್ದು, ತಮ್ಮ ವಾಹನಗಳ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಿಸಿದ್ದಾರೆ.

ತನ್ನ ವಾಹನಗಳ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ ಮಾಡಿದ ಮಾರುತಿ ಸುಜುಕಿ

ಸದ್ಯ ಎಲ್ಲಾ ಕಂಪನಿಗಳೂ ಸಹ ತಮ್ಮ ಈ ವರ್ಷದ ಕಾರುಗಳನ್ನು ಮಾರಾಟ ಮಾಡುವ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು, ಭಾರತದ ಪ್ರಮುಖ ಮಾರಾಟ ಸಂಸ್ಥೆಯಾದ ಮಾರುತಿ ಸುಜುಕಿ ಕಂಪನಿಯು ಸಹ ಈ ಗೊಡೌನ್ ಕ್ಲಿಯರ್ ಮಾಡುವ ಮಾರ್ಗಗಳಲ್ಲಿ ಒಂದಾದ ಡಿಸ್ಕೌಂಟ್ ಎಂಬ ಅಸ್ತ್ರವನ್ನು ಬಿಡಲು ಮುಂದಾಗಿದೆ.

ತನ್ನ ವಾಹನಗಳ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ ಮಾಡಿದ ಮಾರುತಿ ಸುಜುಕಿ

ಹೌದು, ನಾಲ್ಕು ಚಕ್ರಗಳ ಮಾರುಕಟ್ಟೆಯ ನಾಯಕ ಎಂದೇ ಬಿಂಬಿತವಾಗಿರುವ ಮಾರುತಿ ಸುಜುಕಿ ತನ್ನ ಸಿಯಾಜ್, ಆಲ್ಟೊ, ಸ್ವಿಫ್ಟ್, ಎರ್ಟಿಗಾ ಮತ್ತು ಸೆಲೆರಿಯೊ ಕಾರುಗಳ ಮೇಲೆ ಸರಿ ಸುಮಾರು ರೂ.1 ಲಕ್ಷದವರೆಗೆ ರಿಯಾಯಿತಿಯನ್ನು ಘೋಷಿಸಿದೆ.

ತನ್ನ ವಾಹನಗಳ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ ಮಾಡಿದ ಮಾರುತಿ ಸುಜುಕಿ

ಸಿಯಾಜ್ :

ಸಿಯಾಜ್ ಡೀಸೆಲ್ ಕಾರಿನ ಮೇಲೆ ರೂ.80,000 ರೂಪಾಯಿ ರಿಯಾಯಿತಿ(20 ನಗದು, 50 ವಿನಿಮಯ ಬೋನಸ್ ಮತ್ತು 10 ಸಾವಿರ ಕಾರ್ಪೊರೇಟ್ ಡಿಸ್ಕೌಂಟ್) ಚಾಲನೆಯಲ್ಲಿದೆ.

ತನ್ನ ವಾಹನಗಳ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ ಮಾಡಿದ ಮಾರುತಿ ಸುಜುಕಿ

ಸಿಯಾಜ್ ಪೆಟ್ರೋಲ್ ಸೆಡಾನ್ ಕಾರಿನ ಮೇಲೆ ರೂ.1 ಲಕ್ಷ ರೂಪಾಯಿ ರಿಯಾಯಿತಿ ಘೋಷಣೆ ಮಾಡಲಾಗಿದೆ. ಈ ಕಾರಿನ ಮೇಲೆ 20 ಸಾವಿರ ರೂಪಾಯಿ ದೊಡ್ಡ ಪ್ರಮಾಣದ ನಗದು ರಿಯಾಯಿತಿ ಮತ್ತು ರೂ. 50,000 ರೂಪಾಯಿ ವಿನಿಮಯ ಬೋನಸ್ ಮತ್ತು ರೂ.10,000 ರೂಪಾಯಿ ಕಾರ್ಪೊರೇಟ್ ರಿಯಾಯಿತಿಗಳನ್ನು ನೀಡಲಾಗಿದೆ.

Recommended Video - Watch Now!
[Kannada] 2017 Mercedes New GLA India Launch - DriveSpark
ತನ್ನ ವಾಹನಗಳ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ ಮಾಡಿದ ಮಾರುತಿ ಸುಜುಕಿ

ಎರ್ಟಿಗಾ :

ಮಾರುತಿ ಕಂಪನಿಯು ಎರ್ಟಿಗಾ ಡಿಸೇಲ್ ಹೈಬ್ರಿಡ್ ರೂಪಾಂತರಗಳ ಮೇಲೆ ರೂ.70 ಸಾವಿರ ರಿಯಾಯಿತಿ ನೀಡುತ್ತಿದೆ. ರಿಯಾಯಿತಿಯಲ್ಲಿ 20,000 ರೂಪಾಯಿ ನಗದು, 45,000 ರೂಪಾಯಿ ವಿನಿಮಯ ಬೋನಸ್ ಮತ್ತು 5,100 ರೂಪಾಯಿ ಕಾರ್ಪೊರೇಟ್ ರಿಯಾಯಿತಿಗಳನ್ನು ಒಳಗೊಂಡಿದೆ. ಎರ್ಟಿಗಾ ಪೆಟ್ರೋಲ್ ಮತ್ತು ಸಿಎನ್‌ಜಿ ಮಾದರಿಗಳು ರೂ.30,000 ರಷ್ಟು (5 ಕೆ ನಗದು + 20 ಕೆ ವಿನಿಮಯ ಬೋನಸ್ + 5 ಕೆ ಕಾರ್ಪೊರೇಟ್ ರಿಯಾಯಿತಿ) ಪಡೆಯಲಿವೆ.

ತನ್ನ ವಾಹನಗಳ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ ಮಾಡಿದ ಮಾರುತಿ ಸುಜುಕಿ

ಸೆಲೆರಿಯೊ :

ಈ ಕಾರಿನ ಪೂರ್ವ-ಫೇಸ್‌ಲಿಫ್ಟ್ ಆವೃತ್ತಿಗಳು ಮತ್ತು ಎಎಂಟಿ ಆವೃತಿಗಳು ಕ್ರಮವಾಗಿ ರೂ.49,000 ರೂಪಾಯಿ ಮತ್ತು 58,000 ರೂಪಾಯಿ ರಿಯಾಯಿತಿಗಳನ್ನು ಹೊಂದಲಿವೆ. 49,000 ರೂಪಾಯಿ ರಿಯಾಯಿತಿಗಳನ್ನು 25,000 ರೂಪಾಯಿಗಳ ನಗದು, 19,000 ರೂಪಾಯಿಗಳ ವಿನಿಮಯ ಬೋನಸ್ ಮತ್ತು 5,100 ರೂಪಾಯಿ ಕಾರ್ಪೊರೇಟ್ ರಿಯಾಯಿತಿಯಾಗಿ ವಿಂಗಡಿಸಲಾಗಿದೆ.

ತನ್ನ ವಾಹನಗಳ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ ಮಾಡಿದ ಮಾರುತಿ ಸುಜುಕಿ

ಎಎಂಟಿ ಮಾದರಿಯು 29 ಸಾವಿರ ನಗದು ರಿಯಾಯಿತಿ, 24 ಸಾವಿರ ವಿನಿಮಯ ಬೋನಸ್ ಮತ್ತು 5 ಸಾವಿರ ಕಾರ್ಪೊರೇಟ್ ರಿಯಾಯಿತಿಗಳನ್ನು ಪಡೆಯುತ್ತದೆ. ಸುಧಾರಿತ ಪೆಟ್ರೋಲ್ ಆವೃತ್ತಿಯ ಮೇಲೆ ರೂ.39,000 ರೂಪಾಯಿ ರಿಯಾಯಿತಿ ಮತ್ತು ಮಾರುತ ಸೆಲೆರಿಯೊ ಕಾರಿನ ಸಿಎನ್‌ಜಿ ಆವೃತ್ತಿಯ ಮೇಲೆ ರೂ.34,000 ರೂಪಾಯಿ ರಿಯಾಯಿತಿ ನೀಡಲಾಗಿದೆ.

ತನ್ನ ವಾಹನಗಳ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ ಮಾಡಿದ ಮಾರುತಿ ಸುಜುಕಿ

ಸ್ವಿಫ್ಟ್ :

ಸ್ವಿಫ್ಟ್ ಪೆಟ್ರೋಲ್ ಆವೃತ್ತಿಯು 40,000 ರೂಪಾಯಿ ರಿಯಾಯತಿಯನ್ನು ಪಡೆಯುತ್ತದೆ ಮತ್ತು ಡೀಸೆಲ್ ಆವೃತ್ತಿ 45,000 ರೂಪಾಯಿ ರಿಯಾಯಿತಿ ಹೊಂದಿದೆ. ಪೆಟ್ರೋಲ್ ಕಾರು 15 ಸಾವಿರ ನಗದು, 20 ಸಾವಿರ ಎಕ್ಸ್‌ಚೇಂಜ್ ಬೋನಸ್ ಮತ್ತು 5 ಸಾವಿರ ಕಾರ್ಪೊರೇಟ್ ರಿಯಾಯಿತಿ ವಿಭಜನೆ ಒಳಗೊಂಡಿದೆ.

ತನ್ನ ವಾಹನಗಳ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ ಮಾಡಿದ ಮಾರುತಿ ಸುಜುಕಿ

ಆಲ್ಟೊ :

ಭಾರತದಲ್ಲಿ ಅತ್ಯುತ್ತಮವಾಗಿ ಮಾರಾಟದ ಕಾರು ಎಂಬ ಶ್ರೇಯಸುವು ಪಡೆದಿರುವ ಆಲ್ಟೊ ಕಾರಿನ 800 ಸಿಸಿ ಮತ್ತು 1 ಲೀಟರ್ ಆವೃತ್ತಿಗಳ ಮೇಲೆ ರಿಯಾಯಿತಿ ಘೋಷಣೆ ಮಾಡಿದೆ. ಸಣ್ಣ ಇಂಜಿನ್ ಪಡೆದ ಆಲ್ಟೊ ಕಾರಿನ ಪೆಟ್ರೋಲ್ ಮತ್ತು ಸಿಎನ್‌ಜಿ ಆವೃತ್ತಿಗಳು 50,000 ರೂಪಾಯಿ ರಿಯಾಯಿತಿಯಲ್ಲಿ ಮಾರಾಟವಾಗುತ್ತಿವೆ.

ತನ್ನ ವಾಹನಗಳ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ ಮಾಡಿದ ಮಾರುತಿ ಸುಜುಕಿ

ಆಲ್ಟೊ ಕೆ10 ಪೆಟ್ರೋಲ್ ಮತ್ತು ಸಿಎನ್‌ಜಿ ಆವೃತ್ತಿಗಳು ರೂ.42,000 ಡಿಸ್ಕೌಂಟ್ ಆಫರ್ ಪಡೆಯಲಿದ್ದು, ಆಲ್ಟೊ ಕೆ10 ಎಎಂಟಿ ಕಾರು 47,000 ರೂಪಾಯಿ ರಿಯಾಯಿತಿ ಹೊಂದಲಿದೆ.

ತನ್ನ ವಾಹನಗಳ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ ಮಾಡಿದ ಮಾರುತಿ ಸುಜುಕಿ

ಭಾರತದಲ್ಲಿ ತನ್ನ ವಿಶಿಷ್ಟ ಮತ್ತು ಕೈಗೆಟುಕುವ ಬೆಲೆಯಲ್ಲಿ ವಾಹನ ತಯಾರು ಮಾಡುತ್ತಿರುವ ಮಾರುತಿ ಸುಜುಕಿ ಕಂಪನಿಯ ಈ ನಿರ್ದಾರ ಈ ಕಾರುಗಳ ಅಭಿಮಾನಿಗಳನ್ನು ಕೊಳ್ಳುವ ಕಡೆ ಮತ್ತಷ್ಟು ಕೆರಳಿಸಲಿದೆ ಹಾಗು ಸದ್ಯದರಲ್ಲಿಯೇ ಹಲವು ಕಂಪನಿಗಳ ಕಾರುಗಳ ಮೇಲೆ ಡಿಸ್ಕೌಂಟ್ ಘೋಷಿಸಲಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್‌ಗೆ ಭೇಟಿ ಕೊಡಿ.

English summary
Maruti offering large discounts on Ciaz, Swift, Alto, Celerio, WagonR & Ertiga vehicles.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark