ಮತ್ತಷ್ಟು ಹೊಸ ವೈಶಿಷ್ಟ್ಯತೆಗಳನ್ನು ಪಡೆದು ಬರುತ್ತಿದೆ 2018ರ ಬಜಾಜ್ ಅವೆಂಜರ್
ಭಾರತೀಯ ಮೋಟಾರ್ ಸೈಕಲ್ ತಯಾರಕ ಬಜಾಜ್ ಆಟೋ ಸಂಸ್ಥೆಯು ಮುಂಬರುವ ತಿಂಗಳು 2018ರ ಅವೆಂಜರ್ 220 ದ್ವಿಚಕ್ರ ವಾಹನವನ್ನು ಹೊಸ ನೋಟ ಮತ್ತು ವೈಶಿಷ್ಟ್ಯಗಳೊಂದಿಗೆ ಪ್ರಾರಂಭಿಸಲು ಸಿದ್ಧವಾಗಿದ್ದು, ಈ ಮಧ್ಯೆ ಹೊಸ ಬೈಕಿನ ಮತ್ತಷ್ಟು ತಾಂತ್ರಿಕ ಅಂಶಗಳು ಬ
ಭಾರತೀಯ ಮೋಟಾರ್ ಸೈಕಲ್ ತಯಾರಕ ಬಜಾಜ್ ಆಟೋ ಸಂಸ್ಥೆಯು ಮುಂಬರುವ ತಿಂಗಳು 2018ರ ಅವೆಂಜರ್ 220 ದ್ವಿಚಕ್ರ ವಾಹನವನ್ನು ಹೊಸ ನೋಟ ಮತ್ತು ವೈಶಿಷ್ಟ್ಯಗಳೊಂದಿಗೆ ಪ್ರಾರಂಭಿಸಲು ಸಿದ್ಧವಾಗಿದ್ದು, ಈ ಮಧ್ಯೆ ಹೊಸ ಬೈಕಿನ ಮತ್ತಷ್ಟು ತಾಂತ್ರಿಕ ಅಂಶಗಳು ಬಹಿರಂಗಗೊಂಡಿವೆ.

2018ರ ಫೆಬ್ರುವರಿ ಮೊದಲ ವಾರ ಇಲ್ಲವೇ ಕೊನೆಯ ವಾರದಲ್ಲಿ ನವೀಕರಿಸಿದ ಅವೆಂಜರ್ 220 ಸ್ಟ್ರೀಟ್ ಮತ್ತು ಕ್ರೂಸ್ ರೂಪಾಂತರಗಳನ್ನು ಬಜಾಜ್ ಬಿಡುಗಡೆಗೊಳಿಸುವ ಯೋಜನೆಯನ್ನು ಹೊಂದಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ಹೊಸ ಬೈಕ್ ನಿರ್ಮಾಣ ಮಾಡಿದೆ.
Recommended Video


ಕಳೆದ ವರ್ಷ ಭಾರತದಲ್ಲಿ ಇದ್ದ ಏಕ ಮಾತ್ರ ಪ್ರವೇಶ ಮಟ್ಟದ ಕ್ರೂಸರ್ ಮೋಟಾರ್ ಸೈಕಲ್ ಬಜಾಜ್ ಅವೆಂಜರ್ ಎನ್ನಬಹುದು. ಈ ಹಿನ್ನೆಲೆ ಹೊಸ ಬೈಕ್ ಮಾದರಿಗೆ ಯಾವುದೇ ಪ್ರತಿಸ್ಪರ್ಧಿಯೇ ಇರಲಿಲ್ಲ ಎಂದರೆ ನೀವು ನಂಬಲೇ ಬೇಕು.

ಆದ್ರೆ, ವಾಹನ ಕ್ಷೇತ್ರವೇ ಹಾಗೆ... ಯಾವಾಗ ಏನಾಗುತ್ತದೆ ? ಎಂಬುದರ ಬಗ್ಗೆ ಯಾವುದೇ ಮಾಹಿತಿ ಇರೋದಿಲ್ಲ. ಈ ಬಜಾಜ್ ಅವೆಂಜರ್ ಸ್ಥಿತಿಯೂ ಡೋಲಾಯಮಾನವಾಗಿದೆ !! ಈಗ ಸುಜುಕಿ ಇಂಟ್ರುಡರ್ 150 ಬೈಕ್ ಈ ವಾಹನಕ್ಕೆ ಪೈಪೋಟಿ ನೀಡುತ್ತಿದೆ.

ಉದಯೋನ್ಮುಖ ವರದಿಗಳ ಪ್ರಕಾರ, ಮುಂದಿನ ತಿಂಗಳು ಬಿಡುಗಡೆಗೊಳ್ಳುವ ಅವೆಂಜರ್ ಸ್ಟ್ರೀಟ್ ಮತ್ತು ಕ್ರೂಸ್ ಎರಡೂ ವಾಹನಗಳು ಹಲವಾರು ಕಾಸ್ಮೆಟಿಕ್ ಅಪ್ಡೇಟ್ ಪಡೆಯಲಿವೆ. ಆದರೆ ಯಾಂತ್ರಿಕ ಅಂಶಗಳು ಪ್ರಸ್ತುತ ಮಾರಾಟವಾಗುತ್ತಿರುವ ಮಾದರಿಗೆ ಹೋಲುತ್ತದೆ.

ಹಲವಾರು ಕಾಸ್ಮೆಟಿಕ್ ಅಪ್ಡೇಟ್‌ಗಳನ್ನು ಪಡೆದುಕೊಳ್ಳಲಿದೆ ಎನ್ನುವ ವಿಚಾರವನ್ನು ಗಮನಿಸಿದರೆ, ಹೊಸ ವಾಹನವು ಸುಜುಕಿ ಇಂಟ್ರುಡರ್ 150 ಬೈಕಿಗೆ ಟಕ್ಕರ್ ಕೊಡುವುದರಲ್ಲಿ ಯಾವುದೇ ಅನುಮಾನವಿಲ್ಲ.
Trending On DriveSpark Kannada:
ಮಾರುತಿ 800 ಕಾರ್ ಎಂಜಿನ್‌ನಿಂದಲೇ ನಿರ್ಮಾಣವಾದ ಕಸ್ಟಮ್ ಬೈಕ್ ಹೇಗಿದೆ ನೋಡಿ...
ಹೋಂಡಾ ಆಕ್ಟಿವಾ ಜನಪ್ರಿಯತೆಗೆ ಬ್ರೇಕ್ ಹಾಕುತ್ತಾ ಟಿವಿಎಸ್ ಹೊಸ ಸ್ಕೂಟರ್ ಡಾಜ್?
ಮೊದಲ ಬಾರಿಗೆ ಎಲೆಕ್ಟ್ರಿಕ್ ಕ್ಲಾಸಿಕ್ ಬೈಕ್ ಪ್ರದರ್ಶಿಸಿದ ರಾಯಲ್ ಎನ್‌ಫೀಲ್ಡ್

ಹೊಸ ಎವೆಂಜರ್ ಸರಣಿಯ ಪ್ರಮುಖ ನವೀಕರಣಗಳಲ್ಲಿ ಒಂದಾದ ಕ್ಲಾಸಿಕ್ ಸಿಂಗಲ್-ಪಾಡ್ ಘಟಕದೊಳಗೆ ಹೊಸ ಡಿಜಿಟಲ್ ಉಪಕರಣ ಕ್ಲಸ್ಟರ್ ಅಳವಡಿಸಲು ಕಂಪನಿ ಮುಂದಾಗಿದೆ.

ನವೀಕೃತ ಅವೆಂಜರ್‌ಗಳು ಅಸ್ತಿತ್ವದಲ್ಲಿರುವ 220 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಆಯ್ಕೆಯನ್ನು ಪಡೆಯುತ್ತದೆ. ಈ ಎಂಜಿನ್ 19 ಬಿಎಚ್‌ಪಿ ಮತ್ತು 17.5 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

ಈ ಎಂಜಿನ್ 5 ಸ್ಪೀಡ್ ಗೇರ್‌ಬಾಕ್ಸ್ ಸಂಯೋಜಿತವಾಗಿದೆ. ಈ ಮೋಟಾರ್ ಸೈಕಲ್ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಅವಳಿ ಶಾಕ್ ಹೊಂದಲಿದೆ.

ಜೊತೆಗೆ ಬೆಲೆ ವಿಚಾರವಾಗಿ ಕೂಡಾ 98 ಸಾವಿರ ದರ ಹೊಂದಿರುವ ಇಂಟ್ರುಡರ್ 150 ಗಿಂತಲೂ ಕಡಿಮೆ ಲಭ್ಯವಿರುವ ಅವೆಂಜರ್ ಹೊಸ ಬೈಕ್‌ಗಳು 150 ಆವೃತ್ತಿಗೆ ರೂ.81,485 ಮತ್ತು 220 ಆವೃತ್ತಿಯು ರೂ. 89,690 ಬೆಲೆ ಹೊಂದಿದೆ ಎಂಬ ಮಾಹಿತಿ ಲಭ್ಯವಾಗಿದೆ.
Trending DriveSpark YouTube Videos
Subscribe To DriveSpark Kannada YouTube Channel - Click Here


Click it and Unblock the Notifications








