Subscribe to DriveSpark

ಹೋಂಡಾ ಆಕ್ಟಿವಾ ಜನಪ್ರಿಯತೆಗೆ ಬ್ರೇಕ್ ಹಾಕುತ್ತಾ ಟಿವಿಎಸ್ ಹೊಸ ಸ್ಕೂಟರ್ ಡಾಜ್?

Written By:

ಭಾರತೀಯ ಮಾರುಕಟ್ಟೆಯಲ್ಲಿ ಸದ್ಯ ಸ್ಕೂಟರ್ ಮಾರಾಟ ಪ್ರಕ್ರಿಯೆ ಜೋರಾಗಿದ್ದು, ಕೇವಲ ನಗರ ಪ್ರದೇಶಗಳಷ್ಟೇ ಅಲ್ಲದೇ ಗ್ರಾಮೀಣ ಭಾಗದ ಗ್ರಾಹಕರು ಕೂಡಾ ಸ್ಕೂಟರ್‌ಗಳ ಖರೀದಿಯತ್ತ ಮುಖ ಮಾಡುತ್ತಿದ್ದಾರೆ. ಹೀಗಾಗಿ ಮಧ್ಯಮ ಗಾತ್ರದ ಸ್ಕೂಟರ್‌ಗಳನ್ನು ಪರಿಚಯಿಸುತ್ತಿರುವ ಟಿವಿಎಸ್ ಸಂಸ್ಥೆಯು ಇದೀಗ ಮತ್ತೊಂದು ವಿನೂತನ ಸ್ಕೂಟರ್ ಆವೃತ್ತಿಯನ್ನು ಹೊರತರುತ್ತಿದೆ.

To Follow DriveSpark On Facebook, Click The Like Button
ಹೋಂಡಾ ಆಕ್ಟಿವಾ ಜನಪ್ರಿಯತೆಗೆ ಬ್ರೇಕ್ ಹಾಕುತ್ತಾ ಟಿವಿಎಸ್ ಹೊಸ ಸ್ಕೂಟರ್ ಡಾಜ್?

ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ಹೋಂಡಾ ಸಂಸ್ಥೆಯು ಸದ್ಯ ಸ್ಕೂಟರ್ ಮಾರಾಟದಲ್ಲಿ ನಂ.1 ಸ್ಥಾನವನ್ನು ಕಾಯ್ದುಕೊಂಡಿದ್ದು, ಜನಪ್ರಿಯ ಮಾದರಿಯಾದ ಆಕ್ಟಿವಾ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಬಲ್ಲ ವಿನೂತನ ಸ್ಕೂಟರ್ ಮಾದರಿಯೊಂದನ್ನು ಟಿವಿಎಸ್ ಕೂಡಾ ಅಭಿವೃದ್ದಿಗೊಳಿಸಿದೆ.

Recommended Video - Watch Now!
Shocking Car Accident That Happened In Karunagappally, Kerala
ಹೋಂಡಾ ಆಕ್ಟಿವಾ ಜನಪ್ರಿಯತೆಗೆ ಬ್ರೇಕ್ ಹಾಕುತ್ತಾ ಟಿವಿಎಸ್ ಹೊಸ ಸ್ಕೂಟರ್ ಡಾಜ್?

ಟಿವಿಎಸ್ ಉತ್ಪಾದನೆ ಮಾಡಿರುವ ಡಾಜ್ ಹೆಸರಿನ ಸ್ಕೂಟರ್ ಸದ್ಯ ಭಾರೀ ಚರ್ಚೆಗೆ ಕಾರಣವಾಗಿದ್ದು, ಹೊಸ ಸ್ಕೂಟರ್ ಅನ್ನು ಮುಂಬರುವ ದಿನಗಳಲ್ಲಿ ಬಿಡುಗಡೆ ಮಾಡುವ ಉದ್ದೇಶದಿಂದ ಇಂಧನ ಕಾರ್ಯಕ್ಷಮತೆ ಪರೀಕ್ಷಿಸಲು ಸ್ಪಾಟ್ ಟೆಸ್ಟಿಂಗ್ ನಡೆಸಲಾಗುತ್ತಿದೆ.

ಹೋಂಡಾ ಆಕ್ಟಿವಾ ಜನಪ್ರಿಯತೆಗೆ ಬ್ರೇಕ್ ಹಾಕುತ್ತಾ ಟಿವಿಎಸ್ ಹೊಸ ಸ್ಕೂಟರ್ ಡಾಜ್?

ಇದಕ್ಕೂ ಮುನ್ನ 2016ರಲ್ಲೇ ಇಂಡಿಯನ್ ಆಟೋ ಎಕ್ಸ್‌ಪೋದಲ್ಲಿ ಡಾಜಾ ಸ್ಕೂಟರ್ ಬಗ್ಗೆ ಮಾಹಿತಿ ಬಿಡುಗಡೆ ಮಾಡಿದ್ದ ಟಿವಿಎಸ್, 110 ಸಿಸಿ ಹೊಂದಿರುವ ಈ ಸ್ಕೂಟರ್ ಆಕ್ಟಿವಾಗೆ ಪ್ರಬಲ ಪ್ರತಿಸ್ಪರ್ಧಿಯಾಗಲಿದೆ ಎಂದು ಹೇಳಿಕೊಂಡಿತ್ತು.

ಹೋಂಡಾ ಆಕ್ಟಿವಾ ಜನಪ್ರಿಯತೆಗೆ ಬ್ರೇಕ್ ಹಾಕುತ್ತಾ ಟಿವಿಎಸ್ ಹೊಸ ಸ್ಕೂಟರ್ ಡಾಜ್?

ಅಂತೆಯೇ ಇದೀಗ ಹೊಸ ಸ್ಕೂಟರ್ ಅನ್ನು ಮುಂಬರುವ ಫೆಬ್ರುವರಿಯಲ್ಲಿ ಬಿಡುಗಡೆ ಮಾಡಲು ಎದುರು ನೋಡುತ್ತಿರುವ ಟಿವಿಎಸ್, 110 ಸಿಸಿ ಸಾಮರ್ಥ್ಯದ ಸ್ಕೂಟರ್ ಮಾದರಿಗಳಲ್ಲೇ ಡಾಜ್ ವಿಭಿನ್ನತೆ ಹೊಂದಿರಬೇಕು ಅನ್ನುವ ಗುರಿಯೊಂದಿಗೆ ಹೊಸ ಸ್ಕೂಟರ್ ಸಿದ್ದಪಡಿಸುತ್ತಿದೆ.

ಹೋಂಡಾ ಆಕ್ಟಿವಾ ಜನಪ್ರಿಯತೆಗೆ ಬ್ರೇಕ್ ಹಾಕುತ್ತಾ ಟಿವಿಎಸ್ ಹೊಸ ಸ್ಕೂಟರ್ ಡಾಜ್?

ಎಂಜಿನ್ ಸಾಮರ್ಥ್ಯ

ಈ ಮೇಲೆ ಹೇಳಿದಂತೆ 110 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್ ಹೊಂದಿರುವ ಡಾಜ್ ಸ್ಕೂಟರ್, 8.57-ಬಿಎಚ್‌ಪಿ ಮತ್ತು 8.3-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ತಪ್ಪದೇ ಓದಿ-ಮಾರ್ಚ್‌ನಲ್ಲಿ ಬಿಡುಗಡೆಯಾಗಲಿರುವ 2018ರ ಮಾರುತಿ ಸುಜುಕಿ ಸ್ವಿಫ್ಟ್ ಬೆಲೆ ಎಷ್ಟು ಗೊತ್ತಾ?

ಹಾಫ್ ಹೆಲ್ಮೆಟ್ ವಿರುದ್ಧ ಭರ್ಜರಿ ಕಾರ್ಯಚರಣೆ- ಬೈಕ್ ಸವಾರರಿಗೆ ಬಿಗ್ ಶಾಕ್....

ಹೋಂಡಾ ಆಕ್ಟಿವಾ ಜನಪ್ರಿಯತೆಗೆ ಬ್ರೇಕ್ ಹಾಕುತ್ತಾ ಟಿವಿಎಸ್ ಹೊಸ ಸ್ಕೂಟರ್ ಡಾಜ್?

ಇದರ ಜೊತೆಗೆ ಸ್ಪೋರ್ಟ್ ಬೈಕ್ ಗ್ರಾಫಿಕ್ ವಿನ್ಯಾಸ, 14-ಇಂಚಿನ್ ಚಕ್ರಗಳನ್ನು ಪಡೆದುಕೊಂಡಿರುವ ಡಾಜ್ ಸ್ಕೂಟರ್, ಹಿಂಭಾಗದ ಚಕ್ರದಲ್ಲಿ 200ಎಂಎಂ ಡಿಸ್ಕ್ ಬ್ರೇಕ್ ಮತ್ತು ಮುಂಭಾಗದ ಚಕ್ರದಲ್ಲಿ 130ಎಂಎಂ ಡ್ರಮ್ ಬ್ರೇಕ್ ಜೋಡಿಸಲಾಗಿದೆ.

ಹೋಂಡಾ ಆಕ್ಟಿವಾ ಜನಪ್ರಿಯತೆಗೆ ಬ್ರೇಕ್ ಹಾಕುತ್ತಾ ಟಿವಿಎಸ್ ಹೊಸ ಸ್ಕೂಟರ್ ಡಾಜ್?

ಈ ಮೂಲಕ ಯುವ ಗ್ರಾಹಕರನ್ನು ಸೆಳೆಯುವ ಗುರಿ ಹೊಂದಿರುವ ಟಿವಿಎಸ್ ಸಂಸ್ಥೆಯು ಹೋಂಡಾ ಗ್ರಾಜಿಯಾ, ಆಕ್ಟಿವಾ ಸ್ಕೂಟರ್ ಬೆಲೆಗಳಿಂತ ಅಗ್ಗದ ದರಗಳಲ್ಲಿ ಡಾಜ್ ಸ್ಕೂಟರ್ ಬಿಡುಗಡೆಗೊಳಿಸುವ ಇರಾದೆಯಲ್ಲಿದೆ.

ಹೋಂಡಾ ಆಕ್ಟಿವಾ ಜನಪ್ರಿಯತೆಗೆ ಬ್ರೇಕ್ ಹಾಕುತ್ತಾ ಟಿವಿಎಸ್ ಹೊಸ ಸ್ಕೂಟರ್ ಡಾಜ್?

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಟಿವಿಎಸ್ ನಿರ್ಮಾಣ ಸ್ಕೂಟರ್ ಮಾದರಿಗಳು ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ವಿಶೇಷವಾಗಿ ಆಕ್ಟಿವಾ ಹಿಂದಿಕ್ಕಲು ಮತ್ತು ಉತ್ತಮ ಮೈಲೇಜ್ ಒದಗಿಸುವ ಉದ್ದೇಶದಿಂದ ಡಾಜ್ ಸ್ಕೂಟರ್ ಅನ್ನು ಅಭಿವೃದ್ಧಿಗೊಳಿಸಿರುವುದಾಗಿ ಟಿವಿಎಸ್ ಹೇಳಿಕೊಂಡಿದೆ. ಹೀಗಾಗಿ ಮೈಲೇಜ್ ಜೊತೆಗೆ ಉತ್ತಮ ಸ್ಪೋರ್ಟ್ ಲುಕ್ ಸ್ಕೂಟರ್ ಆಯ್ಕೆ ಮಾಡುವ ಗ್ರಾಹಕರಿಗೆ ಇದು ಅತ್ಯುತ್ತಮ ಜೋಡಿಯಾಗಲಿದೆ.

ತಪ್ಪದೇ ಓದಿ-ಇನ್ಮುಂದೆ ಈ ಕೆಳಕಂಡ ಕಾರುಗಳನ್ನು ಖರೀದಿಸಲು ಆಗೋದಿಲ್ಲ...

ರಸ್ತೆ ನಿಯಮ ಉಲ್ಲಂಘಿಸುವರಿಗೆ ಕಾದಿದೆ ಮಾರಿಹಬ್ಬ- ಯಾವ ನಿಯಮ ಉಲ್ಲಂಘನೆಗೆ ಎಷ್ಟು ದಂಡ ಗೊತ್ತಾ?

English summary
TVS Dazz scooter (Honda Activa rival) spotted testing in India.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark