ವಿಶೇಷ ವಿನ್ಯಾಸ ಹೊಂದಿರುವ ವರ್ಲ್ಡ್ ಬೆಸ್ಟ್ ಅರ್ಬನ್ ಕಾರು ಯಾವುದು ಗೊತ್ತಾ?
ಕಾರುಗಳ ಎಂಜಿನ್ ಕಾರ್ಯಕ್ಷಮತೆ ಮತ್ತು ವಿನ್ಯಾಸಗಳ ಆಧಾರದ ಮೇಲೆ ನೀಡಲಾಗುವ ವರ್ಲ್ಡ್ ಬೆಸ್ಟ್ ಅರ್ಬನ್ ಕಾರು ಎಂಬ ಹೆಗ್ಗಳಿಕೆಗೆ ಈ ಬಾರಿ ಫೋಕ್ಸ್‌ವ್ಯಾಗನ್ ಪೊಲೊ ಪಾತ್ರವಾಗಿದ್ದು, ಗ್ರಾಹಕರನ್ನು ಸೆಳೆಯುವಲ್ಲಿ ಪೊಲೊ ಕಾರುಗಳು ಕೆಲವ ಭಾರತದಲ್ಲಿ ಅಷ್ಟೇ ಅಲ್ಲದೇ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಮಾರಾಟವಾಗುತ್ತಿವೆ.

ಕಳೆದ 14 ವರ್ಷಗಳ ಹಿಂದೆ ಆರಂಭಗೊಂಡಿರುವ ಕಾರುಗಳ ವಿಭಾಗದಲ್ಲಿನ ವರ್ಲ್ಡ್ ಬೆಸ್ಟ್ ಕಾರ್ಸ್ ಅವಾರ್ಡ್‌ನಲ್ಲಿ ಇದುವರೆಗೆ 5 ಬಾರಿ ಪ್ರಶಸ್ತಿ ತನ್ನದಾಗಿಸಿಕೊಂಡಿರುವ ಫೋಕ್ಸ್‌ವ್ಯಾಗನ್ ಸಂಸ್ಥೆಯು ವಿವಿಧ ವಿಭಾಗಗಳಲ್ಲಿ ಅತ್ಯುತ್ತಮ ಪ್ರದರ್ಶನ ತೊರುತ್ತಿರುವುದು ಗ್ರಾಹಕರ ನೆಚ್ಚಿನ ಆಯ್ಕೆಯಾಗಿ ಹೊರಹೊಮ್ಮಿದೆ ಎನ್ನಬಹುದು.

ಈ ಮೊದಲ ವರ್ಲ್ಡ್ ಕಾರ್ ಆಫ್ ದಿ ಇಯರ್ ಪ್ರಶಸ್ತಿ ವಿಭಾಗದಲ್ಲಿ ಮಿಂಚಿದ್ದ ಫೋಕ್ಸ್‌ವ್ಯಾಗನ್ ಸಂಸ್ಥೆಯು 2009ರಲ್ಲಿ ಗಲ್ಫ್ IV, 2010ರಲ್ಲಿ ಪೊಲೊ, 2012ರಲ್ಲಿ ಅಪ್, 2013ರಲ್ಲಿ ಗಲ್ಫ್ ಕಾರುಗಳಿಗೂ ಪ್ರಶಸ್ತಿ ಪಡೆದುಕೊಂಡಿದೆ.

ಇದೀಗ ಪೊಲೊ ಕಾರುಗಳು ವರ್ಲ್ಡ್ ಬೆಸ್ಟ್ ಅರ್ಬನ್ ಕಾರ್ ಎಂಬ ಪ್ರಶಸ್ತಿಗೆ ಪಾತ್ರವಾಗಿದ್ದು, ನಗರಪ್ರದೇಶದ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇದಕ್ಕೆ ಕಾರಣ 6ನೇ ಜನರೇಷನ್ ವೈಶಿಷ್ಟ್ಯತೆಗಳನ್ನು ಹೊಂದಿರುವ ಪೊಲೊ ಕಾರುಗಳು ಈ ಹಿಂದಿನ ಮಾದರಿಗಿಂತಲೂ ಹೆಚ್ಚಿನ ಬೂಟ್ ಸ್ಪೆಸ್ ಪಡೆದಿದೆ.

ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಪೊಲೊ ಮಾದರಿಗಳಲ್ಲಿ 351 ಲೀಟರ್ ಸಾಮರ್ಥ್ಯದ ಬೂಟ್ ಸ್ಪೆಸ್ ನೀಡಲಾಗುತ್ತಿದ್ದು, ಇದು ಕುಟುಂಬ ವರ್ಗದ ಸಮೇತ ಪ್ರವಾಸ ಹೋಗುವ ಉದ್ದೇಶಗಳಿಗೆ ಅತಿಹೆಚ್ಚು ಅನುಕೂಲಕರವಾಗಿದೆ ಎನ್ನಬಹುದು.

ಇನ್ನು ಫೋಕ್ಸ್‌ವ್ಯಾಗನ್ ಸಂಸ್ಥೆಯ MQB ಪ್ಲ್ಯಾಟ್‌ಫಾರ್ಮ್ ಅಡಿಯಲ್ಲಿ ಪೊಲೊ ಕಾರುಗಳನ್ನು ಅಭಿವೃದ್ಧಿಗೊಳಿಸಲಾಗುತ್ತಿದ್ದು, ಉತ್ತಮ ಎಂಜಿನ್ ನಿರ್ವಹಣೆ ಮತ್ತು ಕಾರಿನ ಔಟ್ ಲುಕ್‌ಗಳಿಂದಾಗ ಜಗತ್ತಿನಾದ್ಯಂತ ಇದುವರೆಗೆ 17 ಮಿಲಿಯನ್ ಕಾರುಗಳು ಮಾರಾಟಗೊಂಡಿವೆ.

ಈ ಬಗ್ಗೆ ಮಾತನಾಡಿರುವ ಫೋಕ್ಸ್‌ವ್ಯಾಗನ್ ಡಿಸೈನ್ ಹೆಡ್ ಕಲೌಸ್ ಬಿಸ್ಚೋಫ್, ಸ್ಟೋರ್ಟಿ ಹಾಗೂ ಕ್ಲಾಸಿಕ್ ವೈಶಿಷ್ಟ್ಯತೆಗಳನ್ನು ಹೊಂದಿರುವ ಪೊಲೊ ಕಾರುಗಳ ಮಾರಾಟವು ಫೋಕ್ಸ್‌ವ್ಯಾಗನ್ ಸಂಸ್ಥೆಯ ಸಾರ್ವಕಾಲಿಕ ದಾಖಲೆಯಾಗಿದ್ದು, ಆರನೇ ತಲೆಮಾರಿನ ಡಿಸೈನ್‌ಗಳು ಹಾಗೂ ಕೈಗೆಟುವ ಬೆಲೆಗಳು ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿವೆ ಎಂದಿದ್ದಾರೆ.

ಒಟ್ಟಿನಲ್ಲಿ ಪೊಲೊ ಕಾರುಗಳು ಎಲ್ಲಾ ವರ್ಗದ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಸ್ಪೋರ್ಟಿ ಲುಕ್, ಎಂಜಿನ್ ದಕ್ಷತೆ ಮತ್ತು ಕಾರಿನ ಸುರಕ್ಷಾ ಸೌಲಭ್ಯಗಳು ಕಾರಿನ ಆಯ್ಕೆಯ ಬೆಲೆ ಹೆಚ್ಟಿಸಿವೆ ಎನ್ನಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:
01. ಇನ್ಮುಂದೆ ರಾಂಗ್ ರೂಟ್‌ನಲ್ಲಿ ಹೋದ್ರೆ ನಿಮ್ಮ ವಾಹನಗಳ ಕಥೆ ಅಷ್ಟೇ...
02. ರಾಜಧಾನಿಯಲ್ಲಿ ಇನ್ಮುಂದೆ ವಾಹನಗಳಿಗೆ ಬಿಎಸ್ 6 ಇಂಧನ ಪೂರೈಕೆ...
03.ಇವು ಪ್ರತಿಷ್ಠಿತ ಕಂಪನಿಗಳಿಂದಲೇ ನಿರ್ಮಾಣವಾದ 10 ಕಳಪೆ ಕಾರುಗಳು..!!
04.ಹೊಸ ಕಾರುಗಳ ಉತ್ಪಾದನೆಗಾಗಿ ಒಂದಾದ ಟೊಯೊಟಾ ಮತ್ತು ಸುಜುಕಿ ಮೋಟಾರ್ಸ್


Click it and Unblock the Notifications








