ರಾಜಧಾನಿಯಲ್ಲಿ ಇನ್ಮುಂದೆ ವಾಹನಗಳಿಗೆ ಬಿಎಸ್ 6 ಇಂಧನ ಪೂರೈಕೆ...

Written By:

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದಿನದಿಂದ ದಿನಕ್ಕೆ ಮಾಲಿನ್ಯ ಪ್ರಮಾಣ ದ್ವಿಗುಣಗೊಳ್ಳುತ್ತಿದ್ದು, ಇದನ್ನು ಪರಿಣಾಮಕಾರಿಯಾಗಿ ತಗ್ಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಪರಿಸರ ಪೂರಕ ಬಿಎಸ್ 6 ಇಂಧನ ಪೂರೈಕೆಗೆ ಮುಂದಾಗಿದೆ.

ರಾಜಧಾನಿಯಲ್ಲಿ ಇನ್ಮುಂದೆ ವಾಹನಗಳಿಗೆ ಬಿಎಸ್ 6 ಇಂಧನ ಪೂರೈಕೆ...

ಆಟೋ ಉದ್ಯಮದಲ್ಲಿ ಸದ್ಯ ಬಿಎಸ್ 4 (ಭಾರತ್ ಸ್ಟೆಜ್) ಜಾರಿಯಲ್ಲಿದ್ದು, ಇದನ್ನು ಇನ್ನಷ್ಟು ಉನ್ನತೀಕರಿಸುವ ಉದ್ದೇಶದಿಂದ 2020ರ ವೇಳೆಗೆ ಬಿಡುಗಡೆಯಾಗುವ ಪ್ರತಿಯೊಂದು ವಾಹನವು ಬಿಎಸ್ 6 ವೈಶಿಷ್ಟ್ಯತೆಗಳನ್ನು ಹೊಂದಲಿರುವುದು ಕಡ್ಡಾಯವಾಗಲಿದೆ. ಅದಕ್ಕೂ ಮುನ್ನ ವಾಹನಗಳಿಗೆ ಸುಧಾರಿತ ಮಾದರಿಯ ಬಿಎಸ್ 6 ಇಂಧನ ಪೂರೈಕೆ ಮಾಡಲು ಕೇಂದ್ರ ಪೆಟ್ರೋಲಿಯಂ ಸಚಿವಾಲಯಲವು ಒಪ್ಪಿಗೆ ಸೂಚಿಸಿದೆ.

ರಾಜಧಾನಿಯಲ್ಲಿ ಇನ್ಮುಂದೆ ವಾಹನಗಳಿಗೆ ಬಿಎಸ್ 6 ಇಂಧನ ಪೂರೈಕೆ...

ಹೀಗಾಗಿ ಏಪ್ರಿಲ್ 1ರಿಂದಲೇ ರಾಜಧಾನಿ ದೆಹಲಿಯಲ್ಲಿ ಬಿಎಸ್ 6 ಮಾದರಿಯ ಇಂಧನ ಪೂರೈಕೆಯಾಗಲಿದ್ದು, ಇದರಿಂದಾಗಿ ವಾಹನಗಳ ಇಂಗಾಲ ಹೊರಸೂಸುವಿಕೆಯ ಪ್ರಮಾಣ ತಗ್ಗಿಸಲು ನೆರವಾಗಲಿದೆ.

ರಾಜಧಾನಿಯಲ್ಲಿ ಇನ್ಮುಂದೆ ವಾಹನಗಳಿಗೆ ಬಿಎಸ್ 6 ಇಂಧನ ಪೂರೈಕೆ...

ಈ ಸಂಬಂಧ ದೆಹಲಿ ವ್ಯಾಪ್ತಿಯಲ್ಲಿರುವ 397 ಪೆಟ್ರೋಲ್ ಬಂಕ್‌ಗಳಲ್ಲಿ ಈಗಾಗಲೇ ಬಿಎಸ್ 6 ಇಂಧನ ಪೂರೈಕೆ ಮಾಡುವ ಎಲ್ಲಾ ವ್ಯವಸ್ಥೆ ಮಾಡಿಕೊಳ್ಳಲಾಗಿದ್ದು, ಏಪ್ರಿಲ್ 1ರಿಂದ ಕಡ್ಡಾಯವಾಗಿ ಎಲ್ಲಾ ಮಾದರಿಯ ವಾಹನಗಳು ಬಿಎಸ್ 6 ಇಂಧನವನ್ನೇ ಬಳಕೆ ಮಾಡಬೇಕಿದೆ.

ರಾಜಧಾನಿಯಲ್ಲಿ ಇನ್ಮುಂದೆ ವಾಹನಗಳಿಗೆ ಬಿಎಸ್ 6 ಇಂಧನ ಪೂರೈಕೆ...

ಇದೊಂದು ಪ್ರಮುಖ ವಿಚಾರ ಅಂದ್ರೆ, ದೆಹಲಿಯಲ್ಲಿ ಮಾಲಿನ್ಯ ಹೆಚ್ಚಳಕ್ಕೆ ವಾಣಿಜ್ಯ ವಾಹನಗಳ ಕೊಡುಗೆ ಶೇ.60ಕ್ಕಿಂತಲೂ ಹೆಚ್ಚಿದ್ದು, ಇದರಿಂದಾಗಿಯೇ ದೆಹಲಿ ಜನತೆಗೆ ಮಾರಕವಾಗಿ ಪರಿಣಿಸಿರುವ ಮಾಲಿನ್ಯ ಪ್ರಮಾಣವನ್ನು ತಡೆಯಲು ಈ ಯೋಜನೆ ಜಾರಿ ಮಾಡಲಾಗುತ್ತಿದೆ.

ರಾಜಧಾನಿಯಲ್ಲಿ ಇನ್ಮುಂದೆ ವಾಹನಗಳಿಗೆ ಬಿಎಸ್ 6 ಇಂಧನ ಪೂರೈಕೆ...

ಇನ್ನು ಬಿಎಸ್ 6 ಇಂಧನ ಬಳಕೆಯು ವಾಹನಗಳ ಮಾಲಿನ್ಯ ತಡೆಗೆ ಅಷ್ಟೇ ಅಲ್ಲದೇ ಗ್ರಾಹಕರಿಗೂ ಉಪಯೋಗಕಾರಿಯಾಗಿದ್ದು, ಮಾಲಿನ್ಯ ತಗ್ಗುವುದರಿಂದ ಉಸಿರಾಟ ತೊಂದರೆ ಮತ್ತು ಅಸ್ತಮಾ ರೋಗದಿಂದ ಬಳಲುತ್ತಿರುವ ಜನತೆಗೂ ಇದರಿಂದ ರಿಲೀಫ್ ಸಿಗಲಿದೆ.

ರಾಜಧಾನಿಯಲ್ಲಿ ಇನ್ಮುಂದೆ ವಾಹನಗಳಿಗೆ ಬಿಎಸ್ 6 ಇಂಧನ ಪೂರೈಕೆ...

ಇದಲ್ಲದೇ ಪರಿಸರಕ್ಕೆ ಪೂರಕವಾದ ಬಿಎಸ್ 6 ಮಾದರಿಯ ವಾಹನಗಳು 2020ರ ವೇಳೆಗೆ ಕಡ್ಡಾಯವಾಗಲಿದ್ದು, ಸದ್ಯ ಭಾರತದಲ್ಲಿ ಮರ್ಸಿಡಿಸ್ ಬೆಂಝ್ ಮಾತ್ರ ಬಿಎಸ್ 4 ಜೊತೆ ಜೊತೆಗೆ ಬಿಎಸ್ 6 ಕಾರುಗಳನ್ನು ಉತ್ಪಾದನೆ ಮಾಡುತ್ತಿರುವ ಏಕೈಕ ಸಂಸ್ಥೆಯಾಗಿದೆ.

ರಾಜಧಾನಿಯಲ್ಲಿ ಇನ್ಮುಂದೆ ವಾಹನಗಳಿಗೆ ಬಿಎಸ್ 6 ಇಂಧನ ಪೂರೈಕೆ...

ಯುರೋಪ್ ರಾಷ್ಟ್ರಗಳಲ್ಲಿ ಈಗಾಗಲೇ ಯುರೋ 6 ವಾಹನ ಮಾದರಿಗಳನ್ನು ಕಡ್ಡಾಯ ಮಾಡಲಾಗಿದ್ದು, ಮಾಲಿನ್ಯ ತಡೆಯುವಲ್ಲಿ ಇದು ಸಹಕಾರಿಯಾಗುತ್ತಿದೆ. ಹೀಗಾಗಿಯೇ ಅಭಿವೃದ್ಧಿ ಹೊಂದುತ್ತಿರುವ ಭಾರತಕ್ಕೆ ಮಾಕರವಾಗಿರುವ ಮಾಲಿನ್ಯವನ್ನು ತಡೆಹಾಕಲು ಹೊಸ ಯೋಜನೆಯು ಅತ್ಯವಶ್ಯಕ ಎನ್ನಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

01. ಗ್ರಾಹಕರೇ ಎಚ್ಚರ- ಬೈಕ್ ಖರೀದಿಸುವ ಪ್ಲ್ಯಾನ್ ಇದ್ರೆ ಇತ್ತ ಗಮನಹರಿಸಿ...

02. ಭಾರತದಲ್ಲಿ 7 ಸೀಟರ್ ವ್ಯಾಗನ್ ಆರ್ ಬಿಡುಗಡೆಯಾಗುವುದು ಪಕ್ಕಾ ಅಂತೆ..!!

03. ಟ್ರಾಫಿಕ್ ರೂಲ್ಸ್ ಬ್ರೇಕ್- ಮಗನನ್ನೇ ಹಿಡಿದು ದಂಡ ವಸೂಲಿ ಮಾಡಿದ ಪೊಲೀಸ್..

04. ಬೆಂಗಳೂರು ಟು ಉ.ಕೊರಿಯಾಗೆ ಕ್ಯಾಬ್ ಬುಕ್- ಓಲಾ ಗ್ರಾಹಕನಿಗೆ ಕಾದಿತ್ತು ಬಿಗ್ ಶಾಕ್...

05. ಮಾರುತಿ ಸುಜುಕಿ ವಿಟಾರಾ ಬ್ರೆಝಾ ಹಿಂದಿಕ್ಕುತ್ತಾ ಜೀಪ್ ಸಂಸ್ಥೆಯ ಹೊಸ ಎಸ್‌ಯುವಿ?

Read more on fuel bs vi
English summary
Delhi Becomes First City To Use BS-VI Fuels.
Story first published: Wednesday, March 28, 2018, 19:27 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark