ಬೆಂಗಳೂರು ಟು ಉ.ಕೊರಿಯಾಗೆ ಕ್ಯಾಬ್ ಬುಕ್- ಓಲಾ ಗ್ರಾಹಕನಿಗೆ ಕಾದಿತ್ತು ಬಿಗ್ ಶಾಕ್...

By Rahul Ts

ಆನ್‍ಲೈನ್‌ನಲ್ಲಿ ಲಭ್ಯವಿರುವ ಕ್ಯಾಬ್ ಸೇವೆಗಳು ರಸ್ತೆಗಳಲ್ಲಿ ಸದ್ದು ಮಾಡುವುದಕ್ಕಿಂತ ತಮ್ಮ ತಾಂತ್ರಿಕ ದೋಷದಿಂದಲೋ ಅಥವಾ ಡ್ರೈವರ್‍‍ಗಳ ವರ್ತನೆಗಳಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿರುವುದಕ್ಕೆ ಇಲ್ಲೊಂದು ತಾಜಾ ಉದಾಹಣೆ ಇದೆ.

ಬೆಂಗಳೂರು ಟು ಉ.ಕೊರಿಯಾಗೆ ಕ್ಯಾಬ್ ಬುಕ್- ಓಲಾ ಗ್ರಾಹಕನಿಗೆ ಕಾದಿತ್ತು ಬಿಗ್ ಶಾಕ್...

ಗ್ರಾಹಕರು ತಮಗೆ ಬೇಕಾದ ಸ್ಥಳಗಳಿಂದ ಕ್ಯಾಬ್ ಬುಕ್ ಮಾಡಿದರೆ ಬೇರಾವುದೋ ಸ್ಥಳಗಳನ್ನು ತೋರಿಸುವುದು. ರೈಡ್ ಸ್ಟಾರ್ಟ್ ಮಾಡಿದ ನಂತರ ಆಕಸ್ಮಿಕವಾಗಿ ಟ್ರಿಪ್ ಎಂಡ್ ಆಗುವುದು ಇಂತಹ ತಾಂತ್ರಿಕ ದೋಷಗಳು ಸಾಮಾನ್ಯ. ಆದ್ರೆ ಬೆಂಗಳೂರಿನ ಓಲಾ ಗ್ರಾಹಕರನೊಬ್ಬ ಬೆಂಗಳೂರಿನಿಂದ ಉತ್ತರ ಕೊರಿಯಾಗೆ ಬುಕ್ ಮಾಡಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.

ಬೆಂಗಳೂರು ಟು ಉ.ಕೊರಿಯಾಗೆ ಕ್ಯಾಬ್ ಬುಕ್- ಓಲಾ ಗ್ರಾಹಕನಿಗೆ ಕಾದಿತ್ತು ಬಿಗ್ ಶಾಕ್...

ಓಲಾ ಗ್ರಾಹಕರೊಬ್ಬರು ಬೆಂಗಳೂರಿನಿಂದ ಉತ್ತರ ಕೊರಿಯಾಗೆ ಕ್ಯಾಬ್ ಬುಕ್ ಮಾಡಿದ್ದು, ಇದಕ್ಕೆ ಪ್ರತಿಯಾಗಿ ಓಲಾ ಸಂಸ್ಥೆಯು ಕೂಡಾ ಗ್ರಾಹಕರನ ಬೇಡಿಕೆಯನ್ನು ಪರಿಷ್ಕರಣೆ ಮಾಡಿದಲ್ಲದೇ ಕನ್ಪರ್ಮ ಸಂದೇಶವನ್ನು ಸಹ ರವಾನಿಸಿದೆ.

ಬೆಂಗಳೂರು ಟು ಉ.ಕೊರಿಯಾಗೆ ಕ್ಯಾಬ್ ಬುಕ್- ಓಲಾ ಗ್ರಾಹಕನಿಗೆ ಕಾದಿತ್ತು ಬಿಗ್ ಶಾಕ್...

ಇದಕ್ಕೆ ಪ್ರತಿಯಾಗಿ ಓಲಾ ಸಂಸ್ಥೆಯು 1.49 ಲಕ್ಷ ಬಿಲ್ ತೊರಿಸಿದ್ದು, ಓಲಾ ಸಂಸ್ಥೆಯು ಕಳುಹಿಸಿದ ಸಂದೇಶ ನೋಡಿ ಗ್ರಾಹಕ ರೋಹಿತ್ ಮೆಂಡಾ ಫುಲ್ ಶಾಕ್ ಆಗಿದ್ದಾರೆ.

ಬೆಂಗಳೂರು ಟು ಉ.ಕೊರಿಯಾಗೆ ಕ್ಯಾಬ್ ಬುಕ್- ಓಲಾ ಗ್ರಾಹಕನಿಗೆ ಕಾದಿತ್ತು ಬಿಗ್ ಶಾಕ್...

ಕೂಡಲೇ ಸ್ಕ್ರೀನ್‍ ಶಾಟ್ ಸಮೇತ ತಮ್ಮ ಟ್ವಿಟರ್‍‍ನಲ್ಲಿ ಅಪ್ಲೋಡ್ ಮಾಡಿದ್ದು, ಆ ಸ್ಕ್ರೀನ್‍ ಶಾಟ್‌ನಲ್ಲಿ ಬೆಂಗಳೂರಿನಿಂದ ಉತ್ತರ ಕೊರಿಯಾದ ಪ್ಯಾಂಗನ್ ಎಂಬ ನಗರಕ್ಕೆ ಟ್ರಿಪ್ ಕನ್ಫರ್ಮ್ ಆಗಿರುವುದರ ಜೊತೆಗೆ ಚಾಲಕನ ಮಾಹಿತಿ ಮತ್ತು ಟ್ರಿಪ್ ಪ್ರಾರಂಭಗೊಳ್ಳುವ ಸಮಯವನ್ನು ಕೂಡ ತೋರಿಸಲಾಗಿದೆ.

ಬೆಂಗಳೂರು ಟು ಉ.ಕೊರಿಯಾಗೆ ಕ್ಯಾಬ್ ಬುಕ್- ಓಲಾ ಗ್ರಾಹಕನಿಗೆ ಕಾದಿತ್ತು ಬಿಗ್ ಶಾಕ್...

ಈ ಸುದ್ಧಿಯನ್ನು ರೋಹಿತ್ ಮೆಂಡಾ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಅಪ್ಲೋಡ್ ಮಾಡಿದ ಮರುಕ್ಷಣವೇ ಓಲಾ ಸಂಸ್ಥೆಯು ಈ ಬಗ್ಗೆ ಎಚ್ಚೆತ್ತುಕೊಂಡಿದ್ದು, ಇದು ತಾಂತ್ರಿಕ ದೋಷಗಳಿಂದಾದ ತಪ್ಪು ಎಂದು ಪ್ರತ್ಯುತ್ತರ ನೀಡಿದೆ.

ಬೆಂಗಳೂರು ಟು ಉ.ಕೊರಿಯಾಗೆ ಕ್ಯಾಬ್ ಬುಕ್- ಓಲಾ ಗ್ರಾಹಕನಿಗೆ ಕಾದಿತ್ತು ಬಿಗ್ ಶಾಕ್...

ಆದ್ರೆ ಇಂತಹ ಘಟನೆ ಮೊದಲೇನು ಅಲ್ಲ. ಈ ಹಿಂದೆಯು ಹಲವಾರು ಜನಕ್ಕೆ ಇಂತದ್ದೇ ಟ್ರಿಪ್ ಕನ್ಫರ್ಮೇಷನ್ ಮೆಸೇಜ್ ಕಳುಹಿಸಿರುವುದನ್ನು ಕಾಣಬಹುದಾಗಿದ್ದು, ಓಲಾ ಸಂಸ್ಥೆಯ ತಾಂತ್ರಿಕ ದೋಷಗಳು ಸಂಸ್ಥೆಯನ್ನು ಮುಜುಗರಕ್ಕೆ ಈಡಾಗುವಂತೆ ಮಾಡಿದೆ.

ಬೆಂಗಳೂರು ಟು ಉ.ಕೊರಿಯಾಗೆ ಕ್ಯಾಬ್ ಬುಕ್- ಓಲಾ ಗ್ರಾಹಕನಿಗೆ ಕಾದಿತ್ತು ಬಿಗ್ ಶಾಕ್...

ಹೀಗೆ ಸಣ್ಣ ಪುಟ್ಟ ತಪ್ಪುಗಳಿಂದಲೇ ಸುದ್ಧಿಯಾಗುತ್ತಿರುವ ಆನ್‍ಲೈನ್ ಟ್ಯಾಕ್ಸಿ ಸರ್ವಿಸ್‍ಗಳು ಇನ್ನಾದರು ಇಂತಹ ಲೋಪದೋಷಗಳನ್ನು ಸರಿಪಡಿಸಬೇಕಾದ ಅವಶ್ಯಕತೆಯಿದ್ದು, ಜೊತೆಗೆ ಗುಣಮಟ್ಟದ ಸೇವೆಗಳಿಗೆ ಒತ್ತು ನೀಡಬೇಕಿರುವುದು ಗ್ರಾಹಕರ ಬೇಡಿಕೆಯಾಗಿದೆ.

Kannada
Read more on taxi cab off beat
English summary
Person Books Ola Cabs From Bangalore To North Korea; Gets Billed Rs 1.49 Lakh.
X

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more