ಬಲೆನೊ ಮತ್ತೆ ಎಲೈಟ್ ಐ20 ಕಾರುಗಳನ್ನು ಹಿಂದಿಕ್ಕುತ್ತಾ ನಿಸ್ಸಾನ್ ಹೊಸ ಮೈಕ್ರಾ?
ನಿಸ್ಸಾನ್ ಪರಿಚಯಿಸುತ್ತಿರುವ ಹೊಸ ಮೈಕ್ರಾ ಕಾರುಗಳು ಜಾಗತಿಕ ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ಬೆಲೆಗಳಿಂತ ಕೈಗಟ್ಟುವ ಬೆಲೆಗೆ ದೊರೆಯಲಿದೆ ಎಂದು ಹೇಳಲಾಗಿದ್ದು, ಜೊತೆಗೆ ಭಾರತೀಯ ಗ್ರಾಹಕರಿಗಾಗಿಯೇ ವಿಶೇಷ ವಿನ್ಯಾಸವನ್ನು ಪಡೆದಿರಲಿದೆ.
ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆ ನಿಸ್ಸಾನ್ ಕಳೆದ 2017ರಲ್ಲಿ ತಮ್ಮ ಮೈಕ್ರಾ ಹ್ಯಾಚ್‍ಬ್ಯಾಕ್ ಕಾರನ್ನು ವಿಶ್ವದ ಪ್ರಮುಖ ಮಾರುಕಟ್ಟೆಗಳಿಗೆ ಪರಿಚಯಿಸಿದ್ದು, ಇದೀಗ ಭಾರತಕ್ಕೂ ಹೊಸ ಪ್ಲಾಟ್‍ಫಾರ್ಮ್ ಮತ್ತು ಇನ್ನಷ್ಟು ನವಿಕರಣಗಳೊಂದಿಗೆ ಎಂಟ್ರಿ ಕೊಡಲಿದೆ.

ನಿಸ್ಸಾನ್ ಪರಿಚಯಿಸುತ್ತಿರುವ ಹೊಸ ಮೈಕ್ರಾ ಕಾರುಗಳು ಜಾಗತಿಕ ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ಬೆಲೆಗಳಿಂತ ಕೈಗಟ್ಟುವ ಬೆಲೆಗೆ ದೊರೆಯಲಿದೆ ಎಂದು ಹೇಳಲಾಗಿದ್ದು, ಜೊತೆಗೆ ಭಾರತೀಯ ಗ್ರಾಹಕರಿಗಾಗಿಯೇ ವಿಶೇಷ ವಿನ್ಯಾಸವನ್ನು ಪಡೆದಿರಲಿದೆ.

ಹೊಸ ಮೈಕ್ರಾ ಭಾರತದಲ್ಲಿ ಕಡಿಮೆ ಬೆಲೆಯ ಸಿಎಂಎಫ್-ಎ ಪ್ಲಾಟ್‍ಫಾರ್ಮ್ ನಲ್ಲಿ ಬರಲಿದ್ದು, ಯೂರೋಪಿನ ಮಾರುಕಟ್ಟೆಯಲ್ಲಿ ನಿಸ್ಸಾನ್‍ನ ವಿ ಪ್ಲಾಟ್‍ಫಾರ್ಮ್ ಅನ್ನು ಪಡೆದಿರಲಿದೆ.

ನಿಸ್ಸಾನ್ ಮೈಕ್ರಾ ಭಾರತದ ಗ್ರಾಹಕರಿಗಾಗಿ ವಿಶೇಷ ವಿನ್ಯಾಸವನ್ನು ಪಡೆಯಲಿದ್ದು, ಭಾರತದ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ದೊರೆಯುವ ಕಾರಣ ಹೈ ಎಂಡ್ ಫೀಚರ್‍ಗಳನ್ನು ಕಳೆದುಕೊಳ್ಳಲಿದೆ. ಆದರೆ ಒಳವಿನ್ಯಾಸವನ್ನು ಪ್ರೀಮಿಯಂ ಹ್ಯಾಚ್‍ಬ್ಯಾಕ್‍ನಂತೆ ಕಾಣಲು ಹೊಸ ಆಯ್ಕೆಗಳನ್ನು ನೀಡಲಾಗಿದೆ ಎನ್ನಲಾಗಿದೆ.

ಭಾರತೀಯ ಗ್ರಾಹಕರಿಗಾಗಿಯೇ ವಿಶೇಷವಾಗಿ ತಯಾರಾಗುತ್ತಿರುವ ನಿಸ್ಸಾನ್ ಮೈಕ್ರಾ ಕಾರು ಟಚ್‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್ ಮತ್ತು ಎಲ್ಇಡಿ ಡೇ ಟೈಮ್ ರನ್ನಿಂಗ್ ಲೈಟ್‍ಗಳನ್ನು ಅಳವಡಿಸಲಾಗಿದ್ದು, ಪ್ರಯಾಣಿಕರ ಸುರಕ್ಷತೆಗಾಗಿ ಎಬಿಎಸ್ ಮತ್ತು ಏರ್‍ಬ್ಯಾಗ್‍ಗಳನ್ನು ಕೂಡ ಅಳವಡಿಸಲಾಗಿದೆ.

ನಿಸ್ಸಾನ್ ಮೈಕ್ರಾ 1.2 ಲೀಟರ್ ಪೆಟ್ರೋಲ್ ಮತ್ತು 1.5 ಲೀಟರ್ ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಬರಲಿದ್ದು, ಎಂಜಿನ್‍ಗಳು ಇನ್ನಷ್ಟು ಪರಿಷ್ಕರಣೆ ಅಂಶಗಳನ್ನು ಪಡೆದಿರಲಿದೆ.

ನಿಸ್ಸಾನ್ ಸಂಸ್ಥೆಯು ಮೈಕ್ರಾ ಕಾರಿನ ನಿರ್ಮಾಣಕ್ಕಾಗಿ ಬೇಕಾದ ಎಲ್ಲಾ ಬಿಡಿಭಾಗಗಳನ್ನು ಸ್ಥಳಾಂತರಗೊಳಿಸಲಾಗಿದ್ದು, ಪ್ರಸ್ಥುತ ಭಾರತದಲ್ಲಿ ಮಾರಾಟಗೊಳ್ಳುತ್ತಿರುವ ಮೈಕ್ರಾ ಕಾರಿಗಿಂತಾ ಇನ್ನಷ್ಟು ನವೀಕರಣಗಳನ್ನು ಪಡೆದಿದೆ.

ಹೀಗಾಗಿ ಹೊಸ ಕಾರು ಬಿಡುಗಡೆಯಾಗಿದ್ದೆ ಆದಲ್ಲಿ ಮಾರುಕಟ್ಟೆಯಲ್ಲಿ ಜನಪ್ರಿಯ ಸಾಧಿಸುತ್ತಿರುವ ಮಾರುತಿ ಬಲೆನೊ, ಹ್ಯುಂಡೈ ಎಲೈಟ್ ಐ20 ಮತ್ತು ಹೋಂಡಾ ಜಾಝ್ ಕಾರುಗಳಿಗೆ ತೀವ್ರ ಪೈಪೋಟಿಯನ್ನು ನೀಡಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:
1. ಮತ್ತೊಂದು ಹೆಗ್ಗಳಿಕೆಗೆ ಪಾತ್ರವಾದ ಹೊಸ ಮಾರುತಿ ಸುಜುಕಿ ಸ್ವಿಫ್ಟ್..!!
2. ಟ್ರಾಫಿಕ್ ರೂಲ್ಸ್ ಬ್ರೇಕ್- ಮಗನನ್ನೇ ಹಿಡಿದು ದಂಡ ವಸೂಲಿ ಮಾಡಿದ ಪೊಲೀಸ್..
3. ವಾಹನ ಪ್ರಿಯರಿಗೆ ಸಿಹಿ ಸುದ್ಧಿ ನೀಡಿದ ಸಾರಿಗೆ ಇಲಾಖೆ..
4. ಇನ್ಮುಂದೆ ರಾಂಗ್ ರೂಟ್‌ನಲ್ಲಿ ಹೋದ್ರೆ ನಿಮ್ಮ ವಾಹನಗಳ ಕಥೆ ಅಷ್ಟೇ...
5. ಹೊಸ ಸುರಕ್ಷಾ ಸೌಲಭ್ಯಗಳೊಂದಿಗೆ ಮರಳಿ ಬಂದ ಮಾರುತಿ ಓಮ್ನಿ ಮತ್ತು ಇಕೋ.


Click it and Unblock the Notifications








