ಸೇನೆಗಾಗಿ ಸಿದ್ದವಾಗಿರುವ ಟಾಟಾ ಸಫಾರಿ ಕಾರಿನ ಚಿತ್ರಗಳು ಸೋರಿಕೆ..

ದೇಶಿಯಾ ವಾಹನ ತಯಾರಕ ಸಂಸ್ಥೆಯಾದ ಟಾಟಾ ಮೋಟಾರ್ಸ್ ಭಾರತದ ಸೇನೆಗೆ 3,192 ಯೂನಿಟ್ ಸಫಾರಿ ಸ್ಟೋರ್ಮ್ ಕಾರುಗಳನ್ನು ಅರ್ಪಿಸಲಿದ್ದು, ಇದೀಗ ಈ ಕಾರುಗಳ ಸ್ಪೈ ಚಿತ್ರಗಳು ಸೋರಿಕೆಯಾಗಿವೆ.

By Rahul Ts

ದೇಶಿಯಾ ವಾಹನ ತಯಾರಕ ಸಂಸ್ಥೆಯಾದ ಟಾಟಾ ಮೋಟಾರ್ಸ್ ಭಾರತದ ಸೇನೆಗೆ 3,192 ಯೂನಿಟ್ ಸಫಾರಿ ಸ್ಟೋರ್ಮ್ ಕಾರುಗಳನ್ನು ಅರ್ಪಿಸಲಿದ್ದು, ಇದೀಗ ಈ ಕಾರುಗಳ ಸ್ಪೈ ಚಿತ್ರಗಳು ಸೋರಿಕೆಯಾಗಿವೆ. ಟಾಟಾ ಸಫಾರಿ ಸ್ಟೋರ್ಮ್ ಕಾರುಗಳು ಭಾರತದ ಸೇನೆಗಾಗಿಯೆ ವಿನೂತನವಾಗಿ ವಿನ್ಯಾಸಗೊಳಿಸಲಾಗಿದೆ.

ಸೇನೆಗಾಗಿ ತಯಾರಿಸಲಾಗಿದ್ದ ಟಾಟಾ ಸಫಾರಿ ಕಾರಿನ ಚಿತ್ರಗಳು ಸೋರಿಕೆ..

ಸೇನೆಗಾಗಿ ತಯಾರಿಸಲ್ಪಟ್ಟ ಹೊಸ ಟಾಟಾ ಸಫಾರಿ 4x4 ಕಾರುಗಳು ದೆಹಲಿಯಲ್ಲಿನ ಟಾಾ ಯಾರ್ಡ್‍‍ನಲ್ಲಿ ಕಾಣಿಸಿಕೊಂಡಿದೆ. ಕಾರಿನ ಒಳಭಾಗವು ಕಪ್ಪು ಬಣ್ಣದಿಂದ ಸಜ್ಜುಗೊಂಡಿದ್ದು, ಮುಂಭಾಗದಲ್ಲಿ ರೀಡಿಂಗ್ ಲ್ಯಾಂಪ್ಸ್, ಮ್ಯಾನುವಲ್ ಸಬ್‍‍ರೊಸ್ ಏರ್ ಕಂಡೀಶನಿಂಗ್ ಯುನೀಟ್, ಎಬಿಎಸ್ 9.1 ಮತ್ತು ಎರಡು ಏರ್‍‍ಬ್ಯಾಗ್‍‍ಗಳನ್ನು ಪಡೆದುಕೊಂಡಿವೆ.

ಸೇನೆಗಾಗಿ ತಯಾರಿಸಲಾಗಿದ್ದ ಟಾಟಾ ಸಫಾರಿ ಕಾರಿನ ಚಿತ್ರಗಳು ಸೋರಿಕೆ..

ಕಳೆದ ಕೆಲದಿನಗಳ ಹಿಂದಷ್ಟೇ ಮಿಲಿಟರಿ ವರ್ಷನ್ ಎಸ್‌ಯುವಿ ಕಾರುಗಳಿಗಾಗಿ ಬಿಡ್ ಮಾಡಿದ್ದ ಭಾರತೀಯ ಸೇನೆಯು, ಮಹೀಂದ್ರಾ ಸ್ಕಾರ್ಪಿಯೊ ಮತ್ತು ಟಾಟಾ ಸಫಾರಿ ಸ್ಟ್ರೋಮ್ ಕಾರುಗಳ ಮೂಲಕ ಪರೀಕ್ಷೆ ಕೈಗೊಂಡಿತ್ತು. ಇದರಲ್ಲಿ ಸಫಾರಿ ಸ್ಟೋಮ್‌ಗಳು ಸೇನಾಪಡೆಯ ಅಗತ್ಯಕ್ಕೆ ತಕ್ಕಂತೆ ಸಿದ್ದವಾಗಿರುವುದು ಆಯ್ಕೆಗೆ ಕಾರಣವಾಗಿದೆ.

ಸೇನೆಗಾಗಿ ತಯಾರಿಸಲಾಗಿದ್ದ ಟಾಟಾ ಸಫಾರಿ ಕಾರಿನ ಚಿತ್ರಗಳು ಸೋರಿಕೆ..

ಸೇನಾಪಡೆಗಾಗಿಯೇ ವಿಶೇಷವಾಗಿ ಸಿದ್ದಗೊಂಡಿರುವ ಆರ್ಮಿ ವರ್ಷನ್ ಸಫಾರಿ ಸ್ಟ್ರೋಮ್ ಕಾರುಗಳು ಮ್ಯಾಟೆ ಗ್ರೀನ್‌ ಬಣ್ಣ ಹೊಂದಿದ್ದು, ಸ್ಟ್ರೋಮ್ ಕಾರಿನ ಇಂಚಿಂಚೂ ಕೂಡಾ ಆರ್ಮಿ ಗ್ರೀನ್ ಬಣ್ಣದೊಂದಿಗೆ ಮಿಂಚುತ್ತಿವೆ.

ಸೇನೆಗಾಗಿ ತಯಾರಿಸಲಾಗಿದ್ದ ಟಾಟಾ ಸಫಾರಿ ಕಾರಿನ ಚಿತ್ರಗಳು ಸೋರಿಕೆ..

ಆದರೇ ಫೂಟ್ ಬೋರ್ಡ್ ಮತ್ತು ರೂಫ್ ರೈಲ್ಸ್ ಹೊರತುಪಡಿಸಿ ಸಂಪೂರ್ಣ ಹಸಿರು ಮಯವಾಗಿರುವ ಸಫಾರಿ ಸ್ಟ್ರೋಮ್ ಕಾರುಗಳು, ಸಾಮಾನ್ಯ ಮಾದರಿಯ ಸಫಾರಿ ಸ್ಟ್ರೋಮ್‌ಗೆ ಕಾರುಗಳಿಂತ ಸಾಕಷ್ಟು ವಿಭಿನ್ನತೆಯನ್ನು ಹೊಂದಿವೆ.

ಸೇನೆಗಾಗಿ ತಯಾರಿಸಲಾಗಿದ್ದ ಟಾಟಾ ಸಫಾರಿ ಕಾರಿನ ಚಿತ್ರಗಳು ಸೋರಿಕೆ..

ಜೊತೆಗೆ ಸರಕು ಸಾಗಿಸಲು ಅನುಕೂಲಕವಾಗುವಂತೆ ರಿಯರ್ ಹುಕ್, ಕಾರಿನ ಬ್ಯಾನೆಟ್ ಮೇಲೆ ಆ್ಯಂಟೆನಾ, ಫ್ರಂಟ್ ಬಂಪರ್‌ಗಳಲ್ಲಿ ಸ್ಪಾಟ್ ಲೈಟ್ ಪಡೆದುಕೊಂಡಿದ್ದು, ಇನ್ನು ಕಾರಿನ ಒಳಭಾಗದಲ್ಲಿ ಅಳವಡಿಸಲಾಗಿರುವ ತಾಂತ್ರಿಕ ಅಂಶಗಳ ಬಗೆಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಸೇನೆಗಾಗಿ ತಯಾರಿಸಲಾಗಿದ್ದ ಟಾಟಾ ಸಫಾರಿ ಕಾರಿನ ಚಿತ್ರಗಳು ಸೋರಿಕೆ..

ಎಂಜಿನ್ ಸಾಮರ್ಥ್ಯ ಆರ್ಮಿ ವರ್ಷನ್ ಟಾಟಾ ಸಫಾರಿ ಸ್ಟ್ರೋಮ್ ಕಾರುಗಳು 2.2 ಲೀಟರ್ 4 ಸಿಲಿಂಡರಿನ ಟರ್ಬೋ ಚಾರ್ಜ್ಡ್ ಡೀಸೇಲ್ ಎಂಜಿನ್ ಪಡೆದುಕೊಂಡಿದ್ದು, 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 154ಬಿಎಚ್‌ಪಿ ಮತ್ತು 400ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು.

ಸೇನೆಗಾಗಿ ತಯಾರಿಸಲಾಗಿದ್ದ ಟಾಟಾ ಸಫಾರಿ ಕಾರಿನ ಚಿತ್ರಗಳು ಸೋರಿಕೆ..

ಇನ್ನೊಂದು ಪ್ರಮುಖ ವಿಚಾರ ಅಂದ್ರೆ, ಟಾಟಾ ಸಫಾರಿ ಸ್ಟ್ರೋಮ್ ಕಾರುಗಳು 4x4 ಡ್ರೈವ್ ಟೆಕ್ನಾಲಜಿಯೊಂದಿಗೆ ಆಫ್ ರೋಡ್ ಕೌಶಲ್ಯ ಹೊಂದಿದ್ದು, ಇದು ಗಡಿಭಾಗಗಳಲ್ಲಿನ ರಕ್ಷಣಾ ಕಾರ್ಯಚರಣೆಗಳಲ್ಲಿ ಮಹತ್ವದ ಪಾತ್ರವಹಿಸಲಿವೆ.

ಸೇನೆಗಾಗಿ ತಯಾರಿಸಲಾಗಿದ್ದ ಟಾಟಾ ಸಫಾರಿ ಕಾರಿನ ಚಿತ್ರಗಳು ಸೋರಿಕೆ..

ಇನ್ನು ಸಮಕಾಲೀನ ಪರಿಸ್ಥಿತಿಯಲ್ಲಿ ಭಾರತೀಯ ಸೇನೆಯು ತನ್ನ ಅಗತ್ಯಗಳಿಗನುಸಾರವಾಗಿ ವಾಹನಗಳನ್ನು ಅಪ್‌ಗ್ರೇಡ್ ಮಾಡುತ್ತಿದ್ದು, ಸೇನೆಗೆ ಇದೀಗ ತನ್ನ ಸಾಮಾನ್ಯ ಸೇನಾ ವಾಹನಗಳಿಗಾಗಿ ಕನಿಷ್ಠ 120 ಹಾರ್ಸ್ ಪವರ್ ಉತ್ಪಾದಿಸುವ ಟರ್ಬೊ ಡೀಸೆಲ್ ಎಂಜಿನ್ ವಾಹನಗಳ ಅಗತ್ಯವಿದೆ.

Source : Team-BHP

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಬಿಎಸ್ 6 ವೈಶಿಷ್ಟ್ಯತೆಗಳೊಂದಿಗೆ ಬರಲಿದೆ ನೆಕ್ಸ್ಟ್ ಜನರೇಷನ್ ಮಹೀಂದ್ರಾ ಥಾರ್

ಹೊಸ ಎಕ್ಸ್‌ಯುವಿ500 v/s ಜೀಪ್ ಕಂಪಾಸ್ v/s ಹ್ಯುಂಡೈ ಕ್ರೇಟಾ... ಯಾವುದು ಬೆಸ್ಟ್?

ಲಂಚಾವತಾರ ಬಿಚ್ಚಿಟ್ಟ ಯುವಕನಿಗೆ ಪೊಲೀಸರಿಂದಲೇ ಲಂಚದ ಆಮೀಷ...

ಬ್ಯಾಡ್ಜ್ ವಿಚಾರದಲ್ಲಿ ಕಾರು ಚಾಲಕರಿಗೆ ಸಿಹಿ ಸುದ್ದಿ ನೀಡಿದ ಕೇಂದ್ರ....

ಗ್ರಾಹಕನ ಕೈ ಸೇರುವ ಮುನ್ನವೇ ಗ್ಯಾರೇಜ್ ಸೇರಿದ ಮಾರುತಿ ಸುಜುಕಿ ಹೊಸ ಡಿಜೈರ್

Article Published On: Monday, April 23, 2018, 12:39 [IST]
English summary
Army-spec Tata Safari's deliveries begin.
Read more on tata motors
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+