ಬ್ಯಾಡ್ಜ್ ವಿಚಾರದಲ್ಲಿ ಕಾರು ಚಾಲಕರಿಗೆ ಸಿಹಿ ಸುದ್ದಿ ನೀಡಿದ ಕೇಂದ್ರ....
ವಾಹನ ಸವಾರರಿಗೆ ಕೇಂದ್ರ ಸಾರಿಗೆ ಇಲಾಖೆಯು ಸಿಹಿಸುದ್ದಿ ನೀಡಿದ್ದು, ವಾಣಿಜ್ಯ ಉದ್ದೇಶಗಳಿಗೆ ಬಳಕೆಯಾಗುವ ಟ್ಯಾಕ್ಸಿ, ತ್ರಿ ಚಕ್ರ ವಾಹನ, ಆಟೋ ಮತ್ತು ಇ ಕಾರ್ಟ್ ವಾಹನ ಚಾಲಕರಿಗೆ ರಿಲೀಫ್ ನೀಡಿದೆ.
ಬ್ಯಾಡ್ಜ್ ಪಡೆಯಲು ಇಷ್ಟು ದಿನಗಳ ಕಾಲ ಹರಸಾಹಸ ಪಡಬೇಕಿದ್ದ ವಾಹನ ಸವಾರರಿಗೆ ಕೇಂದ್ರ ಸಾರಿಗೆ ಇಲಾಖೆಯು ಸಿಹಿಸುದ್ದಿ ನೀಡಿದ್ದು, ವಾಣಿಜ್ಯ ಉದ್ದೇಶಗಳಿಗೆ ಬಳಕೆಯಾಗುವ ಟ್ಯಾಕ್ಸಿ, ತ್ರಿ ಚಕ್ರ ವಾಹನ, ಆಟೋ ಮತ್ತು ಇ ಕಾರ್ಟ್ ವಾಹನ ಚಾಲಕರಿಗೆ ರಿಲೀಫ್ ನೀಡಿದೆ.

ಹೌದು.. ಸದ್ಯ ಮಾರುಕಟ್ಟೆಯಲ್ಲಿ ವಾಣಿಜ್ಯ ಉದ್ದೇಶಗಳಿಗಾಗಿ ಬಳಕೆಯಾಗುತ್ತಿರುವ ಟ್ಯಾಕ್ಸಿ, ತ್ರಿ ಚಕ್ರವಾಹನಗಳು ಹಾಗೂ ಆಹಾರ ಸಾಮಗ್ರಿ ಸಾಗಿಸುವ ದ್ವಿಚಕ್ರ ವಾಹನಗಳಿಗೆ ಇನ್ನು ಮುಂದೆ ವಾಣಿಜ್ಯ ಪರವಾನಗಿ ಪಡೆಯಲೇಬೇಕೆಂಬ ನಿಯಮ ಕಡ್ಡಾಯವಿಲ್ಲ ಎಂದು ಹೇಳಿದೆ.

ಇದರಿಂದಾಗಿ ಲಘು ವಾಣಿಜ್ಯ ವಾಹನ ಚಾಲಕರು ತಮ್ಮ ಖಾಸಗಿ ಚಾಲನಾ ಪರವಾನಗಿಯಾದ ಡಿಎಲ್ ಹೊಂದಿದ್ದರು ಸಹ ಹಗುರ ವಾಣಿಜ್ಯ ವಾಹನಗಳ ಚಾಲನೆಗೆ ಅವಕಾಶ ಇದೆ ಎಂದು ಕೇಂದ್ರ ಸರ್ಕಾರ ಸ್ಪಪ್ಟಪಡಿಸಿದೆ.

ಹೊಸ ನಿಯಮ ಯಾರಿಗೆ ಅನ್ವಯ?
ಅಂದಹಾಗೆ, ಕೇಂದ್ರ ಸರ್ಕಾರ ಸ್ಪಷ್ಟಪಡಿಸಿರುವ ನಿಯಮದ ಪ್ರಕಾರ ಟ್ಯಾಕ್ಸಿ ಹಾಗೂ ತ್ರಿಚಕ್ರ ವಾಹನಗಳಿಗೆ ಮಾತ್ರ ಇದು ಅನ್ವಯವಾಗಲಿದೆ. ಹೀಗಾಗಿ ಭಾರೀ ಗಾತ್ರದ ಟ್ರಕ್‌ಗಳು, ಲಾರಿಗಳು ಮತ್ತು ಭಾರೀ ಗಾತ್ರದ ವಾಹನಗಳಿಗೆ ಯಾವುದೇ ವಿನಾಯಿತಿ ಇಲ್ಲ ಎಂದಿದೆ.

ಹೀಗಾಗಿ ಭಾರೀ ಗಾತ್ರದ ವಾಣಿಜ್ಯ ವಾಹನಗಳನ್ನು ಚಾಲನೆ ಮಾಡುವ ವಾಹನ ಸವಾರರು ಕಡ್ಡಾಯ ಬ್ಯಾಡ್ಜ್(ಕಮರ್ಷಿಯಲ್ ಲೈಸೆನ್ಸ್) ಹೊಂದಲೇಬೇಕು ಎಂದು ಕೇಂದ್ರ ಸಾರಿಗೆ ಇಲಾಖೆ ಸ್ಪಷ್ಟಪಡಿಸಿದ್ದು, ಜೊತೆಗೆ ವಾಣಿಜ್ಯ ಉದ್ದೇಶದ ವಾಹನ ಚಾಲಕರಿಗೆ ಬ್ಯಾಡ್ಜ್ ಗಳನ್ನು ರಾಜ್ಯ ಸಾರಿಗೆ ಇಲಾಖೆಯೇ ವಿತರಿಸಬೇಕೆಂದು ಸೂಚನೆ ನೀಡಿದೆ.

ಹೊಸ ನಿಯಮದಿಂದ ಏನ್ ಉಪಯೋಗ?
ಹೊಸ ನಿಯಮದಿಂದ ಲಘು ಮೋಟಾರು ವಾಹನ ಲೈಸೆನ್ಸ್ನಲ್ಲೇ ಟ್ಯಾಕ್ಸಿ ಓಡಿಸಲು ಅನುಮತಿ ನೀಡಲಾಗಿದ್ದು, ವಾಣಿಜ್ಯ ವಾಹನ ಚಾಲನಾ ಪರವಾನಿಗೆ ಇಲ್ಲದೇ ಇದ್ದ ಸಂದರ್ಭದಲ್ಲಿ ವಿಮೆ ನೀಡಲು ವಿಮಾ ಕಂಪನಿಗಳು ಹಿಂದೇಟು ಹಾಕುತ್ತಿದ್ದವು. ಆದ್ರೆ ಇನ್ಮುಂದೆ ಮುಂದೆ ಎಲ್ಲ ಚಾಲಕರಿಗೂ ವಿಮೆ ಅನ್ವಯವಾಗಲಿದೆ.

ಇದಲ್ಲದೇ ಬ್ಯಾಡ್ಜ್ ಪಡೆಯಲು ಇಷ್ಟು ದಿನ ಕಾಲ ಲಂಚ ಪಾವತಿಸಲೇಬೇಕಾದ ಪರಿಸ್ಥಿತಿಗೂ ಬ್ರೇಕ್ ಬೀಳಲಿದ್ದು, ಲಘು ವಾಣಿಜ್ಯ ವಾಹನ ಚಾಲನೆಗಾಗಿ ಬ್ಯಾಡ್ಜ್ ಅನಿವಾರ್ಯವಾಗಿರುವ ಚಾಲಕರಿಗೆ ಇದೊಂದು ಅತ್ಯುತ್ತಮ ಅವಕಾಶ ಎನ್ನಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:
ಯಾಕ್ರಿ ಲಂಚ ಕೊಡ್ತಿರಾ? ಇನ್ಮುಂದೆ ಸುಲಭದಲ್ಲೇ ಸಿಗಲಿದೆ ಡ್ರೈವಿಂಗ್ ಲೈಸೆನ್ಸ್..!!
ಗ್ರಾಹಕನ ಕೈ ಸೇರುವ ಮುನ್ನವೇ ಗ್ಯಾರೇಜ್ ಸೇರಿದ ಮಾರುತಿ ಸುಜುಕಿ ಹೊಸ ಡಿಜೈರ್
ತಾಂತ್ರಿಕ ದೋಷದಿಂದಾಗಿ ನಡುರಸ್ತೆಯಲ್ಲೇ ಹೊತ್ತಿ ಉರಿದ ಬಿಜೆಪಿ ಮುಖಂಡನ ಹೊಸ ಫೋರ್ಡ್ ಎಂಡೀವರ್...
ಹೆಲ್ಮೆಟ್ ವಿಚಾರವಾಗಿ ಮಾರಾಮಾರಿ- ಯುವಕನನ್ನು ಕಂಬಕ್ಕೆ ಕಟ್ಟಿ ಥಳಿಸಿದ ಪೊಲೀಸರು..
30 ಕೋಟಿಗೂ ಹೆಚ್ಚು ಬೆಲೆಬಾಳುವ ಈ ಐಷಾರಾಮಿ ಎಸ್‌ಯುವಿ ಕಾರಿನ ವಿಶೇಷತೆ ಏನು?
ಟ್ರಾಫಿಕ್ ರೂಲ್ಸ್ ಬ್ರೇಕ್- ಮಗನನ್ನೇ ಹಿಡಿದು ದಂಡ ವಸೂಲಿ ಮಾಡಿದ ಪೊಲೀಸ್..


Click it and Unblock the Notifications








