ಬೆಂಗಳೂರಿನಲ್ಲಿ ಆಡಿ ಕ್ಯೂ5 ಕಾರು ಮಾರಾಟಕ್ಕೆ ಭರ್ಜರಿ ಚಾಲನೆ

ಐಷಾರಾಮಿ ಎಸ್‌ಯುವಿಗಳಲ್ಲಿ ಜನಮನ್ನಣೆ ಗಳಿಸಿರುವ ಆಡಿ ಕ್ಯೂ5 2018ರ ಆವೃತ್ತಿಯು ಕಳೆದ ಎರಡು ದಿನಗಳ ಹಿಂದಷ್ಟೇ ಬಿಡುಗಡೆಯಾಗಿದ್ದು, ಇದೀಗ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೂ ಕ್ಯೂ5 ಕಾರುಗಳ ಮಾರಾಟಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಗಿದೆ.

By Praveen

Recommended Video

Angry Bull Almost Rammed Into A Car - DriveSpark

ಮಧ್ಯಮ ಗಾತ್ರದ ಐಷಾರಾಮಿ ಎಸ್‌ಯುವಿಗಳಲ್ಲಿ ಜನಮನ್ನಣೆ ಗಳಿಸಿರುವ ಆಡಿ ಕ್ಯೂ5 2018ರ ಆವೃತ್ತಿಯು ಕಳೆದ ಎರಡು ದಿನಗಳ ಹಿಂದಷ್ಟೇ ಬಿಡುಗಡೆಯಾಗಿದ್ದು, ಇದೀಗ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೂ ಕ್ಯೂ5 ಕಾರುಗಳ ಮಾರಾಟಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಗಿದೆ.

ಬೆಂಗಳೂರಿನಲ್ಲಿ ಆಡಿ ಕ್ಯೂ5 ಕಾರು ಮಾರಾಟಕ್ಕೆ ಭರ್ಜರಿ ಚಾಲನೆ

ಈ ಹಿಂದೆ 2016ರ ಪ್ಯಾರಿಸ್ ಆಟೋ ಮೇಳದಲ್ಲಿ ಪ್ರದರ್ಶನಗೊಂಡ ನೀರಿಕ್ಷಿತ ಮಟ್ಟದ ಬೇಡಿಕೆ ಪಡೆದಿದ್ದ ಆಡಿ ಕ್ಯೂ5 ಕಾರುಗಳು ಭಾರತದಲ್ಲೂ ನೀರಿಕ್ಷಿತ ಮಾರಾಟ ಕಂಡಿದ್ದವು. ಹೀಗಾಗಿ ಗ್ರಾಹಕರ ಬೇಡಿಕೆಗೆ ತಕ್ಕಂತೆ ಇದೀಗ ಕ್ಯೂ5 2018ರ ಆವೃತ್ತಿಯನ್ನು ಪರಿಚಯಿಸಲಾಗಿದೆ.

ಬೆಂಗಳೂರಿನಲ್ಲಿ ಆಡಿ ಕ್ಯೂ5 ಕಾರು ಮಾರಾಟಕ್ಕೆ ಭರ್ಜರಿ ಚಾಲನೆ

ಕ್ಯೂ5 ಮಾದರಿಯಲ್ಲೇ ಮತ್ತೆರಡು ವಿವಿಧ ಆವೃತ್ತಿಗಳನ್ನು ಪರಿಚಯಿಸಿರುವ ಆಡಿ ಸಂಸ್ಥೆಯು ಕ್ಯೂ5 ಪ್ರಿಮಿಯಂ ಪ್ಲಸ್ ಮತ್ತು ಕ್ಯೂ5 ಟೆಕ್ನಾಲಜಿ ಎನ್ನುವ ಕಾರು ಮಾದರಿಗಳನ್ನು ಪರಿಚಯಿಸಿದೆ.

ಬೆಂಗಳೂರಿನಲ್ಲಿ ಆಡಿ ಕ್ಯೂ5 ಕಾರು ಮಾರಾಟಕ್ಕೆ ಭರ್ಜರಿ ಚಾಲನೆ

ಕಾರು ಮಾದರಿಗಳು -ಬೆಲೆ (ಬೆಂಗಳೂರು ಎಕ್ಸ್‌ಶೋರಂ)

ಕ್ಯೂ5 ಪ್ರಿಮಿಯಂ ಪ್ಲಸ್ -ರೂ. 53,25,000

ಕ್ಯೂ5 ಟೆಕ್ನಾಲಜಿ -ರೂ. 57,60,000

ಬೆಂಗಳೂರಿನಲ್ಲಿ ಆಡಿ ಕ್ಯೂ5 ಕಾರು ಮಾರಾಟಕ್ಕೆ ಭರ್ಜರಿ ಚಾಲನೆ

ಎಂಜಿನ್ ವೈಶಿಷ್ಟ್ಯತೆಗಳು

ಕ್ಯೂ5 ಮಾದರಿಗಳು 2-ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಹೊಂದಿದ್ದು, 187-ಬಿಎಚ್‌ಪಿ ಮತ್ತು 400-ಎನ್ಎಂ ಟಾರ್ಕ್ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿವೆ.

Trending On DriveSpark Kannada:

ಗ್ರಾಹಕರನ್ನು ಸೆಳೆಯುತ್ತಾ 7 ಆಸನದ ದಟ್ಸನ್ ಕ್ರಾಸ್ ಹೊಸ ಎಸ್‌ಯುವಿ?

ಉಬರ್ ಚಾಲಕನ ದುರ್ವರ್ತನೆಯಿಂದ ಬಯಲಾಯ್ತು ಮತ್ತೊಂದು ಸ್ಪೋಟಕ ಮಾಹಿತಿ..!!

ಭಾರತದಲ್ಲಿ ಇವು ಅಟ್ಟರ್ ಫ್ಲಾಪ್ ಕಾರುಗಳು

ಬೆಂಗಳೂರಿನಲ್ಲಿ ಆಡಿ ಕ್ಯೂ5 ಕಾರು ಮಾರಾಟಕ್ಕೆ ಭರ್ಜರಿ ಚಾಲನೆ

ಇದರ ಜೊತೆಗೆ 7-ಸ್ಪೀಡ್ ಟ್ರಾನಿಕ್ ಆಟೋ ಮ್ಯಾಟಿಕ್ ಗೇರ್‌ಬಾಕ್ಸ್, ವಿಸ್ತರಿಸಿದ ಬೂಟ್ ಸ್ಪೆಸ್, ರೂಮಿರಿಯರ್ ಟೆಕ್ನಾಲಜಿ ಪ್ರೇರಿತ ಒಳವಿನ್ಯಾಸ, ಸಿಂಗಲ್ ಫ್ರೇಮ್ ಗ್ರೀಲ್, ಮ್ಯಾಟಿಕ್ಸ್ ಎಲ್ಇಡಿ ಹೆಡ್‌ಲ್ಯಾಂಪ್, ಸ್ಪೋರ್ಟಿ ಬ್ಯಾನೆಟ್, ಎಲ್‌ಇಡಿ ಟೈಲ್‌ಗೇಟ್ ಪಡೆದುಕೊಂಡಿದೆ.

ಬೆಂಗಳೂರಿನಲ್ಲಿ ಆಡಿ ಕ್ಯೂ5 ಕಾರು ಮಾರಾಟಕ್ಕೆ ಭರ್ಜರಿ ಚಾಲನೆ

ಇನ್ನು ಹೊಸ ಕಾರುಗಳಲ್ಲಿ ಸುಧಾರಿತ ತಂತ್ರಜ್ಞಾನ ಬಳಕೆ ಹಿನ್ನೆಲೆ ಈ ಹಿಂದಿನ ಕ್ಯೂ5ಗಿಂತ ಹೊಸ ಕ್ಯೂ5 ಕಾರುಗಳು 90 ಕೆಜಿಯಷ್ಟು ಹಗುರವಾಗಿದ್ದು, ತ್ರಿ ಸ್ಪೋಕ್ ಲೆದರ್ ಸ್ಟಿರಿಂಗ್, ವಿದ್ಯುತ್ ಪ್ರೇರಣೆಯ ಫ್ರಂಟ್ ಸೀಟು ಮತ್ತು ಚಾಲಕ ಭಾಗದಲ್ಲಿ ಮೆಮೊರಿ ಸ್ಲಾಟ್ ನೀಡಲಾಗಿದೆ.

ಬೆಂಗಳೂರಿನಲ್ಲಿ ಆಡಿ ಕ್ಯೂ5 ಕಾರು ಮಾರಾಟಕ್ಕೆ ಭರ್ಜರಿ ಚಾಲನೆ

ಕ್ಯೂ5 ಕಾರುಗಳಲ್ಲಿ ಇತರೆ ಮಾದರಿಗಳಿಂತ ಹೆಚ್ಚಿನ ಗುಣಮಟ್ಟ ಕಾಯ್ದುಕೊಂಡಿರುವ ಆಡಿ ಸಂಸ್ಥೆಯು ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಿದ್ದು, 8 ಏರ್‌ಬ್ಯಾಗ್, ಪಾರ್ಕಿಂಗ್ ರಿರ್ ಕ್ಯಾಮೆರಾ ಮತ್ತು ಕಂಫರ್ಟ್, ಡೈನಾಮಿಕ್, ಆಟೋ, ಆಪ್ ರೋಡ್ ಚಾಲನಾ ಸೌಲಭ್ಯಗಳನ್ನು ಒದಗಿಸಲಾಗಿದೆ.

ಬೆಂಗಳೂರಿನಲ್ಲಿ ಆಡಿ ಕ್ಯೂ5 ಕಾರು ಮಾರಾಟಕ್ಕೆ ಭರ್ಜರಿ ಚಾಲನೆ

ಪ್ರತಿ ಸ್ಪರ್ಧಿಗಳು

ಮರ್ಸಿಡಿಸ್ ಬೆಂಝ್ ಜಿಎಲ್‌ಸಿ, ಲ್ಯಾಂಡ್ ರೋವರ್ ಡಿಸ್ಕವರಿ ಸ್ಪೋರ್ಟ್, ಬಿಎಂಡಬ್ಲ್ಯು ಎಕ್ಸ್3 ಮತ್ತು ವೊಲ್ವೋ ಎಕ್ಸ್‌ಸಿ60 ಮಾದರಿಗಳಿಗೆ ಆಡಿ ಕ್ಯೂ5 ಪ್ರತಿಸ್ಪರ್ಧಿಯಾಗಲಿದೆ.

ಬೆಂಗಳೂರಿನಲ್ಲಿ ಆಡಿ ಕ್ಯೂ5 ಕಾರು ಮಾರಾಟಕ್ಕೆ ಭರ್ಜರಿ ಚಾಲನೆ

ಡ್ರೈವ್ ಸ್ಪಾಕ್ ಅಭಿಪ್ರಾಯ

ದೇಶಿಯ ಮಾರುಕಟ್ಟೆಯಲ್ಲಿ ತನ್ನದೇ ಆದ ಜನಪ್ರಿಯತೆ ಹೊಂದಿರುವ ಆಡಿ ಸಂಸ್ಥೆಯು ವಿವಿಧ ಕಾರು ಉತ್ಪನ್ನಗಳ ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಇದೀಗ ಕ್ಯೂ5 ಕೂಡಾ ನೀರಿಕ್ಷಿತ ಮಟ್ಟದ ಮಾರಾಟ ಪ್ರಮಾಣ ದಾಖಲಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

Trending DriveSpark YouTube Videos

Subscribe To DriveSpark Kannada YouTube Channel - Click Here

Article Published On: Monday, January 22, 2018, 12:26 [IST]
English summary
Audi Q5 Launched In Bangalore - Prices Start At Rs 53.25 Lakh.
Read more on audi ಆಡಿ suv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+