ಗ್ರಾಹಕರನ್ನು ಸೆಳೆಯುತ್ತಾ 7 ಆಸನದ ಡಟ್ಸನ್ ಕ್ರಾಸ್ ಹೊಸ ಎಸ್‌ಯುವಿ?

Written By:
Recommended Video - Watch Now!
Bangalore Traffic Police Rides With Illegal Number Plate - DriveSpark

2018ರ ಅವಧಿಗೆ ಬಿಡುಗಡೆಯಾಗಲಿರುವ ಪ್ರಮುಖ ಎಸ್‌ಯುವಿ ಕಾರುಗಳಲ್ಲಿ ಡಟ್ಸನ್ ಕ್ರಾಸ್ ಹೊಸ ನೀರಿಕ್ಷೆ ಹುಟ್ಟುಹಾಕಿದ್ದು, ಗ್ರಾಹಕರನ್ನು ಸೆಳೆಯುವ ಉದ್ದೇಶದೊಂದಿಗೆ ವಿನೂತನ ವಿನ್ಯಾಸಗಳೊಂದಿಗೆ ದೇಶಿಯ ಮಾರುಕಟ್ಟೆ ಪ್ರವೇಶ ಪಡೆಯುತ್ತಿದೆ.

ಗ್ರಾಹಕರನ್ನು ಸೆಳೆಯುತ್ತಾ 7 ಆಸನದ ಡಟ್ಸನ್ ಕ್ರಾಸ್ ಹೊಸ ಎಸ್‌ಯುವಿ?

ಸದ್ಯ ವಾಣಿಜ್ಯ ಬಳಕೆಯ ಉದ್ದೇಶಕ್ಕಾಗಿ 7 ಸೀಟರ್ ಕಾರುಗಳಿಗೆ ಭಾರತದಲ್ಲಿ ಉತ್ತಮ ಬೇಡಿಕೆಯಿದ್ದು, ಟೊಯೊಟಾ ಇನೋವಾ ಹೊರತು ಪಡಿಸಿ ಉಳಿದ ಕಾರು ಮಾದರಿಗಳು ಅಷ್ಟೇನು ಯಶಸ್ವಿಯಾಗುತ್ತಿಲ್ಲ. ಹೀಗಾಗಿ ಗ್ರಾಹಕರ ಬೇಡಿಕೆಗೆ ತಕ್ಕಂತೆ ಡಟ್ಸನ್ ಕ್ರಾಸ್ ಹೊರತರಲಾಗುತ್ತಿದ್ದು, ಭಾರೀ ನೀರಿಕ್ಷೆ ಹುಟ್ಟುಹಾಕಿದೆ.

ಗ್ರಾಹಕರನ್ನು ಸೆಳೆಯುತ್ತಾ 7 ಆಸನದ ಡಟ್ಸನ್ ಕ್ರಾಸ್ ಹೊಸ ಎಸ್‌ಯುವಿ?

ಡಟ್ಸನ್ ಬಿಡುಗಡೆ ಮಾಡಿರುವ ಮಾಹಿತಿಗಳ ಪ್ರಕಾರ ಬರಲಿರುವ ಡಟ್ಸನ್ ಕ್ರಾಸ್ ಕಾರುಗಳು ಸಿಎಂಎಫ್-ಎ ಚಾರ್ಸಿ ಆಧಾರದ ಮೇಲೆ ನಿರ್ಮಾಣವಾಗಿದ್ದು, ದೊಡ್ಡದಾದ ಒಳ ವಿನ್ಯಾಸವನ್ನು ಪಡೆದುಕೊಂಡಿದೆ.

ಗ್ರಾಹಕರನ್ನು ಸೆಳೆಯುತ್ತಾ 7 ಆಸನದ ಡಟ್ಸನ್ ಕ್ರಾಸ್ ಹೊಸ ಎಸ್‌ಯುವಿ?

ಜೊತೆಗೆ ಬಾಡಿ ಕ್ಲ್ಯಾಡಿಂಗ್, ಹೊಲೋಜೆನ್ ಪ್ರೋಜೆಕ್ಟರ್ ಹೆಡ್‌ಲ್ಯಾಂಪ್, ಫ್ರಂಟ್ ಫಾಗ್ ಲ್ಯಾಂಪ್, ಎಲ್ಇಡಿ ಪೋಜಿಷನ್ ಲ್ಯಾಂಪ್, ರೂಫ್ ರೈಲ್ಸ್, ರಿರ್ ವೈಪರ್ ಸೇರಿದಂತೆ 15-ಇಂಚಿನ ಅಲಾಯ್ ಚಕ್ರಗಳು, ಹನಿಕೊಂಬೋ ಗ್ರಿಲ್ ಪಡೆದುಕೊಂಡಿದೆ.

ಗ್ರಾಹಕರನ್ನು ಸೆಳೆಯುತ್ತಾ 7 ಆಸನದ ಡಟ್ಸನ್ ಕ್ರಾಸ್ ಹೊಸ ಎಸ್‌ಯುವಿ?

ಈ ಹಿಂದೆ 2016ರ ಇಂಡಿಯನ್ ಆಟೋ ಎಕ್ಸ್‌ಪೋದಲ್ಲೇ ಡಟ್ಸನ್ ಕ್ರಾಸ್ ಪರಿಕಲ್ಪನೆಯನ್ನು ಪ್ರದರ್ಶನ ಮಾಡಲಾಗಿತ್ತಾದರೂ ನಿಗದಿತ ಅವಧಿಯಲ್ಲಿ ಮಾರುಕಟ್ಟೆಗೆ ಪರಿಚಯಸಲು ತಡವಾಗಿದ್ದು, ಇದೀಗ ಮಾರುಕಟ್ಟೆಯ ಸನ್ನಿವೇಶಗಳಿಗೆ ಅನುಗುಣವಾಗಿ ಡಟ್ಸನ್ ಕ್ರಾಸ್ ಅಭಿವೃದ್ಧಿ ಮಾಡಲಾಗಿದೆ.

Trending On DriveSpark Kannada:

ಸುಖಕರ ಕಾರು ಪ್ರಯಾಣಕ್ಕೆ ಕಡ್ಡಾಯವಾಗಿ ಬೇಕು ಈ 9 ಆಕ್ಸೆಸರಿಗಳು..

ಉಬರ್ ಚಾಲಕನ ದುರ್ವರ್ತನೆಯಿಂದ ಬಯಲಾಯ್ತು ಮತ್ತೊಂದು ಸ್ಪೋಟಕ ಮಾಹಿತಿ..!!

ಭಾರತದಲ್ಲಿ ಇವು ಅಟ್ಟರ್ ಫ್ಲಾಪ್ ಕಾರುಗಳು

ಗ್ರಾಹಕರನ್ನು ಸೆಳೆಯುತ್ತಾ 7 ಆಸನದ ಡಟ್ಸನ್ ಕ್ರಾಸ್ ಹೊಸ ಎಸ್‌ಯುವಿ?

ಎಂಜಿನ್ ಸಾಮರ್ಥ್ಯ

1.2-ಲೀಟರ್ ತ್ರಿ ಸಿಲಿಂಡರ್ ಎಂಜಿನ್ ಹೊಂದಿರುವ ಡಟ್ಸನ್ ಕ್ರಾಸ್, 68-ಬಿಎಚ್‌ಪಿ ಮತ್ತು 104-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿ ಹೊಂದಿದ್ದು, 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಮತ್ತು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಒದಗಿಸಲಾಗಿದೆ.

ಗ್ರಾಹಕರನ್ನು ಸೆಳೆಯುತ್ತಾ 7 ಆಸನದ ಡಟ್ಸನ್ ಕ್ರಾಸ್ ಹೊಸ ಎಸ್‌ಯುವಿ?

ಇನ್ನು ಕಾರಿನ ಸುರಕ್ಷಾ ವಿಧಾನಗಳ ಬಗ್ಗೆ ಹೇಳುವುದಾದರೇ ಮುಂಭಾಗದ ಚಕ್ರಗಳಲ್ಲಿ ಡಿಸ್ಕ್ ಬ್ರೇಕ್ ಸಿಸ್ಟಂ ಹೊಂದಿರುವ ಡಟ್ಸನ್ ಕ್ರಾಸ್ ಕಾರುಗಳು, ಎಬಿಎಸ್, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ರಿರ್ ಪಾರ್ಕಿಂಗ್ ಸೆನ್ಸಾರ್, ವಿದ್ಯುತ್ ಮಾದರಿಯ ರಿರ್ ವ್ಯೂವ್ ಮಿರರ್ ನೀಡಲಾಗಿದೆ.

ಗ್ರಾಹಕರನ್ನು ಸೆಳೆಯುತ್ತಾ 7 ಆಸನದ ಡಟ್ಸನ್ ಕ್ರಾಸ್ ಹೊಸ ಎಸ್‌ಯುವಿ?

ಬಿಡುಗಡೆಯ ದಿನಾಂಕ

ಡಟ್ಸನ್ ಕ್ರಾಸ್ ಎಸ್‌ಯುವಿ ಕಾರುಗಳು ಏಪ್ರಿಲ್ ಅಥವಾ ಮೇ ಅಂತ್ಯಕ್ಕೆ ಭಾರತದಲ್ಲಿ ಬಿಡುಗಡೆಯಾಗಲಿದ್ದು, ಮಧ್ಯಮ ಗಾತ್ರದ ಎಸ್‌ಯುವಿಗಳಾದ ಮಹೀಂದ್ರಾ ಕೆಯುವಿ 100, ಫೋರ್ಡ್ ಫಿಗೊ ಸೇರಿದಂತೆ ಪ್ರಮುಖ ಕಾರು ಆವೃತ್ತಿಗೆ ತೀವ್ರ ಪ್ರತಿಸ್ಪರ್ಧಿಯಾಗಲಿದೆ.

ಗ್ರಾಹಕರನ್ನು ಸೆಳೆಯುತ್ತಾ 7 ಆಸನದ ಡಟ್ಸನ್ ಕ್ರಾಸ್ ಹೊಸ ಎಸ್‌ಯುವಿ?

ಬೆಲೆ (ಅಂದಾಜು)

ಡಟ್ಸನ್ ಕ್ರಾಸ್ ಕಾರುಗಳು 6 ಲಕ್ಷದಿಂದ 10 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

Trending On DriveSpark Kannada:

ಮುಕೇಶ್ ಅಂಬಾನಿ ಡ್ರೈವರ್ ಸಂಬಳ ಕೇಳಿದ್ರೆ ಬೆಚ್ಚಿ ಬೀಳ್ತೀರಾ !!

ಎಂದಿಗೂ ಮರೆಯಲಾಗದ ಟೈಟಾನಿಕ್ ದುರಂತದ ನಗ್ನ ಸತ್ಯಗಳು

ನಟ ದರ್ಶನ್ ಖರೀದಿಸಿದ ಲಂಬೋರ್ಗಿನಿ ಅವೆಂಟಡೊರ್ ಸ್ಪೆಷಲ್ ಏನು?

ಗ್ರಾಹಕರನ್ನು ಸೆಳೆಯುತ್ತಾ 7 ಆಸನದ ಡಟ್ಸನ್ ಕ್ರಾಸ್ ಹೊಸ ಎಸ್‌ಯುವಿ?

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಎಸ್‌ಯುವಿ ಆವೃತ್ತಿಗಳಿಗೆ ಉತ್ತಮ ಬೇಡಿಕೆಯಿದ್ದು, ಡಟ್ಸನ್ ಕ್ರಾಸ್ ಉತ್ತಮ ಆಯ್ಕೆಯಾಗುವ ಎಲ್ಲಾ ಭರವಸೆಗಳನ್ನು ಹೊಂದಿದೆ. ಹೀಗಾಗಿ ಮುಂಬರುವ ದಿನಗಳಲ್ಲಿ ಡಟ್ಸನ್ ಕ್ರಾಸ್ ಯಾವ ರೀತಿ ಗ್ರಾಹಕರನ್ನು ಸೆಳೆಯಲಿದೆ ಎಂಬುವುದನ್ನ ಕಾಯ್ದು ನೋಡಬೇಕಿದೆ.

Trending DriveSpark YouTube Videos

Subscribe To DriveSpark Kannada YouTube Channel - Click Here

Read more on datsun suv
English summary
Datsun Cross Revealed — Most Feature-Rich Product From The Company.
Story first published: Saturday, January 20, 2018, 13:38 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark