ಹೊಸ ನಮೂನೆಯ ಆಡಿ ಕ್ಯೂ5 ಭಾರತದಲ್ಲಿ ಬಿಡುಗಡೆ- ಬೆಲೆ ರೂ.53.25 ಲಕ್ಷ
ಮಧ್ಯಮ ಗಾತ್ರದ ಐಷಾರಾಮಿ ಎಸ್‌ಯುವಿಗಳಲ್ಲಿ ಜನಮನ್ನಣೆ ಗಳಿಸಿರುವ ಆಡಿ ಕ್ಯೂ5 2018ರ ಆವೃತ್ತಿಯು ಬಿಡುಗಡೆಯಾಗಿದ್ದು, ಹೊಸ ಕಾರಿನ ಬೆಲೆಯನ್ನು ಎಕ್ಸ್‌ಶೋರಂಗಳ ಪ್ರಕಾರ ರೂ.53.25 ಲಕ್ಷಕ್ಕೆ ನಿಗದಿ ಮಾಡಲಾಗಿದೆ.
Recommended Video

ಮಧ್ಯಮ ಗಾತ್ರದ ಐಷಾರಾಮಿ ಎಸ್‌ಯುವಿಗಳಲ್ಲಿ ಜನಮನ್ನಣೆ ಗಳಿಸಿರುವ ಆಡಿ ಕ್ಯೂ5 2018ರ ಆವೃತ್ತಿಯು ಬಿಡುಗಡೆಯಾಗಿದ್ದು, ಹೊಸ ಕಾರಿನ ಬೆಲೆಯನ್ನು ಎಕ್ಸ್‌ಶೋರಂಗಳ ಪ್ರಕಾರ ರೂ.53.25 ಲಕ್ಷಕ್ಕೆ ನಿಗದಿ ಮಾಡಲಾಗಿದೆ.

ಈ ಹಿಂದೆ 2016ರ ಪ್ಯಾರಿಸ್ ಆಟೋ ಮೇಳದಲ್ಲಿ ಪ್ರದರ್ಶನಗೊಂಡ ನೀರಿಕ್ಷಿತ ಮಟ್ಟದ ಬೇಡಿಕೆ ಪಡೆದಿದ್ದ ಆಡಿ ಕ್ಯೂ5 ಕಾರುಗಳು ಭಾರತದಲ್ಲೂ ನೀರಿಕ್ಷಿತ ಮಾರಾಟ ಕಂಡಿದ್ದವು. ಹೀಗಾಗಿ ಗ್ರಾಹಕರ ಬೇಡಿಕೆಗೆ ತಕ್ಕಂತೆ ಇದೀಗ ಕ್ಯೂ5 2018ರ ಆವೃತ್ತಿಯನ್ನು ಪರಿಚಯಿಸಲಾಗಿದೆ.

ಕ್ಯೂ5 ಮಾದರಿಯಲ್ಲೇ ಮತ್ತೆರಡು ವಿವಿಧ ಆವೃತ್ತಿಗಳನ್ನು ಪರಿಚಯಿಸಿರುವ ಆಡಿ ಸಂಸ್ಥೆಯು ಕ್ಯೂ5 ಪ್ರಿಮಿಯಂ ಪ್ಲಸ್ ಮತ್ತು ಕ್ಯೂ5 ಟೆಕ್ನಾಲಜಿ ಎನ್ನುವ ಕಾರು ಮಾದರಿಗಳನ್ನು ಪರಿಚಯಿಸಿದೆ.

| ಕಾರು ಮಾದರಿಗಳು | ಬೆಲೆ (ಎಕ್ಸ್‌ಶೋರಂ) |
| ಕ್ಯೂ5 ಪ್ರಿಮಿಯಂ ಪ್ಲಸ್ | ರೂ. 53,25,000 |
| ಕ್ಯೂ5 ಟೆಕ್ನಾಲಜಿ | ರೂ. 57,60,000 |

ಎಂಜಿನ್ ವೈಶಿಷ್ಟ್ಯತೆಗಳು
ಕ್ಯೂ5 ಮಾದರಿಗಳು 2-ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಹೊಂದಿದ್ದು, 187-ಬಿಎಚ್‌ಪಿ ಮತ್ತು 400-ಎನ್ಎಂ ಟಾರ್ಕ್ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿವೆ.
Trending On DriveSpark Kannada:
ಡ್ರ್ಯಾಗ್ ರೇಸ್ ವೇಳೆ ಅವಘಡ- ಆಡಿ ಕಾರನ್ನು ಹಿಂದಿಕ್ಕಲು ಹೋದ ಬಿಎಂಡಬ್ಲ್ಯು 3-ಸೀರಿಸ್ ಪೀಸ್ ಪೀಸ್...
ಬಲೆರೋ ಮೇಲೆತ್ತಿ ವಿಚಿತ್ರ ಸ್ಟಂಟ್- ನಟ ಬಾಲಯ್ಯನನ್ನು ಕಾಲೆಳೆದ ಆನಂದ್ ಮಹಿಂದ್ರಾ!

ಇದರ ಜೊತೆಗೆ 7-ಸ್ಪೀಡ್ ಟ್ರಾನಿಕ್ ಆಟೋ ಮ್ಯಾಟಿಕ್ ಗೇರ್‌ಬಾಕ್ಸ್, ವಿಸ್ತರಿಸಿದ ಬೂಟ್ ಸ್ಪೆಸ್, ರೂಮಿರಿಯರ್ ಟೆಕ್ನಾಲಜಿ ಪ್ರೇರಿತ ಒಳವಿನ್ಯಾಸ, ಸಿಂಗಲ್ ಫ್ರೇಮ್ ಗ್ರೀಲ್, ಮ್ಯಾಟಿಕ್ಸ್ ಎಲ್ಇಡಿ ಹೆಡ್‌ಲ್ಯಾಂಪ್, ಸ್ಪೋರ್ಟಿ ಬ್ಯಾನೆಟ್, ಎಲ್‌ಇಡಿ ಟೈಲ್‌ಗೇಟ್ ಪಡೆದುಕೊಂಡಿದೆ.

ಇನ್ನು ಹೊಸ ಕಾರುಗಳಲ್ಲಿ ಸುಧಾರಿತ ತಂತ್ರಜ್ಞಾನ ಬಳಕೆ ಹಿನ್ನೆಲೆ ಈ ಹಿಂದಿನ ಕ್ಯೂ5ಗಿಂತ ಹೊಸ ಕ್ಯೂ5 ಕಾರುಗಳು 90 ಕೆಜಿಯಷ್ಟು ಹಗುರವಾಗಿದ್ದು, ತ್ರಿ ಸ್ಪೋಕ್ ಲೆದರ್ ಸ್ಟಿರಿಂಗ್, ವಿದ್ಯುತ್ ಪ್ರೇರಣೆಯ ಫ್ರಂಟ್ ಸೀಟು ಮತ್ತು ಚಾಲಕ ಭಾಗದಲ್ಲಿ ಮೆಮೊರಿ ಸ್ಲಾಟ್ ನೀಡಲಾಗಿದೆ.

ಕ್ಯೂ5 ಕಾರುಗಳಲ್ಲಿ ಇತರೆ ಮಾದರಿಗಳಿಂತ ಹೆಚ್ಚಿನ ಗುಣಮಟ್ಟ ಕಾಯ್ದುಕೊಂಡಿರುವ ಆಡಿ ಸಂಸ್ಥೆಯು ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಿದ್ದು, 8 ಏರ್‌ಬ್ಯಾಗ್, ಪಾರ್ಕಿಂಗ್ ರಿರ್ ಕ್ಯಾಮೆರಾ ಮತ್ತು ಕಂಫರ್ಟ್, ಡೈನಾಮಿಕ್, ಆಟೋ , ಆಪ್ ರೋಡ್ ಚಾಲನಾ ಸೌಲಭ್ಯಗಳನ್ನು ಒದಗಿಸಲಾಗಿದೆ.

ಪ್ರತಿ ಸ್ಪರ್ಧಿಗಳು
ಮರ್ಸಿಡಿಸ್ ಬೆಂಝ್ ಜಿಎಲ್‌ಸಿ, ಲ್ಯಾಂಡ್ ರೋವರ್ ಡಿಸ್ಕವರಿ ಸ್ಪೋರ್ಟ್, ಬಿಎಂಡಬ್ಲ್ಯು ಎಕ್ಸ್3 ಮತ್ತು ವೊಲ್ವೋ ಎಕ್ಸ್‌ಸಿ60 ಮಾದರಿಗಳಿಗೆ ಆಡಿ ಕ್ಯೂ5 ಪ್ರತಿಸ್ಪರ್ಧಿಯಾಗಲಿದೆ.

ಡ್ರೈವ್ ಸ್ಪಾಕ್ ಅಭಿಪ್ರಾಯ
ದೇಶಿಯ ಮಾರುಕಟ್ಟೆಯಲ್ಲಿ ತನ್ನದೇ ಆದ ಜನಪ್ರಿಯತೆ ಹೊಂದಿರುವ ಆಡಿ ಸಂಸ್ಥೆಯು ವಿವಿಧ ಕಾರು ಉತ್ಪನ್ನಗಳ ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಇದೀಗ ಕ್ಯೂ5 ಕೂಡಾ ನೀರಿಕ್ಷಿತ ಮಟ್ಟದ ಮಾರಾಟ ಪ್ರಮಾಣ ದಾಖಲಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.
Trending On DriveSpark Kannada:
ನಟ ದರ್ಶನ್ ಖರೀದಿಸಿದ ಲಂಬೋರ್ಗಿನಿ ಅವೆಂಟಡೊರ್ ಸ್ಪೆಷಲ್ ಏನು?
ಮ್ಯಾನುವಲ್ ಕಾರು ಓಡಿಸುವಾಗ ಮಾಡಬಾರದ 5 ಅಂಶಗಳು!
Trending DriveSpark YouTube Videos
Subscribe To DriveSpark Kannada YouTube Channel - Click Here


Click it and Unblock the Notifications