ಬಲೆರೋ ಮೇಲೆತ್ತಿ ವಿಚಿತ್ರ ಸ್ಟಂಟ್- ನಟ ಬಾಲಯ್ಯನನ್ನು ಕಾಲೆಳೆದ ಆನಂದ್ ಮಹಿಂದ್ರಾ!

ತೆಲಗು ನಟ ನಂದಮೂರಿ ಬಾಲಕೃಷ್ಣ ಮಾಡುವ ವಿಚಿತ್ರ ಸ್ಟಂಟ್‌ಗಳ ಬಗ್ಗೆ ಮಹೀಂದ್ರಾ ಸಂಸ್ಥೆಯ ಮುಖ್ಯಸ್ಥ ಆನಂದ್ ಮಹೀಂದ್ರಾ ಟ್ವೀಟ್ ಮಾಡಿ ಹಾಸ್ಯ ಚಟಾಕಿ ಸಿಡಿಸಿದ್ದಾರೆ.

By Praveen

Recommended Video

Bangalore Traffic Police Rides With Illegal Number Plate - DriveSpark

ಸಿನಿಮಾಗಳಲ್ಲಿ ಸನ್ನಿವೇಶಕ್ಕೆ ತಕ್ಕಂತೆ ಸ್ಟಂಟ್‌ಗಳನ್ನು ಮಾಡೋದು ಕಾಮನ್. ಇದು ಇತರೆ ಚಿತ್ರರಂಗಗಳಿಂತ ತೆಲಗು ಮತ್ತು ತಮಿಳು ಸಿನಿಮಾಗಳಲ್ಲಿ ತುಸು ಹೆಚ್ಚೆ ಅಂದ್ರು ತಪ್ಪಾಗಲಾರದು. ಇದೇ ಕಾರಣಕ್ಕೆ ತೆಲಗು ನಟ ನಂದಮೂರಿ ಬಾಲಕೃಷ್ಣ ಮಾಡುವ ವಿಚಿತ್ರ ಸ್ಟಂಟ್‌ಗಳ ಬಗ್ಗೆ ಮಹೀಂದ್ರಾ ಸಂಸ್ಥೆಯ ಮುಖ್ಯಸ್ಥ ಆನಂದ್ ಮಹೀಂದ್ರಾ ಟ್ವೀಟ್ ಮಾಡಿ ಹಾಸ್ಯ ಚಟಾಕಿ ಸಿಡಿಸಿದ್ದಾರೆ.

ಬಲೆರೋ ಮೇಲೆತ್ತಿ ವಿಚಿತ್ರ ಸ್ಟಂಟ್- ನಟ ಬಾಲಯ್ಯನನ್ನು ಕಾಲೆಳೆದ ಆನಂದ್ ಮಹಿಂದ್ರಾ!

ಸಾಮಾನ್ಯವಾಗಿ ಸಿನಿಮಾ ಸಾಹಸ ಸನ್ನಿವೇಶಗಳಲ್ಲಿ ಭಾರಿ ವಾಹನಗಳನ್ನು ಒಂದೇ ಕೈಯಲ್ಲಿ ಮೇಲಕ್ಕೆತ್ತುವ, ಗಾಳಿಯಲ್ಲಿ ಹಾರಿಸುವ, ಅಲ್ಲೇ ಗಿರಿಕಿ ಹೊಡೆಯುವಂತೆ ಚಿತ್ರೀಕರಿಸುವುದನ್ನು ನಾವು ನೀವೆಲ್ಲಾ ನೋಡಿಯೇ ನೋಡಿರುತ್ತೇವೆ.

ಬಲೆರೋ ಮೇಲೆತ್ತಿ ವಿಚಿತ್ರ ಸ್ಟಂಟ್- ನಟ ಬಾಲಯ್ಯನನ್ನು ಕಾಲೆಳೆದ ಆನಂದ್ ಮಹಿಂದ್ರಾ!

ಅದರಲ್ಲೂ ಮುಖ್ಯವಾಗಿ ಮಹಿಂದ್ರಾ ನಿರ್ಮಾಣದ ವಾಹನಗಳೇ ಇದಕ್ಕೆ ಹೆಚ್ಚಾಗಿ ಬಳಕೆಯಾಗುತ್ತಿವೆ ಎಂಬುವುದು ಮತ್ತೊಂದು ಗಮನಿಸಬೇಕಾದ ಅಂಶ. ಈ ಬಗ್ಗೆ ಸ್ವತಃ ಮಹಿಂದ್ರಾ ಗ್ರೂಪ್‍ನ ಮುಖ್ಯಸ್ಥ ಆನಂದ್ ಮಹಿಂದ್ರಾ ಪ್ರತಿಕ್ರಿಯಿಸಿದ್ದಾರೆ.

ಬಲೆರೋ ಮೇಲೆತ್ತಿ ವಿಚಿತ್ರ ಸ್ಟಂಟ್- ನಟ ಬಾಲಯ್ಯನನ್ನು ಕಾಲೆಳೆದ ಆನಂದ್ ಮಹಿಂದ್ರಾ!

ಇತ್ತೀಚೆಗೆ ತೆರೆಕಂಡ ನಂದಮೂರಿ ಬಾಲಕೃಷ್ಣ ಅಭಿನಯದ 'ಜೈಸಿಂಹ' ಎಂಬ ಸಿನಿಮಾದಲ್ಲಿ ಬೊಲೆರೋ ವಾಹವನ್ನು ಒಂದೇ ಕೈಯಲ್ಲಿ ಎತ್ತಿ ಹಿಡಿಯುವ ಸನ್ನಿವೇಶ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಬಲೆರೋ ಮೇಲೆತ್ತಿ ವಿಚಿತ್ರ ಸ್ಟಂಟ್- ನಟ ಬಾಲಯ್ಯನನ್ನು ಕಾಲೆಳೆದ ಆನಂದ್ ಮಹಿಂದ್ರಾ!

ಅತಿರೇಕ ಎನ್ನುವಂತಹ ಈ ರೀತಿಯ ಸನ್ನಿವೇಶಗಳ ಬಗ್ಗೆ ಸ್ವತಃ ಮಹಿಂದ್ರಾ ಗ್ರೂಪ್ ಮುಖ್ಯಸ್ಥ ಆನಂದ್ ಮಹಿಂದ್ರಾ ಹಾಸ್ಯಚಟಾಕಿ ಸಿಡಿಸಿದ್ದಾರೆ.

Trending On DriveSpark Kannada:

ಡ್ರ್ಯಾಗ್ ರೇಸ್ ವೇಳೆ ಅವಘಡ- ಆಡಿ ಕಾರನ್ನು ಹಿಂದಿಕ್ಕಲು ಹೋದ ಬಿಎಂಡಬ್ಲ್ಯು 3-ಸೀರಿಸ್ ಪೀಸ್ ಪೀಸ್....

ನಟ ದರ್ಶನ್ ಖರೀದಿಸಿದ ಲಂಬೋರ್ಗಿನಿ ಅವೆಂಟಡೊರ್ ಸ್ಪೆಷಲ್ ಏನು?

ಬಿಡುಗಡೆಗೆ ಸಜ್ಜುಗೊಂಡ ಅಗ್ಗದ ಬೆಲೆಯ ಮಹೀಂದ್ರಾ ಮೊಜೊ ಯುಟಿ300

'ಇನ್ನು ಮುಂದೆ ಬೊಲೆರೋ ವಾಹನಗಳನ್ನು ಚೆಕ್ ಮಾಡಲು ಸರ್ವೀಸ್ ವರ್ಕ್‍ಶಾಪ್‌ಗಳಲ್ಲಿ ಹೈಡ್ರಾಲಿಕ್ ಲಿಫ್ಟ್‌ಗಳನ್ನು ಉಪಯೋಗಿಸಬೇಕಾದ ಅಗತ್ಯವಿಲ್ಲ' ಎಂದು ಟ್ವೀಟ್ ಮಾಡಿದ್ದು, ನಟ ಬಾಲಯ್ಯನ ಸ್ಟಂಟ್ ಇಷ್ಟು ಪಡುವ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಬಲೆರೋ ಮೇಲೆತ್ತಿ ವಿಚಿತ್ರ ಸ್ಟಂಟ್- ನಟ ಬಾಲಯ್ಯನನ್ನು ಕಾಲೆಳೆದ ಆನಂದ್ ಮಹಿಂದ್ರಾ!

ಬಾಲಯ್ಯನ ವೀಡಿಯೋ ಒಂದನ್ನು ಆನಂದ್ ಮಹಿಂದ್ರಾ ಅವರಿಗೆ ಟ್ಯಾಗ್ ಮಾಡಿದ ಟ್ವಿಟ್ಟರಿಗರೊಬ್ಬರು, 'ಸಾರ್ ಇದನ್ನೊಮ್ಮೆ ನೋಡಿ' ಎಂದು ಅವರ ಗಮನಸೆಳೆದಿದ್ದಾರೆ.

ಬಲೆರೋ ಮೇಲೆತ್ತಿ ವಿಚಿತ್ರ ಸ್ಟಂಟ್- ನಟ ಬಾಲಯ್ಯನನ್ನು ಕಾಲೆಳೆದ ಆನಂದ್ ಮಹಿಂದ್ರಾ!

ಇನ್ನು ಕೆಲ ಬಾಲಯ್ಯ ಅವರ ಅಭಿಮಾನಿಗಳು ಉತ್ತಮ ಗುಣಮಟ್ಟವಿಲ್ಲದ ಮಹೀಂದ್ರಾ ವಾಹನಗಳನ್ನೇ ಬ್ಯಾನ್ ಮಾಡಬೇಕು ಎಂದು ಆನಂದ್ ಮಹೀಂದ್ರಾ ಅವರ ಟ್ವೀಟ್‌ಗೆ ಟಾಂಗ್ ಕೊಟ್ಟಿದ್ದಾರೆ. ಇದರಿಂದ ಬಾಲಯ್ಯ ಬಗ್ಗೆ ಮಾತನಾಡಿದ್ದು ಒಂದು ಹಂತದಲ್ಲಿ ಆನಂದ್ ಮಹೀಂದ್ರಾ ಅವರಿಗೆ ಶಾಕ್ ಕೊಟ್ಟಿದ್ದು ಸುಳ್ಳಲ್ಲ.

ಡ್ರ್ಯಾಗ್ ರೇಸ್ ವೇಳೆ ಅವಘಡ- ಆಡಿ ಕಾರನ್ನು ಹಿಂದಿಕ್ಕಲು ಹೋದ ಬಿಎಂಡಬ್ಲ್ಯು 3-ಸೀರಿಸ್ ಪೀಸ್ ಪೀಸ್....

ಡ್ರ್ಯಾಗ್ ರೇಸ್ ವೇಳೆ ಅವಘಡ- ಆಡಿ ಕಾರನ್ನು ಹಿಂದಿಕ್ಕಲು ಹೋದ ಬಿಎಂಡಬ್ಲ್ಯು 3-ಸೀರಿಸ್ ಪೀಸ್ ಪೀಸ್....

ಡ್ರ್ಯಾಗ್ ರೇಸ್ ಯಾವತ್ತಿದ್ರು ದುರಂತಗಳ ಮೊದಲ ಹೆಜ್ಜೆ ಅಂದ್ರೆ ತಪ್ಪಾಗಲಾರದು. ಯಾಕಂದ್ರೆ ನಿನ್ನೆ ನಡೆದ ಅಪಘಾತ ಪ್ರಕರಣವೊಂದು ಇದಕ್ಕೆ ಸಾಕ್ಷಿಯಾಗಿದೆ. ಆಡಿ ಸೆಡಾನ್ ಹಿಂದಿಕ್ಕಲು ಹೋದ ಬಿಎಂಡಬ್ಲ್ಯು 3-ಸೀರಿಸ್ ಕಾರೊಂದು ನಿಯಂತ್ರಣ ತಪ್ಪಿದ ಪರಿಣಾಮ ಭೀಕರ ಅವಘಡ ಸಂಭವಿಸಿದೆ.

ಡ್ರ್ಯಾಗ್ ರೇಸ್ ವೇಳೆ ಅವಘಡ- ಆಡಿ ಕಾರನ್ನು ಹಿಂದಿಕ್ಕಲು ಹೋದ ಬಿಎಂಡಬ್ಲ್ಯು 3-ಸೀರಿಸ್ ಪೀಸ್ ಪೀಸ್....

ಅಂದಹಾಗೆ ಈ ಭೀಕರ ಅಪಘಾತ ನಡೆದಿರುವುದು ಒರಿಸ್ಸಾ ರಾಜ್ಯದ ಪುರಿ ಮತ್ತು ಕೋನಾರ್ಕ್ ಮಾರ್ಗದಲ್ಲಿ. ಡ್ರ್ಯಾಗ್ ರೇಸ್‌ ಹುಚ್ಚಿಗೆ ಈ ದುರಂತ ನಡೆದಿದ್ದು, ಭೀಕರ ಅವಘಾತದಲ್ಲಿ ತೀವ್ರ ಗಾಯಗೊಂಡಿದ್ದ 29 ವರ್ಷದ ಓರ್ವ ಯುವಕ ಸಾವನ್ನಪ್ಪಿದ್ದಾನೆ.

Trending On DriveSpark Kannada:

ಸುಖಕರ ಕಾರು ಪ್ರಯಾಣಕ್ಕೆ ಕಡ್ಡಾಯವಾಗಿ ಬೇಕು ಈ 9 ಆಕ್ಸೆಸರಿಗಳು..

ಪೆಟ್ರೋಲ್‌ಗಿಂತ ಡೀಸೆಲ್ ಕಾರು ಯಾಕೆ ಬೆಸ್ಟ್? ಇಲ್ಲಿದೆ ತಜ್ಞರ ವಿವರಣೆ

ಭಾರತದಲ್ಲಿ ಇವು ಅಟ್ಟರ್ ಫ್ಲಾಪ್ ಕಾರುಗಳು

ಡ್ರ್ಯಾಗ್ ರೇಸ್ ವೇಳೆ ಅವಘಡ- ಆಡಿ ಕಾರನ್ನು ಹಿಂದಿಕ್ಕಲು ಹೋದ ಬಿಎಂಡಬ್ಲ್ಯು 3-ಸೀರಿಸ್ ಪೀಸ್ ಪೀಸ್....

ನಿನ್ನೇ ನಸುಕಿನ 3 ಗಂಟೆಗೆ ಈ ಅವಘಡ ಸಂಭವಿಸಿದೆ ಎನ್ನಲಾಗಿದ್ದು, ಕುಡಿತ ಮತ್ತಿನಲ್ಲಿದ್ದ ಯುವಕರ ಗುಂಪೊಂದು ಡ್ರ್ಯಾಗ್ ರೇಸ್‌ ನಡೆಸಿದ್ದರು. ಆದ್ರೆ ಆಡಿ ಸೆಡಾನ್ ಹಿಂದಿಕ್ಕಲು ಮುಂದಾಗಿದ್ದ ಬಿಎಂಡಬ್ಲ್ಯು 3-ಸೀರಿಸ್ ರಸ್ತೆ ತಿರುವಿನಲ್ಲಿ ನಿಯಂತ್ರಣ ತಪ್ಪಿದೆ.

ಡ್ರ್ಯಾಗ್ ರೇಸ್ ವೇಳೆ ಅವಘಡ- ಆಡಿ ಕಾರನ್ನು ಹಿಂದಿಕ್ಕಲು ಹೋದ ಬಿಎಂಡಬ್ಲ್ಯು 3-ಸೀರಿಸ್ ಪೀಸ್ ಪೀಸ್....

ನಿಯಂತ್ರಣ ತಪ್ಪಿದ ಬಿಎಂಡಬ್ಲ್ಯು ಕಾರು ನೇರವಾಗಿ ಮರಕ್ಕೆ ಡಿಕ್ಕಿ ಹೊಡೆದಿದ್ದು, ಕಾರು ಗುದ್ದಿದ ರಭಸಕ್ಕೆ ಬೃಹತ್ ಮರವೇ ಮುರಿದು ಬಿದ್ದಿದೆ. ಪರಿಣಾಮ ಕಾರಿನಲ್ಲಿದ್ದ ನಾಲ್ವರು ತೀವ್ರ ಗಾಯಗೊಂಡಿದ್ದು, ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಡ್ರ್ಯಾಗ್ ರೇಸ್ ವೇಳೆ ಅವಘಡ- ಆಡಿ ಕಾರನ್ನು ಹಿಂದಿಕ್ಕಲು ಹೋದ ಬಿಎಂಡಬ್ಲ್ಯು 3-ಸೀರಿಸ್ ಪೀಸ್ ಪೀಸ್....

ಆದ್ರೆ ಘಟನೆ ಬಗ್ಗೆ ಗೊತ್ತಿದ್ದರು ಆಡಿ ಕಾರಿನಲ್ಲಿದ್ದ ಮತ್ತೊಂದು ಯುವಕರ ಗುಂಪು ಕಾರು ನಿಲ್ಲಿಸದೇ ಪಾರಾರಿಯಾಗಿದ್ದು, ಬೆಳಗಿನ 5 ಗಂಟೆಗೆ ಸ್ಥಳೀಯರೇ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಪೊಲೀಸರಿಗೆ ಮಾಹಿತಿ ತಲುಪಿಸಿದ್ದಾರೆ.

ಡ್ರ್ಯಾಗ್ ರೇಸ್ ವೇಳೆ ಅವಘಡ- ಆಡಿ ಕಾರನ್ನು ಹಿಂದಿಕ್ಕಲು ಹೋದ ಬಿಎಂಡಬ್ಲ್ಯು 3-ಸೀರಿಸ್ ಪೀಸ್ ಪೀಸ್....

ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪ್ರಾಥಮಿಕ ತನಿಖೆ ವೇಳೆಯೇ ಇದು ಡ್ರ್ಯಾಗ್ ರೇಸ್‌ನಿಂದಾದ ಅವಘಡ ಎಂದು ಮಾಹಿತಿ ನೀಡಿದ್ದು, ಅಪಘಾತ ವೇಳೆ ತಪ್ಪಿಸಿಕೊಂಡಿರುವ ಆಡಿ ಕಾರಿನ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ.

ಡ್ರ್ಯಾಗ್ ರೇಸ್ ವೇಳೆ ಅವಘಡ- ಆಡಿ ಕಾರನ್ನು ಹಿಂದಿಕ್ಕಲು ಹೋದ ಬಿಎಂಡಬ್ಲ್ಯು 3-ಸೀರಿಸ್ ಪೀಸ್ ಪೀಸ್....

ಕೆಲ ಮೂಲಗಳ ಪ್ರಕಾರ ಪುರಿ ಮತ್ತು ಕೋನಾರ್ಕ್ ನಡುವೆ ಪದೇ ಪದೇ ಇಂತಹ ಅವಘಡ ನಡೆಯುತ್ತಲೇ ಇದ್ದು, ಮೆರಿಯನ್ ಡ್ರೈವ್‌ಗೆ ಪ್ರವಾಸಿಗರಿಂದ ಡ್ರ್ಯಾಗ್ ರೇಸ್‌ ಮತ್ತು ಆಪ್ ರೋಡ್ ಕಸರತ್ತುಗಳು ಇಲ್ಲಿನ ಸ್ಥಳೀಯರಿಗೆ ತಲೆನೋವಾಗಿ ಪರಿಣಮಿಸಿವೆ.

ಡ್ರ್ಯಾಗ್ ರೇಸ್ ವೇಳೆ ಅವಘಡ- ಆಡಿ ಕಾರನ್ನು ಹಿಂದಿಕ್ಕಲು ಹೋದ ಬಿಎಂಡಬ್ಲ್ಯು 3-ಸೀರಿಸ್ ಪೀಸ್ ಪೀಸ್....

ಇನ್ನು ಘಟನೆ ನಡೆದ ಸ್ಥಳದಲ್ಲಿ ಅಪಘಾತ ವಲಯ ಎಂಬ ಬೋರ್ಡ್‌‌ಗಳನ್ನು ಹಾಕಲಾಗಿದ್ದರೂ ಭೀಕರ ಅವಘಡಗಳು ನಡೆಯುತ್ತಿದ್ದು, ಡ್ರ್ಯಾಗ್ ರೇಸ್‌ನಲ್ಲಿ ಅಮಾಯಕರ ಜೀವಕ್ಕೆ ಯಾವುದೇ ತೊಂದರೆ ಆಗಿಲ್ಲ ಎನ್ನುವುದು ಸಮಾಧಾನಕರ ಸಂಗತಿ ಎನ್ನಬಹುದು.

More from DriveSpark

Article Published On: Wednesday, January 17, 2018, 17:47 [IST]
English summary
Anand Mahindra ‘trolls’ Actor Balakrishna Movie Scene Video Goes Viral On Twitter.
Read more on off beat mahindra
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+